Fake News - Kannada
 

ಈ ವೀಡಿಯೊದಲ್ಲಿ ತೋರಿಸಿರುವಂತೆ ಅರಳಿ ಮರದಲ್ಲಿ ಮಾವಿನ ಕಾಯಿ ಬಿಟ್ಟಿದೆ ಎಂಬುದು ಸುಳ್ಳು

0

ಅರಳಿ ಮರದ ಕೊಂಬೆಯಿಂದ ನೇತಾಡುತ್ತಿರುವ ಮಾವಿನ ಕಾಯಿಗಳು ಎಂಬ ವಿಡಿಯೋವೊಂದನ್ನು ಹಂಚಿಕೊಳ್ಳುತ್ತಾ, ಹೃಷೀಕೇಶದಲ್ಲಿ ಅರಳಿ ಮರದಲ್ಲಿ ಮಾವಿನ ಕಾಯಿ ಬಿಟ್ಟಿದೆ ಎಂಬ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪ್ರಮುಖ ತೆಲುಗು ಸುದ್ದಿ ಚಾನೆಲ್ ಎಬಿಎನ್ ಕೂಡ ಇದೇ ವಿಡಿಯೋವನ್ನು ಪ್ರಸಾರ ಮಾಡಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಪ್ರತಿಪಾದನೆ: ಹೃಷಿಕೇಶದ ಅರಳಿ ಮರದ ಮೇಲೆ ಮಾವಿನ ಕಾಯಿ ಬಿಟ್ಟಿರುವ ವಿಡಿಯೋ.

ನಿಜಾಂಶ: ಹೃಷಿಕೇಶದಲ್ಲಿ ಇತ್ತೀಚೆಗೆ ಉಂಟಾದ ಚಂಡಮಾರುತದ ಸಂದರ್ಭದಲ್ಲಿ ಜೋರಾಗಿ ಗಾಳಿ ಬೀಸಿದ್ದರಿಂದ ಅರಳಿ ಮರದ ಮೇಲೆ ಮಾವಿನ ಮರದ ಸಣ್ಣ ಕೊಂಬೆಗಳು ಮುರಿದು ಬಿದ್ದಿದ್ದವು. ಕೆಲವರು ಇದನ್ನು ವಿಡಿಯೋ ಮಾಡಿ ಅರಳಿ ಮರದ ಮೇಲೆ ಮಾವಿನ ಕಾಯಿ ಬಿಟ್ಟಿದೆ ಎಂದು ಪ್ರಸಾರ ಮಾಡಿದ್ದಾರೆ. ಕೆಲವು ಸುದ್ದಿ ಲೇಖನಗಳು ಅದೇ ವಿಷಯವನ್ನು ಪ್ರಕಟಿಸಿವೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಈ ವೀಡಿಯೊದ ಕುರಿತು ಹೆಚ್ಚಿನ ಮಾಹಿತಿಗಾಗಿ ಗೂಗಲ್‌ನಲ್ಲಿ ಹುಡುಕುತ್ತಿರುವಾಗ, ಈ ವೀಡಿಯೊದ ಬಗ್ಗೆ ವಿವರಿಸುವ ಆಜ್ ತಕ್ ಲೇಖನವೊಂದು ಕಂಡುಬಂದಿದೆ. ಲೇಖನದ ಪ್ರಕಾರ, ವೀಡಿಯೊದಲ್ಲಿ ಕಂಡುಬರುವ ಹೋರ್ಡಿಂಗ್‌ಗಳಲ್ಲಿನ ಮೊಬೈಲ್ ಸಂಖ್ಯೆಗಳ ಆಧಾರದ ಮೇಲೆ ಆಜ್ ತಕ್ ಅಲ್ಲಿನ ಜನರನ್ನು ಸಂಪರ್ಕಿಸಿದೆ. ವಿಡಿಯೋದಲ್ಲಿರುವ ಹಾಗೆ ಮಾವಿನ ಮರದ ರೆಂಬೆಗಳು ಅರಳಿ ಮರದ ಮೇಲೆ ಬಿದ್ದಿವೆ ಎಂದು ಅಲ್ಲಿನ ಜನ ತಿಳಿಸಿದ್ದಾರೆ.

ನಂತರ ಅಲ್ಲಿನ ಪೊಲೀಸರನ್ನು ಸಂಪರ್ಕಿಸಿದಾಗ, ಅರಳಿ ಮರವು ಮಾವಿನ ಹಣ್ಣನ್ನು ಬಿಟ್ಟಿಲ್ಲ. ಇತ್ತೀಚೆಗೆ ಜೋರಾಗಿ ಗಾಳಿ ಬೀಸಿದ್ದರಿಂದ ಪಕ್ಕದಲ್ಲಿರುವ ಮಾವಿನ ಮರದ ಕೊಂಬೆಗಳು ಮುರಿದು ಅರಳಿ ಮರದ ಮೇಲೆ ಬಿದ್ದಿವೆ ಎಂದು ಅವರು ಸ್ಪಷ್ಟಪಡಿಸಿದರು. ಕೆಲವರು ಅದನ್ನು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವೀಡಿಯೊದಲ್ಲಿ ತೋರಿಸಿರುವಂತೆ ಅರಳಿ ಮರದ ಮೇಲೆ ಮಾವಿನಹಣ್ಣು ಬೆಳೆಯುವುದಿಲ್ಲ ಎಂದು ಡೈನಿಕ್ ಭಾಸ್ಕರ್ ಬರೆದ ಲೇಖನ ಇಲ್ಲಿದೆ.

ಒಟ್ಟಿನಲ್ಲಿ ಈ ವೀಡಿಯೊದಲ್ಲಿ ತೋರಿಸಿರುವಂತೆ ಅರಳಿ ಮರದಲ್ಲಿ ಮಾವಿನ ಕಾಯಿ ಬಿಟ್ಟಿದೆ ಎಂಬುದು ಸುಳ್ಳು..

Share.

About Author

Comments are closed.

scroll