ಕಾಂಗ್ರೆಸ್‌ನ ‘ಗ್ಯಾರೆಂಟಿ ಕಾರ್ಡ್’ ಯೋಜನೆ (ಮಹಾಲಕ್ಷ್ಮಿ ಯೋಜನೆ) ಅಡಿಯಲ್ಲಿ 8,500 ರೂ ಕೇಳಲು ಬಂದ ಮಹಿಳೆಯನ್ನು ಕಾಂಗ್ರೆಸ್ ನಾಯಕ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಓಡಿಸಿದ್ದಾರೆ ಎನ್ನುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇದರಲ್ಲಿ ದಿಗ್ವಿಜಯ್ ತನ್ನನ್ನು ಭೇಟಿಯಾಗಲು ಬಂದಿದ್ದ ಮಹಿಳೆಯನ್ನು ಓಡಿಸುವಂತೆ ತನ್ನ ಭದ್ರತಾ ಸಿಬ್ಬಂದಿಗೆ ನಿರ್ದೇಶನ ನೀಡುತ್ತಿರುವುದನ್ನು ಕಾಣಬಹುದು. ‘ಈ ಮಹಿಳೆಗೆ ಹುಚ್ಚು ಹಿಡಿದಿದೆ, ಅವಳನ್ನು ಹೊರಹಾಕಿ’ ಎಂದು ದಿಗ್ವಿಜಯ್ ಸಿಂಗ್ ಹೇಳುವುದನ್ನು ಕೇಳಬಹುದು. ಈ ಲೇಖನದ ಮೂಲಕ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೈಮ್ ಅನ್ನುನಿಖರವಾಗಿ ಪರಿಶೀಲಿಸೋಣ.
ಕ್ಲೇಮ್ : ಕಾಂಗ್ರೆಸ್ ನ ‘ಗ್ಯಾರಂಟಿ ಕಾರ್ಡ್’ ಯೋಜನೆಯಡಿ 8,500 ರೂ ಪಡೆಯಲು ಬಂದ ಮಹಿಳೆಯನ್ನು ದಿಗ್ವಿಜಯ್ ಸಿಂಗ್ ಓಡಿಸುತ್ತಿರುವ ದೃಶ್ಯಗಳು.
ಫ್ಯಾಕ್ಟ್ : ನ್ಯೂಸ್ ರಿಪೋರ್ಟ್ ಗಳ ಪ್ರಕಾರ, ಈ ವೈರಲ್ ವೀಡಿಯೊ ಹಳೆಯದ್ದು ಅಂದರೆ ಫೆಬ್ರವರಿ 2024 ರ ಸಂದರ್ಭದ್ದುಇದಕ್ಕೂ ಕಾಂಗ್ರೆಸ್‌ನ ‘ಗ್ಯಾರೆಂಟಿ ಕಾರ್ಡ್’ ಯೋಜನೆಗೆ ಸಂಬಂಧಿಸಿಲ್ಲ. ಫೆಬ್ರವರಿ 21, 2024 ರಂದು ಈ ಘಟನೆಯು ಸಂಭವಿಸಿದ್ದು, ಮಹಿಳೆ ಪದೇ ಪದೇ ದಿಗ್ವಿಜಯ್ ಸಿಂಗ್ ಅನ್ನು ಭೇಟಿ ಮಾಡಲು ಪ್ರಯತ್ನಿಸಿದ್ದು, ಭದ್ರತಾ ಸಿಬ್ಬಂದಿಗಳು ತಡೆಯಲು ಆಕೆಯನ್ನು ಎಷ್ಟೇ ತಡೆದರು ಆಕೆ ಸುಮ್ಮನಾಗಲಿಲ್ಲ. ಇದು ದಿಗ್ವಿಜಯ್ ಸಿಂಗ್ ನ ಕೋಪಕ್ಕೆ ಕಾರಣವಾಗಿದೆ. ಅವರು ಆಕೆಯನ್ನು ಹಿಡದಂತೆ ತನ್ನ ಭದ್ರತಾ ಸಿಬ್ಬಂದಿಗಳಿಗೆ ಸೂಚಿಸಿದರು. ವೈರಲ್ ವೀಡಿಯೊದಲ್ಲಿರುವ ಮಹಿಳೆ ಡಾ. ಲೀನಾ ಶರ್ಮಾ, ಗುಣ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತೆ. ಈ ಘಟನೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2024 ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಲು ವಾರಣಾಸಿ ಎಂಪಿ ಟಿಕೆಟ್ ಕೇಳಲು ನಾನು ದಿಗ್ವಿಜಯ್ ಸಿಂಗ್ ಅವರನ್ನು ಭೇಟಿ ಮಾಡಲು ಹೋಗಿದ್ದೆ ಎಂದಿದ್ದಾರೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
