Fake News - Kannada
 

ಹಿಜಾಬ್ ಧರಿಸಿದ ಮೊದಲ ನ್ಯಾಯಾಧೀಶೆ ರಫಿಯಾ ಅರ್ಷದ್ ಬ್ರಿಟನ್‌ನವರು ಹೊರತು ಅಮೆರಿಕದವರಲ್ಲ

0

ಇವರ ಹೆಸರು ರಫಿಯಾ ಅರ್ಷದ್ ಯುಎಸ್‌ಎಯಲ್ಲಿ ಹಿಜಾಬ್ ಧರಿಸಿದ ಮೊದಲ ನ್ಯಾಯಾಧೀಶರು ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ವ್ಯಾಪಕವಾಗಿ ಪ್ರಸಾರವಾಗುತ್ತಿದೆ. ಅರ್ಷದ್ ಅವರ ಕುಟುಂಬದ ಸಲಹೆಯ ಧಿಕ್ಕರಿಸಿ, ಅವರು ಹಿಜಾಬ್‌ ಧರಿಸಿ ಸಂದರ್ಶನದಲ್ಲಿ ಭಾಗವಹಿಸಿದ್ದಾರೆ ಎಂದು ಪ್ರತಿಪಾದಿಸಲಾಗಿದೆ. ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ರಫಿಯಾ ಅರ್ಷದ್ USA ನಲ್ಲಿ ಹಿಜಾಬ್ ಧರಿಸಿದ ಮೊದಲ ನ್ಯಾಯಾಧೀಶರಾಗಿದ್ದಾರೆ.

ನಿಜಾಂಶ: ರಫಿಯಾ ಅರ್ಷದ್ ಅವರು UK (ಇಂಗ್ಲೆಂಡ್) ನಲ್ಲಿ ಮೊದಲ ಹಿಜಾಬ್ ಧರಿಸಿರುವ ನ್ಯಾಯಾಧೀಶರಾಗಿದ್ದಾರೆ ಹೊರತು USAನಲ್ಲಿ  ಅಲ್ಲ. 2020 ರಲ್ಲಿ, ಅರ್ಷದ್ ಅವರು ಯುಕೆ ಮಿಡ್‌ಲ್ಯಾಂಡ್ಸ್ ಸರ್ಕ್ಯೂಟ್‌ಗೆ ನೇಮಕಗೊಂಡ ನಂತರ ಹಿಜಾಬ್ ಧರಿಸಿದ ಮೊದಲ ಉಪ ಜಿಲ್ಲಾ ನ್ಯಾಯಾಧೀಶರಾದರು. ಆಕೆಯ ಕುಟುಂಬದ ಸಲಹೆಗೆ ವಿರುದ್ಧವಾಗಿ ಹಿಜಾಬ್‌ನೊಂದಿಗೆ ಸಂದರ್ಶನಕ್ಕೆ ಹಾಜರಾಗಿದ್ದರ ಕುರಿತಾದ ಉಪಾಖ್ಯಾನವು ನಿಜವಾಗಿದೆ. ಆಕೆಯು ಸ್ವತಃ ಫೇಸ್‌ಬುಕ್ ಪುಟ ಮತ್ತು ಇತರ ಮಾಧ್ಯಮ ಸಂದರ್ಶನಗಳಲ್ಲಿ ಈ ಕಥೆಯನ್ನು ಹಂಚಿಕೊಂಡಿದ್ದಾರೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ರಫಿಯಾ ಅರ್ಷದ್ UK ನಲ್ಲಿ ಹಿಜಾಬ್ ಧರಿಸಿದ ಮೊದಲ ನ್ಯಾಯಾಧೀಶರಾಗಿದ್ದಾರೆ ಹೊರತು USA ನಲ್ಲಿ ಅಲ್ಲ. 2020 ರ ಸುದ್ದಿ ವರದಿಗಳ ಪ್ರಕಾರ, ನಾಟಿಂಗ್‌ಹ್ಯಾಮ್‌ನ ಸೇಂಟ್ ಮೇರಿಸ್ ಚೇಂಬರ್ಸ್‌ನ ಸದಸ್ಯರಾದ ಅರ್ಷದ್ ಅವರು UKಯ ಮಿಡ್‌ಲ್ಯಾಂಡ್ಸ್ ಸರ್ಕ್ಯೂಟ್‌ಗೆ(Midlands circuit) ನೇಮಕಗೊಂಡರು. ನಂತರದಲ್ಲಿ ಅರ್ಷದ್ ಅವರನ್ನು ಹಿಜಾಬ್ ಧರಿಸಿದ ಮೊದಲ ಉಪ ಜಿಲ್ಲಾ ನ್ಯಾಯಾಧೀಶರಾದರು ಎಂದು ಗುರುತಿಸಲಾಯಿತು. ಯುಕೆಯಲ್ಲಿ ಮೊದಲ ಹಿಜಾಬ್ ಧರಿಸಿದ ನ್ಯಾಯಾಧೀಶರು ಎಂದು ಹಲವು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಅದನ್ನು (ಇಲ್ಲಿ ಮತ್ತು ಇಲ್ಲಿ) ನೋಡಬಹುದು.

