‘ಕೋವಿಶೀಲ್ಡ್ ವ್ಯಾಕ್ಸಿನ್ ಹಾಕಿಸಿಕೊಂಡ ವರ ಬೇಕಾಗಿದ್ದಾನೆ’ ಎಂದು ಪತ್ರಿಕೆಯಲ್ಲಿ ಪ್ರಕಟಣೆ ಬಂದಿದೆ ಎಂಬ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವಿಸ್ತ್ರತ ವಾಗಿ ಷೇರ್ ಆಗುತ್ತಿದೆ. ಈ ಪ್ರಕಟಣೆಯನ್ನು ಪ್ರಮುಖ ತೆಲುಗು ಸುದ್ದಿವಾಹಿನಿ TV9 ಸಹ ಪ್ರಸಾರಮಾಡಿದೆ. ಅದು ನಿಜವೇ ಎಂಬುದನ್ನು ಈ ಲೇಖನದ ಮೂಲಕ ನೋಡೋಣ.
ಪ್ರತಿಪಾದನೆ: ‘ಕೋವಿಶೀಲ್ಡ್ ವ್ಯಾಕ್ಸಿನ್ ಹಾಕಿಸಿಕೊಂಡಿರುವ ವರ ಬೇಕಾಗಿದ್ದಾನೆ’ – ಪತ್ರಿಕೆಯ ಪ್ರಕಟಣೆ.
ನಿಜಾಂಶ: ಇದು ನಿಜವಾದ ಪ್ರಕಟಣೆಯಲ್ಲ. fodey.com ಎಂಬ ಒಂದು ವೆಬ್‌ಸೈಟ್ ಮೂಲಕ ಈ ಹಾಸ್ಯಾಭರಿತವಾದ ಪ್ರಕಟಣೆಯನ್ನು ತಯಾರು ಮಾಡಿದ್ದಾರೆ. ಸೋವಿಯೊ ಫಿಗ್ಯುರೆಡೊ ಎಂಬ ಫೇಸ್‌ಬುಕ್ ಬಳಕೆದಾರ, ಜನರನ್ನು ಕೊರೋನಾ ವ್ಯಾಕ್ಸಿನ್ ತೆಗೆದುಕೊಳ್ಳುವುದನ್ನು ಪ್ರೋತ್ಸಾಹಿಸುವುದಕ್ಕಾಗಿ ಈ ರೀತಿಯಾಗಿ ಆನ್ಲೈನ್‌ನಲ್ಲಿ ಒಂದು ಹಾಸ್ಯಭರಿತವಾದ ಪ್ರಕಟಣೆಯನ್ನು ತಯಾರು ಮಾಡಿದ್ದೇನೆಂದು ತಿಳಿಸಿದ್ದಾನೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಇದೆ ಪತ್ರಿಕೆಯ ಕ್ಲಿಪ್ ಅನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಸಹ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಶಶಿ ತರೂರ್ ಟ್ವೀಟ್‌ಗೆ ಸಾಕಷ್ಟು ಜನ ಇದು ನಿಜವಾದ ಪತ್ರಿಕೆಯ ಕ್ಲಿಪ್ ಅಲ್ಲವೆಂದು, ಇದನ್ನು ಆನ್ಲೈನ್ ಆಪ್ಸ್ ಮೂಲಕ ಸೃಷ್ಟಿ ಮಾಡಿದ್ದಾರೆಂದು ಕಾಮೆಂಟ್ ಮಾಡಿದ್ದಾರೆ.
ಈ ಕಾಮೆಂಟ್ಸ್ ಆಧಾರದ ಮೇಲೆ FACTLY ಸಹ fodey.com ಎಂಬ ಒಂದು ಗ್ರಾಫಿಕ್ಸ್ ವೆಬ್‌ಸೈಟ್‌ನಲ್ಲಿ ಹುಡುಕಾಡಿತು. ಅದು ಇಂತಹ ಒಂದು ಪತ್ರಿಕೆಯ ಕ್ಲಿಪ್ ಅನ್ನು ತಯಾರು ಮಾಡಿರುವುದು ನಿಜವಾದರೂ ಆ ಕ್ಲಿಪ್‌ನಲ್ಲಿ ‘ ಕೋವಿಶೀಲ್ಡ್ ‘ ಗೆ ಬದಲಾಗಿ ‘ಕೋವ್ಯಾಕ್ಸಿನ್’ ಎಂದು ಬರೆದಿರುವುದು ಕಂಡುಬಂದಿದೆ.
