Fake News - Kannada
 

ಮನಮೋಹನ್‌ ಸಿಂಗ್‌ ಆಡಳಿತದಲ್ಲಿ ಮಾತ್ರವಲ್ಲ, ಮೋದಿ ಸರ್ಕಾರ ಕೂಡ ಒಂದೇ ದಿನದಲ್ಲಿ 17 ಕೋಟಿ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದೆ..!

0

ದೇಶಾದ್ಯಂತ ಒಂದೇ ದಿನದಲ್ಲಿ ಒಟ್ಟು 88 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೊನಾ ಲಸಿಕೆ ನೀಡಿದ್ದು, ಮೋದಿ ಸರ್ಕಾರದ ದಾಖಲೆಯನ್ನು ಬರೆದಿದೆ ಎಂದು ಹೇಳಲಾಗಿದೆ. ಇದನ್ನು, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಅಧಿಕಾರಾವಧಿಯಲ್ಲಿ ಒಂದೇ ದಿನ 17 ಕೋಟಿ ಮಕ್ಕಳಿಗೆ ಪಲ್ಸ್‌ ಪೋಲಿಯೋ ಲಸಿಕೆ ನೀಡಿದ್ದಕ್ಕೆ ಹೋಲಿಸಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಪೋಸ್ಟ್‌ನ ಸತ್ಯಾ-ಸತ್ಯತೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ಮೋದಿಯವರ ಒಂದೇ ದಿನದ ಕೊರೊನಾ ಲಸಿಕೆ ಅಭಿಯಾನವನ್ನು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಅಧಿಕಾರಾವಧಿಯ ಪಲ್ಸ್‌ ಪೋಲಿಯೋ ಅಭಿಯಾನಕ್ಕೆ ಹೋಲಿಕೆ.

ನಿಜಾಂಶ: ಮನಮೋಹನ್ ಸಿಂಗ್ ಪ್ರಧಾನ ಮಂತ್ರಿಯಾಗಿದ್ದ ಅವಧಿಯಲ್ಲಿ ಸರ್ಕಾರವು ಒಂದೇ ದಿನ 17 ಕೋಟಿ ಮಕ್ಕಳಿಗೆ ಪೋಲಿಯೋ ಲಸಿಕೆಯನ್ನು ನೀಡಿದ ನಿದರ್ಶನಗಳಿವೆ ಎಂಬುದು ನಿಜ. ಆದರೆ, ಇದು ಮನಮೋಹನ್ ಸಿಂಗ್ ಅವರ ಅಧಿಕಾರಾವಧಿಗೆ ಸೀಮಿತವಾಗಿಲ್ಲ. ಮೋದಿಯವರು ಪ್ರಧಾನ ಮಂತ್ರಿಯಾದ ನಂತರವೂ, ಒಂದೇ ದಿನದಲ್ಲಿ ಪೋಲಿಯೋ ಲಸಿಕೆ ಪಡೆದ ಒಟ್ಟು ಮಕ್ಕಳ ಸಂಖ್ಯೆ 17 ಕೋಟಿಗಳನ್ನು ಮೀರಿದ ಉದಾಹರಣೆಗಳಿವೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಭಾರತ ಸರ್ಕಾರವು ಪೋಲಿಯೋ ಲಸಿಕೆಯನ್ನು ಎಕ್ಸ್‌ಪ್ಯಾಂಡೆಡ್ ಪ್ರೋಗ್ರಾಂ ಆನ್ ಇಮ್ಯುನೈಸೇಶನ್ (ಇಪಿಐ, 1978) ಅಡಿಯಲ್ಲಿ ಪರಿಚಯಿಸಿತು. ನಂತರ ಯೂನಿವರ್ಸಲ್ ಇಮ್ಯುನೈಸೇಶನ್ ಪ್ರೋಗ್ರಾಂ (ಯುಐಪಿ, 1985) ಅನ್ನು ಪರಿಚಯಿಸಿತು. ಆದಾಗ್ಯೂ, 1988 ರಲ್ಲಿ ಜಾಗತಿಕ ಪೋಲಿಯೋ ನಿರ್ಮೂಲನೆಗಾಗಿ ವಿಶ್ವ ಆರೋಗ್ಯ ಸಂಸ್ಥೇ ಅಂಗೀಕರಿಸಿದ ನಿರ್ಣಯದ ನಂತರ, ಪಲ್ಸ್ ಪೋಲಿಯೋ ಇಮ್ಯುನೈಸೇಷನ್ ಕಾರ್ಯಕ್ರಮವನ್ನು 1995 ರಲ್ಲಿ ಭಾರತದಲ್ಲಿ ಪ್ರಾರಂಭಿಸಲಾಯಿತು.