2024ರ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದರೆ ಮಹಾಲಕ್ಷ್ಮಿಯೋಜನೆಯಡಿ ಪ್ರತಿ ಬಡ ಕುಟುಂಬದ ಮುಖ್ಯಸ್ಥ ಮಹಿಳೆಗೆ ವಾರ್ಷಿಕ 1 ಲಕ್ಷ (ಅಥವಾ ತಿಂಗಳಿಗೆ ರೂ. 8,500)ರೂ.ಗಳನ್ನುನೀಡುವುದಾಗಿ ಭರವಸೆ ನೀಡಿತ್ತು. ಆದಾಗ್ಯೂ, ಜೂನ್ 4, 2024 ರಂದು ಪ್ರಕಟವಾದ ಚುನಾವಣಾ ಫಲಿತಾಂಶಗಳಲ್ಲಿ, I.N.D.I.A ಬ್ಲಾಕ್ ಬಹುಮತವನ್ನು ಗಳಿಸಿ, NDA ಮೈತ್ರಿ ಸರ್ಕಾರ ಮೂರನೇ ಬಾರಿಗೆ ಕೇಂದ್ರದಲ್ಲಿ ಸರ್ಕಾರವನ್ನು ರಚಿಸಿದೆ. ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ನೀಡಿದ ನಗದು ವರ್ಗಾವಣೆ ಭರವಸೆಗೆ ಸಂಬಂಧಿಸಿದಂತೆ ‘ಗ್ಯಾರೆಂಟಿ ಕಾರ್ಡ್‘ಗಳನ್ನು ಪಡೆಯಲು ಲಕ್ನೋದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮಹಿಳೆಯರು ಸಾಲುಗಟ್ಟಿ ನಿಂತಿದ್ದಾರೆ ಎಂಬ ಸುದ್ದಿ ವರದಿಗಳ ನಡುವೆ (ಇಲ್ಲಿ ಮತ್ತು ಇಲ್ಲಿ) ಈ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.
ವೈರಲ್ ವೀಡಿಯೊವನ್ನು ಸ್ಪಷ್ಟವಾಗಿ ಗಮನಿಸಿದಾಗ, ‘the_madhya_pradeshmp’ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯ ವಾಟರ್‌ಮಾರ್ಕ್ ಅನ್ನು ಗಮನಿಸಿದ್ದೇವೆ. ಇದನ್ನು ಕ್ಲ್ಯೂ ಆಗಿ ಬಳಸಿಕೊಂಡು, ಫೆಬ್ರವರಿ 21, 2024 ರಂದು ಇನ್ಸ್ಟಾಗ್ರಾಮ್ನಲ್ಲಿ ”ದಿಗ್ವಿಜಯ್ ಸಿಂಗ್ ಮಹಿಳಾ ಕೆಲಸಗಾರನನ್ನು ಹೊರಗೆ ತಳ್ಳಿದರು!” ಎಂದು ಪೋಸ್ಟ್ ಮಾಡಿದ ವೀಡಿಯೊನಮಗೆ ದೊರಕಿದೆ. ಈ ಮಾಹಿತಿಯಿಂದ ಮೂಲಕ ಹೇಳುವುದಾದರೆ ಇದು ಹಳೆಯ ವೀಡಿಯೋವಾಗಿದ್ದು, 2024ರ ಲೋಕಸಭಾ ಚುನಾವಣೆಯ ಮುಂಚಿನದು ಎಂಬುದು ಸ್ಪಷ್ಟವಾಗಿದೆ.
