Fake News - Kannada
 

ಇತ್ತೀಚಿನ ಘಟನೆಗಳಿಗೆ ಪ್ರತಿಕ್ರಿಯೆಯಾಗಿ ಫ್ರಾನ್ಸ್‌ನಲ್ಲಿ ಮುಸ್ಲಿಮರ ಮೇಲಿನ ದಾಳಿ ಎಂದು ಹಳೆಯ ವೀಡಿಯೊವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ

0

ನೈಸ್‌ನಲ್ಲಿ ಇತ್ತೀಚೆಗೆ ನಡೆದ ದಾಳಿಗೆ ಫ್ರಾನ್ಸ್‌ನ ಜನರಿಂದ ಬಂದ ಪ್ರತಿಕ್ರಿಯೆ ಎಂದು ಮುಸ್ಲಿಂ ಮಹಿಳೆ ಮತ್ತು ಮಕ್ಕಳ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪ್ರವಾದಿ ಮುಹಮ್ಮದ್‌ರ ವ್ಯಂಗ್ಯಚಿತ್ರಗಳನ್ನು ಚಿತ್ರಿಸಿದಕ್ಕಾಗಿ 2020 ರ ಅಕ್ಟೋಬರ್‌ನಲ್ಲಿ ಪ್ಯಾರಿಸ್‌ನಲ್ಲಿ ಶಿಕ್ಷಕನೊಬ್ಬನ ಶಿರಚ್ಛೇದ ಮಾಡಲಾಯಿಗಿತ್ತು. ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರನ್ ಇಸ್ಲಾಂ ಮೂಲಭೂತವಾದಿಗಳ ವಿರುದ್ಧ ನಿಲುವು ತೆಗೆದುಕೊಂಡು ವ್ಯಂಗ್ಯಚಿತ್ರಗಳನ್ನು ಬಿಟ್ಟುಕೊಡುವುದಿಲ್ಲ ಎಂದು ಹೇಳಿಕೆ ನೀಡಿದರು. ಈ ಹೇಳಿಕೆಗಳನ್ನು ಅನುಸರಿಸಿ, ನೈಸ್ ನಗರದ ಚರ್ಚ್‌ಗೆ ದಾಳಿ ಮಾಡಿದ ದುಷ್ಕರ್ಮಿಳು ಚೂರಿಯಿಂದ ಮೂರು ಜನರನ್ನುಹತ್ಯೆ ಮಾಡಲಾಗಿತ್ತು. ಈ ಲೇಖನದ ಮೂಲಕ  ಸಾಮಾಜಿಕ ಜಾಲತಾಣದಲ್ಲಿ ಮಾಡಲಾಗುತ್ತಿರುವ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಈ ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿ ಇಲ್ಲಿದೆ.

ಪ್ರತಿಪಾದನೆ: ನೈಸ್‌ನಲ್ಲಿ ನಡೆದ ದಾಳಿಯ ನಂತರ ಫ್ರಾನ್ಸ್‌ನಲ್ಲಿ ಒಬ್ಬ ವ್ಯಕ್ತಿ ಮುಸ್ಲಿಂ ಮಹಿಳೆಯ ಮೇಲೆ ಹಲ್ಲೆ ಮಾಡಿದ ವಿಡಿಯೋ.

ಸತ್ಯಾಂಶ: ಪೋಸ್ಟ್‌ನಲ್ಲಿ ಹಂಚಲಾದ ವೀಡಿಯೊ ಹಳೆಯದಾಗಿದ್ದು, 2020 ರ ಜುಲೈನಲ್ಲಿ, ಟಾಟಾರ್‌ಸ್ತಾನ್ ಗಣರಾಜ್ಯದ ನಿಜ್ನೆಕಾಮ್ಸ್ಕ್‌ನಲ್ಲಿರುವ ಉದ್ಯಾನವನದಲ್ಲಿ ಮಕ್ಕಳೊಂದಿಗೆ ಇದ್ದ ಮುಸ್ಲಿಂ ತಾಯಿಯೊಬ್ಬರ ಮೇಲೆ ಸ್ತ್ರೀದ್ವೇಷಿಯೊಬ್ಬ ಹಲ್ಲೆ ನಡೆಸಿದ್ದನು. ಅವನು ಮಹಿಳೆಯರ ಮೇಲಿದ್ದ ದ್ವೇಷದಿಂದ ಒಬ್ಬ ಗರ್ಭಿಣಿ ಸೇರಿದಂತೆ ಸೇರಿದಂತೆ ಐದು ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದನು. ಈ ವೀಡಿಯೊ ಹಾಗೂ ಇತ್ತೀಚೆಗೆ ನೈಸ್ ನಗರದಲ್ಲಿ ನಡೆದ ದಾಳಿಗೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಸಾಮಾಜಿಕ ಜಾಲತಾಣದಲ್ಲಿ ಮಾಡಲಾಗಿರುವ ಪ್ರತಿಪಾದನೆಗಳು ತಪ್ಪಾಗಿದೆ.

