Fake News - Kannada
 

ಭಾರತಕ್ಕೆ ಮನಮೋಹನ್ ಸಿಂಗ್‌ರಂತಹ ಪ್ರಧಾನಿ ಅಗತ್ಯವಿದೆ ಎಂದು ರಿಷಿ ಸುನಕ್ ಹೇಳಿಲ್ಲ

0

ಭಾರತವನ್ನು ಸರಿಯಾದ ದಾರಿಯಲ್ಲಿ ತೆಗೆದುಕೊಂಡು ಹೋಗಲು, ಕುಸಿದಿರುವ ಆರ್ಥಿಕತೆಯನ್ನು ಸುಧಾರಿಸಲು ಭಾರತಕ್ಕೆ ಡಾ. ಮನಮೋಹನ್ ಸಿಂಗ್‌ರಂತಹ ಪ್ರಧಾನಿ ಅವಶ್ಯಕತೆಯಿದೆ ಎಂದು ಬ್ರಿಟನ್ ನೂತನ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ ಎಂದು ಪೋಸ್ಟ್‌ಅನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ರಿಷಿ ಸುನಕ್ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್ ಅವರನ್ನು ಹೊಗಳಿ ಹೇಳಿಕೆ ನೀಡಿದ್ದಾರೆಯೇ ಎಂದು ಪರಿಶೀಲಿಸೋಣ.

ಪ್ರತಿಪಾದನೆ: ಯುಕೆ ಪಿಎಂ ರಿಷಿ ಸುನಕ್ ಅವರು ಮಾಜಿ ಭಾರತೀಯ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಹೊಗಳಿದ್ದಾರೆ ಎಂದು ದೈನಿಕ್ ಭಾಸ್ಕರ್ ವರದಿ ಮಾಡಿದೆ.

ನಿಜಾಂಶ: ಇದು ದೈನಿಕ್ ಭಾಸ್ಕರ್ ಪತ್ರಿಕೆ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಗ್ರಾಫಿಕ್‌ನ ಮಾರ್ಫ್ (ಎಡಿಟ್) ಮಾಡಿದ ಆವೃತ್ತಿಯಾಗಿದೆ. ಮೂಲ ಗ್ರಾಫಿಕ್‌ನಲ್ಲಿ ರಿಷಿ ಸುನಕ್ ಅವರು ಯುಕೆ ಪ್ರಧಾನಿಯಾಗಿ ಆಯ್ಕೆಯಾದ ಸಂದರ್ಭದಲ್ಲಿ ‘ ಭಾರತದಲ್ಲಿಯೂ ಅಲ್ಪಸಂಖ್ಯಾತರರು ಪ್ರಧಾನಿಯಾಗಬೇಕು ಎಂದು ಚಿದಂಬರಂ – ತರೂರ್ ಅವರ ಸಲಹೆ, ಮನಮೋಹನ್ ಸಿಂಗ್ ಅವರನ್ನು ಮರೆತಿದ್ದೀರಾ ಎಂಬ ಬಿಜೆಪಿ ಉತ್ತರದ ಟ್ವೀಟ್‌ ಸಿಕ್ಕಿದೆ. ಇದು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವಿನ ಮಾತಿನ ಸಮರವಾಗಿದೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವೈರಲ್ ಪೋಸ್ಟ್‌ನಲ್ಲಿರುವ ಗ್ರಾಫಿಕ್‌ನಲ್ಲಿ ದೈನಿಕ್ ಭಾಸ್ಕರ್ ಅವರ ಲೋಗೋ ಇರುವುದರಿಂದನ್ನು ಕ್ಲು ಪಡೆದು ಮತ್ತುಷ್ಟು ಹುಡುಕಿದಾಗ ವಿಫಲವಾದ ಆರ್ಥಿಕತೆಯನ್ನು ಸುಧಾರಿಸಲು ಭಾರತಕ್ಕೆ ಮನಮೋಹನ್ ಸಿಂಗ್ ಅವರಂತಹ ಪ್ರಧಾನಿ ಅಗತ್ಯವಿದೆ ಎಂದು ರಿಷಿ ಸುನಕ್ ಹೇಳಿರುವ ಯಾವುದೇ ಸಂಬಂಧಿತ ಸುದ್ದಿ ವರದಿಗಳು ನಮಗೆ ಕಂಡುಬಂದಿಲ್ಲ. ಪೋಸ್ಟ್‌ನ ಚಿತ್ರವನ್ನುಗೂಗಲ್ ರಿವರ್ಸ್ ಇಮೇಜ್ ನಲ್ಲಿ ಸರ್ಚ್‌ ಮಾಡಿದಾಗ, ಅದೇ ಚಿತ್ರವನ್ನು ಹೊಂದಿರುವ ಆದರೆ ವಿಭಿನ್ನ ಪಠ್ಯವನ್ನು ಹೊಂದಿರುವ ದೈನಿಕ್ ಭಾಸ್ಕರ್ ಪತ್ರಿಕೆಯ ಟ್ವೀಟ್ ಅನ್ನು ನಾವು ಕಂಡುಕೊಂಡಿದ್ದೇವೆ.

