Fake News - Kannada
 

“ಬಿಹಾರ ವಿಧಾನಸಭಾ ಚುನಾವಣೆಯ ಕಾರಣ ಇಂದಿರಾಗಾಂಧಿಯವರ ಸೀರೆ ಧರಿಸಿದ ಪ್ರಿಯಾಂಕಾ” ಎಂದು 2009ರ ಹಳೆಯ ಫೋಟೋ ಹಂಚಿಕೊಳ್ಳಲಾಗುತ್ತಿದೆ

0

ಪ್ರಿಯಾಂಕಾ ಗಾಂಧಿ ವಾದ್ರಾ ಕೆಂಪು ಸೀರೆಯಲ್ಲಿದ್ದು, ದೇವಾಲಯದ ಗಂಟೆ ಬಾರಿಸುತ್ತಿರುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಪ್ರಿಯಾಂಕಾ ಅವರು ಬಿಹಾರ ವಿಧಾನಸಭಾ ಚುನಾವಣೆಯ ಕಾರಣಕ್ಕೆ ಇಂದಿರಾಗಾಂಧಿಯವರ ಸೀರೆ ಧರಿಸಿದ್ದಾರೆ ಎಂದು ಪ್ರತಿಪಾದಿಸಲಾಗಿದೆ. ಇದು ನಿಜವೆ ಪರಿಶೀಲಿಸೋಣ.

ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿ ಇಲ್ಲಿದೆ.

ಪ್ರತಿಪಾದನೆ: ಬಿಹಾರ ವಿಧಾನಸಭಾ ಚುನಾವಣೆ-2020ಕಾರಣಕ್ಕಾಗಿ ಪ್ರಿಯಾಂಕಾ ಗಾಂಧಿಯವರು ಇಂದಿರಾಗಾಂಧಿಯವರ ಸೀರೆ ಧರಿಸಿದ್ದಾರೆ.

ಸತ್ಯಾಂಶ: ಈ ಫೋಟೊ 2019ರಲ್ಲಿ ಉತ್ತರಪ್ರದೇಶದ ಅಮೇಥಿಯಲ್ಲಿ ತೆಗೆದಿದ್ದು. ಇದಕ್ಕೂ ಮುಂಬರುವ ಬಿಹಾರ ವಿಧಾನ ಸಭಾ ಚುನಾವಣೆಗೂ ಸಂಬಂಧವಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಈ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್ ಮೂಲಕ ಹುಡುಕಾಡಿದಾಗ, ಇದೇ ಪ್ರತಿಪಾದನೆ ಹೊಂದಿರುವ ಇತ್ತೀಚಿನ ಪೋಸ್ಟ್‌ಗಳು ಮಾತ್ರ ಕಂಡುಬರುತ್ತವೆ. ಆದರೆ, ಪ್ರತಿಪಾದನೆಯಲ್ಲಿ ಬಳಸಲಾದ ಕೆಲವು ಕೀವರ್ಡ್‌ಗಳ ಮೂಲಕ ನಾವು ಹುಡುಕಿದಾಗ, ಇದೇ ಫೋಟೋವನ್ನು ಹಲವು ಪೋಸ್ಟ್‌ಗಳಲ್ಲಿ ಅಕ್ಟೋಬರ್ 2018 ರಲ್ಲಿ ಹಂಚಿಕೊಳ್ಳಲಾಗಿತ್ತು ಎಂದು ಕಂಡುಬಂದಿದೆ. ಆದ್ದರಿಂದ, ಈ ಚಿತ್ರ ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿಲ್ಲ ಎಂಬ ತೀರ್ಮಾನಕ್ಕೆ ಬರಬಹುದು.

ನಾವು ಇತರ ಕೀವರ್ಡ್‌ಗಳನ್ನು ಬಳಸಿ ಹುಡುಕಿದಾಗ ಮತ್ತು ಟೈಮ್ ಫಿಲ್ಟರ್ ಬಳಸಿದಾಗ, ಇದೇ ಫೋಟೋವನ್ನು ಫ್ಲಿಕರ್ ವೆಬ್‌ಸೈಟ್‌ನಲ್ಲಿ ‘ಪ್ರೆಸ್‌ಬ್ರೀಫ್ .ಇನ್’ ಅಪ್‌ಲೋಡ್ ಮಾಡಿರುವುದು ಕಂಡುಬಂದಿದೆ. ಇಲ್ಲಿ ನೀಡಿರುವ ವಿವರಣೆಯಲ್ಲಿ, 2009 ರ ಏಪ್ರಿಲ್ 12 ರಂದು ಪ್ರಿಯಾಂಕಾ ಗಾಂಧಿ ಅವರು ತಮ್ಮ ಸಹೋದರ ರಾಹುಲ್ ಗಾಂಧಿಯವರ ಚುನಾವಣಾ ಕ್ಷೇತ್ರವಾದ ಅಮೇಥಿಯಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ದುರ್ಗಾ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಈ ಫೋಟೋ ತೆಗೆಯಲಾಗಿದೆ. ಇದೇ ರೀತಿಯ ಇತರ ಫೋಟೋಗಳನ್ನು ಇಲ್ಲಿ ಕಾಣಬಹುದು.

ಅಲ್ಲದೆ, 2009 ರಲ್ಲಿ ಅವರು ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದ ಫೋಟೋಗಳನ್ನು ‘ಗೆಟ್ಟಿ ಇಮೇಜಸ್’ ಮತ್ತು ‘ಔಟ್‌ಲುಕ್’ ವೆಬ್‌ಸೈಟ್‌ಗಳಲ್ಲಿ ಸಹ ಕಾಣಬಹುದು.

ಪೋಸ್ಟ್ ಮಾಡಿದ ಈ ಫೋಟೋ ಹಳೆಯದಾಗಿದ್ದರೂ, ಪ್ರಿಯಾಂಕಾ ಗಾಂಧಿ ಇತ್ತೀಚೆಗೆ ದೆಹಲಿಯ ವಾಲ್ಮೀಕಿ ದೇವಸ್ಥಾನಕ್ಕೆ ಭೇಟಿ ನೀಡಿ, ಹತ್ರಾಸ್ ಸಂತ್ರಸ್ತರಿಗಾಗಿನ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಂಡಿದ್ದರು. ಅವರ ದೇವಾಲಯದ ಭೇಟಿಗೆ ಸಂಬಂಧಿಸಿದ ಸುದ್ದಿ ಲೇಖನಗಳನ್ನು ಇಲ್ಲಿ ಮತ್ತು ಇಲ್ಲಿ ಓದಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, 2009 ರ ಫೋಟೋವೊಂದನ್ನು ‘ಬಿಹಾರ ವಿಧಾನಸಭಾ ಚುನಾವಣೆಯ ಕಾರಣಕ್ಕೆ ಇಂದಿರಾ ಗಾಂಧಿಯವರ ಸೀರೆಯನ್ನು ಧರಿಸಿದ ಪ್ರಿಯಾಂಕಾ” ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

Share.

About Author

Comments are closed.

scroll