ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಪುತ್ರಿ ಅಂಜಲಿ ಬಿರ್ಲಾ ಸಿವಿಲ್ ಸರ್ವೀಸಸ್ ಪರೀಕ್ಷೆ (ಸಿಎಸ್‌ಇ) ಬರೆಯದೆ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಯಾಗಿದ್ದಾರೆ ಎನ್ನುವ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ತಂದೆಯ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡು ಹಿಂದಿನ ಬಾಗಿಲಿನ ಮೂಲಕ ಪ್ರವೇಶವನ್ನು ಪಡೆದು ಐಎಎಸ್ ಗೆ ಆಯ್ಕೆಯಾಗಿದ್ದಾರೆ ಇದು ದೇಶದ ಅತ್ಯಂತ ಕಠಿಣ ಪರೀಕ್ಷೆಯ ದುರುಪಯೋಗವನ್ನು ಪಡೆದುಕೊಂಡಂತೆ ಎಂದು ಪೋಸ್ಟ್ ನಲ್ಲಿ ಹೇಳಲಾಗಿದೆ. ಹಾಗಾದರೆ, ಈ ಪೋಸ್ಟ್ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ.
ಕ್ಲೇಮ್: ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ಪುತ್ರಿ ಅಂಜಲಿ ಬಿರ್ಲಾ ಸಿವಿಲ್ ಸರ್ವಿಸ್ ಎಕ್ಸಾಮಿನೇಷನ್ (ಸಿಎಸ್‌ಇ) ನೀಡದೆ ಐಎಎಸ್‌ಗೆ ಆಯ್ಕೆಯಾಗಿದ್ದಾರೆ.
ಫ್ಯಾಕ್ಟ್: 2019 ರ ಸಿವಿಲ್ ಸರ್ವೀಸಸ್ ಪರೀಕ್ಷೆಯ (ಸಿಎಸ್‌ಇ) ಪ್ರಿಲಿಮಿನರಿ ಪರೀಕ್ಷೆಗೆ ಓಂ ಬಿರ್ಲಾ ಅವರ ಪುತ್ರಿ ಅಂಜಲಿ ಬಿರ್ಲಾ ಭಾಗಿಯಾಗಿದ್ದರು. ಸುಮಾರು ಐದು ತಿಂಗಳ ನಂತರ ಬಿಡುಗಡೆಯಾದ ಸಿಎಸ್‌ಇ ಮುಖ್ಯ ಪರೀಕ್ಷೆಯ ಫಲಿತಾಂಶಗಳ ಮೊದಲ ಪಟ್ಟಿಯಲ್ಲಿ ಅವರ ಹೆಸರು ಪ್ರಕಟವಾಗಿತ್ತು. ಈ ಕುರಿತು ಅಂಜಲಿ ಬಿರ್ಲಾ ತನ್ನ CSE ಪ್ರವೇಶ ಪತ್ರ ಮತ್ತು ಡೀಟೈಲ್ಡ್ ಅಪ್ಲಿಕೇಶನ್ ಫಾರ್ಮ್ ಅನ್ನು (DAF) ಸುದ್ದಿ ವೆಬ್‌ಸೈಟ್‌ಗಳಿಗೆ ಪ್ರೂಫ್ ಆಗಿ ನೀಡಿದ್ದಾರೆ. ಈ ಮೂಲಕ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ತಪ್ಪಾಗಿದೆ.
ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಇಂಟರ್ನೆಟ್ ನಲ್ಲಿ ಹುಡುಕಿದಾಗ, ಓಂ ಬಿರ್ಲಾ ಅವರ ಪುತ್ರಿ ಅಂಜಲಿ ಬಿರ್ಲಾ ಅವರು 2019 ರಲ್ಲಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್‌ಸಿ) ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ (ಸಿಎಸ್‌ಇ) ತೇರ್ಗಡೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಮಾಧ್ಯಮ ವರದಿಗಳ ಪ್ರಕಾರ,ಆಗಸ್ಟ್ 4, 2020 ರಂದು ನಾಗರಿಕ ಸೇವಾ ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಘೋಷಿಸಿದ ನಂತರ ಅಂದರೆ ಸುಮಾರು ಐದು ತಿಂಗಳ ನಂತರ, ಜನವರಿ 4, 2021 ರಂದು ಬಿಡುಗಡೆಯಾದ ಕಾಂಸೋಲಿದಾಟದ್ ರಿಸರ್ವ್ ಲಿಸ್ಟ್ ನಲ್ಲಿ ಅಂಜಲಿ ಬಿರ್ಲಾ ಹೆಸರು ಪ್ರಕಟವಾಗಿದೆ.