ಮತ್ತೊಂದೆಡೆ, ಅವರು ತಮ್ಮ ಕುಟುಂಬದ ಸಲಹೆಗೆ ವಿರುದ್ಧವಾಗಿ ಹಿಜಾಬ್‌ ಧರಿಸಿ ಸಂದರ್ಶನಕ್ಕೆ ಭಾಗವಹಿಸಿದ್ದರು ಎಂಬ ಸಂಗತಿಯೂ ನಿಜವಾಗಿದೆ. ಅವರು ತಮ್ಮ ಕುಟುಂಬದ ಸಲಹೆಗೆ ವಿರುದ್ಧವಾಗಿ ಹಿಜಾಬ್‌ ತೊಟ್ಟು ಸಂದರ್ಶನಕ್ಕೆ ಹಾಜರಾಗುದ್ದ ವೇಳೆ ಅವರ ಮೇಲೆ ಹೆಚ್ಚಿನ ಒತ್ತಡವೂ ಇತ್ತೆಂದು ಅದನ್ನು ಧಿಕ್ಕರಿಸಿ ತಮ್ಮ ತೀರ್ಮಾನವನ್ನು ಜಾರಿಗೊಳಿಸಿದ್ದ ಬಗ್ಗೆ ತಮ್ಮ ಫೇಸ್‌ಬುಕ್‌ ನಲ್ಲಿ ಬರೆದು ಹಂಚಿಕೊಂಡಿದ್ದಾರೆ.

“ಸ್ಕಾಲರ್‌ಶಿಪ್ ಸಂದರ್ಶನದ ವೇಳೆ ನನ್ನ ಹಿಜಾಬ್ ಅನ್ನು ತೆಗೆದುಹಾಕಲು ನನ್ನ ಕುಟುಂಬವು ಒತ್ತಡ ಹಾಕಿತ್ತು, ಆದರೆ ನಾನು ಅದನ್ನು ನಿರಾಕರಿಸಿದೆ, ಅದು ನನ್ನ ಆಯ್ಕೆಯ ಸ್ವಾತಂತ್ರ್ಯದ ವಿರುದ್ದವಾಗಿತ್ತು. ಅದು ನನ್ನ ವೃತ್ತಿಜೀವನದ ನಿರ್ಣಾಯಕ ಕ್ಷಣವಾಗಿತ್ತು. ನಾನು ಅದನ್ನು ಸವಾಲಾಗಿ ತೆಗೆದುಕೊಂಡೆ ಮತ್ತು ಹಿಜಾಬ್ ಅನ್ನು ಇರಿಸಿಕೊಳ್ಳಲು ನಿರ್ಧರಿಸಿದೆ” ಎಂದು ಅವರು ತಿಳಿಸಿದ್ದಾರೆ. ನಾನು ಕಾನೂನು ಶಾಲೆಯಲ್ಲಿ ಸ್ಕಾಲರ್‌ಶಿಪ್‌ಗೆ ಆಯ್ಕೆಯಾಗಿದ್ದೇನೆ. ಆದರೆ ಇಂದು 17 ವರ್ಷಗಳ ಕಾನೂನು ಅನುಭವದ ನಂತರ, ನಾನು UK ಯಲ್ಲಿ ಮೊದಲ ಹಿಜಾಬ್ ಧರಿಸಿರುವ ನ್ಯಾಯಾಧೀಶರಾಗಿ ನೇಮಕಗೊಂಡಿದ್ದೇನೆ ಎಂದು ರಫಿಯಾ ಅರ್ಷದ್ ಬರೆದಿದ್ದಾರೆ.

ಅರ್ಷದ್ ಅವರು ನ್ಯಾಯಾಧೀಶರಾಗಿ ನೇಮಕಗೊಂಡ ಸುದ್ದಿ ಮಾಧ್ಯಮಗಳಲ್ಲಿ ವರದಿಯಾದ ನಂತರ, ಇದು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್ ಆಗಿತ್ತು, ಆದರೂ, ಕೆಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಈ ವೈರಲ್ ಪೋಸ್ಟ್‌ನಂತೆ ಯುಎಸ್‌ಎಯಲ್ಲಿ ಮೊದಲ ಹಿಜಾಬ್ ಧರಿಸಿದ ನ್ಯಾಯಾಧೀಶರು ಎಂದು ತಪ್ಪಾಗಿ ಹಂಚಿಕೊಂಡಿದ್ದರು, ಆದರೆ ಇದು ನಿಜವಲ್ಲ.

ಸಂಕ್ಷಿಪ್ತವಾಗಿ ಹೇಳುವುದಾದರೆ, ರಫಿಯಾ ಅರ್ಷದ್ ಯುಕೆಯಲ್ಲಿ ಹಿಜಾಬ್ ಧರಿಸಿದ ಮೊದಲ ನ್ಯಾಯಾಧೀಶರಾದರು ಹೊರತು ಯುಎಸ್ಎ ನಲ್ಲಿ ಅಲ್ಲ.

Share.

Comments are closed.

scroll