‘ಮಹಾದ್ಭುತ! ಲಕ್ನೋ ಮೂಲಕ ಪ್ರವಹಿಸುವ ಗೋಮತಿ ರಿವರ್‌ಫ್ರಂಟ್ ರೂಪುರೇಷೆಗಳನ್ನು ಕಣ್ಣು ತುಂಬುವ ಹಾಗೆ ಪೂರ್ಣಗೊಳಿಸಿದ್ದಾರೆ ಯೋಗಿ ಆದಿತ್ಯನಾಥ್’, ಎಂದು ಹೇಳುವ ಪೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನ ಹಂಚಿಕೊಳ್ಳುತ್ತಿದ್ದಾರೆ. ಇದು ನಿಜವೇ ಎಂಬದನ್ನು ಈ ಲೇಖನದ ಮೂಲಕ ತಿಳಿಯೋಣ.
ಪ್ರತಿಪಾದನೆ: ಯೋಗಿ ಆದಿತ್ಯನಾಥ್ ಸರ್ಕಾರ ಲಕ್ನೋದಲ್ಲಿ ನಿರ್ಮಿಸಿದ ಗೋಮತಿ ರಿವರ್‌ಫ್ರಂಟ್‌ನ ಪೋಟೋ.
ನಿಜಾಂಶ: ಪೋಸ್ಟ್‌ನಲ್ಲಿ ಪೋಟೋ ಗೋಮತಿ ರಿವರ್‌ಫ್ರಂಟ್ ಗೆ ಸಂಬಂಧಿಸಿದೆ. ಆದರೆ ಈ ಯೋಜನೆಯನ್ನು ಕೇವಲ ಯೋಗಿ ಆದಿತ್ಯನಾಥ್ ಸರ್ಕಾರ ನಿರ್ಮಾಣ ಮಾಡಿಲ್ಲ. ಅಖಿಲೇಶ್ ಯಾದವ್ ಸರ್ಕಾರದ ಸಮಯದಲ್ಲೂ ಸುಮಾರು 60% ಕೆಲಸಗಳು ನಡೆದಿವೆಯೆಂದು ಏಪ್ರಿಲ್ 2017ರ ‘ದಿ ಎಕನಾಮಿಕ್ ಟೈಮ್ಸ್’ ನವರೊಂದಿಗೆ ಯೋಗಿ ಸರ್ಕಾರದಲ್ಲಿನ ಅಂದಿನ ನೀರಾವರಿ ಸಚಿವ ಹೇಳಿದ್ದಾರೆ. ಆದ್ದರಿಂದ ಪೋಸ್ಟ್‌ನಲ್ಲಿ ಗೋಮತಿ ರಿವರ್‌ಫ್ರಂಟ್ ಗೆ ಸಂಬಂಧಿಸಿ ಕೇವಲ ಯೋಗಿ ಸರ್ಕಾರವನ್ನು ಹೊಗಳುತ್ತಿರುವುದು ಜನರನ್ನು ತಪ್ಪುದಾರಿಗೆಳೆಯುವಂತಿದೆ.
ಪೊಸ್ಟ್‌ನಲ್ಲಿನ ಪೋಟೋ ಬಗ್ಗೆ ಹುಡುಕಿದಾಗ, ಅದನ್ನು ಯಾವಾಗ, ಯಾರು ತೆಗೆದರೆಂದು ಖಚಿತವಾದ ಮಾಹಿತಿ ದೊರಕಿಲ್ಲ. ಲಕ್ನೋದಲ್ಲಿನ ಗೋಮತಿ ರಿವರ್‌ಫ್ರಂಟ್‌ಗೆ ಸಂಬಂಧಿಸಿದ ಇತರೆ ಪೋಟೋಗಳನ್ನು ವಿಡಿಯೋಗಳನ್ನು ಮತ್ತು ಗೂಗಲ್ ಅರ್ತ್‌ನಲ್ಲಿ ಆ ಪ್ರದೇಶವನ್ನು ನೋಡಿದಾಗ, ಪೋಸ್ಟ್‌ನಲ್ಲಿನ ಪೋಟೋ ಗೋಮತಿ ರಿವರ್‌ಫ್ರಂಟ್ ಗೆ ಸಂಬಂಧಿಸಿದೆ ಎಂದು ತಿಳಿಯಿತು.
