Fake News - Kannada
 

ಬಾಂಗ್ಲಾದೇಶದಲ್ಲಿ ಕಾಲೇಜು ಪ್ರಾಂಶುಪಾಲರನ್ನು ರಾಜೀನಾಮೆ ನೀಡುವಂತೆ ಒತ್ತಾಯಿಸಿದ ಪ್ರತಿಭಟನಾಕಾರರ ಹೇಳಿಕೆಯನ್ನು ಕೋಮುವಾದಕ್ಕೆ ತಿರುಗಿಸಲಾಗಿದೆ

0

ಪ್ರಸ್ತುತ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಗಲಭೆಗಳ ನಡುವೆಯೂ ಮಹಿಯೊಬ್ಬರು ಜನಸಮೂಹ ತುಂಬಿರುವ ಮದ್ಯೆ ದಾಖಲೆಗಳಿಗೆ ಸಹಿ, ಹಾಕುತ್ತಿರುವ ವೀಡಿಯೊದಲ್ಲಿ ಅಲ್ಲಿನ ಪ್ರತಿಭಟನಾಕಾರರು, ಹಿಂದೂಗಳನ್ನು ಸರ್ಕಾರಿ ಸ್ಥಾನಗಳಿಂದ ರಾಜೀನಾಮೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ  ಎಂಬ ಹೇಳಿಕೆಯೊಂದಿಕೆ ಶೇರ್ ಮಾಡಲಾಗಿದೆ. ಹಾಗಾದರೆ ಈ ಲೇಖನದಲ್ಲಿ, ಮಾಡಿದ ಕ್ಲೇಮ್ ಅನ್ನು ಪರಿಶೀಲಿಸೋಣ.  

ಕ್ಲೇಮ್: ಬಾಂಗ್ಲಾದೇಶದ ಹಿಂದೂ ಸರ್ಕಾರಿ ಅಧಿಕಾರಿಗಳನ್ನು ಪ್ರತಿಭಟನಾಕಾರರು ರಾಜೀನಾಮೆ ನೀಡುವಂತೆ ಒತ್ತಾಯಿಸುತ್ತಿರುವುದನ್ನು ವೀಡಿಯೊ ಕ್ಲಿಪ್ ತೋರಿಸುತ್ತಿದೆ. 

ಫ್ಯಾಕ್ಟ್: ಈ ವೀಡಿಯೋದಲ್ಲಿ ರಾಜಿನಾಮೆ ನೀಡುವಂತೆ ಒತ್ತಾಯಿಸಿರುವ ಮಹಿಳೆ  ‘ಕಬಿ ನಜ್ರುಲ್ ಸರ್ಕಾರಿ ಕಾಲೇಜಿನ’ ಪ್ರಾಂಶುಪಾಲರಾಗಿರುವ ಅಮೀನಾ ಬೇಗಂ. ಬಾಂಗ್ಲಾದೇಶದಲ್ಲಿ ಪ್ರತಿಭಟನಾನಿರತ ವಿದ್ಯಾರ್ಥಿಗಳು ಆಕೆಯನ್ನು ರಾಜೀನಾಮೆ ನೀಡುವಂತೆ ಒತ್ತಾಯಿಸಿದರು. ಆದರೆ ನಿರ್ದಿಷ್ಟವಾಗಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ರಾಜೀನಾಮೆ ನೀಡಲಾಗುತ್ತಿದೆ ಎಂದು ಸೂಚಿಸುವ ಯಾವುದೇ ವರದಿಗಳು ಇದುವರೆಗೆ ದೊರಕಿಲ್ಲ.  ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ಜುಲೈ 2024 ರಲ್ಲಿ ಕೋಟಾ ವಿರೋಧಿ ಪ್ರತಿಭಟನೆಗಳು ಪ್ರಾರಂಭವಾದ ನಂತರದಿಂದ ಮಾರಣಾಂತಿಕ ಪ್ರತಿಭಟನೆಗಳಿಗೆ ಬಾಂಗ್ಲಾದೇಶ ಸಾಕ್ಷಿಯಾಗಿದೆ. ಇತ್ತೀಚಿಗೆ, ಈ ಸಾಮೂಹಿಕ ಪ್ರತಿಭಟನೆಗಳು  ಸರ್ಕಾರದ ವಿರೋಧಿ ದಂಗೆಯಾಗಿ ಉಲ್ಬಣಗೊಂಡಿದೆ. ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ದೇಶದಿಂದ ಪರಾರಿಯಾದ ನಂತರದಿಂದ ಅಲ್ಲಿನ ಪರಿಸ್ಥಿತಿ ತೀವ್ರವಾಗಿದೆ. ಪ್ರತಿಭಟನಾಕಾರರು ಢಾಕಾದಲ್ಲಿ ಇರುವ ಪ್ರಧಾನಿ ಅಧಿಕೃತ ನಿವಾಸವನ್ನು ಬಲವಂತವಾಗಿ ಪ್ರವೇಶಿಸಿ ಅಲ್ಲಿನ ಸರಕು ಸಾಮಾನುಗಳನ್ನು ಲೂಟಿ ಮಾಡಿ ಧ್ವಂಸಗೊಳಿಸಿದ್ದಾರೆ (ಇಲ್ಲಿ ಮತ್ತು ಇಲ್ಲಿ). 

