ಆಗ ತಾನೇ ಹುಟ್ಟಿದ ಅಂಬಾನಿಯವರ ಮೊಮ್ಮೊಗನನ್ನು ನೋಡಲು ದೌಡಾಯಿಸಿದ ಮೋದಿ ಎಂಬ ಪ್ರತಿಪಾದನೆಯೊಂದಿಗೆ, ಆಸ್ಪತ್ರೆಯೊಂದರಲ್ಲಿ ಮುಖೇಶ್ ಅಂಬಾನಿ ಹಾಗೂ ಅವರ ಪತ್ನಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇರುವ ಚಿತ್ರವುಳ್ಳ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದು ನಿಜವೇ ಪರಿಶೀಲಿಸೋಣ

ಪ್ರತಿಪಾದನೆ: ಅಂಬಾನಿ ಮೊಮ್ಮಗನನ್ನು ನೋಡಲು ಆಸ್ಪತ್ರೆಗೆ ಭೇಟಿ ನೀಡಿದ ಪ್ರಧಾನಿ ಮೋದಿ
ನಿಜಾಂಶ: ಈ ಚಿತ್ರವು 2014ರಲ್ಲಿ ಮುಂಬೈನಲ್ಲಿ ಎಚ್‌ಎನ್ ರಿಲೆಯನ್ಸ್ ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ಉದ್ಘಾಟನೆಯ ಸಂದರ್ಭದಲ್ಲಿ ತೆಗೆದುದ್ದಾಗಿದೆ. ಹಾಗಾಗಿ ಇದಕ್ಕೂ ಇತ್ತೀಚಿನ ಅಂಬಾನಿಯ ಮೊಮ್ಮಗನ ಹುಟ್ಟಿನ ಸಂದರ್ಭಕ್ಕೂ ಯಾವುದೇ ಸಂಬಂಧವಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಈ ಸಂಬಂಧಿತ ಕೀವರ್ಡ್‌ಗಳನ್ನಾಧರಿಸಿ ಗೂಗಲ್‌ನಲ್ಲಿ ಹುಡುಕಾಡಿದಾಗ 2014ರ ಸುದ್ದಿ ವರದಿಯೊಂದು ಇದೇ ಚಿತ್ರವನ್ನು ಒಳಗೊಂಡಿರುವುದು ಕಂಡುಬಂದಿದೆ. ಆ ಲೇಖನದ ಪ್ರಕಾರ 2014ರಲ್ಲಿ ಮುಂಬೈನಲ್ಲಿ ಎಚ್‌ಎನ್ ರಿಲೆಯನ್ಸ್ ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ಉದ್ಘಾಟನೆಯ ಸಂದರ್ಭದಲ್ಲಿ ಈ ಚಿತ್ರವನ್ನು ತೆಗೆಯಲಾಗಿದೆ.

ಮತ್ತೊಂದು ಸುದ್ದಿ ವರದಿಯು ಇದೇ ಚಿತ್ರವನ್ನು ಒಳಗೊಂಡಿದ್ದು, ರಿಲೆಯನ್ಸ್ ಆಸ್ಪತ್ರೆಯನ್ನು ನರೇಂದ್ರ ಮೋದಿಯವರು ಉದ್ಘಾಟಿಸಿದ್ದಾರೆ ಎಂದು ವಿವರಣೆ ನೀಡಿದೆ. ಅಲ್ಲದೆ ಪ್ರಧಾನಿ ಕಚೇರಿಯ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿಯೂ ಈ ದೃಶ್ಯವನ್ನು ಕಾಣಬಹುದು. ಜೊತೆಗೆ ಅಂಬಾನಿಯ ಮೊಮ್ಮಗನ ಹುಟ್ಟಿದ ಸಂದರ್ಭದಲ್ಲಿ ಮೋದಿಯವರು ಭೇಟಿ ನೀಡಿದ್ದಾರೆ ಎಂಬ ಯಾವುದೇ ಸುದ್ದಿ ವರದಿಯು ಸಹ ಲಭ್ಯವಾಗಿಲ್ಲ.

ಒಟ್ಟಿನಲ್ಲಿ 2014ರಲ್ಲಿ ಮುಂಬೈನಲ್ಲಿ ಎಚ್‌ಎನ್ ರಿಲೆಯನ್ಸ್ ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ಉದ್ಘಾಟನೆಯ ಸಂದರ್ಭದಲ್ಲಿ ಈ ಚಿತ್ರವನ್ನು ತೆಗೆಯಲಾಗಿದೆ.