ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿದ ಮುಸುಕುಧಾರಿ ಉಗ್ರವಾದಿಗಳನ್ನು ಬಂಧಿಸಿದ ಪಂಜಾಬ್ ಸರ್ಕಾರʼ ಎಂಬ ಪ್ರತಿಪಾದನೆಯೊಂದಿಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ʼಖಲಿಸ್ಥಾನ್ ಜಿಂದಾಬಾದ್ ಫೋರ್ಸ್ʼ ಸಂಘಟನೆಗೆ ಸೇರಿದ ನಾಲ್ಕು ಜನ ಉಗ್ರವಾದಿಗಳನ್ನು ಪಂಜಾಬ್ ಪೋಲೀಸರು ಬಂಧಿಸಿದ್ದಾರೆಂದು, ʼಈಟಿವಿ ಆಂಧ್ರಪ್ರದೇಶ್ ʼ ಸುದ್ಧಿ ವಾಹಿನಿ ಮಾಡಿದ ಸುದ್ದಿಯ ವಿಡಿಯೋವನ್ನು ಈ ಪೋಸ್ಟ್‌ನಲ್ಲಿ ಶೇರ್ ಮಾಡಿದ್ದಾರೆ. ಹೊಸದಾಗಿ ಜಾರಿಗೆ ಬಂದಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸುತ್ತಾ ರೈತರು ದೇಶದ್ಯಾಂತ ಪ್ರತಿಭಟನೆಗಳನ್ನು ನಡೆಸುತ್ತಿರುವ ಹಿನ್ನಲೆಯಲ್ಲಿ, ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಪೋಸ್ಟ್‌ನಲ್ಲಿನ ಮಾಹಿತಿ ನಿಜವೆ ಪರಿಶೀಲಿಸೋಣ.
ಪ್ರತಿಪಾದನೆ: ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿದ ಮುಸುಕುಧಾರಿ ಉಗ್ರವಾದಿಗಳನ್ನು ಬಂಧಿಸಿದ ಪಂಜಾಬ್ ಸರ್ಕಾರ.
ನಿಜಾಂಶ: ಪೋಸ್ಟ್‌ನಲ್ಲಿ ಷೇರ್ ಮಾಡಿದ ಈ ವಿಡಿಯೋ ಹಳೆಯದು. ʼಖಲಿಸ್ಥಾನ್ ಜಿಂದಾಬಾದ್ ಫೋರ್ಸ್ʼ ಎಂಬ ಉಗ್ರವಾದಿ ಸಂಘಟನೆಗೆ ಸೇರಿದ ನಾಲ್ಕು ಜನ ಉಗ್ರವಾದಿಗಳನ್ನು ಪಂಜಾಬ್ ಪೋಲಿಸರು ಬಂದಿಸಿದ್ದಾರೆಂದು ʼಈಟಿವಿ ಆಂದ್ರಪ್ರದೇಶ್ʼ ಸುದ್ದಿವಾಹಿನಿ ʼ 25 ಸೆಪ್ಟೆಂಬರ್ 2019ʼ ರಂದು ಸುದ್ದಿ ಮಾಡಿದೆ. ಈ ವಿಡಿಯೋಗೂ ಇತ್ತೀಚಿಗೆ ರೈತರು ಕೃಷಿ ಕಾಯ್ದೆಗಳ ವಿರುದ್ಧವಾಗಿ ಮಾಡುತ್ತಿರುವ ಪ್ರತಿಭಟನೆಗಳಿಗೂ ಯಾವುದೇ ಸಂಬಂಧವಿಲ್ಲ. ಆದ್ಧರಿಂದ ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾದನೆ ತಪ್ಪಾಗಿದೆ.