ಅದರಂತೆ, ಸಾಮಾನ್ಯವಾಗಿ ‘ಪಲ್ಸ್ ಪೋಲಿಯೊ ಇಮ್ಯುನೈಸೇಶನ್ ಪ್ರೋಗ್ರಾಂ’ ಎಂದು ಕರೆಯಲ್ಪಡುವ ‘ನ್ಯಾಷನಲ್ ಇಮ್ಯುನೈಸೇಶನ್ ಡೇಸ್ (ದಿನಗಳು)’ (ಎನ್‌ಐಡಿ) ಎಂಬ ವಿಶೇಷ ಪೋಲಿಯೊ ಲಸಿಕೆ ಅಭಿಯಾನವನ್ನು ಭಾರತದಾದ್ಯಂತ ವರ್ಷಕ್ಕೆ ಎರಡು ಬಾರಿ ನಡೆಸಲಾಗುತ್ತದೆ. ಪ್ರತಿ ವರ್ಷದ ಎರಡು ದಿನಗಳಲ್ಲಿ, ದೇಶದ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಪ್ರತಿ ಮಗುವಿಗೆ ಎರಡು ಹನಿ ಸಮಗ್ರ ಪೋಲಿಯೊ ಲಸಿಕೆ (ಒಪಿವಿ) ಮತ್ತು ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನಿಷ್ಕ್ರಿಯ ಪೋಲಿಯೊ ಲಸಿಕೆ (ಐಪಿವಿ)ಯನ್ನು ಭಾರತ ಸರ್ಕಾರ ನೀಡುತ್ತಿದೆ. ಇದಲ್ಲದೆ, ಹೆಚ್ಚುವರಿಯಾಗಿ ಹಲವಾರು ‘ಸಬ್‌- ನ್ಯಾಷನಲ್ ಇಮ್ಯುನೈಸೇಶನ್ ಡೇಸ್ (ದಿನಗಳು)’ (ಎಸ್‌ಎನ್‌ಐಡಿ) ಅತಿ ಹೆಚ್ಚು ಅಪಾಯದಲ್ಲಿರುವ ರಾಜ್ಯಗಳು / ಪ್ರದೇಶಗಳಲ್ಲಿ ನಡೆಯುತ್ತವೆ. ರಾಜ್ಯ ಸರ್ಕಾರಗಳ ಸಹಾಯದಿಂದ ಈ ಅಭಿಯಾನವನ್ನು ಜಾರಿಗೆ ತರಲಾಗಿದೆ.

