Fake News - Kannada
 

2013 ರ ಈಜಿಫ್ಟ್‌ನ ವಿಡಿಯೊವನ್ನು ‘ಮಾಧ್ಯಮಗಳಿಗೆ ಪೋಸ್‌ ನೀಡುತ್ತಿರುವ ಪ್ಯಾಲೇಸ್ತೀನಿಯನ್ನರ ಶವಗಳು’ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ

0

ಪ್ಯಾಲೆಸ್ತೀನಿಯನ್ನರು ಜೀವ ಇರುವವರನ್ನೇ ಶವಗಳಂತೆ ಕಟ್ಟಿ ಮಾಧ್ಯಮಗಳ ಎದುರು ‘ಶವಗಳು’ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಹೇಳುವ ಪೋಸ್ಟ್‌ನೊಂದಿಗಿನ ವೀಡಿಯೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಆಪಾದಿತ ‘ಶವಗಳನ್ನು’ಅಂತ್ಯಕ್ರಿಯೆಗೆ ಉದ್ದೇಶಪೂರ್ವಕವಾಗಿ ಜೋಡಿಸಿ ಇಟ್ಟಿದ್ದು, ಆದರೆ ಶವಗಳ ಬಿಳಿ ಬಟ್ಟೆಗಳು ಅಲುಗಾಡುತ್ತಿರುವುದು ವಿಡಿಯೊದಲ್ಲಿ ತೋರಿಸಲಾಗಿದೆ. ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ನಾವು ಪರಿಶೀಲಿಸೋಣ.

ಪ್ರತಿಪಾದನೆ: ಪ್ಯಾಲೆಸ್ಟೀನಿಯಾದವರು ಮಾಧ್ಯಮಗಳಿಗೆ ‘ಶವಗಳು’ ಎಂದು ಬಿಂಬಿಸುವ ವಿಡಿಯೋ.

ಸತ್ಯಾಂಶ: ಅದೇ ದೃಶ್ಯಗಳನ್ನು ಹೊಂದಿರುವ ವೀಡಿಯೊವನ್ನು ಯೂಟ್ಯೂಬ್‌ನಲ್ಲಿ 28 ಅಕ್ಟೋಬರ್ 2013 ರಂದು ಅಲ್-ಬದೀಲ್ ಪತ್ರಿಕೆ ಅಪ್‌ಲೋಡ್ ಮಾಡಿದೆ. ಇದು ಈಜಿಪ್ಟ್‌ನ ಕೈರೋದಲ್ಲಿರುವ ಅಲ್-ಅಝರ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಚಿತ್ರ ಎಂದು ಅದು ಹೇಳಿದೆ. ವಿದ್ಯಾರ್ಥಿಗಳ ಈ ಪ್ರತಿಭಟನೆಯನ್ನು ದೃಡೀಕರಿಸುವ ಸುದ್ದಿಗಳನ್ನು ಪ್ರಕಟಿಸಲಾಗಿದೆ. ಆದ್ದರಿಂದ, ಪೋಸ್ಟ್‌‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವೀಡಿಯೊನ ಸ್ಕ್ರೀನ್‌ಶಾಟ್‌ಗಳ ಇಟ್ಟುಕೊಂಡು ನಾವು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, ನಮಗೆ ಮೊದಲು ವೀಡಿಯೊದ ಸ್ಕ್ರೀನ್‌ಶಾಟ್ ಹೊಂದಿರುವ ಜರ್ಮನ್ ಭಾಷೆಯ ಬಝ್ಝ್‌ಫೀಡ್ ಎಂಬ ವೆಬ್‌ಸೈಟ್‌‌ನ ಲೇಖನ ಅಥವಾ ರಸಪ್ರಶ್ನೆಯನ್ನು ಕಂಡುಕೊಂಡಿದ್ದೇವೆ. ಇದರ ಶೀರ್ಷಿಕೆಯಲ್ಲಿ ಇರುವ ಪ್ರಶ್ನೆಯೆಂದರೆ, “ಸಿರಿಯಾದಲ್ಲಿನ ‘ಜೀವಂತ ಶವಗಳನ್ನು’ ಹೊಂದಿರುವ ಈ ವೀಡಿಯೊದಲ್ಲಿನ ಜನರು ವಿಷ ಅನಿಲ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ನಟಿಸುತ್ತಿದ್ದಾರೆಯೇ” ಎಂದು ಕೇಳಲಾಗಿದೆ. ಇದಕ್ಕೆ ಇದು ಸರಿಯೆ ಅಥವಾ ತಪ್ಪ ಎಂಬ ಪ್ರಶ್ನೆಯನ್ನೂ ಕೇಳಕಾಗಿದೆ. ಅಲ್ಲಿಗೆ ನಾವು ಕ್ಲಿಕ್ ಮಾಡಿದರೆ ಆ ಚಿತ್ರದ ಬಗೆಗಿನ ವಿವರವನ್ನು ನೀಡಲಾಗಿದೆ. ಪ್ರಶ್ನೆಯ ಉತ್ತರದಲ್ಲಿ, “ಈ ವಿಡಿಯೊ ಸಿರಿಯಾದ್ದಲ್ಲ. ಇದು ವಿಷಾನಿಲ ದಾಳಿಯಲ್ಲಿ ಮೃತಪಟ್ಟವರದ್ದೂ ಅಲ್ಲ. ಇದು ವಿದ್ಯಾರ್ಥಿಗಳ ಪ್ರತಿಭಟನಾ ರ್ಯಾಲಿಯ ವಿಡಿಯೊ ಎಂದು ಹೇಳಲಾಗಿದೆ. ಅಲ್ಲಿ ನೀಡಲಾಗಿರುವ ಲಿಂಕ್‌ ಆ ವಿಡಿಯೊ ಬಗೆಗಿನ ಲೇಖನಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಆ ವೀಡಿಯೊ ಸಿರಿಯಾದ್ದಲ್ಲ ಈಜಿಪ್ಟ್‌ನದ್ದಾಗಿದೆ ಎಂದು ವಿವರಿಸುತ್ತದೆ.