2019 ರ ನಾಗರಿಕ ಸೇವಾ ಪರೀಕ್ಷೆಯ ಆಧಾರದ ಮೇಲೆ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಜನವರಿ 4, 2021 ರಂದು ಬಾಗಿ ಉಳಿದ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು 89 ಮೀಸಲು ಪಟ್ಟಿ ಅಭ್ಯರ್ಥಿಗಳನ್ನು ಶಿಫಾರಸು ಮಾಡಿದೆ. UPSC ಯಿಂದ ಬಿಡುಗಡೆ ಮಾಡಿದ 89 ಮೀಸಲು ಅಭ್ಯರ್ಥಿಗಳ ಲಿಸ್ಟ್ ನಲ್ಲಿ ಅಂಜಲಿ ಬಿರ್ಲಾ ಹೆಸರು ಮತ್ತು ಕ್ರಮ ಸಂಖ್ಯೆ (0851876) ಕಂಡುಬಂದಿದೆ. ಇದಲ್ಲದೆ 2019 ರ CSE ಯ ಪ್ರಿಲಿಮಿನರಿ ಪರೀಕ್ಷೆಯ ಫಲಿತಾಂಶ ಪಟ್ಟಿಯಲ್ಲಿ ನಾವು ಅಂಜಲಿ ಬಿರ್ಲಾ ರೋಲ್ ಸಂಖ್ಯೆಯನ್ನು ಕಂಡುಕೊಂಡಿದ್ದೇವೆ. ಆದ್ದರಿಂದ 2019 ರ CSE, ಪ್ರಿಲಿಮಿನರಿ ಮತ್ತು ಮೈನ್ಸ್ ಪರೀಕ್ಷೆಯನ್ನು ಅವರು ಬರೆದಿದ್ದಾರೆ ಎಂಬುವುದು ಖಚಿತವಾಗಿದೆ.
ಜನವರಿ 2021 ರಲ್ಲಿ, ಅಂಜಲಿ ಬಿರ್ಲಾ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ವೈರಲ್ ನ್ಯೂಸ್ ಬಗ್ಗೆ ಇದು ಆಧಾರರಹಿತ ಮತ್ತು ಬುದ್ದಿಹೀನ ಟೀಕೆ ಎಂದು ಹೇಳಿದ್ದಾರೆ. ಅವರು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, “ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ ಪರೀಕ್ಷೆ ಒಂದು ವರ್ಷದಲ್ಲಿ ಮೂರು ಹಂತಗಳಲ್ಲಿ ನಡೆಸಲಾಗುತ್ತದೆ ಮತ್ತು ಓರ್ವ ಮೂರರಲ್ಲಿ ಉತ್ತೀರ್ಣರಾದರೆ ಮಾತ್ರ ಸಿವಿಲ್ ಸರ್ವೇನ್ಟ್ ಆಗಬಹುದು. UPSC CSE ಅತ್ಯಂತ ನಿಖರ ಮತ್ತು ಪಾರದರ್ಶಕ ಪ್ರಕ್ರಿಯೆಯಾಗಿದ್ದು, ಇಲ್ಲಿ ಯಾವುದೇ ಬ್ಯಾಕ್‌ಹ್ಯಾಂಡ್ ಪ್ರವೇಶವಿರುವುದಿಲ್ಲ.