Fake News - Kannada
 

ಏರೋಸಿಟಿ (ದೆಹಲಿ) ಯಲ್ಲಿನ ಎರಡು ಗುಂಪುಗಳ ನಡುವಿನ ಜಗಳವನ್ನು ನಟ ಅಜಯ್ ದೇವಗನ್ ಅವರು ಮಾಡಿದ್ದಾರೆಂದು ತಪ್ಪಾಗಿ ಲಿಂಕ್‌ ಮಾಡಲಾಗಿದೆ

0

ದೆಹಲಿಯಲ್ಲಿ ರೈತರ ಪ್ರತಿಭಟನಾ ವಿಷಯದ ಬಗ್ಗೆ ಬಾಲಿವುಡ್ ಚಲನಚಿತ್ರ ನಟ ಅಜಯ್ ದೇವಗನ್ ಕುಡಿದು ಗಲಾಟೆ ಮಾಡಿದ್ದಾರೆ ಎಂದು ಹೇಳಿಕೊಳ್ಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯ ಸತ್ಯಾಂಶವನ್ನು ಪರಿಶೀಲಿಸೋಣ.

ಈ ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ನೋಡಬಹುದು

ಪ್ರತಿಪಾದನೆ: ದೆಹಲಿಯಲ್ಲಿ ರೈತರ ಪ್ರತಿಭಟನಾ ವಿಷಯದ ಬಗ್ಗೆ ನಟ ಅಜಯ್ ದೇವಗನ್ ಕುಡಿದು ಗಲಾಟೆ ಮಾಡಿ ಹೊಡೆತ ತಿಂದಿರುವ ವಿಡಿಯೋ.

ಸತ್ಯಾಂಶ: ಈ ವೀಡಿಯೊ ಯಾವುದೇ ರೀತಿಯಲ್ಲಿ ಅಜಯ್ ದೇವಗನ್‌ಗೆ ಸಂಬಂಧಿಸಿಲ್ಲ. ನವದೆಹಲಿಯ ಏರೋಸಿಟಿಯಲ್ಲಿ ಎರಡು ಗುಂಪುಗಳ ನಡುವೆ ನಡೆದ ಜಗಳದ ವೀಡಿಯೊ ಇದಾಗಿದೆ. ವಾಹನವೊಂದು ಇನ್ನೊಂದು ವಾಹನಕ್ಕೆ ‘ಸ್ವಲ್ಪ ಗುದ್ದಿದ್ದರಿಂದ’ಈ ಹೊಡೆದಾಟ ನಡೆದಿದೆ ಎಂದು ವರದಿಯಾಗಿದೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಿದಾಗ, ಅದೇ ವೀಡಿಯೊವನ್ನು ಅನೇಕ ಸುದ್ದಿ ಸಂಸ್ಥೆಗಳು ಪ್ರಕಟಿಸಿದ್ದು ಕಂಡುಬಂದಿದೆ. ‘ಇಂಡಿಯಾ ಟುಡೆ’ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾರ್ಚ್ 27, 2021 ರಂದು ವಿವರಣೆಯೊಂದಿಗೆ ಈ ವೀಡಿಯೊವನ್ನು ಪ್ರಕಟಿಸಿದೆ, – ‘ಕಾರೊಂದು ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದ ಕಾರಣ ದೆಹಲಿಯ ಏರೋಸಿಟಿಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಪ್ರಾರಂಭವಾಯಿತು’ ಎಂದು ಅದು ಬರೆದಿದೆ.

ಜೊತೆಗೆ ಹಲವಾರು ಮಾಧ್ಯಮ ಸಂಸ್ಥೆಗಳು ಪೊಲೀಸರ ಹೇಳಿಕೆಯನ್ನು ಹೀಗೆ ವರದಿ ಮಾಡಿವೆ – “ಏರೋಸಿಟಿಯಲ್ಲಿ ವಾಹನವೊಂದು ಮತ್ತೊಂದು ವಾಹನಕ್ಕೆ ‘ಸ್ವಲ್ಪ ಡಿಕ್ಕಿಯಾಗಿದ್ದು’ ಎರಡು ಗುಂಪುಗಳ ನಡುವೆ ಜಗಳ ಪ್ರಾರಂಭವಾಗಿದೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ… ಗಲಾಟೆಯಲ್ಲಿ ಭಾಗವಹಿಸಿದ ಎರಡು ಗುಂಪುಗಳು ಪರಸ್ಪರರ ವಿರುದ್ಧ ದೂರು ದಾಖಲಿಸಲಿಲ್ಲ. ಆದರೆ ಕೋವಿಡ್‌ ಮಾರ್ಗಸೂಚಿಗಳ ಉಲ್ಲಂಘನೆಗಾಗಿ ನಾವು ಅಫ್ರೇ ಮತ್ತು ಇತರ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದೇವೆ ”. ಘಟನೆಯ ಸುದ್ದಿ ವರದಿಗಳನ್ನು ಇಲ್ಲಿ, ಇಲ್ಲಿ, ಮತ್ತು ಇಲ್ಲಿ ಓದಬಹುದು. ವೀಡಿಯೊದಲ್ಲಿನ ಘಟನೆಗೆ ಅಜಯ್ ದೇವಗನ್ ಅಥವಾ ರೈತರ ಪ್ರತಿಭಟನೆಯೊಂದಿಗೆ ಯಾವುದೇ ಸಂಬಂಧವಿಲ್ಲ.

ಅಲ್ಲದೆ, ಈ ಘಟನೆಯ ಬಗ್ಗೆ ಅಜಯ್ ದೇವಗನ್ ಅವರ ತಂಡವು ಸ್ಪಷ್ಟೀಕರಣವನ್ನು ಬಿಡುಗಡೆ ಮಾಡಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ – “2020 ರ ಜನವರಿಯಲ್ಲಿ ತನ್ಹಾಜಿ-ದಿ ಅನ್ಸಂಗ್ ವಾರಿಯರ್ ಪ್ರಚಾರದ ನಂತರ, ನಟ-ಚಲನಚಿತ್ರ ನಿರ್ಮಾಪಕ ಅಜಯ್ ದೇವಗನ್ ದೆಹಲಿಗೆ ಭೇಟಿ ನೀಡಿಲ್ಲ. ಆದ್ದರಿಂದ, ದೆಹಲಿ ಪಬ್‌ನ ಹೊರಗೆ ನಡೆದ ಗದ್ದಲದಲ್ಲಿ ಸೂಪರ್‌ಸ್ಟಾರ್‌ ಇದ್ದರೆಂದು ಮಾಧ್ಯಮಗಳು ಮಾಡಿರುವ ಸಂಪೂರ್ಣವಾಗಿ ಆಧಾರರಹಿತ ಮತ್ತು ಸುಳ್ಳು”  ಎಂದು ವರದಿ ತಿಳಿಸಿದೆ.

ಜೊತೆಗೆ ಮಾರ್ಚ್ 29, 2021 ರಂದು, ಸ್ವತಃ ಅಜಯ್ ದೇವಗನ್ ಅವರೇ ಈ ಘಟನೆಯ ಬಗ್ಗೆ ಟ್ವೀಟ್ ಮಾಡಿ, “ನಾನು ಎಲ್ಲಿಯೂ ಹೋಗಿಲ್ಲ. ನಾನು ಜಗಳವಾಡುತ್ತಿದ್ದೇನೆ ಎಂಬ ಎಲ್ಲಾ ವರದಿಗಳು ಆಧಾರರಹಿತವಾಗಿವೆ. ” ಎಂದು ಬರೆದಿದ್ದರು.

Share.

About Author

Comments are closed.

scroll