ಕೊಹಿನೂರ್ ವಜ್ರವನ್ನು ಭಾರತಕ್ಕೆ ಹಿಂತಿರುಗಿಸುವ ಬಗ್ಗೆ ಭಾರತೀಯ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬ್ರಿಟನ್ ಪ್ರಧಾನಿ ರುಷಿ ಸುನಕ್ (Rishi Sunak) ಅವರು, “ಕೊಹಿನೂರ್ ಈಗಾಗಲೇ ದೆಹಲಿಯಲ್ಲಿ ಕಳೆದ ಎಂಟು ವರ್ಷಗಳಿಂದ ‘ 7 ಲೋಕ ಕಲ್ಯಾಣ ಮಾರ್ಗದಲ್ಲಿದೆ’ ಎಂದಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. 7 ಲೋಕ ಕಲ್ಯಾಣ ಮಾರ್ಗ ಎಂದರೆ ಪ್ರಧಾನಿ ನರೇಂದ್ರ ಮೋದಿಯವರ ಅಧಿಕೃತ ನಿವಾಸದ ವಿಳಾಸವಾಗಿದೆ. ಬ್ರಿಟನ್‌ನ ನೂತನ ಪ್ರಧಾನಿ ರಿಷಿ ಸುನಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಹಿನೂರ್ ವಜ್ರಕ್ಕೆ ಹೋಲಿಸಿದ್ದಾರೆ ಎಂದು ಈ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಪೋಸ್ಟ್ ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಪ್ರತಿಪಾದನೆ: ಬ್ರಿಟನ್‌ನ ನೂತನ ಪ್ರಧಾನಿ ರಿಷಿ ಸುನಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಹಿನೂರ್ ವಜ್ರಕ್ಕೆ ಹೋಲಿಸಿದ್ದಾರೆ.
ನಿಜಾಂಶ: ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾದ ನಂತರ ರಿಷಿ ಸುನಕ್ ಅವರು ಪ್ರಧಾನಿ ಮೋದಿ ಮತ್ತು ಕೊಹಿನೂರ್ ವಜ್ರದ ಬಗ್ಗೆ ಯಾವುದೇ ರೀತಿಯ ಹೇಳಿಕೆಗಳ್ನು ನೀಡಿಲ್ಲ. ರಿಷಿ ಸುನಕ್ ಅವರು 27 ಅಕ್ಟೋಬರ್ 2022 ರಂದು ನರೇಂದ್ರ ಮೋದಿಯವರೊಂದಿಗಿನ ತಮ್ಮ ಮೊದಲ ದೂರವಾಣಿ ಸಂಭಾಷಣೆಯಲ್ಲಿ ಹವಾಮಾನ ವೈಪರೀತ್ಯವನ್ನು ನಿಭಾಯಿಸುವಲ್ಲಿ ಮೋದಿಯವರ ನಾಯಕತ್ವವನ್ನು ಶ್ಲಾಘಿಸಿದರು. ಆದರೆ ರಿಷಿ ಸುನಕ್ ಅವರು ತಮ್ಮ ಯಾವುದೇ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರವಾಗಿ ಪ್ರಧಾನಿ ಮೋದಿಯನ್ನು ಕೊಹಿನೂರ್‌ಗೆ ಹೋಲಿಸಲಿಲ್ಲ. ಹಾಗಾಗಿ ಪೋಸ್ಟ್ ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ಇತ್ತೀಚೆಗೆ ರಿಷಿ ಸುನಕ್ ಬ್ರಿಟನ್‌ನ ಪ್ರಧಾನ ಮಂತ್ರಿಯಾಗಿ ನೇಮಕಗೊಂಡಿದ್ದಕ್ಕಾಗಿ ಅವರನ್ನು ಭಾರತದ ನರೇಂದ್ರ ಮೋದಿ ದೂರವಾಣಿ ಮೂಲಕ ಅಭಿನಂದಿಸಿದ್ದಾರೆ. ಅದೇ ದಿನ ಟ್ವೀಟ್ ಮೂಲಕ ರಿಷಿ ಸುನಕ್ ಅವರು ಮೋದಿಯ ಶುಭಾಶಯಗಳಿಗೆ ಧನ್ಯವಾದ ಅರ್ಪಿಸಿ ಟ್ವೀಟ್ ಮಾಡಿದ್ದಾರೆ. ನರೇಂದ್ರ ಮೋದಿಯವರು 27 ಅಕ್ಟೋಬರ್ 2022 ರಂದು ರಿಷಿ ಸುನಕ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದರು ಎಂದು ವರದಿಯಾಗಿತ್ತು. “ಯುಕೆ ಮತ್ತು ಭಾರತದ ಸಂಬಂಧಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ಗಾಢವಾಗಲಿದೆ ಎಂಬ ವಿಶ್ವಾಸ ಹೊಂದಿದ್ದು ಎರಡು ಮಹಾನ್ ಪ್ರಜಾಪ್ರಭುತ್ವ ದೇಶಗಳು ಸಾಧಿಸಬಹುದಾದ ಬೆಳವಣಿಗೆಗೆಳ ಬಗ್ಗೆ ನಾನು ಉತ್ಸುಕನಾಗಿದ್ದೇನೆ ಎಂದು ಹಂಚಿಕೊಂಡಿದ್ದರು. ಆದರೆ ರಿಷಿ ಸುನಕ್ ಅವರು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ನರೇಂದ್ರ ಮೋದಿಯವರ ಬಗ್ಗೆ ಬೇರೆ ಯಾವುದೇ ಟ್ವೀಟ್ ಮಾಡಿಲ್ಲ.