1995 ರಿಂದ ವಿಶೇಷ ಪೋಲಿಯೋ ಅಭಿಯಾನಗಳನ್ನು ನಡೆಸಲಾಗುತ್ತಿದೆ. ಈ ರಾಷ್ಟ್ರೀಯ ಪೋಲಿಯೋ ಲಸಿಕೆ ಅಭಿಯಾನವು ಅಧಿಕಾರದಲ್ಲಿರುವ ಪಕ್ಷವನ್ನು ಲೆಕ್ಕಿಸದೆ ನಿರಂತರವಾಗಿ ನಡೆಯುತ್ತಿರುವ ಪ್ರಕ್ರಿಯೆಯಾಗಿದೆ. ಈ ವಿಶೇಷ ಲಸಿಕೆ ಅಭಿಯಾನದ 2001-02 ರಿಂದ 2014-15ರವರೆಗಿನ ಪೋಲಿಯೋ ಲಸಿಕೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, 2005-10ರ ನಡುವೆ ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿಯಾಗಿದ್ದ ಅವಧಿಯಲ್ಲಿ ಒಂದೇ ದಿನದಲ್ಲಿ (ಎನ್‌ಐಡಿ) ಲಸಿಕೆ ಪಡೆದ ಮಕ್ಕಳ ಸಂಖ್ಯೆ 17 ಕೋಟಿ ಮೀರಿದ ಕೆಲವು ನಿದರ್ಶನಗಳಿವೆ.

ಆದಾಗ್ಯೂ, ಇದು ಕೇವಲ ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿಯಾಗಿದ್ದ ಅವಧಿಗೆ ಸೀಮಿತವಾಗಿಲ್ಲ. ಮೋದಿಯವರು ಪ್ರಧಾನ ಮಂತ್ರಿಯಾದ ನಂತರವೂ ಸಹ, ಸರ್ಕಾರವು ಒಂದೇ ದಿನದಲ್ಲಿ (ಎನ್ಐಡಿ) 17 ಕೋಟಿಗೂ ಹೆಚ್ಚು ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವಾರ್ಷಿಕ ವರದಿಗಳ ಪ್ರಕಾರ, 2014-2021ರ ನಡುವೆ ಒಂದೇ ದಿನದಲ್ಲಿ ಪೋಲಿಯೋ ಲಸಿಕೆ ಪಡೆದ ಒಟ್ಟು ಮಕ್ಕಳ ಸಂಖ್ಯೆ 17 ಕೋಟಿ ಮೀರಿದೆ. ಈ ವರದಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಓದಬಹುದು.

ಪೋಲಿಯೋ ಲಸಿಕೆ ದರವನ್ನು ಕೊರೊನಾ ಲಸಿಕೆ ಅಭಿಯಾನದ ಜೊತೆಗೆ ಹೋಲಿಸುವುದು ಸೂಕ್ತವಲ್ಲ. ಏಕೆಂದರೆ ಪೋಲಿಯೋ ಲಸಿಕೆಗಳನ್ನು ಮೊದಲೇ ಅಭಿವೃದ್ಧಿಪಡಿಸಲಾಗಿದೆ ಮತ್ತು ಸುಲಭವಾಗಿ ಲಭ್ಯವಿರುತ್ತವೆ. ಆದರೆ, ಕೊರೊನಾ ಲಸಿಕೆಯ ವಿಷಯ ಹಾಗಿಲ್ಲ. ಇದಲ್ಲದೆ, ಪೋಲಿಯೋ ಲಸಿಕೆಗಾಗಿ ಶೇಖರಣಾ ಮತ್ತು ಸಾರಿಗೆ ಲಾಜಿಸ್ಟಿಕ್ಸ್ ಸೌಲಭ್ಯಗಳ ಲಭ್ಯತೆಯನ್ನು ಕೊರೊನಾ ಲಸಿಕೆಗೆ ಹೋಲಿಸಿದರೆ ನಿರ್ವಹಣೆಯ ಬಗೆಗಿನ  ವಿಶ್ಲೇಷಣೆ ಸುಲಭವಾಗುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದಾಗ ಮಾತ್ರವಲ್ಲದೆ, ನರೇಂದ್ರ ಮೋದಿಯವರ ಪ್ರಧಾನ ಮಂತ್ರಿಯಾಗಿದ್ದಾಗಲೂ ಒಂದೇ ದಿನದಲ್ಲಿ 17 ಕೋಟಿ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲಾಗಿದೆ.

Share.

About Author

Comments are closed.

scroll