ದಯಮಾಡಿ ಈ ಸಂಸ್ಥೆಯನ್ನು ಗೌರವಿಸಲು ಕಲಿಯಿರಿ. ನಾನು ಮೂರು ಹಂತದ ಪರೀಕ್ಷೆಗಳನ್ನು ಪೂರ್ಣಗೊಳಿಸಿದ್ದೇನೆ ಎಂದು ತೋರಿಸಲು ದಾಖಲೆಗಳನ್ನು ಪ್ರೂಫ್ ಆಗಿ ನೀಡಬೇಕೆನ್ನುವುದು ತುಂಬಾ ಬೇಸರವನ್ನು ಉಂಟುಮಾಡಿದೆ.!!” ಜನರಲ್ ವಿಭಾಗದಲ್ಲಿ ಕೇವಲ 8 ಅಂಕಗಳಿಂದ ಮೊದಲ ಲಿಸ್ಟ್ ಅನ್ನು ಮಿಸ್ ಮಾಡಿಕೊಂಡೆ ಎಂದು ಅಂಜಲಿ ಹೇಳಿದ್ದಾರೆ. ಇದಲ್ಲದೆ, ಅವರು ‘ದಿ ಕ್ವಿಂಟ್’ ಫ್ಯಾಕ್ಟ್ ಚೆಕ್ ಲೇಖನವನ್ನು ಟ್ಯಾಗ್ ಮಾಡಿದ್ದಾರೆ, ಇದರಲ್ಲಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಗಳ ಬಗ್ಗೆ ವಿವರವಾದ ಸ್ಪಷ್ಟೀಕರಣವನ್ನು ನೀಡಿದ್ದಾರೆ. ಅಂಜಲಿ ಬಿರ್ಲಾ ತಮ್ಮ ಅಡ್ಮಿಟ್ ಕಾರ್ಡ್ ಮತ್ತು ಡೀಟೈಲ್ಡ್ ಅಪ್ಲಿಕೇಶನ್ ಫಾರಂ (ಡಿಎಎಫ್) ಅನ್ನು ‘ದಿ ಕ್ವಿಂಟ್’ ಫ್ಯಾಕ್ಟ್-ಚೆಕ್ ತಂಡದ ಜೊತೆಗೆ ಹಂಚಿಕೊಂಡಿದ್ದಾರೆ.
ಅಂಜಲಿ ಬಿರ್ಲಾ ಅವರು ಸಿವಿಲ್ ಸರ್ವೀಸಸ್ ಪರೀಕ್ಷೆಗೆ ಹಾಜರಾಗದೆ ಉತ್ತೀರ್ಣರಾಗಿದ್ದಾರೆ ಎಂಬ ವದಂತಿಗಳ ಕುರಿತು ‘ಎನ್‌ಡಿಟಿವಿ’ ಜೊತೆ ನೇರ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಎನ್‌ಡಿಟಿವಿಯೊಂದಿಗೆ ಮಾತನಾಡಿದ ಅಂಜಲಿ ಬಿರ್ಲಾ, “ನಾನು ಪರೀಕ್ಷೆ ಬರೆದ ನಂತರ ನನ್ನ ವಿದ್ಯಾಭ್ಯಾಸದ ಕುರಿತು ವಿವರಿಸಬೇಕಾಗಿದೆ ಎಂದು ಹೇಳಲು ನನಗೆ ಆಶ್ಚರ್ಯವಾಗುತ್ತಿದೆ. ಇದರಿಂದ ನಾನು ಇನ್ನಷ್ಟು ಸ್ಟ್ರಾಂಗ್ ಆಗಿದ್ದೇನೆ ಎಂದು ಹೇಳಬಹುದು ಏಕೆಂದರೆ ಇನ್ನು ಮುಂದೆಯೂ ನಾನು ನನ್ನ ಜೀವನದಲ್ಲಿ ಇಂತಹ ಬಾಸೆಲೆಸ್ಸ್ ಟೀಕೆಗಳನ್ನು ಎದುರಿಸಬೇಕಾಗಿದೆ ಎಂದು ನನಗೆ ಅರಿವಾಗಿದೆ. ಇದು ನನನ್ನು ಮತ್ತಷ್ಟು ಪ್ರಬುದ್ಧಳನ್ನಾಗಿಸಿದೆ” ಎಂದು ಹೇಳಿದ್ದಾರೆ. ಎನ್‌ಡಿಟಿವಿ 2019 ರಲ್ಲಿ ಅಂಜಲಿ ಬಿರ್ಲಾ ಅವರ ಸಿಎಸ್‌ಇ ಅಡ್ಮಿಟ್ ಕಾರ್ಡ್ ಅನ್ನು ಸಹ ಪ್ರಕಟ ಮಾಡಿದೆ ಈ ಮೂಲಕ ಅವರು 2019 ರ ಸಿವಿಲ್ ಸರ್ವೀಸಸ್ ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಖಚಿತಪಡಿಸಿದರು.
