Fake News - Kannada
 

ಪಂಜಾಮ್ ಭಾಕ್ರಾ ನದಿಯಲ್ಲಿ ತೇಲುತ್ತಿರುವ ಈ ರೆಮ್‌ಡಿಸಿವಿರ್ ಔಷಧಿಗಳು ನಕಲಿಯೆಂದು ಡ್ರಗ್ಸ್ ಕಂಟ್ರೋಲರ್ ಆಫೀಸರ್ ನಿರ್ಣಯಿಸಿದ್ದಾರೆ

0

ಕೇಂದ್ರಸರ್ಕಾರ ದಿನಕ್ಕೆ ಸಾವಿರಗಟ್ಟಲೆ ರೆಮ್‌ಡಿಸಿವಿರ್ ಇಂಜಕ್ಷನ್ ಡೋಸ್‌ಗಳನ್ನು ಕಳುಹಿಸುತ್ತಿದ್ದರೆ ರಾಜ್ಯ ಸರ್ಕಾರಗಳು ಅವನ್ನು ಜನಗಳಿಗೆ ತಲುಪಿಸದೆ  ನದಿಯಲ್ಲಿ ಎಸೆಯುತ್ತಿರುವ ದೃಶ್ಯಗಳು ಎಂದು ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಷೇರ್ ಆಗುತ್ತಿದೆ. ನದಿಯಲ್ಲಿ ಎಸೆದ ಈ ರೆಮ್‌ಡಿಸಿವಿರ್ ಇಂಜೆಕ್ಷನ್‌ಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಬಳಸಲಾಗಿದೆ ಎಂದು ಲೆಕ್ಕ ಬರೆದು ಪ್ರಧಾನಿ ಮೋದಿಯವರ ಹೆಸರನ್ನು ರಾಜ್ಯ ಸರ್ಕಾರಗಳು ಹಾಳು ಮಾಡುತ್ತಿವೆ ಎಂದು ಈ ಪೋಸ್ಟ್‌ನಲ್ಲಿ ಪ್ರತಿಪಾದಿಸಲಾಗಿದೆ.

ಪ್ರತಿಪಾದನೆ: ಕೇಂದ್ರ ಸರ್ಕಾರ ಕಳುಹಿಸಿದ ಸಾವಿರಗಟ್ಟಲೆ ರೆಮ್‌ಡಿಸಿವಿರ್ ಔಷಧಿಗಳನ್ನು  ರಾಜ್ಯ ಸರ್ಕಾರಗಳು ನದಿಯಲ್ಲಿ ಎಸೆದು ಹಾಳು ಮಾಡುತ್ತಿರುವ  ದೃಶ್ಯಗಳು.

