ʼತಂದೆ ತನ್ನ ತಲೆಯ ರೂಮಾಲನ್ನು ಮಗಳ ಪಾದಗಳ ಹತ್ತಿರ ಇಟ್ಟು ಬೇಡಿಕೊಂಡರು ಸಹ ಆಕೆ ಕೇಳಲಿಲ್ಲ ಮತ್ತು ಜಿಹಾದಿ ಮುಸ್ಲಿಂ ಹುಡುಗನನ್ನು ಮದುವೆ ಮಾಡಿಕೊಂಡಳುʼ ಎಂದು ಒಂದು ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮಂದಿ ಹಂಚಿಕೊಳ್ಳುತ್ತಿದ್ದಾರೆ. ವಿಡಿಯೋದಲ್ಲಿನ ಘಟನೆ ರಾಜಸ್ತಾನ್‌ನ ಪಾಲಿ ಎಂಬೆಲ್ಲಿ ನಡೆದಿದೆ ಎಂದು ಪ್ರತಿಪಾದಿಸಿದ್ದಾರೆ. ಇದು ನಿಜವೇ ಪರಿಶೀಲಿಸೋಣ.

ಪ್ರತಿಪಾದನೆ: ಮುಸ್ಲಿಂ ಹುಡುಗನನ್ನು ಮದುವೆ ಮಾಡಿಕೊಳ್ಳಬೇಡ ಎಂದು ಹೇಳುತ್ತಾ ತಂದೆ ತನ್ನ ರುಮಾಲನ್ನು ಮಗಳ ಪಾದಗಳ ಹತ್ತಿರ ಇಡುತ್ತಿರುವ ವಿಡಿಯೋ.
ನಿಜಾಂಶ: ವಿಡಿಯಯೋದಲ್ಲಿನ ಹುಡುಗಿ, ಹುಡುಗ ಇಬ್ಬರೂ ಒಂದೇ ಸಮುದಾಯಕ್ಕೆ( ರಬಾರಿ/ದೇವಾಸಿ) ಗೆ ಸೇರಿದವರು. ಪೋಸ್ಟ್‌ನಲ್ಲಿ ಹೇಳಿದ ಹಾಗೆ ಹುಡುಗ ಅನ್ಯ ಧರ್ಮದವನಲ್ಲ. ʼಲವ್ ಜಿಹಾದ್ʼ ಎಂದು ಹೇಳುತ್ತಾ, ತಪ್ಪಾಗಿ ವಿಡಿಯೋವನ್ನು ಷೇರ್ ಮಾಡುತ್ತಿದ್ದಾರೆ. ಆದ್ದರಿಂದ ಪೋಸ್ಟ್‌ನಲ್ಲಿನ ಪ್ರತಿಪಾದನೆ ತಪ್ಪಾಗಿದೆ.
ಪೋಸ್ಟ್‌ನಲ್ಲಿನ ವಿಡಿಯೋದ ದೃಶ್ಯಗಳ ಸ್ಕ್ರೀನ್ ಶಾಟ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ನಲ್ಲಿ ಹುಡುಕಿದಾಗ, ಆ ವಿಡಿಯೋಗೆ ಸಂಬಂಧಿಸಿದ ಮತ್ತಷ್ಟು ಪೋಸ್ಟ್‌ಗಳು ಕಂಡುಬರುತ್ತವೆ. ಒಂದು ವಿಡಿಯೋದಲ್ಲಿನ ಕಮೆಂಟ್‌ನಲ್ಲಿ ಹುಡುಗಿ ಹೆಸರು ಸೀತಾ ಎಂದು, ಹುಡುಗನ ಹೆಸರು ಲಖರಾಂ ಎಂದು, ಅವರು ಇಬ್ಬರೂ ಒಂದೆ ರೆಬಾರಿ ಸಮುದಾಯಕ್ಕೆ ಸೇರಿದವರು ಎಂದು ಒಬ್ಬ ವ್ಯಕ್ತಿ ಟ್ವೀಟ್ ಮಾಡಿದ್ಧಾರೆ. ವಿಡಿಯೋದಲ್ಲಿನ ಘಟನೆಯಲ್ಲಿ ಯಾವುದೇ ʼ ಲವ್ ಜಿಹಾದ್ʼ ಇಲ್ಲವೆಂದು, ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿದವರೆಂದು ಮತ್ತೊಬ್ಬರು ಮಾಡಿದ ಲೈವ್ ವಿಡಿಯೋವನ್ನು ಇಲ್ಲಿ ನೋಡಬಹುದು.
