Fake News - Kannada
 

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ರಚಿಸಿದ ಚಿತ್ರಗಳನ್ನು ರಾಮಾಯಣ ಕಾಲದ ಕುಂಭಕರ್ಣನ ಖಡ್ಗದ ನಿಜವಾದ ಚಿತ್ರಗಳು ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ

0

ನಾಲ್ಕು ಫೋಟೋಗಳನ್ನು ಒಳಗೊಂಡ ದೈತ್ಯ ಕತ್ತಿಯ ವೀಡಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋಗಳಲ್ಲಿ ಕಾಣುವ ಖಡ್ಗ ಕುಂಭಕರ್ಣನದ್ದು ಎಂದು ಹೇಳಲಾಗುತ್ತಿದೆ. ಹಾಗಾದರೆ ಈ ಲೇಖನದ ಮೂಲಕ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ಈ ವೈರಲ್ ಫೋಟೋಗಳು ರಾಮಾಯಣ ಕಾಲದ ಕುಂಭಕರ್ಣನ ಖಡ್ಗವನ್ನು ತೋರಿಸುತ್ತವೆ.

ಫ್ಯಾಕ್ಟ್: ಈ ಎಲ್ಲಾ ಫೋಟೋಗಳನ್ನು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ನಿಂದ ರಚಿಸಲಾಗಿದೆ. ಯಾವುದೇ ಉತ್ಖನನದ ಸಮಯದಲ್ಲಿ ಪುರಾತತ್ವ ಇಲಾಖೆಯಿಂದ ಅಂತಹ ಖಡ್ಗ ಕಂಡುಬಂದಿರುವ ಬಗ್ಗೆ ನಿಖರವಾದ ಸುದ್ದಿಗಳು ಎಲ್ಲಿಯೂ ವರದಿಯಾಗಿಲ್ಲ. ಆದ್ದರಿಂದ, ವೈರಲ್ ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ಸುಳ್ಳು.

ವೈರಲ್ ಕ್ಲೈಮ್ ಅನ್ನು ಪರಿಶೀಲಿಸಲು, ನಾವು ಸೂಕ್ತವಾದ ಕೀವರ್ಡ್‌ಗಳನ್ನು ಬಳಸಿಕೊಂಡು ಇಂಟರ್ನೆಟ್ ಹುಡುಕಾದಿದ್ದೇವೆ. ಆದರೆ ರಾಮಾಯಣ ಕಾಲದ ಕುಂಭಕರ್ಣನ ಖಡ್ಗವನ್ನು ಪುರಾತತ್ತ್ವಜ್ಞರು ಕಂಡುಹಿಡಿದ ಬಗ್ಗೆ ನಮಗೆ ಯಾವುದೇ ವಿಶ್ವಾಸಾರ್ಹ ವರದಿಗಳು ಕಂಡುಬಂದಿಲ್ಲ. ಅಂತಹ ಪುರಾತನ ಖಡ್ಗವು ನಿಜವಾಗಿಯೂ ಉತ್ಖನನದಲ್ಲಿ ಪತ್ತೆಯಾಗಿದ್ದರೆ, ಅದು ನ್ಯೂಸ್ ಆಗುತ್ತಿತ್ತು. ಆದರೆ, ಅಂತಹ ಯಾವುದೇ ಮಾಧ್ಯಮ ವರದಿಗಳು ನಮಗೆ ಕಂಡುಬಂದಿಲ್ಲ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ನಿಂದ ವೈರಲ್ ಫೋಟೋಗಳನ್ನು ರಚಿಸಲಾಗಿದೆ ಎಂದು ಶಂಕಿಸಿ, ನಾವು AI- ರಚಿತ ಚಿತ್ರಗಳನ್ನು ಪತ್ತೆಹಚ್ಚುವ TrueMedia.org ವೆಬ್‌ಸೈಟ್ನಲ್ಲಿ ವೈರಲ್ ಫೋಟೋಗಳನ್ನು ಒಂದೊಂದಾಗಿ ಪರಿಶೀಲನೆ ನಡೆಸಿದ್ದೇವೆ. ಟ್ರೂಮೀಡಿಯಾ ಈ ಎಲ್ಲಾ ಚಿತ್ರಗಳನ್ನು AI ತಂತ್ರಜ್ಞಾನದಿಂದ ರಚಿಸಲಾಗಿದೆ ಎಂದು ತೋರಿಸಿದೆ. ಇದರ ಫೈನಲ್ ರಿಪೋರ್ಟ್ ಅನ್ನು ನೀವು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಇದು ಕೇವಲ ಎಐ-ರಚಿಸಿದ ಚಿತ್ರಗಲಾಗಿದ್ದು, ರಾಮಾಯಣ ಕಾಲದ ಕುಂಭಕರ್ಣನಿಗೆ ಸೇರಿದಲ್ಲ ಎಂದು ಸ್ಪಷ್ಟವಾಗಿ ತಿಳಿಯುತ್ತಿದೆ.