ಸತ್ಯಾಂಶ: ರೆಮ್‌ಡಿಸಿವಿರ್ ಔಷಧಿಗಳು ನದಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ಈ ಘಟನೆ ಪಂಜಾಬ್ ರಾಜ್ಯದಲ್ಲಿನ ರೂಪ್ ನಗರದ ಸಮೀಪದಲ್ಲಿ ನಡೆದಿದೆ. ಬಾಕ್ರಾ ನದಿಯಲ್ಲಿ ಕೊಚ್ಚಿಕೊಂಡು ಹೋಗುವಂತೆ ಕಾಣಿಸುತ್ತಿರುವ ಈ ರೆಮೆಡಿಸಿವೇರ್ ವಯಲ್ಸ್ ನಕಲಿಯವು ಎಂದು ಡ್ರಗ್ಸ್ ಕಂಟ್ರೋಲರ್ ಆಫೀಸರ್ ತೇಜೆಂದರ್ ಸಿಂಗ್ ನಿರ್ಣಯಿಸಿದ್ದಾರೆ. ಈ ರೆಮೆಡೆಸಿವೇರ್ ವಯಲ್ಸ್‌ನೊಂದಿಗೆ ಕೇಂದ್ರ ಸರ್ಕಾರಕ್ಕಾಗಲಿ ,ರಾಜ್ಯ ಸರ್ಕಾರಕ್ಕಾಗಲಿ ಯಾವುದೇ ರೀತಿಯ ಸಂಬಂಧವಿಲ್ಲ ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಪೋಸ್ಟ್‌ನಲ್ಲಿ ಷೇರ್ ಮಾಡಿದ ವಿಡಿಯೋದ ಸ್ಕ್ರೀನ್‌ಶಾಟ್‌ಗಳನ್ನು ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಿದಾಗ, ಇದೇ ದೃಶ್ಯಗಳು ಇರುವ ವಿಡಿಯೋವನ್ನು ಬಿಜೆಪಿ ವಕ್ತಾರ ಸಂಬಿತ್ ಪಾತ್ರ, ತನ್ನ ಟ್ವಿಟ್ಟರ್ ಖಾತೆಯಲ್ಲಿ ಷೇರ್ ಮಾಡಿರುವುದು ಕಂಡುಬಂದಿದೆ. ಪಂಜಾಬ್ ರಾಜ್ಯ ಸರ್ಕಾರ ಸಾವಿರಗಟ್ಟಲೆ ರೆಮ್‌ಡಿಸಿವಿರ್ ವಯಲ್ಸ್‌ಅನ್ನು ಭಾಕ್ರಾ ನದಿಯಲ್ಲಿ ಎಸೆದು ಹಾಳು ಮಾಡುತ್ತಿದ್ದಾರೆಂದು ಸಂಬಿತ್ ಪಾತ್ರ ತನ್ನ ಟ್ವಿಟ್‌ನಲ್ಲಿ ಆರೋಪಿಸಿದ್ದಾರೆ. ಇದೇ ಪ್ರತಿಪಾದನೆಯನ್ನು ಸಾಕಷ್ಟು ಜನ ಸಾಮಾಜಿಕ ಜಾಲತಾಣದ ಬಳಕೆದಾರರು ಇತ್ತೀಚೆಗೆ ಪೋಸ್ಟ್ ಮಾಡಿದ್ದಾರೆ. ಅವುಗಳನ್ನು‌ ಇಲ್ಲಿ, ಇಲ್ಲಿ ನೋಡಬಹುದು.