ಚಿತ್ರದ ಮೇಲಿನ ಪಠ್ಯವು, ‘ಚಿದಂಬರಂ – ತರೂರ್ ಅವರ ಸಲಹೆ, ಭಾರತದಲ್ಲಿಯೂ ಅಲ್ಪಸಂಖ್ಯಾತರು ಪ್ರಧಾನಿಯಾಗಬೇಕು. ಬಿಜೆಪಿ – ಮನಮೋಹನ್ ಸಿಂಗ್ ಅವರನ್ನು ಮರೆತಿದ್ದೀರಾ’ ಎಂಬುದಾಗಿದೆ. ದೈನಿಕ್ ಭಾಸ್ಕರ್ ಪ್ರಕಟಿಸಿರುವ ಲೇಖನದ ಲಿಂಕ್ ಕೂಡ ಟ್ವೀಟ್‌ನಲ್ಲಿದೆ.

ರಿಷಿ ಸುನಕ್ ಅವರು 25 ಅಕ್ಟೋಬರ್ 2022 ರಂದು ಯುಕೆ ಪ್ರಧಾನಿಯಾಗಿ ನೇಮಕಗೊಂಡರು. ಈ ಸಂದರ್ಭದಲ್ಲಿ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ನಾಯಕರ ನಡುವೆ ಮಾತಿನ ಸಮರ ಪ್ರಾರಂಭವಾಯಿತು ಮತ್ತು ಟ್ವೀಟ್‌ನಲ್ಲಿ ಲಿಂಕ್ ಮಾಡಲಾದ ದೈನಿಕ್ ಭಾಸ್ಕರ್ ಅವರ ಲೇಖನವು ಅದೇ ಬಗ್ಗೆಯೇ ಹೇಳುತ್ತದೆ. ಇದರ ಕುರಿತು ದಿ ಹಿಂದೂ ಪತ್ರಿಕೆಯ ವರದಿಯನ್ನು ಇಲ್ಲಿ ಓದಬಹುದು. ವೈರಲ್ ಪೋಸ್ಟ್‌ನಲ್ಲಿರುವ ಗ್ರಾಫಿಕ್ ದೈನಿಕ್ ಭಾಸ್ಕರ್ ಟ್ವೀಟ್ ಮಾಡಿದ ಮೂಲ ಗ್ರಾಫಿಕ್‌ನ ಸಂಪಾದಿತ ಆವೃತ್ತಿಯಾಗಿದೆ. ಮನಮೋಹನ್ ಸಿಂಗ್ ಬಗ್ಗೆ ರಿಷಿ ಸುನಕ್ ಈ ರೀತಿ ಹೇಳಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಯುಕೆ ಪಿಎಂ ರಿಷಿ ಸುನಕ್ ಹೊಗಳಿದಂತೆ ಎಡಿಟ್ ಮಾಡಲಾದ ದೈನಿಕ್ ಭಾಸ್ಕರ್ ಪೋಸ್ಟರ್‌ ಅನ್ನು ಹಂಚಿಕೊಳ್ಳಲಾಗುತ್ತಿದೆ.

Share.

Comments are closed.

scroll