ಇದಲ್ಲದೆ, ಹೆಚ್ಚುವರಿ ತನಿಖೆಗಾಗಿ ನಾವು ಈ ಚಿತ್ರಗಳನ್ನು ಹಗ್ಗಿಂಗ್ ಫೇಸ್‌ನ ‘ಮೇಬೀಸ್ AI ಆರ್ಟ್ ಡಿಟೆಕ್ಟರ್‘ ಟೂಲ್ ಮೂಲಕ ರನ್ ಮಾಡಿದ್ದೇವೆ. ಈ ಮೂಲಕ ವೈರಲ್ ಫೋಟೋಗಳನ್ನು ಎ ಐ ಬಳಸಿ ರಚಿಸಲಾಗಿದೆ ಎಂದು ತೋರಿಸಿದೆ.

ಈ ಹಿಂದೆಯೂ, ನಾವು ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಕ್ಲೇಮ್ ಗಳನ್ನು ತಳ್ಳಿಹಾಕಿದ ಆರ್ಟಿಕಲ್ಸ್ಗಳನನ್ನು ಪ್ರಕಟಿಸಿದ್ದೇವೆ. ನಂಬಲು ಕಷ್ಟವಾದ ಫೋಟೋಗಳನ್ನು ಉತ್ಖನನದ ಸಮಯದಲ್ಲಿ ಪತ್ತೆಯಾದ ನಿಜವಾದ ದೈತ್ಯ ತಲೆಬುರುಡೆಗಳ ದೃಶ್ಯಗಳನ್ನು ಹಂಚಿಕೊಳ್ಳಲಾಗಿತ್ತು. ಇನ್ನೊಂದೆಡೆ  ಒಂದು ಸೆಟ್ ಫೋಟೋಗಳನ್ನು ಪ್ರಾಚೀನ ಕಾಲದ ವಿಚಿತ್ರ ಜೀವಿಗಳ ನೈಜ ಫೋಟೋಗಳಾಗಿ ಹಂಚಿಕೊಳ್ಳಲಾಗಿದೆ. ಅವೆಲ್ಲವೂ AI- ರಚಿತವಾದ ಚಿತ್ರಗಳು ಎಂದು ಕಂಡುಬಂದಿದೆ. ನೀವು ಈ ಲೇಖನಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಇಂತಹ ವದಂತಿಗಳು ಇತರ ದೇಶಗಳಲ್ಲಿಯೂ ವೈರಲ್ ಆಗಿವೆ. ಇತ್ತೀಚೆಗೆ, ಟರ್ಕಿಯಲ್ಲಿ ಉತ್ಖನನದ ಸಮಯದಲ್ಲಿ 3000 ವರ್ಷಗಳಷ್ಟು ಹಳೆಯದಾದ, 50 ಅಡಿ ಉದ್ದದ ಖಡ್ಗವೊಂದು ಪತ್ತೆಯಾಗಿದೆ ಎಂಬ ಪೋಸ್ಟ್‌ಗಳಿಂದ ಸಾಮಾಜಿಕ ಮಾಧ್ಯಮಗಳಳ್ಳಿ ಹರಿದಾಡುತಿತ್ತು. ಆದರೆ ಈ ಚಿತ್ರಗಳು ಸಹ AI-ರಚಿಸಲಾಗಿದೆ ಎಂದು  ‘Snopes,’ ಎನ್ನುವ ಫ್ಯಾಕ್ಟ್ ಚೆಕ್ಕಿಂಗ್ ಆರ್ಗನೈಜೇಷನ್ ತಿಳಿಸಿದೆ. ನೀವು ಅವರ ಲೇಖನವನ್ನು ಇಲ್ಲಿ ಕಾಣಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಕೃತಕ ಬುದ್ಧಿ (AI) ಚಿತ್ರಗಳಿಂದ ರಚಿಸಲಾದ ಚಿತ್ರಗಳನ್ನು ರಾಮಾಯಣ ಕಾಲದಲ್ಲಿ ಕುಂಭಕರ್ಣ ಬಳಸಿದ ಖಡ್ಗದ ನೈಜ ಫೋಟೋಗಳಾಗಿ ಹಂಚಿಕೊಳ್ಳಲಾಗುತ್ತಿದೆ.

Share.

Comments are closed.

scroll