Fake News - Kannada
 

ಬಾಂಗ್ಲಾದೇಶದ ಹಳೆಯ ವೀಡಿಯೊವನ್ನು ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರು ಸೇನೆಯ ಆಂಬ್ಯುಲೆನ್ಸ್ ಅನ್ನು ತಡೆಯುವ ದೃಶ್ಯಗಳಾಗಿ ಹಂಚಿಕೊಳ್ಳಲಾಗಿದೆ

0

ಗಾಯಾಳು ಸೇನಾ ಯೋಧನನ್ನು ಪಶ್ಚಿಮ ಬಂಗಾಳದ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಸೇನಾ ವಾಹನವನ್ನು ಮುಸ್ಲಿಮರು ತಡೆದಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ ಎನ್ನುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ  ಹಂಚಿಕೊಳ್ಳಲಾಗುತ್ತಿದೆ. ಹಾಗಾದರೆ ಈ  ಪೋಸ್ಟ್‌ನಲ್ಲಿ ಮಾಡಿದ ಕ್ಲೈಮ್ ಅನ್ನು ಪರಿಶೀಲಿಸೋಣ.

ಕ್ಲೇಮ್ : ಪಶ್ಚಿಮ ಬಂಗಾಳದಲ್ಲಿ ಗಾಯಗೊಂಡ ಯೋಧನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಸೇನಾ ವಾಹನದ ಮೇಲೆ ಮುಸ್ಲಿಮರು ದಾಳಿ ನಡೆಸಿದ ವಿಡಿಯೋ.

ಫ್ಯಾಕ್ಟ್ : ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊವು ಬಾಂಗ್ಲಾದೇಶದಲ್ಲಿ ಸೇನಾ ಆಂಬ್ಯುಲೆನ್ಸ್‌ನ ಮೇಲೆ ಮುಸ್ಲಿಮರು ದಾಳಿ ಮಾಡುವ ಹಳೆಯ ದೃಶ್ಯಗಳನ್ನು ತೋರಿಸುತ್ತದೆ. ಪೋಸ್ಟ್‌ನಲ್ಲಿ ಹಂಚಲಾದ ವೀಡಿಯೊ ಹಳೆಯದು ಮತ್ತು ಬಾಂಗ್ಲಾದೇಶದಿಂದ ಬಂದಿದೆ, ಭಾರತದ ಪಶ್ಚಿಮ ಬಂಗಾಳ ರಾಜ್ಯದಿಂದಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ವೀಡಿಯೋವನ್ನು ಕೂಲಂಕುಷವಾಗಿ ಗಮನಿಸಿದಾಗ, ಸೇನಾ ವಾಹನದ ಮೇಲೆ ಮತ್ತು ಸೈನಿಕರು ಧರಿಸಿರುವ ಸಮವಸ್ತ್ರದ ಮೇಲೆ ಕತ್ತಿಗಳನ್ನು ಹೊಂದಿರುವ ಲೋಗೋಗಳು ನಾವು ಗಮನಿಸಿದ್ದೇವೆ ಇದು ಬಾಂಗ್ಲಾದೇಶದ ಸೇನೆಯ ಅಧಿಕೃತ ಸೈನ್ಯದ ಲೋಗೋವನ್ನು ಪ್ರತಿನಿಧಿಸುತ್ತದೆ ಎಂಬುದು ತಿಳಿದು ಬಂದಿದೆ.

ನಾವು ಅಂತರ್ಜಾಲದಲ್ಲಿ ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ವೀಡಿಯೊದ ಹೆಚ್ಚಿನ ಮೂಲಗಳನ್ನು ಹುಡುಕಿದಾಗ, 29 ಮಾರ್ಚ್ 2021 ರಂದು ಯೂಟ್ಯೂಬ್ ಚಾನೆಲ್ ‘ದಿ ಬಾಂಗ್ಲಾದೇಶ ಡಿಫೆನ್ಸ್ ಅನಾಲಿಸ್ಟ್’ ಪ್ರಕಟಿಸಿದ ಒಂದೇ ರೀತಿಯ ದೃಶ್ಯಗಳೊಂದಿಗೆ ವೀಡಿಯೊ ಕಂಡುಬಂದಿದೆ. ಈ ಯೂಟ್ಯೂಬ್ ಚಾನೆಲ್ “ ಬಾಂಗ್ಲಾದೇಶದ ಇಸ್ಲಾಮಿಕ್ ಉಗ್ರಗಾಮಿಗಳು ಬಾಂಗ್ಲಾದೇಶ ಸೇನೆಯ ಆಂಬ್ಯುಲೆನ್ಸ್ ಅನ್ನು ತಡೆಯಲು ವಿಫಲರಾಗಿದ್ದಾರೆ” ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಪ್ರಕಟಿಸಿದೆ.  ಬಾಂಗ್ಲಾದೇಶದ ಚಿತ್ತಗಾಂಗ್‌ನ ಹತಜಾರಿ ರಸ್ತೆಯಲ್ಲಿ ಈ ಘಟನೆ ನಡೆದಿದೆ ಎಂದು ಉಲ್ಲೇಖಿಸಿ ಇತರ ಕೆಲವು ಫೇಸ್‌ಬುಕ್ ಬಳಕೆದಾರರು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಮಾರ್ಚ್ 2021 ರಲ್ಲಿ ಹತಜಾರಿ ರಸ್ತೆಯಲ್ಲಿ ನಡೆದ ಗಲಭೆಗಳನ್ನು ತೋರಿಸುವ ಮತ್ತೊಂದು ವೀಡಿಯೊವನ್ನು ಇಲ್ಲಿ ನೋಡಬಹುದು. ಈ ಎಲ್ಲಾ ಪುರಾವೆಗಳಿಂದ, ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಹಳೆಯದು ಮತ್ತು ಬಾಂಗ್ಲಾದೇಶಕ್ಕೆ ಸಂಬಂದಿಸಿದ್ದು  ಹೊರತು ಭಾರತದ ಪಶ್ಚಿಮ ಬಂಗಾಳ ರಾಜ್ಯದಲ್ಲ ಎಂದು ತೀರ್ಮಾನಿಸಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದ ಹಳೆಯ ವೀಡಿಯೊವನ್ನು ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರು ಸೇನೆಯ ಆಂಬ್ಯುಲೆನ್ಸ್ ಅನ್ನು ತಡೆಯುವ ದೃಶ್ಯಗಳನ್ನು ಹಂಚಿಕೊಳ್ಳಲಾಗಿದೆ.

Share.

Comments are closed.

scroll