Fake News - Kannada
 

2023 ರಲ್ಲಿ ನಡೆದ ಘಟನೆಯನ್ನು, ಇಂದೋರ್ ನಲ್ಲಿ ಇತ್ತೀಚೆಗೆ ಹಿಂದೂ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ ಮುಸ್ಲಿಂ ಪುರುಷರನ್ನು ಈದ್ ದಿನದಂದು ಅರೆಬೆತ್ತಲೆಯಾಗಿ ಮೆರವಣಿಗೆ ಮಾಡಿದ ದೃಶ್ಯಗಳನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ

0

ಪೋಲೀಸರು  ಪುರುಷರ ಕೈಗಳನ್ನು ಹಗ್ಗದಿಂದ ಕಟ್ಟಿ ಅರೆಬೆತ್ತಲಾಗಿಸಿ, ರಸ್ತೆಯಲ್ಲಿ ಮೆರವಣಿಗೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಜೂನ್ 16, 2024 ರಂದು ಆಚರಿಸಲಾದ  ಅಂದರೆ ಈ ವರ್ಷದ ಈದ್ (ಬಕ್ರೀದ್) ನಂದು ಇಂದೋರ್‌ನಲ್ಲಿ ಕೆಲ  ಮುಸಲ್ಮಾನ  ಪುರುಷರ ಗುಂಪು ಹಿಂದೂ ಮನೆಗಳಿಗೆ ಕಲ್ಲು ಎಸೆದ ಕಾರಣ ಪೊಲೀಸರು ಈ ರೀತಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ (ಮಧ್ಯಪ್ರದೇಶದ ಸಿಎಂ ಮೋಹನ್ ಯಾದವ್ ಅವರ ಹೆಸರು ಪೋಸ್ಟ್‌ನ ವಿವರಣೆಯಲ್ಲಿ ಉಲ್ಲೇಖಿಸಲಾಗಿದೆ). ಹಾಗಾದರೆ ಈ ಲೇಖನದ ಮುಲಕ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್ : 2024 ಇತ್ತೀಚಿನ ವಿಡಿಯೋ ಎಂದು ಹೇಳಿಕೊಂಡು ಬಕ್ರೀದ್‌ನಂದು ಹಿಂದೂಗಳ  ಮನೆ ಮೇಲೆ ಕಲ್ಲು ತೂರಾಟ ಮಾಡಿದಕ್ಕಾಗಿ ಪೊಲೀಸರು  ಕೆಲವು ಮುಸ್ಲಿಂ ಪುರುಷರ ಕೈಗಳನ್ನು ಹಗ್ಗದಿಂದ ಕಟ್ಟಿ ಅರೆಬೆತ್ತಲೆಯಾಗಿ ಮೆರವಣಿಗೆ ಮಾಡಿದರು. 

ಫ್ಯಾಕ್ಟ್ :  ವರದಿಗಳ ಪ್ರಕಾರ ಈ ಘಟನೆಯು ಸೆಪ್ಟೆಂಬರ್ 2023 ರಲ್ಲಿ ನಡೆದಿದೆ. ಅಂದರೆ  ಶಿವರಾಜ್ ಸಿಂಗ್ ಚೌಹಾಣ್ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ, ಮೋಹನ್ ಯಾದವ್ ಅಲ್ಲ.  ಒಬ್ಬರ ಮೇಲೊಬ್ಬರ ಮೇಲೆ  ಕಲ್ಲು ತೂರಾಟ ನಡೆಸಿದ್ದಕ್ಕಾಗಿ ಪೊಲೀಸರು ಈ ವ್ಯಕ್ತಿಗಳನ್ನು ಅರೆಬೆತ್ತಲೆಯಾಗಿ ಬೀದಿಗಳಲ್ಲಿ ಮೆರವಣಿಗೆ ಮಾಡಿದಾರೆಯೇ ಹೊರತು ಇಲ್ಲಿ ಯಾವುದೇ ಕೋಮುವಾದಗಳ ಆಯಾಮಗಳಿಲ್ಲ.  ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ವೈರಲ್ ಕ್ಲೈಮ್‌ನ ಕುರಿತು ಪರಿಶೀಲಿಸಲು  ನಾವು ಇಂಟರ್ನೆಟ್‌ನಲ್ಲಿ ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ. ಈ ಮೂಲಕ ಇದು ಸೆಪ್ಟೆಂಬರ್ 2023 ಕ್ಕೆ ಸಂಬಂದಿಸಿಡಾ ವಿಡಿಯೋ ಎನ್ನುವ ವರದಿಗಳು ದೊರಕಿದೆ  (ಇಲ್ಲಿ ಮತ್ತು ಇಲ್ಲಿ).