ಈ ವಿವರಗಳ ಆಧಾರದ ಮೇಲೆ ಪೋಸ್ಟ್‌ನಲ್ಲಿ ಷೇರ್ ಮಾಡಿದ ವಿಡಿಯೋ ಬಗ್ಗೆ ಮತ್ತಷ್ಟು ಹುಡುಕಿದಾಗ , ಭಾಕ್ರಾ ನದಿಯಲ್ಲಿ ಕೊಚ್ಚಿಗೋಗುತ್ತಿರುವ ಹಾಗೆ ಕಾಣಿಸುತ್ತಿರುವ ಈ ರೆಮೆಡಿಸಿವೇರ್ ವಯಲ್ಸ್ ಬಗ್ಗೆ ‘ The Tribune’ ನ್ಯೂಸ್ ಸಂಸ್ಥೆ 07 ಮೇ 2021ರಂದು ಲೇಖನ ಪ್ರಕಟಿಸಿರುವುದು ತಿಳಿಯುತ್ತದೆ. ಪಂಜಾಬ್ ರಾಜ್ಯ ರೂಪ್ ನಗರ್ ಸಮೀಪದಲ್ಲಿ ಹರಿಯುತ್ತಿರುವ ಬಾಕ್ರ ನದಿಯಲ್ಲಿ 651 ನಕಲಿ ರೆಮ್‌ಡಿಸಿವಿರ್ ವಯಲ್ಸ್‌ನ್ನು ಡಂಪ್ ಮಾಡಿರುವುದಾಗಿ ಈ ಲೇಖನ ವರದಿ ಮಾಡಿದೆ. ಕೋವಿಡ್ -19 ತುರ್ತು ರೋಗಿಗಳಿಗಾಗಿ ಈ ರೆಮೆಡಿಸಿವೇರ್ ವಯಲ್ಸ್ ಉಪಯೋಗಿಸುತ್ತಾರೆ. 651 ರೆಮೆಡಿಸಿವೇರ್ ವಯಲ್ಸ್‌ನ ಜೊತೆ 1,456 ಸೇಪರ್ಜೋನ್ ಇಂಜೆಕ್ಷನ್ ವಯಲ್ಸ್ ಸಹ ಈ ನದಿಯಲ್ಲು ಸಿಕ್ಕಿರುವುದಾಗಿ ರೂಪ್ ನಗರ್ ಪೋಲಿಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಭಾಕ್ರಾ ನದಿಯಲ್ಲಿ ದೊರಕಿದ ಈ ರೆಮೆಡಿಸಿವೇರ್ ವಯಲ್ಸ್‌ನ್ನು ಪರಿಶೀಲಿಸಿದ ಡ್ರಗ್ಸ್ ಕಂಟ್ರೋಲರ್ ಅಧಿಕಾರಿ ತೆಹಿಂದರ್ ಸಿಂಗ್ ಈ ಇಂಜೆಕ್ಷನ್ ವಯಲ್ಸ್ ನಕಲಿಯಾಗಿವೆ ಎಂದು ನಿರ್ಧರಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ವಿವರಗಳನ್ನು ತಿಳಿಸುವ ಮತ್ತಷ್ಟು ಸುದ್ದಿ ಲೇಖನಗಳನ್ನು ಇಲ್ಲಿ ,ಇಲ್ಲಿ ನೋಡಬಹದು. ದೇಶದಲ್ಲಿ ಚಲಾವಣೆಯಾಗುತ್ತಿರುವ ನಕಲಿ ರೆಮ್‌ಡಿಸಿವಿರ್ ಇಂಜಕ್ಷನ್ ವಯಲ್ಸ್‌ಗೆ ಸಂಬಂಧಿಸಿ ದೆಹಲಿ ಕ್ರೈಮ್ ಬ್ರಾಂಚ್ ಡಿಸಿಪಿ ಮೌನಿಕ ಭಾರಧ್ವಾಜ್ 26 ಏಪ್ರಿಲ್ 2021 ರಂದು ಒಂದು ಟ್ವೀಟ್ ಮಾಡಿದ್ದಾರೆ. ನಕಲಿ ರೆಮ್‌ಡಿಸಿವಿರ್ ಇಂಜೆಕ್ಷನ್‌ ವಯಲ್ಸ್‌ಗೂ ಅಸಲಿ ರೆಮ್‌ಡಿಸಿವಿರ್ ಇಂಜಕ್ಷನ್ ವಯಲ್ಸ್  ಮಧ್ಯೆ  ವ್ಯತ್ಯಾಸಗಳನ್ನು ಹೇಳುತ್ತಾ DCP ಮೌನಿಕ ಭರದ್ವಾಜ್ ತನ್ನ ಟ್ವೀಟ್‌ನಲ್ಲಿ ಎರಡು ಪೋಟೋಗಳನ್ನು ಷೇರ್ ಮಾಡಿದ್ದಾರೆ.

DCP ಮೌನಿಕ ಭರದ್ವಾಜ್ ಷೇರ್ ಮಾಡಿದ ಈ ಪೋಟೋಗಳ ಆಧಾರದಲ್ಲಿ ಭಾಕ್ರಾ ನದಿಯಲ್ಲಿ ಸಿಕ್ಕಿದ ರೆಮ್‌ಡಿಸಿವಿರ್ ಇಂಜಕ್ಷನ್ ವಯಲ್ಸ್‌ನ್ನು ಪರಿಶೀಲಿಸಿ ನೋಡಿದರೆ ಅದು ನಕಲಿಯದೆಂದು ನಿರ್ಧಾರವಾಗಿದೆ. ಭಾಕ್ರಾ ನದಿಯಲ್ಲಿ ದೊರಕಿದ ಈ ರೆಮೆಡಿಸಿವೇರ್ ಇಂಜಕ್ಷನ್ ವಯಲ್ಸ್ ಮೇಲೆ ‘ Remdesivir’ ಹೆಸರಿನ ಮುಂದೆ ‘Rx ‘ ಎಂದು ಬರೆದಿಲ್ಲವಾದ್ದರಿಂದ, ‘Vail’ ಎನ್ನುವ ಪದದಲ್ಲಿನ ಮೊದಲನೆ ಅಕ್ಷರ ‘V’ ದೊಡ್ಡ ಅಕ್ಷರ ಇಲ್ಲದೆ ಇರುವುದರಿಂದ, ಹಾಗೆಯೇ, ಈ ರೆಮ್‌ಡೆಸಿವಿರ್ ಇಂಜಕ್ಷನ್ ವಯಲ್ಸ್ ನಕಲಿಯವೆಂದು ಖಚಿತವಾಗಿ ಹೇಳಬಹದು.

