Fake News - Kannada
 

ಊಟದ ವೇಳೆ ರಾಹುಲ್ ಗಾಂಧಿ ಮಾಸ್ಕ್ ಧಿರಿಸಿದ್ದರು ಎಂದು ವ್ಯಂಗ್ಯ ಮಾಡಲಾಗುತ್ತಿದೆಯೇ ಹೊರತು ಅದು ನಿಜವಲ್ಲ

0

ಮಾಸ್ಕ್ ಧರಿಸಿದ ರಾಹುಲ್ ಗಾಂಧಿ ಹಲವು ಮಹಿಳೆಯರೊಂದಿಗೆ ಊಟದ ಸಾಲಿನಲ್ಲಿ ಕುಳಿತಿರುವ ಫೋಟೊವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು, ‘ರಾಹುಲ್ ಗಾಂಧಿ ಮಾತ್ರ ಮಾಸ್ಕ್ ಹಾಕಿಕೊಂಡೇ ಊಟ ಮಾಡಬಹುದು ಎಂದು ವ್ಯಂಗ್ಯ ಮಾಡಲಾಗುತ್ತಿದೆ. ಪೋಸ್ಟ್‌ನಲ್ಲಿನ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿ ಇಲ್ಲಿದೆ.

ಪ್ರತಿಪಾದನೆ: ರಾಹುಲ್ ಗಾಂಧಿ ಮಾಸ್ಕ್ ಹಾಕಿಕೊಂಡೇ ಊಟ ಮಾಡುತ್ತಾರೆ.

ನಿಜಾಂಶ: ಚುನಾವಣಾ ಪ್ರಚಾರದ ಸಮಯದಲ್ಲಿ ತಮಿಳುನಾಡಿನ ಈರೋಡ್‌ನಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಊಟ ಮಾಡಿದ ನಂತರ ಮಹಿಳೆಯರೊಂದಿಗೆ ಮಾತನಾಡುತ್ತಿದ್ದಾಗ ಈ ಫೋಟೋ ಕ್ಲಿಕ್ ಮಾಡಲಾಗಿದೆ. ಈರೋಡ್‌ನಲ್ಲಿ ನೇಕಾರರೊಂದಿಗೆ ಅವರು ಮಾಸ್ಕ್ ಇಲ್ಲದೆ ಊಟ ಮಾಡಿದ ಸುದ್ದಿ ವೀಡಿಯೊಗಳು ಲಭ್ಯವಿದೆ. ಅನೇಕ ಸುದ್ದಿ ಲೇಖನಗಳು ಮಾಸ್ಕ್ ತೆಗೆದು ಅವರು ಊಟ ಮಾಡುತ್ತಿರುವ ಚಿತ್ರಗಳನ್ನು ಪ್ರಕಟಿಸಿವೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಫೋಟೊವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಿದಾಗ ತಮಿಳುನಾಡು ಕಾಂಗ್ರೆಸ್ ಸಮಿತಿ ಟ್ವಿಟರ್‌ನಲ್ಲಿ ರಾಹುಲ್ ಗಾಂಧಿ ಊಟದ ಹಲವು ಫೋಟೊಗಳನ್ನು ಹಂಚಿಕೊಳ್ಳಲಾಗಿದೆ. ಅದರಲ್ಲಿ ಅವರು ಮಾಸ್ಕ್ ಇಲ್ಲದೇ ಊಟ ಮಾಡುತ್ತಿರುವುದನ್ನು ಮತ್ತು ಊಟದ ನಂತರ ಮಾಸ್ಕ್ ಧರಿಸಿ ಮಹಿಳೆಯರೊಂದಿಗೆ ಮಾತನಾಡುತ್ತಿರುವುದನ್ನು ಗಮನಿಸಬಹುದು.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಹುಡುಕಾಡಿದಾಗ ದಿ ಹಿಂದೂ ಸುದ್ದಿ ವರದಿ ದೊರಕಿತು. ಅದರಲ್ಲಿ  ರಾಹುಲ್ ಗಾಂಧಿ ಊಟ ಮಾಡುವಾಗ ಯಾವುದೇ ಮಾಸ್ಕ್ ಧರಿಸಿಲ್ಲದ ಅವರ ಚಿತ್ರವನ್ನು ಪ್ರಕಟಿಸಿದೆ. ಲೇಖನದ ಪ್ರಕಾರ, ಈ ಚಿತ್ರವು ರಾಹುಲ್ ಗಾಂಧಿಯವರ ಈರೋಡ್ ಭೇಟಿಯ ಸಮಯದಲ್ಲಿ ಒಡನಿಲೈನಲ್ಲಿ ನೇಕಾರರೊಂದಿಗೆ ಊಟ ಮಾಡುತ್ತಿರುವ ಸಮಯದಲ್ಲಿ ತೆಗೆದುದ್ದಾಗಿದೆ. ಕೆಲವು ಪ್ರಾದೇಶಿಕ ಮತ್ತು ಆನ್‌ಲೈನ್ ಸುದ್ದಿ ಲೇಖನಗಳು ಸಹ  ರಾಹುಲ್ ಗಾಂಧಿಯವರ ಮಾಸ್ಕ್ ಇಲ್ಲದೇ ಊಟ ಮಾಡುವ ಚಿತ್ರವನ್ನು ಪ್ರಕಟಿಸಿವೆ. ಆ ಲೇಖನಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಕೆಲವು ತಮಿಳುನಾಡು ಕಾಂಗ್ರೆಸ್ ಮುಖಂಡರು ಮಾಸ್ಕ್ ಇಲ್ಲದೆ ರಾಹುಲ್ ಗಾಂಧಿಯವರ ಊಟದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ, ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಯೂಟ್ಯೂಬ್‌ನಲ್ಲಿ ಈ ಕುರಿತು ಹುಡುಕಾಡಿದಾಗ ಪ್ರಾದೇಶಿಕ ತಮಿಳು ಚಾನೆಲ್ ಒಂದು ರಾಹುಲ್‌ಗಾಂಧಿಯವರ ಈರೋಡ್ ಕಾರ್ಯಕ್ರಮದ ಬಗ್ಗೆ ವಿಡಿಯೋ ವರದಿ ಮಾಡಿದೆ. ಅದರಲ್ಲಿಯೂ ಸಹ ರಾಹುಲ್ ಗಾಂಧಿ ಮಾಸ್ಕ್ ಧರಿಸದೇ ಊಟ ಮಾಡುವುದನ್ನು ನೋಡಬಹುದಾಗಿದೆ.

ಒಟ್ಟಿನಲ್ಲಿ ಊಟದ ವೇಳೆ ರಾಹುಲ್ ಗಾಂಧಿ ಮಾಸ್ಕ್ ಧಿರಿಸಿದ್ದರು ಎಂದು ವ್ಯಂಗ್ಯ ಮಾಡಲಾಗುತ್ತಿದೆಯೇ ಹೊರತು ಅದು ನಿಜವಲ್ಲ.

Share.

About Author

Comments are closed.

scroll