ಪೋಸ್ಟ್‌ನಲ್ಲಿ ಷೇರ್ ಮಾಡಿದ ವಿಡಿಯೋಗಾಗಿ ʼಈಟಿವಿ ಆಂಧ್ರಪ್ರದೇಶ್ʼ ಯೂಟ್ಯೂಬ್ ಚಾನೆಲ್‌ನಲ್ಲಿ ಹುಡುಕಿದಾಗ, ಈ ವಿಡಿಯೋವನ್ನು ʼಈ ಟಿವಿ ಆಂಧ್ರಪ್ರದೇಶ್ʼನ್ಯೂಸ್ ಚಾನೆಲ್ 25 ಸೆಪ್ಟೆಂಬರ್ 2019ʼ ರಂದು ಅಪ್‌ಲೋಡ್ ಮಾಡಿರುವುದಾಗಿ ತಿಳಿಯುತ್ತದೆ. ʼಖಲಿಸ್ಥಾನ್ ಜಿಂದಾಬಾದ್ ಫೋರ್ಸ್ʼ ಗೆ ಸೇರಿದ ನಾಲ್ಕು ಜನ ಉಗ್ರವಾದಿಗಳನ್ನು ಪಂಜಾಬ್ ಪೋಲಿಸರು ಬಂಧಿಸಿರುವುದಾಗಿ ಈ ವಿಡಿಯೋದಲ್ಲಿ ಹೇಳಲಾಗಿದೆ. ಪಂಜಾಬ್ ಅನ್ನು ಒಳಗೊಂಡಂತೆ ಕೆಲ ರಾಜ್ಯಗಳಲ್ಲಿ ಸರಣಿ ದಾಳಿಗಳನ್ನು ಮಾಡಲು ಯೋಜನೆ ರೂಪಿಸಿದ್ದಾರೆಂದು ವಿಡಿಯೋದಲ್ಲಿ ಸುದ್ದಿಯಾಗಿದೆ. ಬಂಧಿಸಿದ ನಾಲ್ಕು ಜನ ಉಗ್ರವಾದಿಗಳಿಂದ AK47 ಸೇರಿದಂತೆ ಮತ್ತಷ್ಟು ಆಯುಧಗಳನ್ನು ಪಂಜಾಬ್ ಪೋಲಿಸರು ವಶಕ್ಕೆ ಪಡೆದುಕೊಂಡಿರುವುದಾಗಿ ಈ ವಿಡಿಯೋದಲ್ಲಿ ಹೇಳಿದ್ದಾರೆ.
ಈ ಬಂಧನಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 2019ರಲ್ಲಿ ಸುದ್ದಿ ಮಾಡಿದ ಮತ್ತಷ್ಟು ಸುದ್ದಿಗಳು, ವಿಡಿಯೋಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು . ʼ04 ಸೆಪ್ಟಂಬರ್ 2019 ರಂದು ತಾನ್ ತರನ್ ನಗರದಲ್ಲಿ ನಡೆದ ಬಾಂಬ್ ದಾಳಿಯಲ್ಲಿ, ಈ ಉಗ್ರಗಾಮಿಗಳು ನಿರ್ಣಾಯಕ ಪಾತ್ರ ನಿರ್ವಹಿಸಿದರೆಂದು ಲೇಖನಗಳಲ್ಲಿ ಹೇಳಿದ್ದಾರೆ. ಈ ವಿವರಗಳ ಆಧಾರದ ಮೇಲೆ ಪೋಸ್ಟ್‌ನಲ್ಲಿ ಷೇರ್ ಮಾಡಿದ ವಿಡಿಯೋ ಇತ್ತಿಚಿಗೆ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ಸಂಬಂಧಿಸಿಲ್ಲವೆಂದು ಖಚಿತವಾಗಿ ಹೇಳಬಹುದು.
ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡ ಮುಸುಕಧಾರಿ ಉಗ್ರವಾದಿಗಳನ್ನು ಬಂದಿಸಿದ ಪೋಲೀಸರು ಎಂದು ಷೇರ್ ಮಾಡುತ್ತಾ ಕೆಲವು ಫೇಕ್ ಪೋಸ್ಟ್‌ಗಳನ್ನು ತಪ್ಪೆಂದು ಹೇಳುತ್ತಾ Factly ಪಬ್ಲಿಷ್ ಮಾಡಿದ ಫ್ಯಾಕ್ಟ್- ಚೆಕ್ ಲೇಖನಗಳನ್ನು ಇಲ್ಲಿ, ಇಲ್ಲಿ ನೋಡಬಹುದು.
ಒಟ್ಟಿನಲ್ಲಿ, 2019ರಲ್ಲಿ ವಿಡಿಯೋವನ್ನು ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿದ ಮುಸುಕುಧಾರಿ ಉಗ್ರರನ್ನು ಪಂಜಾಬ್ ಪೋಲಿಸರು ಬಂಧನ ಮಾಡಿದ್ದಾರೆಂದು ತಪ್ಪಾಗಿ ಹಂಚಿಕೊಳ್ಳುತ್ತಿದ್ದಾರೆ.