ಅಲ್ಲದೆ ಈ ವರ ಬೇಕಾಗಿದ್ದನೆ ಕ್ಲಿಪ್ ಪ್ರಕಟಣೆಯ ಪಕ್ಕದ ಪ್ಯಾರಾದಲ್ಲಿ ಪ್ರತಿ ಸಾಲಿನ ಮೊದಲ ಅಕ್ಷರಗಳು ಪೋಸ್ಟ್‌ನ ಕ್ಲಿಪ್‌ನಲ್ಲಿರುವ ಪ್ಯಾರಾದ ಮೊದಲ ಅಕ್ಷರಗಳು ಒಂದೆ ರೀತಿ ಇರುವುದನ್ನು ನೋಡಬಹದು. ಇದರ ಮೂಲಕ ವೈರಲ್ ಆದ ಕ್ಲಿಪ್ ಈ ವೆಬ್ಸೈಟ್ ಮೂಲಕ ಸೃಷ್ಟಿಯಾಗಿದೆ ಎಂದು ಅರ್ಥಮಾಡಿಕೊಳ್ಳಬಹುದು. ಈ ವೆಬ್‌ಸೈಟ್ ನಲ್ಲಿ ಒಂದು ಸ್ಟಾಂಡರ್ಡ್ ಟೆಂಪ್ಲೇಟ್ ಇರುವುದರಿಂದ ಹೀಗೆ ಪಕ್ಕದ ಪ್ಯಾರಾದಲ್ಲಿಯೂ ಒಂದು ವಿಧವಾದ ಅಕ್ಷರಗಳು ಕಾಣಿಸುತ್ತವೆ. ಇವುಗಳೆಲ್ಲದರಿಂದ ವೈರಲ್ ಆದ ಕ್ಲಿಪ್ ನಿಜವಾದ ಪ್ರಕಟಣೆ ಅಲ್ಲವೆಂದು, ಕೇವಲ ಡಿಜಿಟಲ್ ಆಗಿ ಸೃಷ್ಟಿ ಮಾಡಿರುವುದೆಂದು ಅರ್ಥ ಮಾಡಿಕೊಳ್ಳಬಹುದು.
ಸಾವಿಯೋ ಫಿಗ್ಯೂರೆಡೋ ಎಂಬ ಪೇಸ್‌ಬುಕ್ ಬಳಕೆದಾರ, ಜನರನ್ನು ಕೊರೊನಾ ವ್ಯಾಕ್ಸಿನ್ ತೆಗೆದು ಕೊಳ್ಳಲು ಪ್ರೋತ್ಸಾಹಿಸುವುದಕ್ಕಾಗಿ ಆತನೆ ಹೀಗೆ ಆನ್ಲೈನ್‌ನಲ್ಲಿ ಒಂದು ಹಾಸ್ಯಭರಿತವಾದ ಪ್ರಕಟಣೆಯನ್ನು ತಯಾರು ಮಾಡಿದ್ದೇನೆಂದು, ಅದು ವೈರಲ್ ಆದ್ದರಿಂದ ತನಗೆ ಹೆಚ್ಚು ಕರೆಗಳು ಬರುತ್ತಿವೆಯೆಂದು ಫೇಸ್‌ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ವೈರಲ್ ಆದ ಕ್ಲಿಪ್‌ನಲ್ಲಿ ಇರುವ ಮೊಬೈಲ್ ನಂಬರ್ ಅನ್ನು ಟ್ರೂಕಾಲರ್‌ನಲ್ಲಿ ಚೆಕ್ ಮಾಡಿದಾಗ ಈ ನಂಬರ್ ಸಾವಿಯೋ ಫಿಗ್ಯುರೆಡೋ ಎಂದು ಕಾಣಿಸುತ್ತಿದೆ. ಈ ಆಧಾರಗಳಿಂದ ಈ ವೈರಲ್ ಕ್ಲಿಪ್‌ನ್ನು ಸಾವಿಯೋ ಫಿಗ್ಯೂರೆಡೊ ತಯಾರು ಮಾಡಿರಬಹುದು ಎಂದು ಅರ್ಥವಾಗುತ್ತದೆ.
ಒಟ್ಟಿನಲ್ಲಿ ‘ಕೋವಿಶೀಲ್ಡ್ ವ್ಯಾಕ್ಸಿನ್ ಹಾಕಿಸಿಕೊಂಡ ವರ ಬೇಕಾಗಿದ್ದಾನೆ’ ಎಂಬುದು ನಿಜವಾದ ಪ್ರಕಟನೆಯಲ್ಲ ಎಂದು ಸಾಬೀತಾಗಿದೆ.