ಶೌರ್ಯ ದಿವಸ್‌ನಂದು ಮಥುರಾದಲ್ಲಿ ಹಿಂದೂಗಳ ಬೃಹತ್ ರ್‍ಯಾಲಿ ನಡೆದಿದೆ ಎಂದು ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಮಥುರಾದಲ್ಲಿ ಶ್ರೀಕೃಷ್ಣನ ಭಕ್ತರು ಪೊಲೀಸ್ ಬ್ಯಾರಿಕೇಡ್‌ಗಳನ್ನು ದಾಟಿ ಪ್ರತಿಭಟನೆ ನಡೆಸಿದ ದೃಶ್ಯಗಳು ಎಂದು ಹೇಳಲಾಗಿದೆ. ಇದೇ ರೀತಿಯ ದೃಶ್ಯಗಳು ಎದ್ದುಕಾಣುವ ವೀಡಿಯೊವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಕೆಲವರು ಶ್ರೀಕೃಷ್ಣನ ಜನ್ಮ ಸ್ಥಳವನ್ನು ಹಿಂದೂಗಳ ಸುಪರ್ದಿಗೆ ತೆಗೆದುಕೊಳ್ಳಲು ಹೋರಾಟ ಎಂದಿದ್ದಾರೆ. ಈ ಪೋಸ್ಟ್‌ಗಳು ಎಷ್ಟು ನಿಜ ಎಂಬುದನ್ನು ಈ ಲೇಖನದಲ್ಲಿ ನೋಡೋಣ.
ಪ್ರತಿಪಾದನೆ: ಶೌರ್ಯ ದಿನದಂದು ಮಥುರಾದಲ್ಲಿ ಹಿಂದೂಗಳ ಬೃಹತ್ ರ್‍ಯಾಲಿ, ಪ್ರತಿಭಟನೆಯ ದೃಶ್ಯಗಳು.
ನಿಜಾಂಶ: ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊವು ಛತ್ತೀಸ್‌ಗಢದ ಕವಾರ್ಧ ನಗರದಲ್ಲಿ ಅಕ್ಟೋಬರ್ 2021 ರಲ್ಲಿ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ ಹಿಂದೂ ಹೂಂಕಾರ್ ರ್‍ಯಾಲಿಯ ತುಣುಕುಗಳಾಗಿವೆ. ಕವರ್ಧಾದಲ್ಲಿ ಮತೀಯ ಘರ್ಷಣೆಯ ವಿರುದ್ಧದ ರ್‍ಯಾಲಿಯನ್ನು ವಿಶ್ವ ಹಿಂದೂ ಪರಿಷತ್ ಆಯೋಜಿಸಿತ್ತು. ಈ ವಿಡಿಯೋದಲ್ಲಿ ಕಾಣುವ ಹಿಂದೂಗಳ ರ್‍ಯಾಲಿ ಮಥುರಾದಲ್ಲಿ ನಡೆದಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊದ ಸ್ಕ್ರೀನ್ ಶಾಟ್‌ಗಳ ರಿವರ್ಸ್ ಇಮೇಜ್ ಹುಡುಕಾಟದಲ್ಲಿ 13 ಅಕ್ಟೋಬರ್ 2021 ರಂದು ಒಂದು YouTube ಚಾನಲ್‌ನಲ್ಲಿ ಇದೇ ರೀತಿಯ ವೀಡಿಯೊ ದೊರೆತಿದೆ. ಛತ್ತೀಸ್‌ಗಢದ ಕವಾರ್ಧದಲ್ಲಿ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಹಿಂದೂ ಹೂಂಕಾರ್ ರ್‍ಯಾಲಿಯ ದೃಶ್ಯಗಳನ್ನು ಈ ವೀಡಿಯೊ ತೋರಿಸುತ್ತದೆ. ಅನೇಕ ಸುದ್ದಿ ಚಾನೆಲ್‌ಗಳು ಮತ್ತು ಫೇಸ್‌ಬುಕ್ ಬಳಕೆದಾರರು ಇದೇ ರೀತಿಯ ವಿವರಣೆಯೊಂದಿಗೆ ಪೋಸ್ಟ್‌ನಲ್ಲಿ ನೋಡಿದ ಅದೇ ದೃಶ್ಯಗಳಿರುವ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ಅವುಗಳನ್ನು ಇಲ್ಲಿ ಕಾಣಬಹುದು.
ಈ ವಿವರಗಳ ಆಧಾರದ ಮೇಲೆ, ವೀಡಿಯೊದಲ್ಲಿ ಕಂಡುಬರುವ ರ್‍ಯಾಲಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನೋಡಿದರೆ, 12 ಅಕ್ಟೋಬರ್ 2021 ರಂದು ಪ್ರಕಟವಾದ ಲೇಖನದಲ್ಲಿ ರ್‍ಯಾಲಿಯ ಅದೇ ದೃಶ್ಯಗಳಿರುವ ವೀಡಿಯೊವನ್ನು ಸುದ್ದಿ ಸಂಸ್ಥೆ ‘ETV ಭಾರತ್’ ಹಂಚಿಕೊಂಡಿದೆ ಎಂದು ತಿಳಿದುಬಂದಿದೆ.
ಅಕ್ಟೋಬರ್‌ನಲ್ಲಿ ಛತ್ತೀಸ್‌ಗಢದ ಕವರ್ಧಾದಲ್ಲಿ ನಡೆದ ಧಾರ್ಮಿಕ ಘರ್ಷಣೆಯ ವಿರುದ್ಧ ಪ್ರತಿಭಟಿಸಲು ವಿಶ್ವ ಹಿಂದೂ ಪರಿಷತ್ ಈ ರ್‍ಯಾಲಿಯನ್ನು ಆಯೋಜಿಸಿದೆ ಎಂದು ಲೇಖನ ವರದಿ ಮಾಡಿದೆ. ಛತ್ತೀಸ್‌ಗಢದ ಟೈಮ್ಸ್ ಆಫ್ ಛತ್ತೀಸ್‌ಗಢ ಎಂಬ ವೆಬ್‌ಸೈಟ್ ಕೂಡ ಇದೇ ವಿಷಯವನ್ನು ವರದಿ ಮಾಡಿ ಲೇಖನವನ್ನು ಪ್ರಕಟಿಸಿದೆ.
ಮೇಲಾಗಿ, ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊವು ಮಥುರಾ ನಗರಕ್ಕೆ ಸಂಬಂಧಿಸಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವಾಗ, ಮಥುರಾ ಪೊಲೀಸರು ಕೂಡ ಈ ವೀಡಿಯೊ ಮಥುರಾ ನಗರಕ್ಕೆ ಸಂಬಂಧಿಸಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಈ ವಿವರಗಳ ಆಧಾರದ ಮೇಲೆ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊವು ಛತ್ತೀಸ್‌ಗಢದ ಕವರ್ಧಾ ಧಾರ್ಮಿಕ ಘರ್ಷಣೆಗೆ ಸಂಬಂಧಿಸಿದಂತೆ ಆಯೋಜಿಸಲಾದ ಸಾರ್ವಜನಿಕ ರ್‍ಯಾಲಿಯಾಗಿದೆ. ಈ ರ್‍ಯಾಲಿ ಮಥುರಾ ನಗರದಲ್ಲಿ ನಡೆದಿಲ್ಲ ಎಂದು ಹೇಳಬಹುದಾಗಿದೆ.