ವೀಡಿಯೊದಲ್ಲಿನ ಸ್ಕ್ರೀನ್‌ಶಾಟ್‌ಗಳ ರಿವರ್ಸ್ ಇಮೇಜ್ ಹುಡುಕಾಟದ ಮೂಲಕ, 2020 ರ ಜುಲೈ 08 ರಂದು ‘ಡಾಕ್ಯುಮೆಂಟಿಂಗ್ ಆಪ್ರೆಶನ್ ಎಗೇನ್ಸ್ಟ್ ಮುಸ್ಲಿಮ್ಸ್ (DOAM)’ ಸಂಘಟನೆಯು ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಇದೇ ರೀತಿಯ ದೃಶ್ಯಗಳು ಕಂಡುಬಂದಿವೆ. ಟ್ವೀಟ್‌ನಲ್ಲಿ, ಟಾಟರ್ಸ್ತಾನ್ ಗಣರಾಜ್ಯದ ನಿಜ್ನೆಕಾಮ್ಸ್ಕ್‌ನಲ್ಲಿರುವ ಉದ್ಯಾನವನದಲ್ಲಿ ಮುಸ್ಲಿಂ ತಾಯಿಯೊಬ್ಬರು ವ್ಯಕ್ತಿಯೊಬ್ಬರಿಂದ ಕ್ರೂರವಾಗಿ ಹಲ್ಲೆಗೊಳಗಾಗಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಉದ್ಯಾನದಲ್ಲಿ ಈ ವ್ಯಕ್ತಿಯಿಂದ ಗರ್ಭಿಣಿ ಮಹಿಳೆ ಸೇರಿದಂತೆ ಐವರು ಮಹಿಳೆಯರು ಹಲ್ಲೆಗೊಳಗಾಗಿದ್ದಾರೆ ಎಂದು ವರದಿಯಾಗಿದೆ. ಮಹಿಳೆಯರ ಬಗೆಗಿನ ದ್ವೇಷವೆ ಆತನ ವರ್ತನೆಗೆ ಪ್ರಮುಖ ಕಾರಣವಾಗಿದೆ ಎನ್ನಲಾಗಿದೆ.

ಕೀವರ್ಡ್‌ಗಳನ್ನು ಬಳಸಿ ಇತರ ಮೂಲಗಳ ಬಗ್ಗೆ ಹುಡುಕಾಡಿದಾಗ, 2020 ರ ಜುಲೈ 07 ರಂದು ರಷ್ಯಾದ ಸುದ್ದಿ ವೆಬ್‌ಸೈಟ್ ಪ್ರಕಟಿಸಿದ ಲೇಖನದಲ್ಲಿ ಇದೇ ರೀತಿಯ ದೃಶ್ಯ ಕಂಡು ಬಂದಿದೆ. ಲೇಖನದಲ್ಲಿ, ನಿಜ್ನೆಕಾಮ್ಸ್ಕ್‌ನ ಉದ್ಯಾನದಲ್ಲಿ ಮಹಿಳೆಯರನ್ನು ಥಳಿಸಿದ್ದಕ್ಕಾಗಿ ಗೂಂಡಾಗಿರಿಯ ಕೃತ್ಯದಡಿಯಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ಇದೇ ಮಾಹಿತಿಯನ್ನೊಳಗೊಂಡು ಕೆಲವು ಬಳಕೆದಾರರು ತಮ್ಮ ಟ್ವಿಟ್ಟರ್ ಹ್ಯಾಂಡಲ್‌ಗಳು ಮತ್ತು ಯೂಟ್ಯೂಬ್ ಚಾನೆಲ್‌ಗಳಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಈ ಎಲ್ಲ ಸಾಕ್ಷ್ಯಗಳಿಂದ, ಪೋಸ್ಟ್‌ನಲ್ಲಿ ಹಂಚಲಾದ ವೀಡಿಯೊ ಹಳೆಯದು ಮತ್ತು ಫ್ರಾನ್ಸ್‌ನ ನೈಸ್ ನಗರದಲ್ಲಿ ಇತ್ತೀಚೆಗೆ ನಡೆದ ದಾಳಿಗೆ ಸಂಬಂಧಿಸಿಲ್ಲ ಎಂದು ತೀರ್ಮಾನಿಸಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ನೈಸ್ (ಫ್ರಾನ್ಸ್) ನಲ್ಲಿ ಇತ್ತೀಚೆಗೆ ನಡೆದ ದಾಳಿಗೆ ಪ್ರತಿಕ್ರಿಯೆಯಾಗಿ ಹಳೆಯ ವೀಡಿಯೊವನ್ನು ಮುಸ್ಲಿಮರ ಮೇಲಿನ ದಾಳಿ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

Share.

About Author

Comments are closed.

scroll