Fake News - Kannada
 

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿಕೆಯ ವಿಡಿಯೊವನ್ನು ಎಡಿಟ್ ಮಾಡಲಾಗಿದೆ

0

ಜಲ ವಿದ್ಯುತ್ ಉತ್ಪಾದಿಸುವ ನೀರಿನಿಂದ ಶಕ್ತಿಯನ್ನು ತೆಗೆಲಾಗುತ್ತದೆ. ಆಗ ನೀರಿನಲ್ಲಿ ಯಾವುದೇ ಶಕ್ತಿ ಇರುವುದಿಲ್ಲ ಮತ್ತು ಆ ನೀರಿನಿಂದ ಯಾವ ಪ್ರಯೋಜನವಾಗುವುದಿಲ್ಲ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಹೇಳಿರುವ ದೃಶ್ಯಗಳು ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ವಿದ್ಯುಚ್ಛಕ್ತಿ ಉತ್ಪಾದಿಸುವುದರಿಂದ ಆ ನೀರಿನ ಶಕ್ತಿ ಖಾಲಿಯಾಗುತ್ತದೆ, ಆ ನೀರಿನಿಂದ ನೀರಾವರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ನಿಜಾಂಶ: ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಕ್ಲಿಪ್ಅನ್ನು ಎಡಿಟ್ ಮಾಡಲಾಗಿದೆ. ವಿಡಿಯೋದ ವಿಸ್ತೃತ ಆವೃತ್ತಿಯಲ್ಲಿ ಅಶೋಕ್ ಗೆಹ್ಲೋಟ್ ತನ್ನ ಬಾಲ್ಯದಲ್ಲಿ ಜನಸಂಘದ ಕಾರ್ಯಕರ್ತರು ಹರಡಿದ ತಪ್ಪು ಹೇಳಿಕೆಗಳನ್ನು ಪ್ರಸ್ತಾಪಿಸಿ ಮಾಧ್ಯಮಗಳ ಮುಂದೆ ಮಾಹಿತಿ ನೀಡಿದ್ದರು. 26 ಮೇ 2018 ರಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅಶೋಕ್ ಗೆಹ್ಲೋಟ್ ಅವರು ಈ ಹೇಳಿಕೆಯನ್ನು ನೀಡಿದ್ದಾರೆ. ಅಶೋಕ್ ಗೆಹ್ಲೋಟ್ ಈ ವೀಡಿಯೊದ ಪೂರ್ಣ ಆವೃತ್ತಿಯನ್ನು ಟ್ವೀಟ್ ಮಾಡಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೈರಲ್ ವೀಡಿಯೊ ಎಡಿಟ್ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ನೀರಿನಲ್ಲಿನ ಶಕ್ತಿ ನಷ್ಟಕ್ಕೆ ವಿದ್ಯುತ್ ಉತ್ಪಾದನೆಯನ್ನು ಜೋಡಿಸುವ ಯಾವುದೇ ಹೇಳಿಕೆಗಳನ್ನು ನೀಡಿದ್ದಾರೆಯೇ ಎಂದು ಪರಿಶೀಲಿಸಲು ನಾವು ಹುಡುಕಿದಾಗ, ಅಶೋಕ್ ಗೆಹ್ಲೋಟ್ ಅವರ ಬಿಜ್ಲಿ-ಪಾನಿ ಕಾಮೆಂಟ್‌ನ ಸತ್ಯವನ್ನು ವರದಿ ಮಾಡುವ ವೀಡಿಯೊವನ್ನು ‘ಬಿಬಿಸಿ ನ್ಯೂಸ್ ಹಿಂದಿ’ ಪ್ರಕಟಿಸಿದೆ. ಜೂನ್ 2018 ರಲ್ಲಿ. ‘ಬಿಬಿಸಿ’ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೈರಲ್ ವೀಡಿಯೊವನ್ನು ಎಡಿಟ್ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದೆ ಮತ್ತು ಮೂಲ ವೀಡಿಯೊದ ವಿಸ್ತೃತ ಆವೃತ್ತಿಯನ್ನು ಹಂಚಿಕೊಂಡಿದೆ. ‘ಬಿಬಿಸಿ’ ವರದಿಯ ಪ್ರಕಾರ, ಅಶೋಕ್ ಗೆಹ್ಲೋಟ್ ಅವರು ತಮ್ಮ ಬಾಲ್ಯದಲ್ಲಿ ಜನಸಂಘದ ಕಾರ್ಯಕರ್ತರು ಪ್ರಚಾರ ಮಾಡಿದ ತಪ್ಪು ಮಾಹಿತಿ ಎಂದು ಉಲ್ಲೇಖಿಸಿ ಈ ಹೇಳಿಕೆಗಳನ್ನು ನೀಡಿದ್ದಾರೆ. ಜನಸಂಘ ಈಗ ಬಿಜೆಪಿ ಪಕ್ಷವಾಗಿದೆ.