ಬಝ್ಝ್‌ ಫೀಡ್‌‌ ಲೇಖನದ ಮಾಹಿತಿ ಪಡೆದ ನಾವು ಅಕ್ಟೋಬರ್ 28, 2013 ರಂದು ಈಜಿಪ್ಟ್‌ ಮೂಲದ ‘ಅಲ್-ಬದೀಲ್ ಪತ್ರಿಕೆ’ ಎಂಬ ಅರೇಬಿಕ್ ಯೂಟ್ಯೂಬ್‌ ಚಾನೆಲ್‌‌‌ನಲ್ಲಿ ಈ ವಿಡಿಯೊ ಇರುವುದನ್ನು ಕಂಡು ಹಿಡಿದಿದ್ದೇವೆ. ಅದಲ್ಲಿ ಅಲ್-ಅಝರ್ ವಿಶ್ವವಿದ್ಯಾಲಯದೊಳಗಿನ ದೇಹಗಳ ಪ್ರತಿನಿಧಿಸುವಿಕೆ ಎಂದು ಅರೇಬಿಕ್‌ನಲ್ಲಿ ಬರೆಯಲಾಗಿದೆ. ವಿಡಿಯೊ ಬಗೆಗಿನ ವಿವರಣೆಯಲ್ಲಿ ಅಲ್-ಅಝರ್ ವಿಶ್ವವಿದ್ಯಾಲಯದ ಡಜನ್‌ಗಟ್ಟಲೆ ಮುಸ್ಲಿಂ ಬ್ರದರ್ಹುಡ್ ಸಂಘಟನೆಯ ವಿದ್ಯಾರ್ಥಿಗಳು ಕಾಲೇಜು ಆಡಳಿತ ಕಟ್ಟಡದ ಮುಂದೆ ಸಾಮೂಹಿಕ ಪ್ರತಿಭಟನೆಯನ್ನು ಆಯೋಜಿಸಿದ್ದಾರೆ ಎಂದು ಹೇಳುತ್ತದೆ. ಅದೇ ದಿನ ಮತ್ತೊಂದು ಯೂಟ್ಯೂಬ್ ಚಾನೆಲ್‌ ಕೂಡಾ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದು, ಅಲ್-ಅಝರ್ ವಿದ್ಯಾರ್ಥಿಗಳು ನಾಸ್ರ್ ನಗರದ ವಿಶ್ವವಿದ್ಯಾಲಯದ ಆಡಳಿತ ಕಟ್ಟಡದ ಮುಂದೆ ಪ್ರತಿಭಟಿಸುತ್ತಿರುವುದು ಎಂದು ಬರೆಯಾಲಾಗಿದೆ. ಅದರಲ್ಲಿ ಕೂಡಾ ಇದೇ ರೀತಿಯ ದೃಶ್ಯಗಳನ್ನು ಕಾಣಬಹುದು.

