‘ಯಾಸ್’ ಚಂಡಮಾರುತದ ಪರಿಣಾಮದಿಂದ ಬೀಸುವ ಬಿರುಗಾಳಿಯಿಂದ ದೊಡ್ಡ ಮರಗಳು ಕೂಡ ಹತ್ತಿಯಂತೆ ಹಾರುತ್ತವೆ ಎಂದು ಹೇಳುವ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಪೂರ್ವ ಮಧ್ಯ ಬಂಗಾಳಕೊಲ್ಲಿಯಲ್ಲಿ ಇತ್ತೀಚೆಗೆ ಅಪ್ಪಳಿಸಿದ ‘ಯಾಸ್’ ಚಂಡಮಾರುತವು ಒಡಿಶಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ತೀವ್ರ ಹಾನಿಯನ್ನುಂಟು ಮಾಡಿದೆ ಎನ್ನಲಾಗಿದೆ. ಹಲವು ಮಂದಿ ಹಂಚಿಕೊಂಡಿರುವ ಈ ಪೋಸ್ಟ್ ಎಷ್ಟು ನಿಜ ಎಂಬುದನ್ನು ಈ ಫ್ಯಾಕ್ಟ್ ಚೆಕ್‌ನಲ್ಲಿ ನೋಡೋಣ.

ಪ್ರತಿಪಾದನೆ: ‘ಯಾಸ್’ ಚಂಡಮಾರುತದ ಬಿರುಗಾಳಿಯ ದೃಶ್ಯಗಳು ಮತ್ತು ದೊಡ್ಡ ಮರಗಳು ಕೂಡ ಹತ್ತಿಯಂತೆ ಹಾರುತ್ತವೆ.
ಸತ್ಯಾಂಶ: ಪೋಸ್ಟ್‌ನಲ್ಲಿ ಹಂಚಲಾದ ವೀಡಿಯೊ ಹಳೆಯದು. ಈ ವೀಡಿಯೊ 2016 ರಲ್ಲಿ ಉರುಗ್ವೆಯಲ್ಲಿ ಸಂಭವಿಸಿದ ತೀವ್ರ ಚಂಡಮಾರುತದ ದೃಶ್ಯಗಳು. ಈ ವೀಡಿಯೊಗೆ ಇತ್ತೀಚೆಗೆ ಬಂಗಾಳಕೊಲ್ಲಿಯಲ್ಲಿ ಸಂಭವಿಸಿದ ‘ಯಾಸ್’ಚಂಡಮಾರುತಕ್ಕೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾದನೆ ತಪ್ಪಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹಂಚಲಾಗಿರುವ ಪೋಸ್ಟ್‌ನ ಸತ್ಯಾಂಶವನ್ನು ತಿಳಿಯಲು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಡಿದಾಗ, ಯೂಟ್ಯೂಬ್ ನಲ್ಲಿ ಇದೇ ರೀತಿಯ ದೃಶ್ಯಗಳನ್ನು ಹೊಂದಿರುವ 2016 ರಲ್ಲಿ ಅಪ್ಲೋಡ್ ಆದ ವೀಡಿಯೊ ಸಿಕ್ಕಿದೆ. 2016 ರಲ್ಲಿ ಉರುಗ್ವೆಯ ನಗರವಾದ ಡೊಲೊರೆಸ್‌ಗೆ ಅಪ್ಪಳಿಸಿದ ತೀವ್ರ ಚಂಡಮಾರುತದ ದೃಶ್ಯಗಳನ್ನು ವೀಡಿಯೊ ದಲ್ಲಿ ವಿವರಿಸಲಾಗಿದೆ.