ರಿಷಿ ಸುನಕ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ನಡುವಿನ ದೂರವಾಣಿ ಸಂಭಾಷಣೆಯ ಕುರಿತು ಬ್ರಿಟನ್ ಪ್ರಧಾನಿ ಕಾರ್ಯಾಲಯವು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಜಾಗತಿಕ ಸವಾಲುಗಳನ್ನು ಹಂಚಿಕೊಂಡ ರಿಷಿ ಸುನಕ್, ಹವಾಮಾನ ವೈಪರೀತ್ಯವನ್ನು ನಿಭಾಯಿಸುವಲ್ಲಿ ನರೇಂದ್ರ ಮೋದಿಯವರ ನಾಯಕತ್ವವನ್ನು ಶ್ಲಾಘಿಸಿದರು ಎಂದು ಪತ್ರಿಕಾ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಆದಾಗ್ಯೂ, ದೂರವಾಣಿ ಸಂಭಾಷಣೆ ಅಥವಾ ಇತರ ಯಾವುದೇ ಪತ್ರಿಕಾಗೋಷ್ಠಿಯಲ್ಲಿ ರಿಷಿ ಸುನಕ್ ಅವರು ಪ್ರಧಾನಿ ಮೋದಿಯನ್ನು ಕೊಹಿನೂರ್‌ಗೆ ಹೋಲಿಸಿದ ಬಗ್ಗೆ ವರದಿ ಮಾಡಿಲ್ಲ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾದ ನಂತರ ರಿಷಿ ಸುನಕ್ ಅವರು ಪ್ರಧಾನಿ ಮೋದಿ ಮತ್ತು ಕೊಹಿನೂರ್ ವಜ್ರದ ಬಗ್ಗೆ ಯಾವುದೇ ರೀತಿಯ ಕಾಮೆಂಟ್‌ಗಳನ್ನು ಮಾಡಿಲ್ಲ. ರಿಷಿ ಸುನಕ್ ಅವರು 27 ಅಕ್ಟೋಬರ್ 2022 ರಂದು ನರೇಂದ್ರ ಮೋದಿಯವರೊಂದಿಗಿನ ತಮ್ಮ ಮೊದಲ ದೂರವಾಣಿ ಸಂಭಾಷಣೆಯಲ್ಲಿ ಹವಾಮಾನ ವೈಪರಿತ್ಯವನ್ನು ನಿಭಾಯಿಸುವಲ್ಲಿ ಮೋದಿಯವರ ನಾಯಕತ್ವವನ್ನು ಶ್ಲಾಘಿಸಿದರು. ಆದರೆ ರಿಷಿ ಸುನಕ್ ಅವರು ತಮ್ಮ ಯಾವುದೇ ಪತ್ರಿಕಾಗೋಷ್ಠಿಯಲ್ಲಿ ಅಥವಾ ಮೋದಿ ಅವರೊಂದಿಗಿನ ದೂರವಾಣಿ ಸಂಭಾಷಣೆಯಲ್ಲಿ ಪ್ರಧಾನಿ ಮೋದಿಯನ್ನು ಕೊಹಿನೂರ್‌ಗೆ ಹೋಲಿಸಲಿಲ್ಲ. ಆದ್ದರಿಂದ, ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.