ಸವಿಲ್ ಸರ್ವಿಸ್ ಎಕ್ಸಾಮ್ಸ್ (ನಾಗರಿಕ ಸೇವೆಗಳ ಪರೀಕ್ಷೆ) UPSC ವಾರ್ಷಿಕವಾಗಿ ಮೂರು ಹಂತಗಳಲ್ಲಿ ನಡೆಸುತ್ತದೆ ಮೊದಲು: ಪ್ರಿಲಿಮಿನರಿ , ಮೈನ್ಸ್ ಮತ್ತು ಇಂಟರ್ವ್ಯೂ. ಇಂಟರ್ವ್ಯೂ ನಡೆದ ನಂತರ, ಆಯೋಗವು ಸಾಮಾನ್ಯ ಅರ್ಹತಾ ಮಾನದಂಡವನ್ನು ನಿರ್ಧರಿಸುತ್ತದೆ ಮತ್ತು ಯಾವುದೇ ರೇಲಕ್ಸಾಷನ್ ಇಲ್ಲದೆ ಕಟ್-ಆಫ್ ಅಂಕಗಳನ್ನು ಯಶಸ್ವಿಯಾಗಿ ತೆರವುಗೊಳಿಸಿದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ನಂತರ, ಆಯೋಗವು ನಾಗರಿಕ ಸೇವೆಗಳ ಪರೀಕ್ಷಾ ನಿಯಮ 16 (4) & (5) ರ ಅನುಸಾರವಾಗಿ, ಆಯಾ ವರ್ಗಗಳ ಅಡಿಯಲ್ಲಿ ಕೊನೆಯದಾಗಿ ಶಿಫಾರಸು ಮಾಡಿದ ಅಭ್ಯರ್ಥಿಗಿಂತ ಕೆಳಗಿನ ಅರ್ಹತೆಯ ಕ್ರಮದಲ್ಲಿ ಕನ್ಸಾಲಿಡೇಟೆಡ್ ರಿಸರ್ವ್ ಪಟ್ಟಿಯನ್ನು ನಿರ್ವಹಿಸುತ್ತದೆ. ಆಯೋಗವು ಆಯಾ CSE ಯ ಮುಖ್ಯ ಫಲಿತಾಂಶದ ನಂತರ ಸುಮಾರು ಆರು ತಿಂಗಳ ನಂತರ ಮೀಸಲು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. 2019 ರ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ, ಸರ್ಕಾರವು ಘೋಷಿಸಿದ ಖಾಲಿ ಹುದ್ದೆಗಳ ಸಂಖ್ಯೆ 927, ಆದರೆ ಮೊದಲ ಪಟ್ಟಿಯಲ್ಲಿ 829 ಯುಪಿಎಸ್‌ಸಿ ಯಶಸ್ವಿ ಅಭ್ಯರ್ಥಿಗಳನ್ನು ಘೋಷಿಸಿತ್ತು. ತದನಂತರ, ಆಯೋಗವು ವಿವಿಧ ನಾಗರಿಕ ಸೇವೆಗಳಿಗೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DOP&T) ಆಧಾರದ ಮೇಲೆ 89 ಮೀಸಲು ಪಟ್ಟಿ ಅಭ್ಯರ್ಥಿಗಳನ್ನು ಶಿಫಾರಸು ಮಾಡಿದೆ. ಸಿಎಸ್‌ಇಯಲ್ಲಿ ಬಕುದೂರ್ ಎಂಟ್ರಿ ಕುರಿತು ಈ ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದಾಗ, ಯುಪಿಎಸ್‌ಸಿ ಮೀಸಲು ಅಭ್ಯರ್ಥಿಗಳ ಪಟ್ಟಿಯ ಆಯ್ಕೆ ವಿಧಾನವನ್ನು ಸ್ಪಷ್ಟಪಡಿಸುವ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ, 2019 ರಲ್ಲಿ ಓಂ ಬಿರ್ಲಾ ಅವರ ಮಗಳು ಅಂಜಲಿ ಬಿರ್ಲಾ ಅವರು CSE, ಎಲ್ಲಾ ಮೂರು ಹಂತದ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿದ್ದಾರೆ.