ಬಾಂಗ್ಲಾದೇಶದ ಮುಖ್ಯ ನ್ಯಾಯಮೂರ್ತಿ ಒಬೈದುಲ್ ಹಸನ್ ಸೇರಿದಂತೆ ಪ್ರತಿಭಟನಾಕಾರರು ಪ್ರಮುಖ ಅಧಿಕಾರಿಗಳನ್ನು ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಮುಖ್ಯ ನ್ಯಾಯಾಧೀಶರ ರಾಜೀನಾಮೆಯ ನಂತರ, ಇಬ್ಬರು ಮೇಲ್ಮನವಿ ವಿಭಾಗದ ನ್ಯಾಯಾಧೀಶರಾದ ನ್ಯಾಯಮೂರ್ತಿ ಎಂಡಿ ಅಬು ಝಾಫೋರ್ ಸಿದ್ದಿಕ್ ಮತ್ತು ನ್ಯಾಯಮೂರ್ತಿ ಕಶೆಫಾ ಹುಸೇನ್ ಕೂಡ ರಾಜೀನಾಮೆ ನೀಡಿದ್ದಾರೆ. ಪ್ರಸ್ತುತ ವೈರಲ್ ಕ್ಲಿಪಿಂಗ್ಸ್ ನಲ್ಲಿ  ಕಾಲೇಜು ಪ್ರಾಂಶುಪಾಲರನ್ನು ರಾಜೀನಾಮೆ ನೀಡುವಂತೆ ಒತ್ತಾಯಿಸುತ್ತಿರುವುದನ್ನು ನೋಡಬಹುದು. ಆದರೆ, ಕ್ಲೇಮ್ ನಲ್ಲಿ ಹೇಳಿಕೊಂಡಂತೆ ಈ ಘಟನೆಗೆ ಯಾವುದೇ ಕೋಮುವಾದದ ಆಯಾಮವಿಲ್ಲ. 

ವೈರಲ್ ದೃಶ್ಯಗಳ ರೆವೆರಿಸೆ ಇಮೇಜ್ ಸರ್ಚಿನ್ಗ್ ಆಡಿಸಿದಾಗ ಅದೇ ಚಿತ್ರಗಳನ್ನು ತೋರಿಸುವಂತಹ ಸುದ್ದಿ ವರದಿಗಳನ್ನು ನಾವು ಕಂಡುಕೊಂಡಿದ್ದೇವೆ. ಈ ವರದಿಗಳ ಪ್ರಕಾರ, ಬಾಂಗ್ಲಾದೇಶದಲ್ಲಿ ಮೀಸಲಾತಿ ಕೋಟಾದ ವಿರುದ್ಧ ಪ್ರತಿಭಟಿಸಿದ ವಿದ್ಯಾರ್ಥಿಗಳು ‘ಕಬಿ ನಜ್ರುಲ್ ಸರ್ಕಾರಿ ಕಾಲೇಜಿನ’ ಪ್ರಾಂಶುಪಾಲರಾದ ಅಮೀನಾ ಬೇಗಂ ಅವರನ್ನು ಗುರಿಯಾಗಿಸಿ ಪ್ರತಿಭಟನೆ ನಡೆಸಿ, ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದಾರೆ. 

ಅವಾಮಿ ಲೀಗ್‌ನ ಪ್ರಮುಖ ಸದಸ್ಯೆ ಅಮೀನಾ ಬೇಗಂ ಅವರು ವಿವಿಧ ಅಕ್ರಮಗಳಲ್ಲಿ ಮತ್ತು ಭ್ರಷ್ಟಾಚಾರಗಳಲ್ಲಿ ತೊಡಗಿದ್ದಾರೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆರೋಪಿಸಿದ್ದಾರೆ ಎಂದು ಈ ವರದಿಯಲ್ಲಿ ಹೇಳಲಾಗಿದೆ. ವೀಡಿಯೊದಲ್ಲಿರುವ ಮಹಿಳೆಯನ್ನು ಅಮೀನಾ ಬೇಗಂ ಎಂದು ತಿಳಿಸಲು ಮತ್ತಷ್ಟು ನ್ಯೂಸ್ ಆಧಾರಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಕಾಲೇಜಿನ ಫೇಸ್‌ಬುಕ್ ಪೇಜ್ನಲ್ಲಿಯೂ ಈ  ಮಹಿಳೆಯನ್ನು ಅಮೀನಾ ಬೇಗಂ ಎಂದು ಗುರುತಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದಲ್ಲಿ ಪ್ರತಿಭಟನಾಕಾರರು ಕಾಲೇಜು ಪ್ರಾಂಶುಪಾಲರನ್ನು ರಾಜೀನಾಮೆ ನೀಡುವಂತೆ ಒತ್ತಾಯಿಸುವ ವೀಡಿಯೊವನ್ನು ಕೋಮುವಾದಿ ಕ್ಲೇಮ್ ನೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

Share.

Comments are closed.

scroll