ರಾಜಸ್ಥಾನದ ಜೋಧ್‌ಪುರದಲ್ಲಿ ಬೆಳಕಿನ ಕಾರಂಜಿ ಪ್ರದರ್ಶನ ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾನದಲ್ಲಿ ಹರಿದಾಡುತ್ತಿದೆ. ಇದು ನಿಜವೆ ಪರಿಶೀಲಿಸೋಣ ಬನ್ನಿ
ಪ್ರತಿಪಾದನೆ: ರಾಜಸ್ಥಾನದ ಜೋಧ್‌ಪುರದಲ್ಲಿ ಬೆಳಕಿನ ಕಾರಂಜಿ ಪ್ರದರ್ಶನದ ವಿಡಿಯೋ
ನಿಜಾಂಶ: ಈ ವಿಡಿಯೋ ಭಾರತದ್ದಲ್ಲ. ಇದು ಚೀನಾದ ಶಾಂಘೈ ಬೇ ಪಾರ್ಕ್‌ನದ್ದು. ಹಾಗಾಗಿ ಮೇಲಿನ ಪ್ರತಿಪಾದನೆ ತಪ್ಪಾಗಿದೆ.
ವಿಡಿಯೋದ ಸ್ಕ್ರೀನ್ ಶಾಟ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಸರ್ಚ್ ನಡೆಸಿದಾಗ ವಿಡಿಯೋಗೆ ಸಂಬಂಧಿಸಿದ ಕೆಲವು ಚೀನಾದ ಫ್ಯಾಕ್ಟ್‌ಚೆಕ್ ಲೇಖನಗಳು ಕಂಡುಬಂದಿವೆ. 2019ರಲ್ಲಿ ಪ್ರಕಟವಾದ ಚೀನಾದ ಫ್ಯಾಕ್ಟ್‌ಚೆಕ್ ಲೇಖನವೊಂದರಂತೆ ಮತ್ತೊಂದು ಪ್ರತಿಪಾದನೆಯಲ್ಲಿ ಇದೇ ವಿಡಿಯೋ ವೈರಲ್ ಆಗಿತ್ತು ಎಂಬುದು ತಿಳಿದುಬರುತ್ತದೆ. ಆ ಲೇಖನಗಳನ್ನು ಇಲ್ಲಿ ಮತ್ತು ಇಲ್ಲಿ ಓದಬಹುದು. ಲೇಖನದಲ್ಲಿ ಹ್ಯಾಂಗ್ಜೂ ಪೊಲೀಸರ ಸ್ಪಷ್ಟೀಕರಣದಂತೆ ‘ಈ ವೀಡಿಯೊವು ಅನ್ಹುಯಿ, ಫುಯಾಂಗ್, ಶುವಾಂಗ್ಕಿಂಗ್ ಬೇ ಪಾರ್ಕ್‌ನಲ್ಲಿನ ‘ವಾರ್ ಆಫ್ ಶುನ್‌ಚಾಂಗ್’ ಥೀಮ್ ಶೋಗೆ ಸಂಬಂಧಿಸಿದೆ. ಆನಂತರ ‘ವಾರ್ ಆಫ್ ಶುನ್‌ಚಾಂಗ್ ಕೀ ವರ್ಡ್ ಬಳಸಿ ಹುಡುಕಿದಾಗ, ಇದೇ ರೀತಿಯ ವಿಡಿಯೋ ಯೂಟ್ಯೂಬ್‌ನಲ್ಲಿ ಕಂಡುಬಂದಿದ್ದು, “ಅತ್ಯುತ್ತಮ ಕಾರಂಜಿ-ಶುವಾಂಗ್ ಕ್ವಿಂಗ್ ಬೇ ವಾಟರ್ ಶೋ ಥಿಯೇಟ್ರಿಕಲ್ ಶೋ ಶುನ್‌ಚಾಂಗ್ ಬ್ಯಾಟಲ್” ಎಂಬ ಶೀರ್ಷಿಕೆ ನೀಡಲಾಗಿದೆ.
ಅಲ್ಲದೆ ಇದಕ್ಕೆ ಸಂಬಂಧಿಸಿದ ಕೀವರ್ಡ್‌ಗಳನ್ನು ಬಳಸಿ ಮತ್ತಷ್ಟು ಹುಡುಕಿದಾಗ ಇದೇ ರೀತಿಯ ಹಲವು ವಿಡಿಯೋಗಳು ಚೀನಾದ ‘ತೆನ್ಸೆಂಟ್ ವಿಡಿಯೋ’ ವೆಬ್‌ಸೈಟ್‌ನಲ್ಲಿ ಕಂಡುಬಂದಿವೆ. ಅವುಗಳನ್ನು ಇಲ್ಲಿ ನೋಡಬಹುದು. (1, 2, 3, 4, 5, 6)
ಚೀನಾದ ಈ ಸ್ಥಳವನ್ನು ಗೂಗಲ್ ಲೊಕೇಷನ್ ಮೂಲಕ ಹುಡುಕಿದಾಗಲೂ ಸಹ ಇದೇ ಸ್ಥಳದ ಕಾರಂಜಿಗೆ ಸಬಂಧಿಸಿದ ಹಲವು ಚಿತ್ರಗಳು ತೆರೆದುಕೊಳ್ಳುತ್ತವೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಒಟ್ಟಿನಲ್ಲಿ ಚೀನಾದ ಕಾರಂಜಿಯ ವಿಡಿಯೋವನ್ನು ರಾಜಸ್ಥಾನದ ಜೋಧ್‌ಪುರದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.