ಪ್ರಸ್ತುತ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿಹರಿದಾಡುತ್ತಿದೆ. 18ನೇ ಲೋಕಸಭೆಯ ಮೊದಲ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕರಾಗಿ ಭಾಷಣ ಮಾಡಿದ ರಾಹುಲ್ ಮಹಾತ್ಮಾ ಗಾಂಧಿಯ ಮಾತನ್ನು ಯೇಸುಕ್ರಿಸ್ತನ ಮಾತೆಂದು ತಪ್ಪಾಗಿ ಆರೋಪಿಸಲಾಗಿದೆ. ಈ ವಿಡಿಯೋದಲ್ಲಿ “ಯಾರಾದರೂ ನಿಮ್ಮ ಒಂದು ಕೆನ್ನೆಗೆ ಬಾರಿಸಿದರೆ, ನಿಮ್ಮ ಇನ್ನೊಂದು ಕೆನ್ನೆಯನ್ನು ತೋರಿಸಿ” (ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಲಾಗಿದೆ) ಎಂದು ಯೇಸು ಕ್ರಿಸ್ತನು ಹೇಳಿದ್ದಾನೆ ಎಂದು ಹೇಳುವುದನ್ನು ಕೇಳಬಹುದು. ಹಾಗಾದರೆ ಈ ಪೋಸ್ಟ್ನಲ್ಲಿ ಮಾಡಿದ ಕ್ಲೇಮ್ ಅನ್ನು ಪರಿಶೀಲಿಸೋಣ.
ಕ್ಲೇಮ್ : ರಾಹುಲ್ ಗಾಂಧಿ, ಮಹಾತ್ಮ ಗಾಂಧಿಯವರು “ಯಾರಾದರೂ ನಿಮ್ಮ ಒಂದು ಕೆನ್ನೆಗೆ ಬಾರಿಸಿದರೆ, ಇನ್ನೊಂದು ಕೆನ್ನೆಯನ್ನು ತೋರಿಸಿ” ಎಂಬ ಮಾತನ್ನು ಯೇಸು ಕ್ರಿಸ್ತನ ಮಾತೆಂದು ತಪ್ಪಾಗಿ ಆರೋಪಿಸಿದ್ದಾರೆ.
ಫ್ಯಾಕ್ಟ್ : ರಾಹುಲ್ ಗಾಂಧಿ ಈ ಮಾತನ್ನು ತಪ್ಪಾಗಿ ಹೇಳಿಲ್ಲ. “ಯಾರಾದರೂ ನಿಮ್ಮ ಒಂದು ಕೆನ್ನೆಗೆ ಬಾರಿಸಿದರೆ, ಇನ್ನೊಂದು ಕೆನ್ನೆಯನ್ನು ತೋರಿಸಿ” ಎಂಬ ಮಾತು ಬೈಬಲ್ನಿಂದ ಹುಟ್ಟಿಕೊಂಡಿದೆ ಎಂದಿದ್ದಾರೆ. ಗಾಂಧೀಜಿ ತನ್ನ ಆತ್ಮಚರಿತ್ರೆಯಲ್ಲಿಯೂ ಇದನ್ನು ಉಲ್ಲೇಖಿಸಿದ್ದಾರೆ. ಆದ್ದರಿಂದ, ಈ ಪೋಸ್ಟ್ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಜುಲೈ 1, 2024 ರಂದು ನಡೆಸಿದ ಮೊದಲ ಭಾಷಣದಿಂದ ಈ ವೀಡಿಯೊ ಕ್ಲಿಪ್ ಅನ್ನು ತೆಗೆದುಕೊಳ್ಳಲಾಗಿದೆ. ಈ ಭಾಷಣವು ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದಗಳ ನಿರ್ವಹಿಸಿದ ಜಂಟಿ ಸಂಸತ್ತಿನ ಅಧಿವೇಶ ಭಾಗದ ಚರ್ಚೆಯಾಗಿದೆ. ತನ್ನ ಮೊದಲ ಭಾಷಣದಲ್ಲಿ ರಾಹುಲ್ ಗಾಂಧಿ ಶಿವ, ಗುರುನಾನಕ್ ಮತ್ತು ಯೇಸುಕ್ರಿಸ್ತರ ಚಿತ್ರಗಳನ್ನು ಪ್ರದರ್ಶಿಸುತ್ತಾ ಸರ್ಕಾರವನ್ನು ಟೀಕಿಸಿದರು. ಹಿಂದೂ, ಇಸ್ಲಾಂ, ಸಿಖ್, ಕ್ರಿಶ್ಚಿಯನ್, ಬೌದ್ಧ ಮತ್ತು ಜೈನ ಧರ್ಮಗಳನ್ನು ಉಲ್ಲೇಖಿಸಿ, “ನಿರ್ಭಯತೆಯ ಪ್ರಾಮುಖ್ಯತೆಯನ್ನು” ಒತ್ತಿ ಹೇಳುತ್ತಾ, “ಎಲ್ಲಾ ಧರ್ಮಗಳು ಮತ್ತು ದೇಶದ ಮಹಾನ್ ವ್ಯಕ್ತಿಗಳು ‘ಯಾರು ಹೆದರಬೇಡಿ, ಮತ್ತು ಇತರರನ್ನು ಹೆದರಿಸಬೇಡಿ’ ಎಂದು ಹೇಳಿದ್ದಾರೆ ಎಂದು ತಿಳಿಸಿದರು. ಸದನದ ಸ್ಪೀಕರ್ ಆದ ಓಂ ಬಿರ್ಲಾ ಅವರ ಆಕ್ಷೇಪಣೆಗಳು, ಬಿಜೆಪಿ ಮತ್ತು ಮಿತ್ರಪಕ್ಷಗಳ ಪ್ರತಿಭಟನೆಗಳ ನಂತರ, ಈ ಮಾತು ಸೇರಿದಂತೆ ರಾಹುಲ್ ಗಾಂಧಿಯವರ ಭಾಷಣದ ಭಾಗಗಳನ್ನು ಲೋಕಸಭೆಯ ದಾಖಲೆಗಳಿಂದ ತೆಗೆದುಹಾಕಲಾಯಿತು.
ನಂತರ ನಾವು ಲೋಕಸಭೆಯಲ್ಲಿ ರಾಹುಲ್ ಗಾಂಧಿಯವರ ಭಾಷಣದ ಪೂರ್ಣ ವೀಡಿಯೊವನ್ನು ‘ಸಂಸದ್ ಟಿವಿ’ ಯೂಟ್ಯೂಬ್ ಚಾನೆಲ್‌ನಲ್ಲಿ (ಭಾರತೀಯ ಸಂಸತ್ತಿನ ಅಧಿವೇಶನಗಳ ಅಧಿಕೃತ ಪ್ರಸಾರಕರು) ಪತ್ತೆ ಮಾಡಿದೆವು. ಪೂರ್ತಿ ವೀಡಿಯೊವನ್ನು ಪರಿಶೀಲಿಸಿದಾಗ, ರಾಹುಲ್ ಗಾಂಧಿಯವರ ಭಾಷಣದ ವೈರಲ್ ಕ್ಲಿಪ್ 17:22 ಟೈಮ್‌ಸ್ಟ್ಯಾಂಪ್‌ನಲ್ಲಿ ಪ್ರಾರಂಭವಾಗಿ 17:27 ಕ್ಕೆ ಕೊನೆಗೊಳ್ಳುತ್ತದೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ.