Alt News ಫ್ಯಾಕ್ಟ್ ಚೆಕಿಂಗ್ ಸಂಸ್ಥೆ ಈ ಪ್ರಕರಣಕ್ಕೆ ಸಂಬಂಧಿಸಿದ ವಿವರಗಳಿಗಾಗಿ ರೂಪ್‌ ನಗರ್ ಪೋಲಿಸರನ್ನು ಸಂಪರ್ಕಿಸಿದಾಗ, ರೂಪ್ ನಗರ್ SSP ಅಖಿಲ್ ಚೌದರಿಯವರು ” ಭಾಕ್ರಾ ನದಿಯಲ್ಲಿ ನಮಗೆ ಸಿಕ್ಕಿಬಿದ್ದ ರೆಮೆಡಿಸಿವೇರ್ ಇಂಜಕ್ಷನ್ ವಯಲ್ಸ್ ಮೇಲೆ FIR ದಾಖಲಿಸಿ ವಿಚಾರಣೆ ಶುರುಮಾಡಿದ್ದೇವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆಯಾಮಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಚಾರಣೆ ನಡೆಸುತ್ತಿದ್ದೇವೆ. ಈ ಪ್ರಕರಣದ ವಿಚಾರಣೆಗೆ ಬೇಕಾದ ಲೀಡ್ಸ್ ನಮ್ಮ ಹತ್ತಿರ ಇದ್ದರೂ ಬಲವಾದ ಆಧಾರಗಳಿಗೆ ಎದುರು ನೋಡುತ್ತಿದ್ದೇವೆ‌. SP -ರ್ಯಾಂಕ್ ಆಫೀಸರ್ ನೇತೃತ್ವದಲ್ಲಿ ಒಂದು ತಂಡ ಈ ಪ್ರಕರಣವನ್ನು ವಿಚಾರಣೆ ನಡೆಸುತ್ತಿದೆ” ಎಂದು ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ SSP ಅಖಿಲ್ ಚೌದರಿ ಹೇಳಿದ ಈ ಸಮಾಚಾರವನ್ನು Alt News ಪ್ರಕಟಿಸಿದ ಫ್ಯಾಕ್ಟ್ -ಚೆಕ್ ಲೇಖನದಲ್ಲಿ ನೋಡಬಹುದು. FACTLY ಸಹ ಈ ಕೇಸಿಗೆ ಸಂಬಂಧಿಸಿದಂತೆ ವಿವರಗಳಿಗಾಗಿ ರೂಪ್ ನಗರ್ ಪೋಲೀಸರನ್ನು ಸಂಪರ್ಕಿಸಿದೆ‌. ಅವರ ರೆಸ್ಪಾನ್ಸ್ ಬಂದ ನಂತರ ಈ ಲೇಖನವನ್ನು ಅಪ್ಟೇಡ್ ಮಾಡುತ್ತೇವೆ.

ಒಟ್ಟಾರೆಯಾಗಿ, ಪಂಜಾಬ್ ರಾಜ್ಯ ಬಾಕ್ರಾ ನದಿಯಲ್ಲಿ ಕೊಚ್ಚಿಹೋಗುತ್ತಿರುವ ಈ ರೆಮ್‌ಡಿಸಿವಿರ್ ಇಂಜಕ್ಷನ್ ವಯಲ್ಸ್ ನಕಲಿಯವು ಎಂದು ಡ್ರಗ್ಸ್ ಕಂಟ್ರೋಲರ್ ಆಫೀಸರ್ ನಿರ್ಧರಿಸಿದ್ದಾರೆ.

Share.

About Author

Comments are closed.

scroll