Fake News - Kannada
 

ಐಪಿಸಿಯಲ್ಲಿ ಹಿಂದೂ ಧರ್ಮ ನಿಂದಿಸುವವರ ವಿರುದ್ಧ ಸೆಕ್ಷನ್ 295 (1), 502 (2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗದು. ಏಕೆಂದರೆ ಐಪಿಸಿಯಲ್ಲಿ ಆ ಸೆಕ್ಷನ್‌ಗಳೆ ಇಲ್ಲ

0

ಹಿಂದೂಗಳನ್ನೂ, ಹಿಂದೂ ಧರ್ಮವನ್ನು ನಿಂದಿಸುವವರ ವಿರುದ್ಧ  ಐಪಿಸಿಯ 295 (1) ಮತ್ತು 502 (2) ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಬಹುದು ಎಂದು ಹಲವಾರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದು ಶೇರ್‌  ಮಾಡುತ್ತಿದ್ದಾರೆ. ಅದು ಎಂಬುದನ್ನು ಪರಿಶೀಲಿಸೋಣ.

ಪ್ರತಿಪಾದನೆ: ಹಿಂದೂ ಧರ್ಮದ ವಿರುದ್ಧ ಧರ್ಮನಿಂದನೆ ಮಾಡುವವರ ವಿರುದ್ಧ ಐಪಿಸಿಯ 295 (1), 502 (2) ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಬಹುದು.

ನಿಜಾಂಶ: ಭಾರತೀಯ ದಂಡ ಸಂಹಿತೆ (IPC) ಯಲ್ಲಿ 295 (1), 502 (2) ವಿಭಾಗಗಳು ಅಸ್ತಿತ್ವದಲ್ಲಿಲ್ಲ. ಐಪಿಸಿಯ ಸೆಕ್ಷನ್ 295 ಮತ್ತು 295ಎ ಧಾರ್ಮಿಕ ಅಪರಾಧಗಳಿಗೆ ಸಂಬಂಧಿಸಿದೆ. ನಿರ್ದಿಷ್ಟವಾಗಿ ಹಿಂದೂ ಧರ್ಮ ಮಾತ್ರವಲ್ಲದೆ, ಇದು ಎಲ್ಲಾ ಧರ್ಮಗಳಿಗೆ ಸಂಬಂಧಿಸಿದೆ. ಐಪಿಸಿಯ ಸೆಕ್ಷನ್ 502 ಮಾನನಷ್ಟಕ್ಕೆ ಸಂಬಂಧಿಸಿದ್ದೇ ಹೊರತು ಧರ್ಮದ ಬಗ್ಗೆ ಅಲ್ಲ. ಆದ್ದರಿಂದ, ಪೋಸ್ಟ್ ಮೂಲಕ ಹೇಳಿರುವುದು ತಪ್ಪುದಾರಿಗೆಳೆಯುವಂತಿದೆ.

ಮೂಲ ವಿಭಾಗಗಳು 295 (1) ಮತ್ತು 502 (2) ಭಾರತೀಯ ದಂಡ ಸಂಹಿತೆ (IPC) ಯಲ್ಲಿಲ್ಲ.

ಐಪಿಸಿಯ ಸೆಕ್ಷನ್ 295 ಮತ್ತು 295ಎ ಧಾರ್ಮಿಕ ಅಪರಾಧಗಳಿಗೆ ಸಂಬಂಧಿಸಿದೆ. ನಿರ್ದಿಷ್ಟವಾಗಿ ಹಿಂದೂ ಧರ್ಮದ ಬಗ್ಗೆ ಅಲ್ಲದೇ, ಇದು ಎಲ್ಲಾ ಧರ್ಮಗಳಿಗೆ ಸಂಬಂಧಿಸಿದೆ.

“ಯಾವುದೇ ಪಂಗಡದ ಧರ್ಮವನ್ನು ಅವಮಾನಿಸುವ ಉದ್ದೇಶದಿಂದ ಪೂಜಾ ಸ್ಥಳಗಳನ್ನು ನಾಶಪಡಿಸುವುದು ಅಥವಾ ಅಪವಿತ್ರಗೊಳಿಸುವ ಉದ್ದೇಶವನ್ನು ಹೊಂದಿದ್ದರೆ ” ಸೆಕ್ಷನ್ 295 ಅನ್ವಯಿಸುತ್ತದೆ.

“ಉದ್ದೇಶಪೂರ್ವಕ ಮತ್ತು ದ್ವೇಷಪೂರಿತ ಕಾರ್ಯಗಳಿಂದ ಯಾವುದೇ ಪಂಥದ ಧಾರ್ಮಿಕ ಭಾವನೆ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಉದ್ದೇಶವನ್ನು ಹೊಂದಿರುವಾಗ”  ಸೆಕ್ಷನ್ 295A ಅನ್ವಯಿಸುತ್ತದೆ.

ಐಪಿಸಿ ಸೆಕ್ಷನ್ 502 ಧರ್ಮಕ್ಕೆ ಸಂಬಂಧಿಸಿದ್ದಲ್ಲ, ಮಾನನಷ್ಟಕ್ಕೆ ಸಂಬಂಧಿಸಿದ್ದು. “ಮಾನಹಾನಿಕರ ವಾದದ್ದನ್ನು  ಮುದ್ರಿತ ಅಥವಾ ಕೆತ್ತಿದ ಯಾವುದನ್ನಾದರೂ ರೂಪದಲ್ಲಿ ಮಾರಾಟ ಮಾಡುವುದಕ್ಕೆ ಸಂಬಂಧಿಸಿದೆ.

ಒಟ್ಟಾರೆ, ಭಾರತೀಯ ದಂಡ ಸಂಹಿತೆಯಲ್ಲಿ ಯಾವುದೇ 295 (1), 502 (2) ವಿಭಾಗಗಳು ಇಲ್ಲ. IPC ಯ 295 ಮತ್ತು 295A ಎಲ್ಲಾ ಧರ್ಮಗಳಿಗೆ ಅನ್ವಯಿಸುತ್ತದೆ. ವಿಶೇಷವಾಗಿ ಹಿಂದೂ ಧರ್ಮಕ್ಕೆ ಮಾತ್ರ ಅನ್ವಯಿಸುವುದಿಲ್ಲ.

Share.

About Author

Comments are closed.

scroll