“ಯಾರಾದರೂ ನಿಮಗೆ ಒಂದು ಕೆನ್ನೆಗೆ ಬಾರಿಸಿದರೆ, ಇನ್ನೊಂದು ಕೆನ್ನೆಯನ್ನು ತೋರಿಸಿ” ಎಂಬುವುದು ಮಹಾತ್ಮ ಗಾಂಧಿಯವರು ಪ್ರಸಿದ್ಧವಾಗಿ ವ್ಯಾಖ್ಯಾನವಾಗಿದೆ. ಆದರೆ, ಈ ಮಾತು ನಿರ್ದಿಷ್ಟವಾಗಿ ಮ್ಯಾಥ್ಯೂನ ಸುವಾರ್ತೆ, ಬೈಬಲ್‌ನ ಅಧ್ಯಾಯ 5 ರಿಂದ ಹುಟ್ಟಿಕೊಂಡಿದೆ. ಇದು ಜೀಸಸ್ ಕ್ರೈಸ್ಟ್ ಅವರ ಸರ್ಮೋನ್ ಆನ್ ದಿ ಮೌಂಟ್ ಸಮಯದಲ್ಲಿ ಅವರ ಅನುಯಾಯಿಗಳಿಗೆ ನೀಡಿದ ಪ್ರಸಿದ್ಧ ಭಾಷಣಕ್ಕೆ ಕಾರಣವಾಗಿದೆ. ಮ್ಯಾಥ್ಯೂ 5: 38-48 ಅಲ್ಲಿ ಹೇಳಿದ ಪ್ರಕಾರ: “ಕಣ್ಣಿಗೆ ಕಣ್ಣು ಮತ್ತು ಹಲ್ಲಿಗೆ ಹಲ್ಲು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಆದರೆ ನನ್ನ ಪ್ರಕಾರ, ಕೆಟ್ಟದ್ದನ್ನು ಕೆಟ್ಟದ್ದರೊಂದಿಗೆ ವಿರೋಧಿಸಬೇಡಿ; ಯಾರಾದರೂ ನಿನ್ನ ಬಲ ಕೆನ್ನೆಗೆ ಬಾರಿಸಿದರೆ, ಇನ್ನೊಂದು ಕೆನ್ನೆಯನ್ನು ತೋರಿಸಿ” ಎಂದು ಹೇಳಿದ್ದಾರೆ.
ಇದಲ್ಲದೆ, ಮಹಾತ್ಮಾ ಗಾಂಧಿ ಅವರೇ ಈ ಉಲ್ಲೇಖವನ್ನು ಬೈಬಲ್‌ನಿಂದ ಪಡೆಯಲಾಗಿದೆ ಎಂದಿದ್ದಾರೆ. ಅವರ ಆತ್ಮಚರಿತ್ರೆಯ 20 ನೇ ಅಧ್ಯಾಯದಲ್ಲಿ, ‘ದಿ ಸ್ಟೋರಿ ಆಫ್ ಮೈ ಎಕ್ಸ್‌ಪೆರಿಮೆಂಟ್ಸ್ ವಿತ್ ಟ್ರೂತ್’ನಲ್ಲಿ ಗಾಂಧಿ: “But the New Testament produced a different impression, especially the Sermon on the Mount which went straight to my heart. I compared it with the Gita. The verses, ‘But I say unto you, that ye resist not evil: but whosoever shall smite thee on thy right cheek, turn to him the other also. And if any man take away thy coat let him have thy cloke too,’ delighted me beyond measure and put me in mind of Shamal Bhatt’s ‘For a bowl of water, give a goodly meal’ etc. My young mind tried to unify the teaching of the Gita, the Light of Asia, and the Sermon on the Mount. That renunciation was the highest form of religion appealed to me greatly.” ಈ ಮೂಲಕ ರಾಹುಲ್ ಗಾಂಧಿಯವರು “ಯಾರಾದರೂ ನಿಮ್ಮ ಒಂದು ಕೆನ್ನೆಗೆ ಬಾರಿಸಿದರೆ, ಅವರಿಗೆ ನಿಮ್ಮ ಇನ್ನೊಂದು ಕೆನ್ನೆಯನ್ನು ತೋರಿಸಿ” ಎನ್ನುವ ಮಾತನ್ನುಹೇಳಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಮಹಾತ್ಮ ಗಾಂಧಿಯವರು “ಯಾರಾದರೂ ನಿಮ್ಮ ಒಂದು ಕೆನ್ನೆಗೆ ಬಾರಿಸಿದರೆ, ಅವರಿಗೆ ನಿಮ್ಮ ಇನ್ನೊಂದು ಕೆನ್ನೆಯನ್ನು ತೋರಿಸಿ” ಎಂಬ ಮಾತನ್ನು ರಾಹುಲ್ ಗಾಂಧಿ ಏಸುವಿಗೆ ತಪ್ಪಾಗಿ ಆರೋಪಿಸಲಿಲ್ಲ. ಈ ಉಲ್ಲೇಖವು ಬೈಬಲ್‌ನಿಂದ ಹುಟ್ಟಿಕೊಂಡಿದೆ ಮತ್ತು ಮಹಾತ್ಮಾ ಗಾಂಧಿಯವರು ತಮ್ಮ ಆತ್ಮಚರಿತ್ರೆಯಲ್ಲಿ ಇದನ್ನು ಉಲ್ಲೇಖಿಸಿದ್ದಾರೆ.