ಇದಲ್ಲದೆ, ಈ ವೈರಲ್ ವೀಡಿಯೊದ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ನಾವು ಹಲವಾರು ನ್ಯೂಸ್ ರಿಪೋರ್ಟ್ಸ ಸಂಬಂಧಿತ ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ. ಮಧ್ಯಪ್ರದೇಶ/ಛತ್ತೀಸ್‌ಗಢ ಎನ್ ಡಿ ಟಿವಿ ವರದಿಯ ಪ್ರಕಾರ, ಈ ಘಟನೆಯು ಫೆಬ್ರವರಿ 21, 2024 ರಂದು ಗ್ವಾಲಿಯರ್‌ನಲ್ಲಿ ದಿಗ್ವಿಜಯ್ ಸಿಂಗ್ ಅವರ ರಾಜಕೀಯ ಪ್ರವಾಸದ ಸಮಯದಲ್ಲಿ ಸಂಭವಿಸಿದೆ, ಅಲ್ಲಿ ಅವರು ಸ್ಥಳೀಯ ಪಕ್ಷದ ಕಾರ್ಯಕರ್ತರನ್ನು ಭೇಟಿಯಾಗಿದ್ದರು. ಮಹಿಳೆಯೋರ್ವೇ ಪದೇ ಪದೇ ದಿಗ್ವಿಜಯ್ ಸಿಂಗ್ ಅನ್ನು ಭೇಟಿ ಮಾಡಲು ಪ್ರಯತ್ನಿಸಿದ್ದು, ಭದ್ರತಾ ಸಿಬ್ಬಂದಿಗಳು ತಡೆಯಲು ಆಕೆಯನ್ನು ಎಷ್ಟೇ ತಡೆದರು ಆಕೆ ಸುಮ್ಮನಾಗಲಿಲ್ಲ. ಇದು ದಿಗ್ವಿಜಯ್ ಸಿಂಗ್ ನ ಕೋಪಕ್ಕೆ ಕಾರಣವಾಗಿ ”ಆಕೆಗೆ ಹುಚ್ಚು, ಆಕೆಯನ್ನು ಹೊರಕೆ ತಳ್ಳಿ” (ಹಿಂದಿ ಅನುವಾದ ) ಎಂದು ಅವರು ಕೇಳುತ್ತಿರುವ ಮಾತನ್ನು ಮಾಧ್ಯಮಗಳು ವರದಿ ಮಾಡಿದೆ.
‘ಎಂಪಿ ಟಕ್’ ವರದಿಯ ಪ್ರಕಾರ, ವೈರಲ್ ವೀಡಿಯೊದಲ್ಲಿರುವ ಮಹಿಳೆ ಡಾ. ಲೀನಾ ಶರ್ಮಾ, ಗುಣ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತೆ. ಈ ಘಟನೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2024 ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಲು ವಾರಣಾಸಿ ಎಂಪಿ ಟಿಕೆಟ್ ಕೇಳಲು ನಾನು ದಿಗ್ವಿಜಯ್ ಸಿಂಗ್ ಅವರನ್ನು ಭೇಟಿ ಮಾಡಲು ಹೋಗಿದ್ದೆ. ದಿಗ್ವಿಜಯ್ ಸಿಂಗ್ ವಿರುದ್ಧ ನನಗೆ ಯಾವುದೇ ಅಸಮಾಧಾನವಿಲ್ಲ, ಆತನಿಕೆ ನಾನು ಚಿಕ್ಕ ಬಾಲಕಿ ಇದ್ದಂತೆ, ನಾನು ಅವರನ್ನು ಭೇಟಿ ಮಾಡಲು ಬಂದಿದ್ದೆ ಆದರೆ ಅವರು ನನ್ನನ್ನು ಹೊರಗೆ ಹೋಗಲು ಹೇಳಿದರು, ನಾನು ಮತ್ತೆ ಅವರನ್ನು ಭೇಟಿ ಮಾಡಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಕಾಂಗ್ರೆಸ್ ನ ‘ಗ್ಯಾರಂಟಿ ಕಾರ್ಡ್’ ಯೋಜನೆಯಡಿ 8,500 ರೂ ಸಂಗ್ರಹಿಸಲು ಬಂದ ಮಹಿಳೆಯನ್ನು ದಿಗ್ವಿಜಯ್ ಸಿಂಗ್ ಓಡಿಸುತ್ತಿರುವ ದೃಶ್ಯಗಳು ಎಂದು ಸುಳ್ಳು ಮಾಹಿತಿಯನ್ನು ಹಬ್ಬಿಸಲಾಗಿದೆ.