Fake News - Kannada
 

ರಾಹುಲ್ ಗಾಂಧಿ ವಿಶ್ವದ ಏಳನೇ ಹೆಚ್ಚು ವಿದ್ಯಾವಂತ ನಾಯಕ ಎಂದು ಫೋರ್ಬ್ಸ್‌ ಪಟ್ಟಿ ಮಾಡಿಲ್ಲ

0

ಫೋರ್ಬ್ಸ್‌ನ ‘ವಿಶ್ವದ ಅತ್ಯಂತ ವಿದ್ಯಾವಂತ ನಾಯಕರ’ ಪಟ್ಟಿಯಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಏಳನೇ ಸ್ಥಾನದಲ್ಲಿದ್ದಾರೆ ಎಂಬ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಗಳಲ್ಲಿ ಹಂಚಲ್ಪಡುತ್ತಿದೆ. ಅದನ್ನು ಪರಿಶೀಲಿಸೋಣ ಬನ್ನಿ.

ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಪ್ರತಿಪಾದನೆ: ಫೋರ್ಬ್ಸ್‌ನ ‘ವಿಶ್ವದ ಹೆಚ್ಚು ವಿದ್ಯಾವಂತ ನಾಯಕರು’ ಪಟ್ಟಿಯಲ್ಲಿ ರಾಹುಲ್ ಗಾಂಧಿ ಏಳನೇ ಸ್ಥಾನದಲ್ಲಿದ್ದಾರೆ.

ನಿಜಾಂಶ : ವಿಶ್ವ ನಾಯಕರ ವಿದ್ಯಾರ್ಹತೆಯ ಬಗ್ಗೆ ಫೋರ್ಬ್ಸ್ ಎಂದೂ ಸಮೀಕ್ಷೆ ನಡೆಸಿಲ್ಲ. ರಾಹುಲ್ ಗಾಂಧಿಯನ್ನು ವಿಶ್ವದ 7ನೇ ಹೆಚ್ಚು ವಿದ್ಯಾವಂತ ನಾಯಕ ಎಂದು ಸಾಬೀತುಪಡಿಸಲು ಯಾವುದೇ ವಿಶ್ವಾಸಾರ್ಹ ಪುರಾವೆಗಳಿಲ್ಲ. ಆದ್ದರಿಂದ, ಮೇಲಿನ ಪ್ರತಿಪಾದನೆ ತಪ್ಪಾಗಿದೆ.

ಫೋರ್ಬ್ಸ್ ವೆಬ್‌ಸೈಟ್‌ನಲ್ಲಿ‘ವಿಶ್ವದ ಅತ್ಯಂತ ವಿದ್ಯಾವಂತ ನಾಯಕರ’ ಪಟ್ಟಿಯನ್ನು ಹುಡುಕಿದಾಗ, ಫೋರ್ಬ್ಸ್ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾದ ಸಮೀಕ್ಷೆಯ ಪಟ್ಟಿಗಳಲ್ಲಿ ಅಂತಹ ಯಾವುದೇ ಪಟ್ಟಿ ಕಂಡುಬಂದಿಲ್ಲ. ಫೋರ್ಬ್ಸ್ ಕಂಪನಿ ವಿಶ್ವ ನಾಯಕರ ವಿದ್ಯಾರ್ಹತೆಯ ಬಗ್ಗೆ ಯಾವುದೇ ಸಮೀಕ್ಷೆ ಮಾಡಿಲ್ಲ.

ಅಮೆಥಿ ಸಂಸದೀಯ ಕ್ಷೇತ್ರಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ, ರಾಹುಲ್ ಗಾಂಧಿ ತಮ್ಮ ವಿದ್ಯಾರ್ಹತೆಯ ಬಗ್ಗೆ ಉಲ್ಲೇಖಿಸಿದ್ದಾರೆ. ಅದರಂತೆ ಅವರು ಫ್ಲೋರಿಡಾದ ರೋಲಿನ್ಸ್ ಕಾಲೇಜಿನಿಂದ ‘ಬ್ಯಾಚುಲರ್ ಆಫ್ ಆರ್ಟ್ಸ್’ ಪದವಿ ಪಡೆದ ನಂತರ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಟ್ರಿನಿಟಿ ಕಾಲೇಜಿನಿಂದ ಎಂ.ಫಿಲ್ (ಅಭಿವೃದ್ಧಿ ಅಧ್ಯಯನ) ಮುಗಿಸಿದರು ಎಂಬ ಮಾಹಿತಿ ನೀಡಿದ್ದಾರೆ. ಹಾಗಾಗಿ ರಾಹುಲ್ ಗಾಂಧಿಯನ್ನು ವಿಶ್ವದ ಏಳನೇ ಹೆಚ್ಚು ವಿದ್ಯಾವಂತ ನಾಯಕ ಎಂದು ಸಾಬೀತುಪಡಿಸಲು ಯಾವುದೇ ವಿಶ್ವಾಸಾರ್ಹ ಮೂಲಗಳಿಲ್ಲ.

ಒಟ್ಟಿನಲ್ಲಿ ಫೋರ್ಬ್ಸ್, ರಾಹುಲ್ ಗಾಂಧಿಯನ್ನು ವಿಶ್ವದ ಏಳನೇ ಹೆಚ್ಚು ವಿದ್ಯಾವಂತ ನಾಯಕ ಎಂದು ಪಟ್ಟಿ ಮಾಡಿಲ್ಲ.

Share.

About Author

Comments are closed.

scroll