‘ಭಾರತದ ಪ್ರಧಾನಿಯ ಸ್ವಯಾನ ಅವರ ಕಿರಿಯ ಸಹೋದರ ಆಟೋ ಓಡಿಸುತ್ತಾ ಜೀವನ ನಡೆಸುತ್ತಿದ್ದಾರೆ’ ಎಂದು ಮೋದಿ ಆಟೋ ಓಡಿಸುತ್ತಿರುವ ವ್ಯಕ್ತಿಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಲೇಖನದ ಮೂಲಕ ಆ ಫೋಟೋದಲ್ಲಿರುವ ವ್ಯಕ್ತಿಯ ಬಗ್ಗೆ ಸತ್ಯವನ್ನು ನೋಡೋಣ.
ಕ್ಲೇಮ್: ಪ್ರಧಾನಿ ನರೇಂದ್ರ ಮೋದಿ ಅವರ ಕಿರಿಯ ಸಹೋದರ ಆಟೋ ಓಡಿಸುತ್ತಿರುವ ಫೋಟೋ.
ಫ್ಯಾಕ್ಟ್: ಈ ಫೋಟೋದಲ್ಲಿರುವ ವ್ಯಕ್ತಿ ನರೇಂದ್ರ ಮೋದಿ ಅವರ ಕಿರಿಯ ಸಹೋದರ ಅಲ್ಲ, ಆದಿಲಾಬಾದ್‌ನ ಅಯೂಬ್ ಎಂಬ ವ್ಯಕ್ತಿ. ಆದಿಲಾಬಾದ್ ಬಸ್ ಡಿಪೋದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಅದಕ್ಕೂ ಮುನ್ನ ಆಟೊ ಓಡಿಸಿದ್ದರು. ಈತ ಆಟೋ ಓಡಿಸುತ್ತಿದ್ದ ಫೋಟೋ ವೈರಲ್ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರರು ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿರುವ ಬಗ್ಗೆ ಮಾಹಿತಿ ಇಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಹೇಳಿರುವುದು ತಪ್ಪು.
ವೈರಲ್ ಆದ ಫೋಟೋದಲ್ಲಿರುವ ವ್ಯಕ್ತಿ ಮೋದಿಯವರನ್ನು ಹೋಲುತ್ತಿರುವುದು ನಿಜವಾದರೂ, ಫೋಟೋದಲ್ಲಿರುವ ವ್ಯಕ್ತಿಗೂ ಮೋದಿಗೂ ಯಾವುದೇ ಸಂಬಂಧವಿಲ್ಲ. ಈತ ಆದಿಲಾಬಾದ್ ಮೂಲದವರು.
ವೈರಲ್ ಫೋಟೋದ ರಿವೆರ್ಸೆ ಇಮೇಜ್ ಹುಡುಕಾಟವು ನಮಗೆ ಹಲವಾರು ಸುದ್ದಿಗಳನ್ನು ಕಂಡುಹಿಡಿಯಲು ಸಹಾಯ ಮಾಡಿತು. ಈ ಹಿಂದೆ ಅದೇ ಫೋಟೋವನ್ನು ವರದಿ ಮಾಡಿರುವುದನ್ನು ನಾವು ಕಂಡುಕೊಂಡಿದ್ದೇವೆ (ಇಲ್ಲಿ, ಇಲ್ಲಿ). ಈ ವರದಿಗಳ ಪ್ರಕಾರ, ಫೋಟೋದಲ್ಲಿರುವ ವ್ಯಕ್ತಿ ಅಯೂಬ್, ಜೀವನೋಪಾಯಕ್ಕಾಗಿ ಆಟೋ ಓಡಿಸುತ್ತಿದ್ದಾರೆ.
ಈ ಕಥೆಯ ಆಧಾರದ ಮೇಲೆ ಹೆಚ್ಚಿನ ಮಾಹಿತಿಗಾಗಿ ಹುಡುಕಾಡಿದ ನಮಗೆ ಅವರ ಬಗ್ಗೆ ಹಲವಾರು ಸುದ್ದಿಗಳನ್ನು ಕಂಡುಬಂದಿದೆ (ಇಲ್ಲಿ, ಇಲ್ಲಿ, ಇಲ್ಲಿ). ಈ ವರದಿಗಳ ಪ್ರಕಾರ, ಅವರು 1998 ರಲ್ಲಿ ಆಂಧ್ರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಗುತ್ತಿಗೆ ಚಾಲಕರಾಗಿ ನೇಮಕಗೊಂಡರು, ಆದರೆ ಕೆಲವು ವರ್ಷಗಳ ಹಿಂದೆ ಕೆಲಸ ಕಳೆದುಕೊಂಡರು ತದನಂತರ ಆಟೋ ರಿಕ್ಷಾ ಚಾಲಕರಾಗಿ ಕೆಲಸ ಮಾಡಿದರು. 2014ರಲ್ಲಿ ಆದಿಲಾಬಾದ್ ಬಸ್ ಡಿಪೋದಿಂದ ಕಾರ್ಯನಿರ್ವಹಿಸುತ್ತಿರುವ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ (ಟಿಎಸ್‌ಆರ್‌ಟಿಸಿ) ಚಾಲಕನಾಗಿ ಖಾಯಂ ಕೆಲಸ ಪಡೆದರು. ಆದ್ರೆ ಈಗ ಅಯೂಬ್ ಆಟೋ ಚಲಾಯಿಸುತ್ತಿರುವ ಫೋಟೋ ವೈರಲ್ ಆಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರರು ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿರುವ ಬಗ್ಗೆ ಮಾಹಿತಿ ಇಲ್ಲ. ಈ ಹಿಂದೆ, ಮೋದಿ ಸಹೋದರರ ವೃತ್ತಿಜೀವನದ ಬಗ್ಗೆ ಕೆಲವು ಸುದ್ದಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದಾಗ, ವಾಸ್ತವವಾಗಿ ಅವುಗಳನ್ನು ಪರಿಶೀಲಿಸುವ ಲೇಖನವನ್ನು ಇಲ್ಲಿ ಬರೆದಿದ್ದಾರೆ.
ಕೊನೆಗೆ ಈ ಫೋಟೋದಲ್ಲಿ ಆಟೋ ಓಡಿಸುತ್ತಿರುವುದು ಮೋದಿಯವರ ಕಿರಿಯ ಸಹೋದರ ಅಲ್ಲ, ಬದಲಾಗಿ ಆದಿಲಾಬಾದ್ ನ ಬಸ್ ಚಾಲಕ.