Fake News - Kannada
 

ಸಂಬಂಧವಿಲ್ಲದ ಫೋಟೋವನ್ನು ವಂದೇ ಭಾರತ್ ರೈಲಿನೊಂದಿಗೆ ಹಂಚಿಕೆ

0

’75 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ರೈಲಿನ ಚಕ್ರ ಪಂಕ್ಚರ್ ಆಗಿದೆ. ಇತ್ತೀಚೆಗೆ, ನವದೆಹಲಿ-ವಾರಣಾಸಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಉಂಟಾದ ಟೈರ್ ಫ್ಲಾಟ್‌ನಿಂದ ಒಂದು ದಿನದ ಮಟ್ಟಿಗೆ ಸೇವೆಯನ್ನು ಸ್ಥಗಿತಗೊಳಿಸಲಾಗಿತು ಎಂದು ಪೋಸ್ಟ್ ಮಾಡಲಾಗಿದೆ. ಈ ಪೋಸ್ಟ್‍ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ವಂದೇ ಭಾರತ್ ಎಕ್ಸ್‌ಪ್ರೆಸ್ ಟೈರ್ ಫ್ಲಾಟ್ ಆದ ಚಿತ್ರ.

ನಿಜಾಂಶ: ವೈರಲ್ ಪೋಸ್ಟ್‌ನಲ್ಲಿರುವ ಚಿತ್ರವು ಸ್ವೀಡನ್‌ನ ಚಾಲ್ಮರ್ಸ್ ಕಾಲೇಜ್ ಆಫ್ ಟೆಕ್ನಾಲಜಿಯ ಸ್ನಾತಕೋತ್ತರ ವಿದ್ಯಾರ್ಥಿ ಪ್ರಬಂಧದಿಂದ ಬಂದಿದೆ. ಪೋಸ್ಟ್‌ನಲ್ಲಿ ವಂದೇ ಭಾರತ್ ರೈಲು ಪಂಕ್ಚರ್‌ಗೆ ಸಂಬಂಧವಿಲ್ಲದ ಚಿತ್ರವನ್ನು ಲಿಂಕ್ ಮಾಡಲಾಗುತ್ತಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ವಂದೇ ಭಾರತ್ ರೈಲಿನ ಚಕ್ರ ಪಂಕ್ಚರ್ ಆಗಿರುವ ಕುರಿತು ಗೂಗಲ್ ಸರ್ಚ್ ಮಾಡಿದಾಗ ಅನೇಕ ಸುದ್ದಿಗಳು ಲಭ್ಯವಾಗಿದ್ದು. ದಿ ಹಿಂದೂ ವರದಿಯ ಪ್ರಕಾರ, ‘ನವದೆಹಲಿ-ವಾರಣಾಸಿ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಎಂಜಿನ್ ಸಮಸ್ಯೆಯಿಂದಾಗಿ ಅದರ ಚಕ್ರಗಳು ಜ್ಯಾಮ್ ಆಗಿದ್ದವು, ರೈಲಿಗೆ ಅಳವಡಿಸಿದ್ದ ವ್ಹೀಲ್ ಫ್ಲಾಟ್‍ ಆಗಿ ಹಾನಿಗೊಳಿಸಿತು. ಆದ್ದರಿಂದ ಕಾರ್ಯಾಚರಣೆಯನ್ನು ಶನಿವಾರ ಸ್ಥಗಿತಗೊಳಿಸಲಾಗಿತ್ತು, ಅದನ್ನು ಪರಿಶೀಲಿಸಿದ ಅಧಿಕಾರಿಗಳು ವ್ಹೀಲ್‍ ಸ್ಥಿತಿಯನ್ನು” ಟೈರ್ ಫ್ಲಾಟ್” ಎಂದು ಕರೆದಿದ್ದರು. ಘಟನೆ ಅಕ್ಟೋಬರ್ 8 ರಂದು ನಡೆದಿದೆ. ಅದೇ ಘಟನೆಯ ಇತರ ಸುದ್ದಿ ಲೇಖನಗಳನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಓದಬಹುದು. ಒಂದೇ ಒಂದು ವರದಿಯು ರೈಲಿನ “ಫ್ಲಾಟ್ ಟೈರ್” ನ ಫೋಟೋವನ್ನು ಪ್ರಕಟಿಸಲಿಲ್ಲ.

ಪೋಸ್ಟ್‌ನಲ್ಲಿನ ಫೋಟೋಗಾಗಿ ಇಂಟರ್ನೆಟ್‌ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಸ್ವೀಡನ್‌ನ ಚಾಲ್ಮರ್ಸ್ ಕಾಲೇಜ್ ಆಫ್ ಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಮಂಡಿಸಿದ್ದ ಪ್ರಬಂಧದಲ್ಲಿ ಅದೇ ಚಿತ್ರ ಕಂಡುಬಂದಿದೆ. ಇದು 2012 ರಲ್ಲಿ ಪ್ರಕಟವಾಯಿತು. ಈ ಚಿತ್ರವು ‘ವೀಲ್ ಡ್ಯಾಮೇಜ್ – ಕಾನ್ಸೆಪ್ಟ್ ಮತ್ತು ಡ್ಯಾಮೇಜ್ ಡಿಟೆಕ್ಷನ್’ ಶೀರ್ಷಿಕೆಯ ವಿಭಾಗದ ಭಾಗವಾಗಿದೆ. ಇದನ್ನು ಕೆಳಗೆ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, 2012 ರಲ್ಲಿ ಪ್ರಕಟವಾದ ಚಿತ್ರವನ್ನು ವಂದೇ ಭಾರತ್ ರೈಲಿನಲ್ಲಿ ಉಂಟಾದ ಎಂಜಿನ್ ದೋಷದೊಂದಿಗೆ ಹಳೆಯ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‍ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

Share.

Comments are closed.

scroll