ಸೆಪ್ಟೆಂಬರ್ 2023 ರಲ್ಲಿ ಟೈಮ್ಸ್ ಆಫ್ ಇಂಡಿಯಾ ನೀಡಿದ ವರದಿಗಳ ಪ್ರಕಾರ, “ಮಧ್ಯಪ್ರದೇಶ ಪೊಲೀಸರು ಎಂಟು ಜನರನ್ನು ಬಂಧಿಸಿದ್ದಾರೆ ಮತ್ತು ಅವರನ್ನು ಇಂದೋರ್‌ನ ಬೀದಿಯಲ್ಲಿ ಅರೆಬೆತ್ತಲೆಯಾಗಿ ಮೆರವಣಿಗೆ ಮಾಡಿದ್ದಾರೆ. ಪುರುಷರ ಮೇಲೆ ಕಲ್ಲು ತೂರಾಟದ ಆರೋಪ ಹೊರಿಸಿ ಗಲಾಟೆ ಸೃಷ್ಟಿಸಿದ್ದರು. ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇಲ್ಲಿ ಅವರು -‘ಪಾಥರ್ಬಾಜಿ ನಹೀ ಕರೆಂಗೆ, ನಹೀ ಕರೆಂಗೆ’ ಎಂದು ಪಠಿಸುತ್ತಿರುವುದು ಕಂಡುಬಂದಿತು. ಸಾಮಾಜಿಕ ಮಾಧ್ಯಮದಲ್ಲಿ ಇದಕ್ಕೆ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

ಇಂದೋರ್‌ನ ಸದರ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಘಟನೆಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಇಂದೋರ್ ಪೊಲೀಸರು ಸೆಪ್ಟೆಂಬರ್ 2023 ರಲ್ಲಿ (ಇಲ್ಲಿ ಮತ್ತು ಇಲ್ಲಿ) ಎರಡು ದುಷ್ಕರ್ಮಿಗಳ ಗುಂಪುಗಳ ನಡುವೆ ಘಟನೆ ಸಂಭವಿಸಿದೆ ಎಂದು ಸ್ಪಷ್ಟಿಕರಣ ನೀಡಿದ್ದಾರೆ.

ಹಳೆ ಜಗಳದಲ್ಲಿ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿದ್ದು, ಈ ವೇಳೆ ಪರಸ್ಪರ ಕಲ್ಲು ತೂರಾಟ ನಡೆದಿದೆ. ಇದು ಅವರ ಬಂಧನಕ್ಕೆ ಕಾರಣವಾಗಿದೆ.  ನಂತರ ಪೊಲೀಸ್ ಅಧಿಕಾರಿಗಳು ಅವರನ್ನು ಮತ್ತೆ ಅದೇ ಸ್ಥಳಕ್ಕೆ ಕರೆದೊಯ್ದರು, ಅಲ್ಲಿ ಅವರು ಪುನಃ  ಪರಸ್ಪರ ಕಲ್ಲು ತೂರಾಟ ಮಾಡಿದ್ದಾರೆ, ಹೀಗಾಗಿ ಪೊಲೀಸರು ಅವರನ್ನು ಅರೆಬೆತ್ತಲಾಗಿಸಿ  ಮೆರವಣಿಗೆ ಮಾಡಿಸಿ,  ಅವರ ಕೆಟ್ಟ ನಡವಳಿಕೆಗೆ  ಸಾರ್ವಜನಿಕರಲ್ಲಿ ಕ್ಷಮೆಯಾಚಿಸುವಂತೆ ಮಾಡಿದ್ದಾರೆ. ಆರೋಪಿಗಳನ್ನು ಜುಬೇರ್, ಮೊಹಮ್ಮದ್ ಅಮ್ಜದ್, ಮೊಯಿನ್ ಖುರೇಷಿ, ವಾಸಿಂ, ಮೊಹ್ಸಿನ್ ಖುರೇಷಿ, ಮಸ್ರೂಫ್, ಇಮ್ರಾನ್ (ಮತ್ತು ಶಾರುಖ್, ಈಟಿವಿ ಭಾರತ್ ಪ್ರಕಾರ) ಎಂದು ಪೊಲೀಸರು ಗುರುತಿಸಿದ್ದಾರೆ.

ಹೆಚ್ಚುವರಿಯಾಗಿ, ಸೆಪ್ಟೆಂಬರ್ 2023 ರಲ್ಲಿ ಈ ಘಟನೆ ನಡೆದಾಗ, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಆಗಿದ್ದರೆ ಹೊರತು  ಮೋಹನ್ ಯಾದವ್ ಅಲ್ಲ. ಮೋಹನ್ ಯಾದವ್ ಅವರು ಡಿಸೆಂಬರ್ 2023 ರಲ್ಲಿ ಮುಖ್ಯಮಂತ್ರಿ ಗಿರಿಯನ್ನು  (ಇಲ್ಲಿ ಮತ್ತು ಇಲ್ಲಿ) ವಹಿಸಿಕೊಂಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಅರೆಬೆತ್ತಲೆ ಪುರುಷರನ್ನು ಪೊಲೀಸರು ಬೀದಿಯಲ್ಲಿ ಮೆರವಣಿಗೆ ಮಾಡಿಸಿದ ವೀಡಿಯೊ ಸೆಪ್ಟೆಂಬರ್ 2023 ರಲ್ಲಿ ಚಿತ್ರೀಕರಿಸಲಾಗಿದೆ,  ಹೊರತು ಇತ್ತೀಚೆನದ್ದು ಅಲ್ಲ.

Share.

Comments are closed.

scroll