COVID-19 ಸಾಂಕ್ರಾಮಿಕದಿಂದ ಉದ್ಭವಿಸುವ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು 31 ಮಾರ್ಚ್ 2021 ರಂದು ಕೇಂದ್ರ ಸರ್ಕಾರವು ಅಧಿಸೂಚನೆಯನ್ನು ಹೊರಡಿಸಿದ್ದು, ಆಧಾರ್ ಸಂಖ್ಯೆಯನ್ನು ಪ್ಯಾನ್‌ನೊಂದಿಗೆ ಲಿಂಕ್ ಮಾಡಲು ಕೊನೆಯ ದಿನಾಂಕವನ್ನು 31 ಮಾರ್ಚ್ 2021 ರಿಂದ 30 ಜೂನ್ 2021 ರವರೆಗೆ ವಿಸ್ತರಿಸಿದೆ.
31 ಮಾರ್ಚ್ 2021 ರೊಳಗೆ ಪ್ಯಾನ್ ಕಾರ್ಡ್‌ಗೆ ಆಧಾರ್ ನಂಬರ್ ಲಿಂಕ್ ಮಾಡದಿದ್ದರೆ 10,000ರೂ ದಂಡ ವಿಧಿಸಲಾಗುತ್ತದೆ ಎಂಬ ಪೋಸ್ಟ್ ಒಂದು ಹರಿದಾಡುತ್ತಿದೆ. ಇದು ನಿಜವೇ ಪರಿಶೀಲಿಸೋಣ.
ಪ್ರತಿಪಾದನೆ; 31 ಮಾರ್ಚ್ 2021 ರೊಳಗೆ ಪ್ಯಾನ್ ಕಾರ್ಡ್‌ಗೆ ಆಧಾರ್ ನಂಬರ್ ಲಿಂಕ್ ಮಾಡದಿದ್ದರೆ 10,000ರೂ ದಂಡ ವಿಧಿಸಲಾಗುತ್ತದೆ.
ನಿಜಾಂಶ: ಆಧಾರ್ ಸಂಖ್ಯೆಯನ್ನು ಪ್ಯಾನ್‌ನೊಂದಿಗೆ ಲಿಂಕ್ ಮಾಡಲು ಕೊನೆಯ ದಿನಾಂಕವನ್ನು 31 ಮಾರ್ಚ್ 2021 ರವರೆಗೆ ಗಡುವು ನೀಡಲಾಗಿತ್ತು. ಒಂದು ವೇಳೆ ವಿಫಲವಾದಲ್ಲಿ 1,000 ದಂಡ ಘೋಷಿಸಿತ್ತೆ ವಿನಾಃ 10,000 ರೂ ಅಲ್ಲ. ಅಲ್ಲದೇ ಗಡುವನ್ನು ಜೂನ್ 30, 2021ರವರೆಗೆ ವಿಸ್ತರಿಸಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿನ ಪ್ರತಿಪಾದನೆ ದಾರಿತಪ್ಪಿಸುವಂತಿದೆ
ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ಹಲವು ಗಡುವನ್ನು ವಿಸ್ತರಿಸಿದ ನಂತರ, ಪ್ರಸ್ತುತ ಗಡುವು 30 ಜೂನ್ 2021 ಆಗಿದೆ. ಹಾಗೆ ಮಾಡಲು ವಿಫಲವಾದರೆ ದಂಡ ವಿಧಿಸಲಾಗುತ್ತದೆ ಮತ್ತು ಪ್ಯಾನ್ ಅನ್ನು ಸಹ ಅಮಾನ್ಯವೆಂದು ಪರಿಗಣಿಸಲಾಗುತ್ತದೆ.
ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದವರಿಗೆ ದಂಡ ವಿಧಿಸಬಹುದು ಎಂಬುದು ನಿಜ, ಆದರೆ ಗರಿಷ್ಠ ದಂಡ ರೂ. 10,000 ಅಲ್ಲ. ಲೋಕಸಭೆಯಲ್ಲಿ ಅಂಗೀಕರಿಸಲ್ಪಟ್ಟ 2021 ರ ಹಣಕಾಸು ಮಸೂದೆ ಇತ್ತೀಚೆಗೆ ಆದಾಯ ತೆರಿಗೆ ಕಾಯ್ದೆ 1961 ರಲ್ಲಿ ಹೊಸ ವಿಭಾಗ 234 ಹೆಚ್ ಅನ್ನು ಪರಿಚಯಿಸುತ್ತದೆ. ಈ ವಿಭಾಗದ ಪ್ರಕಾರ ಒಬ್ಬ ವ್ಯಕ್ತಿಯು ಅವನ / ಅವಳ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ 1,000 ರೂ ದಂಡ ವಿಧಿಸಬಹುದು ಎನ್ನಬಹುದಾಗಿದೆ. ಇದನ್ನು ವರದಿ ಮಾಡಿರುವ ಹಲವು ಸುದ್ದಿ ಲೇಖನಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಓದಬಹುದು.
ಆದರೂ, ಆದಾಯ ತೆರಿಗೆ ಕಾಯ್ದೆ 1961 ರ ಸೆಕ್ಷನ್ 272 ಬಿ ಪ್ರಕಾರ, ‘ಸೆಕ್ಷನ್ 139 ಎ ಯ ನಿಬಂಧನೆಗಳನ್ನು ಅನುಸರಿಸಲು ಒಬ್ಬ ವ್ಯಕ್ತಿಯು ವಿಫಲವಾದರೆ, ಅಂತಹ ವ್ಯಕ್ತಿಯು ದಂಡದ ಮೂಲಕ ಹತ್ತು ಸಾವಿರ ರೂಪಾಯಿ ಮೊತ್ತವನ್ನು ಪಾವತಿಸಬೇಕೆಂದು ಮೌಲ್ಯಮಾಪನ ಅಧಿಕಾರಿ ನಿರ್ದೇಶಿಸಬಹುದು. ಆದರೆ 139 ಎಎ ಸೆಕ್ಷನ್ ಅಡಿಯಲ್ಲಿ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು ವಿಫಲವಾದರೆ ಹತ್ತು ಸಾವಿರ ರೂಪಾಯಿಗಳ ದಂಡ ಕಟ್ಟಬೇಕೆಂದು ಎಂದು ತಪ್ಪಾಗಿ ಗ್ರಹಿಸಲಾಗಿದೆ. ಅಂದರೆ ಸೆಕ್ಷನ್ 139 ಎ ಯ ನಿಬಂಧನೆಗಳನ್ನು ಪಾಲಿಸದಿದ್ದಕ್ಕಾಗಿ ಕಟ್ಟಬೇಕಾದ ದಂಡವನ್ನು ಸೆಕ್ಷನ್ 139 ಎಎ ಉಲ್ಲಂಘಿಸಿದ ದಂಡ ಎಂದು ತಪ್ಪಾಗಿ ಅರ್ಥೈಸಲಾಗುತ್ತಿತ್ತು.
ಒಟ್ಟಾರೆಯಾಗಿ ಹೇಳುವುದಾದರೆ, 2021 ರ ಜೂನ್ 30ರ ಮೊದಲು ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ವಿಫಲವಾದರೆ ದಂಡ 1,000 ಹೊರತು 10,000 ಅಲ್ಲ. ಪ್ಯಾನ್ ಅನ್ನು ಆಧಾರ್‌ನೊಂದಿಗೆ ಹೇಗೆ ಲಿಂಕ್ ಮಾಡುವುದು ಎಂಬ ವಿವರವಾದ ವಿಧಾನವನ್ನು ಇಲ್ಲಿ ಓದಿ.