Fake News - Kannada
 

ಯೋಗಿ ಆದಿತ್ಯನಾಥ್ ತನ್ನ ಹಣೆಗೆ ಇಟ್ಟುಕೊಂಡ ತಿಲಕ ಹೋಲಿಕಾ ದಹನದ್ದು ಹೊರತು ಹುತಾತ್ಮ ಸೈನಿಕನ ಚಿತಾಭಸ್ಮವಲ್ಲ

0

ಇತ್ತೀಚೆಗೆ ಹುತಾತ್ಮರಾದ ಉತ್ತರ ಪ್ರದೇಶದ ಯೋಧನ ಚಿತಾಭಸ್ಮವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಹಣೆಗೆ ಹಚ್ಚಿಕೊಂಡಿದ್ದಾರೆ ಎಂದು ಪ್ರತಿಪಾದಿಸಿ ವೀಡಿಯೊವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.  “ಹುತಾತ್ಮ ಯೋಧನ ಸುಟ್ಟು ಬೂದಿಯನ್ನು ಹಣೆಗೆ ತಿಲಕವಿಟ್ಟು ಗೌರವ ಸೂಚಿಸಿದ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್” ಎನ್ನುವ ಪೋಸ್ಟ್‌ಗಳು  ವಿಡಿಯೋದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿವೆ. ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೃತ ಯೋಧನ ಚಿತಾಭಸ್ಮವನ್ನು ತಮ್ಮ ಹಣೆಗೆ ಹಚ್ಚಿಕೊಂಡರು.

ನಿಜಾಂಶ : ಇತ್ತೀಚಿನ ಹೋಳಿ ಆಚರಣೆಯ ಭಾಗವಾಗಿ ಯೋಗಿ ಆದಿತ್ಯನಾಥ್ ಹೋಲಿಕಾಳ ಚಿತಾಭಸ್ಮವನ್ನು ಹಣೆಗೆ ಇಟ್ಟುಕೊಳ್ಳುವ ದೃಶ್ಯಗಳನ್ನು ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗಿದೆ. 1996 ರಿಂದ 2019 ರವರೆಗೆ ಗೋರಖ್‌ಪುರದ ಪೀಠಾಧಿಪತಿಯಾಗಿ ಸೇವೆ ಸಲ್ಲಿಸಿದ ಯೋಗಿ ಆದಿತ್ಯನಾಥ್ ಹೋಲಿಕಾ ದಹನ ಮಾಡಿದ ನಂತರವೇ ಹೋಳಿ ಹಬ್ಬವನ್ನು ಪ್ರಾರಂಭಿಸಬೇಕು ಎಂಬ ಸಂಪ್ರದಾಯವನ್ನು ಅನುಸರಿಸುತ್ತಿದ್ದಾರೆ. ಈ ವೀಡಿಯೋದಲ್ಲಿ ಯೋಗಿ ಆದಿತ್ಯನಾಥ್ ಹೋಲಿಕಾ ದಹನದ ಹಣೆಗೆ ತಿಲಕವಿಟ್ಟಿದ್ದಾರೆ ಹೊರತು ಅದು ಸೈನಿಕನ ಚಿತಾಭಸ್ಮವನ್ನಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊದ ಸ್ಕ್ರೀನ್ ಶಾಟ್‌ಗಳ ಸಹಾಯದಿಂದ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ವೈರಲ್ ಪೋಸ್ಟ್‌ನಲ್ಲಿರುವ ವೀಡಿಯೊವನ್ನು ಹೋಲುವಂತಹ ಹಲವು ವಿಡಿಯೋಗಳು ಕಂಡುಬಂದಿವೆ. ಭಗವಾ ಕ್ರಾಂತಿ ಸೇನಾ ಅಧ್ಯಕ್ಷ ಪ್ರಾಚಿ ಸಾಧ್ವಿ ಅವರು 22 ಮಾರ್ಚ್ 2022 ರಂದು ಮಾಡಿರುವ ಟ್ವೀಟ್ ನಲ್ಲಿ ಈ  ವಿಡಿಯೊವನ್ನು ಶೇರ್ ಮಾಡಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಹೋಳಿ ಹಬ್ಬದ ಸಾಂಪ್ರದಾಯಿಕ ಆಚರಣೆಯ ಭಾಗವಾಗಿ ತನ್ನ ಹಣೆಯ ಮೇಲೆ ಹೋಲಿಕಾ ದಹನದ ತಿಲಕವನ್ನು ಹಚ್ಚಿಕೊಂಡಿದ್ದಾರೆ. ಇದೇ ರೀತಿಯ ವಿವರಣೆಯೊಂದಿಗೆ ಇತರ ಕೆಲವು ಸ್ಥಳೀಯ ಸುದ್ದಿ ವಾಹಿನಿಗಳು ವೀಡಿಯೊವನ್ನು ಪ್ರಕಟಿಸಿವೆ. ಅವುಗಳನ್ನು ಇಲ್ಲಿ, ಇಲ್ಲಿ ಕಾಣಬಹುದು.