2013 ರಲ್ಲಿ ಈಜಿಪ್ಟ್‌ನಲ್ಲಿ ನಡೆದ ಪ್ರತಿಭಟನೆಗಳಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ನಾವು ಮತ್ತಷ್ಟು ಹುಡುಕಿದಾಗ, ನಾವು ಅನೇಕ ಸುದ್ದಿಗಳನ್ನು ಕಂಡುಕೊಂಡಿದ್ದೇವೆ. ಕೈರೋನ ನಾಸ್ರ್ ಸಿಟಿ ಜಿಲ್ಲೆಯ ಅಲ್-ಅಝರ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅಕ್ಟೋಬರ್ 26, 2013 ರಂದು ಕ್ಯಾಂಪಸ್‌ನಲ್ಲಿ “ದಂಗೆ ವಿರೋಧಿ” ಪ್ರತಿಭಟನೆಗಳನ್ನು ನಡೆಸಿದರು ಎಂದು ಸುದ್ದಿ ಲೇಖನವೊಂದು ಹೇಳಿದೆ. ನಗರದಲ್ಲಿ ನಡೆದ ಈ ಘಟನೆಯ ಮತ್ತೊಂದು ವರದಿಯನ್ನು ಇಲ್ಲಿ ನೋಡಬಹುದು.

ಈ ಹಿಂದೆ ಕೂಡಾ, ಈ ವಿಡಿಯೊವನ್ನು ತಪ್ಪು ಪ್ರತಿಪಾದನೆಯೊಂದಿಗೆ ಹಲವಾರು ದೇಶಗಳಲ್ಲಿ ಬಳಸಲಾಗಿದೆ. ಜೊತೆಗೆ ಇದರ ಬಗ್ಗೆ ಹಲವಾರು ಫ್ಯಾಕ್ಟ್‌ಚೆಕ್‌ಗಳು ಕೂಡಾ ಮಾಡಲಾಗಿದೆ. ಇದೇ ವೀಡಿಯೊವನ್ನು 2018 ರಲ್ಲಿ ಪ್ಯಾಲೆಸ್ತೀನ್‌ನ ವಿಡಿಯೊ ಎಂದು ಹೇಳಿಕೊಂಡಿದ್ದನ್ನು ಸ್ನೋಪ್‌ ಫ್ಯಾಕ್ಟ್‌‌ಚೆಕ್ ಮಾಡಿತ್ತು. ಏಪ್ರಿಲ್ 2021 ರಲ್ಲಿ ಎಎಫ್‌ಪಿ ಕೂಡಾ ಇದರ ಫ್ಯಾಕ್ಟ್‌ಚೆಕ್ ನಡೆಸಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ, 2013 ರ  ಈಜಿಪ್ಟ್‌ನ ವೀಡಿಯೊವನ್ನು ಪ್ಯಾಲೇಸ್ತೀನಿಯನ್ನರು ಮಾಧ್ಯಮಗಳ ಮುಂದೆ ಶವಗಳಂತೆ ಬಿಂಬಿಸಲು ಉದ್ದೇಶಪೂರ್ವಕ ಪೋಸ್‌ ನೀಡುತ್ತಿದ್ದಾರೆ ಎಂದು ಹರಿದಾಡುತ್ತಿದೆ.

Share.

About Author

Comments are closed.

scroll