ಆದರೆ, ಆ ರಿವರ್‌ಫ್ರಂಟ್‌ಗೆ ಸಂಬಂಧಿಸಿದ ವಿವರಗಳನ್ನು ನೋಡಿದಾಗ, ಆ ಯೋಜನೆಯ ಕೆಲಸಗಳು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಸರ್ಕಾರದ ಸಮಯದಲ್ಲಿಯೇ ಶುರುವಾಯಿತೆಂದು ತಿಳಿಯುತ್ತದೆ. ಅಷ್ಟೇ ಅಲ್ಲದೇ, ಮಾರ್ಚ್ 2017ರಲ್ಲಿ ಯೋಗಿ ಸರ್ಕಾರ ಅಧಿಕಾರಕ್ಕೆ ಬರುವ ಸಮಯಕ್ಕೆ ಸುಮಾರು 60% ರಷ್ಟು ಆ ರಿವರ್‌ಫ್ರಂಟ್ ಕೆಲಸಗಳು ನಡೆದವೆಂದು 2017ರಲ್ಲಿ ‘ದಿ ಎಕನಾಮಿಕ್ ಟೈಮ್ಸ್ ‘ ಅವರೊಂದಿಗೆ ಯೋಗಿ ಸರ್ಕಾರದಲ್ಲಿನ ಅಂದಿನ ನೀರಾವರಿ ಸಚಿವ ಹೇಳಿರುವುದನ್ನು ಇಲ್ಲಿ ಓದಬಹುದು.
ಮಾರ್ಚ್ 2017ಕ್ಕೆ (ಅಂದರೆ ಯೋಗಿ ಸರ್ಕಾರ ಬರುವ ಸಮಯಕ್ಕೆ) ಸುಮಾರು 1427ಕೋಟಿ ರೂಪಾಯಿಗಳು ಆ ಯೋಜನೆಗಾಗಿ ಖರ್ಚು ಮಾಡಿರುವುದಾಗಿ ಅಧಿಕಾರಿಗಳು ಹೇಳುತ್ತಿರುವ ವಿಡಿಯೋವನ್ನು ಇಲ್ಲಿ ನೋಡಬಹುದು. ಅಖಿಲೇಶ್ ಯಾದವ್ ಸರ್ಕಾರದ ಸಮಯದಲ್ಲಿ ಈ ಯೋಜನೆಯ ಕೆಲಸಗಳು ಪೂರ್ಣಗೊಂಡಿಲ್ಲವೆಂದು ಇತರೆ ಹಗರಣಗಳು ನಡೆದಿರುವುದಾಗಿ ಆರೋಪಗಳು ಬಂದಿವೆಯೆಂದು ತಿಳಿದು ಬಂದಿದೆ.
ಯೋಗಿ ಸರ್ಕಾರ ಬರುವುದಕ್ಕೆ ಮುಂಚೆ ತೆಗೆದ ಗೋಮತಿ ರಿವರ್‌ಫ್ರಂಟ್ ನಿರ್ಮಾಣದ ಕೆಲಸಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಮಾರ್ಚ್ 2017ಕ್ಕೂ ಮುಂಚೆ ಗೋಮತಿ ರಿವರ್‌ಫ್ರಂಟ್‌ಗೆ ಸಂಬಂಧಿಸಿದಂತೆ ತೆಗೆದ ಮತ್ತಷ್ಟು ಪೋಟೋಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಅದೇ ಪ್ರದೇಶದಲ್ಲಿ 2017 ಚುನಾವಣೆಗಳಿಗೂ ಮುಂಚೆ ಅಖಿಲೇಶ್ ಯಾದವ್‌ರವರೊಂದಿಗೆ ‘ಇಂಡಿಯಾ ಟುಡೆ’ ಮಾಡಿದ ಸಂದರ್ಶನವನ್ನು ಇಲ್ಲಿ ನೋಡಬಹದು.
ಗೂಗಲ್ ಅರ್ಥ್‌ನಲ್ಲಿ ಆ ಪ್ರದೇಶಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 2016ರ ದೃಶ್ಯಗಳಲ್ಲೂ ಸಹ ಯೋಗಿ ಸರ್ಕಾರ ಬರುವ ಮುಂಚೆಯೆ ಗೋಮತಿ ರಿವರ್‌ಫ್ರಂಟ್ ಕೆಲಸಗಳು ಪ್ರಾರಂಭ ಆಗಿರುವುದನ್ನು ನೋಡಬಹುದು.
ಒಟ್ಟಿನಲ್ಲಿ, ಗೋಮತಿ ರಿವರ್‌ಫ್ರಂಟ್‌ನ್ನು ಕೇವಲ ಯೋಗಿ ಸರ್ಕಾರ ನಿರ್ಮಿಸಿಲ್ಲ. ಅಖಿಲೇಶ್ ಯಾದವ್ ಸರ್ಕಾದ ಸಮಯದಲ್ಲೂ ಸಹ 60% ಕ್ಕೂ ಮಿಗಿಲು ಕೆಲಸಗಳು ನಡೆದಿವೆ.