ಉತ್ತರ ಪ್ರದೇಶ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ನಂತರ ಯೋಗಿ ಆದಿತ್ಯನಾಥ್ ಗೋರಖ್‌ಪುರ ಗೋರಕ್ಷಾಪೀಠದಲ್ಲಿ ಜನರೊಂದಿಗೆ ಹೋಳಿ ಆಚರಿಸಿದ್ದಾರೆ ಎಂದು ತಿಳಿದು ಬಂದಿದೆ. ಗೋರಖನಾಥ ದೇವಾಲಯವು ಹೋಳಿ ದಹನದ ನಂತರ ಚಿತಾಭಸ್ಮವನ್ನು ತಿಲಕದಿಂದ ಅಭಿಷೇಕಿಸುವ ಮತ್ತು ಹೋಳಿ ಪ್ರಾರಂಭಿಸುವ ಆಚರಣೆಯನ್ನು ಇಂದಿಗೂ ಆಚರಿಸುತ್ತದೆ. 1996 ರಿಂದ 2019 ರವರೆಗೆ ಗೋರಖ್‌ಪುರದ ಗೋರಕ್ಷಾ ಪೀಠದ ಪೀಠಾಧಿಪತಿಯಾಗಿ ಸೇವೆ ಸಲ್ಲಿಸಿದ ಯೋಗಿ ಆದಿತ್ಯನಾಥ್ ಅವರು ಹಲವು ವರ್ಷಗಳಿಂದ ಈ ಆಚರಣೆಯನ್ನು ಅನುಸರಿಸುತ್ತಿದ್ದಾರೆ.

ಗೋರಖ್‌ಪುರ ಗೋರಕ್ಷಾಪೀಠದಲ್ಲಿ ಯೋಗಿ ಆದಿತ್ಯನಾಥ್‌ ಹೋಳಿ ಆಚರಿಸುತ್ತಿರುವ ದೃಶ್ಯಗಳನ್ನು ಇಲ್ಲಿ, ಇಲ್ಲಿ ನೋಡಬಹುದು. ಈ ವಿವರಗಳನ್ನು ಆಧರಿಸಿ, ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಯೋಗಿ ಆದಿತ್ಯನಾಥ್ ಅವರ ಹಣೆಯ ಮೇಲೆ ತಿಲಕ ಇಟ್ಟುಕೊಂಡಿದ್ದ ಹೋಳಿಕಾ ದಹನದ್ದೆ ಹೊರತು ದೇಶದ ಹುತಾತ್ಮ ಸೈನಿಕನ ಚಿತಾಭಸ್ಮವಲ್ಲ ಎಂದು ಖಚಿತವಾಗಿ ಹೇಳಬಹುದು.

ಒಟ್ಟಾರೆಯಾಗಿ ಹೇಳುವದಾದರೆ ಯೋಗಿ ಆದಿತ್ಯನಾಥ್ ಅವರು ಹೋಳಿ ಆಚರಣೆಯ ಸಂದರ್ಭದಲ್ಲಿ ದೇಗುಲದ ಹೋಳಿಕಾಳ ಚಿತಾಭಸ್ಮ ತಿಲಕವನ್ನು ಹಣೆಗೆ ಇಟ್ಟುಕೊಂಡ ದೃಶ್ಯಗಳನ್ನು ತಿರುಚಿ ಸೈನಿಕನ ಚಿತಾಭಸ್ಮದ ದೃಶ್ಯಗಳೆಂಬಂತೆ ತಪ್ಪಾಗಿ ಹಂಚಿಕೊಂಡಿದ್ದಾರೆ.

Share.

Comments are closed.

scroll