ಈ ಕೀವರ್ಡ್‌ಗಳನ್ನು ಬಳಸಿಕೊಂಡು ನಾವು ಹೆಚ್ಚಿನ ಮೂಲಗಳನ್ನು ಹುಡುಕಿದಾಗ, 26 ಮೇ 2018 ರಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅಶೋಕ್ ಗೆಹ್ಲೋಟ್ ಈ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಕಂಡುಬಂದಿದೆ. ಅಶೋಕ್ ಗೆಹ್ಲೋಟ್ ಈ ಪತ್ರಿಕಾಗೋಷ್ಠಿಯ ಲೈವ್ ವೀಡಿಯೊವನ್ನು ತಮ್ಮ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊದ 2:50 ನಿಮಿಷದಲ್ಲಿ, ಅಶೋಕ್ ಗೆಹ್ಲೋಟ್ “ನನಗೆ ನೆನಪಿದೆ, ನನ್ನ ಬಾಲ್ಯದಲ್ಲಿ, ಭಾಕ್ರಾ ಅಣೆಕಟ್ಟು ನಿರ್ಮಿಸಿದಾಗ, ಜನಸಂಘದ ಕಾರ್ಯಕರ್ತರು ಪಂಡಿತ್ ನೆಹರು ಅವರ ಮನಸ್ಸನ್ನು ಕಳೆದುಕೊಂಡಿದ್ದಾರೆ ಎಂದು ಪ್ರಚಾರ ಮಾಡುತ್ತಿದ್ದರು. ನೆಹರು ಅಣೆಕಟ್ಟು ಕಟ್ಟುತ್ತಾರೆ ಮತ್ತು ಅದರ ಮೇಲೆ ಜಲವಿದ್ಯುತ್ ಸ್ಥಾವರವನ್ನು ನಿರ್ಮಿಸುತ್ತಾರೆ ಮತ್ತು ನೀರಿನಿಂದ ವಿದ್ಯುತ್ ತೆಗೆದರೆ ನೀರು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ ಮತ್ತು ಕೃಷಿಗೆ ಯಾವುದೇ ಪ್ರಯೋಜನವಿಲ್ಲ ಎಂದು ಅವರು ವದಂತಿಯನ್ನು ಪ್ರಚಾರ ಮಾಡಿದರು. 2012ರಲ್ಲಿ ಕೂಡ ಅಶೋಕ್ ಗೆಹ್ಲೋಟ್ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಇದೇ ರೀತಿಯ ಹೇಳಿಕೆ ನೀಡಿದ್ದರು.

ಈ ವೈರಲ್ ಕ್ಲಿಪ್ ಮಾಡಿದ ವೀಡಿಯೊ ಜೂನ್ 2018 ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದಾಗ, ಅಶೋಕ್ ಗೆಹ್ಲೋಟ್ ಟ್ವೀಟ್ ಮೂಲಕ ವೈರಲ್ ವೀಡಿಯೊವನ್ನು ಎಡಿಟ್ ಮಾಡಲಾಗಿದೆ ಎಂದಿದ್ದರು ಮತ್ತು ವೀಡಿಯೊದ ಮೂಲ ವಿಸ್ತೃತ ಆವೃತ್ತಿಯನ್ನು ಹಂಚಿಕೊಳಲಾಗಿದೆ ಎಂದು ಸ್ಪಷ್ಟಪಡಿಸಿದ್ದರು. ಅಶೋಕ್ ಗೆಹ್ಲೋಟ್ ಅವರ ಸ್ಪಷ್ಟೀಕರಣವನ್ನು ವರದಿ ಮಾಡುತ್ತಾ, ಹಲವು ಮುಖ್ಯವಾಹಿನಿಯ ಸುದ್ದಿ ವೆಬ್‌ಸೈಟ್‌ಗಳು 2018 ರಲ್ಲಿ ಲೇಖನಗಳನ್ನು ಪ್ರಕಟಿಸಿವೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಅಶೋಕ್ ಗೆಹ್ಲೋಟ್ ಹೇಳಿದ್ದಾರೆ ಎಂದು ಜಸಂಘವನ್ನು ಕುರಿತು ಮಾಡಲಾದ ಟೀಕೆಗಳನ್ನು ಎಡಿಟ್ ಮಾಡಿ, ಜಲ ವಿದ್ಯುತ್ ಉತ್ಪಾದನೆಯ ನೀರು ತನ್ನ ಶಕ್ತಿಯನ್ನು ಕಳೆದುಕೊಂಡಿರುತ್ತದೆ ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ ಎನ್ನುವ ವೀಡಿಯೊವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ.

Share.

Comments are closed.

scroll