ವಿಡಿಯೋಗೆ ಸಂಬಂಧಿಸಿದ ಮತ್ತಷ್ಟು ಮಾಹಿತಿಗಾಗಿ ಕೆಲವು ಕೀ –ವರ್ಡ್ಸ್ ಗಳ ಸಹಾಯದಿಂದ ಗೂಗಲ್‌ನಲ್ಲಿ ಹುಡುಕಿದಾಗ ಈ ವಿಡಿಯೋ ಕುರಿತುʼ ʼಧೈನಿಕ್ ಭಾಸ್ಕರ್ʼ ನವರು ಪ್ರಕಟಿಸಿದ ಲೇಖನ ಕಂಡುಬಂದಿದೆ. ತನ್ನ ತಂದೆ ತಾಯಿಗಳು ಸೀತಾಗೆ ಇಷ್ಟವಿಲ್ಲದಿದ್ದರೂ ಗುಲಾಬ್ ಎನ್ನುವ ವ್ಯಕ್ತಿಯ ಜೊತೆ ಮದುವೆ ಮಾಡಿದ್ದರು, ಆತ ಇಷ್ಟವಿಲ್ಲದಿರುವುದು, ಒಂದು ವರ್ಷದ ಕೆಳಗೆ ಪರಿಚಯವಾದ ತನ್ನ ಸಂಬಂದಿಕ ಲಖಾರಂನನ್ನು ಪ್ರೀತಿಸಿದ ಕಾರಣ, ಆತನ ಜೊತೆ ಹೊರಟುಹೋಗಿ ಸೀತಾ ಮದುವೆ ಮಾಡಿಕೊಂಡಿದ್ದಾಳೆ ಎಂದು , ಆಕೆಯೆ ತಂದೆ ತಾಯಿ ಕೇಸ್ ದಾಖಲಿಸಿದ್ದರಿಂದ ಪೋಲಿಸರನ್ನು ಎರಡು ಕಡೆಯವರನ್ನು ಕರೆದು ಮಾತುಕತೆ ನಡೆಸುವಾಗ ಯಾರೋ ವಿಡಿಯೋ ಮಾಡಿರುವುದಾಗಿ ಈ ಲೇಖನದಲ್ಲಿ ಓದಬಹುದು. ಅಷ್ಟೇ ಅಲ್ಲದೇ, ಸೀತಾ ಬೇರೆಯವನ ಜೊತೆ ಮದುವೆ ಮಾಡಿಕೊಂಡದ್ದರಿಂದ , ಅವರ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಹ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ಧ್ವೇಷಗಳು ಹೆಚ್ಚಾಗುವಂತೆ ಪೋಸ್ಟ್ ಹಾಕುತ್ತಿದ್ದಾರೆಂದು, ಅವರ ಮೇಲೆ ಸರಿಯಾದ ಕ್ರಮ ತೆಗೆದುಕೊಳ್ಳುತ್ತೇವೆಂದು ಬಾಲಿ ಎ.ಎಸ್.ಪಿ ಬ್ರಜೇಷ್ ಸೋನಿ ಹೇಳಲಾಗಿದೆ ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ.

ಎಸಿಯನೇಟ್ ನ್ಯೂಸ್ –ಹಿಂದಿʼ ಲೇಖನದಲ್ಲಿ ಸ್ವಬರಹದಲ್ಲಿ ಸೀತಾ ಕೊಟ್ಟ ಹೇಳಿಕೆಯನ್ನು ಇಲ್ಲಿ ನೋಡಬಹುದು.

ಒಟ್ಟಿನಲ್ಲಿ, ವಿಡಿಯೋದಲ್ಲಿ ಹುಡುಗ ಮತ್ತು ಹುಡುಗಿ ಇಬ್ಬರೂ ಒಂದೇ ರೆಬಾರಿ/ದೆವಾಸಿ ಎಂಬ ಸಮುದಾಯಕ್ಕೆ ಸೇರಿದವರು. ಆದರೆ ʼಲವ್ ಜಿಹಾದ್ʼ ಎಂದು ಹೇಳುತ್ತಾ, ತಪ್ಪಾಗಿ ವಿಡಿಯೋವನ್ನು ಷೇರ್ ಮಾಡಲಾಗುತ್ತಿದೆ.