ಈ ವೀಡಿಯೊದಲ್ಲಿ ಕಾಣುವ ಕಟ್ಟಡದಲ್ಲಿ ‘ಬಿಬಿವಿಎ’ ಎಂದು ಬರೆಯಲಾಗಿದ್ದು, ಇದು ಸ್ಪ್ಯಾನಿಷ್ ಬ್ಯಾಂಕಿಂಗ್ ಮತ್ತು ಹಣಕಾಸು ಕಂಪನಿಯಾಗಿದೆ. ಗೂಗಲ್ ಸ್ಟ್ರೀಟ್ ವ್ಯೂನಲ್ಲಿ ಉರುಗ್ವೆಯ ಡೊಲೊರೆಸ್‌ನಲ್ಲಿರುವ ಬಿಬಿವಿಎ ಬ್ಯಾಂಕ್ ಶಾಖೆಯ ದೃಶ್ಯಗಳು ಈ ವಿಡಿಯೊದಲ್ಲಿದೆ. ಗೂಗಲ್‌ನಲ್ಲಿ ಲಭ್ಯವಿರುವ ಬಿಬಿವಿಎ ಬ್ಯಾಂಕ್ ಫೂಟೇಜ್‌ಗಳು ವೀಡಿಯೊದಲ್ಲಿ ಕಂಡುಬರುವ ಫೂಟೇಜ್‌ಗೆ ಹೊಂದಿಕೆಯಾಗುತ್ತಿದ್ದು, ಈ ವೀಡಿಯೊ ಉರುಗ್ವೆಯ ಹಳೆಯ ವೀಡಿಯೊ ಎಂಬುದು ಇದರಿಂದ ಸ್ಪಷ್ಟವಾಗಿದೆ.

2016 ರಲ್ಲಿ ಡೊಲೊರೆಸ್ ನಗರವನ್ನು ಅಪ್ಪಳಿಸಿದ ತೀವ್ರ ಚಂಡಮಾರುತಕ್ಕೆ ಸಂಬಂಧಿಸಿದ ಮತ್ತೊಂದು ವೀಡಿಯೊವನ್ನು ಬಳಕೆದಾರರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ. ಏಪ್ರಿಲ್ 15, 2016 ರಂದು ಡೊಲೊರೆಸ್ ನಗರದಲ್ಲಿ ಬಲವಾದ ಗಾಳಿಯೊಂದಿಗೆ ಭಾರಿ ಚಂಡಮಾರುತವು ಸೃಷ್ಟಿಯಾಗಿದೆ ಎಂದು ವೀಡಿಯೊ ವಿವರಿಸಿದೆ. ಸಿಎನ್‌ಎನ್ ನ್ಯೂಸ್ 16 ಏಪ್ರಿಲ್ 2016 ರಂದು ಡೊಲೊರೆಸ್‌ನಲ್ಲಿನ ಚಂಡಮಾರುತದ ಬಗ್ಗೆ ಲೇಖನವೊಂದನ್ನು ಪ್ರಕಟಿಸಿತು. ಈ ವಿವರಗಳ ಆಧಾರದ ಮೇಲೆ ಪೋಸ್ಟ್‌ನಲ್ಲಿ ಹಂಚಲಾದ ವೀಡಿಯೊ ಬಂಗಾಳಕೊಲ್ಲಿಯಲ್ಲಿ ಇತ್ತೀಚೆಗೆ ನಡೆದ ‘ಯಾಸ್’ ಚಂಡಮಾರುತಕ್ಕೆ ಸಂಬಂಧಿಸಿಲ್ಲ ಎಂದು ಸ್ಪಷ್ಟವಾಗಿ ಹೇಳಬಹುದಾಗಿದೆ.

ಒಟ್ಟಾರೆ, ಸಂಬಂಧವಿಲ್ಲದ ಹಳೆಯ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಇದು ಈಶಾನ್ಯ ಕರಾವಳಿ ರಾಜ್ಯಗಳಲ್ಲಿ ‘ಯಾಸ್’ ಚಂಡಮಾರುತ ಸೃಷ್ಟಿಸಿದ ಭೀಕರ ದೃಶ್ಯಗಳು ಎನ್ನಲಾಗಿದೆ.