Fake News - Kannada
 

ಕಸದರಾಶಿಯಲ್ಲಿ ಬಿದ್ದಿರುವ ಚೆಗುವೆರಾ ಚಿತ್ರಪಟದ ಪೋಟೋ ಸೆರೆಹಿಡಿದಿದ್ದು ಸ್ಫೈನ್ ದೇಶದಲ್ಲಿ, ಕ್ಯೂಬಾದಲ್ಲಿ ಅಲ್ಲ

0

ಕ್ಯೂಬಾ ಪ್ರಜೆಗಳು ಚೆಗುವೆರಾ ಚಿತ್ರಪಟವನ್ನು ಕಸದರಾಶಿಯಲ್ಲಿ ಹಾಕಿರುವ ದೃಶ್ಯವೆಂದು ಸಾಮಾಜಿಕ ಜಾಲತಾಣದಲ್ಲಿ ಪೋಟೋವೊಂದು ಶೇರ್‍ ಆಗುತ್ತಿದೆ. ಕ್ಯೂಬಾ ದೇಶದಲ್ಲಿ ಸರ್ಕಾರದ ವಿರುದ್ದ ಪ್ರತಿಭಟನೆಗಳು ನಡೆಯುತ್ತಿರುವ ಇತ್ತೀಚಿನ ಸಂದರ್ಭದಲ್ಲಿ ಇದು ನಿಜವೇ ಪರಿಶೀಲಿಸೋಣ.

ಪ್ರತಿಪಾದನೆ:  ಕ್ಯೂಬಾ ಪ್ರಜೆಗಳು ಚೆಗುವೆರಾ ಚಿತ್ರಪಟವನ್ನು ಕಸದ ರಾಶಿಯಲ್ಲಿ ಎಸೆದ ಪೋಟೋ.

ಸತ್ಯಾಂಶ; ಪೋಸ್ಟ್‌ನಲ್ಲಿ ಷೇರ್‍ ಮಾಡಿದ ಪೋಟೋವನ್ನು 2020 ರಲ್ಲಿ ಸ್ಪೈನ್ ದೇಶದ ರಾಜಧಾನಿ ಮಾಡ್ರೀಡ್ ನಗರದಲ್ಲಿ ಸೆರೆಹಿಡಿಯಲಾಗಿದೆ. ಈ ಪೋಟೋವನ್ನು ಅಲೆಜಾಂಡ್ರೊ ಒಲಿಯಾ ಎನ್ನುವ ಪೋಟೋಗ್ರಾಫರ್‍ ಸೆರೆಹಿಡಿದಿದ್ದಾರೆ. ಈ ಪೋಟೋ  ಕ್ಯೂಬಾ ದೇಶಕ್ಕೆ ಸಂಬಂಧಿಸಿರುವುದಲ್ಲ. ಆದ್ದರಿಂದ , ಪೋಸ್ಟ್‌ನಲ್ಲಿ ಮಾಡುತ್ತಿರುವ ಪ್ರತಿಪಾದನೆ ತಪ್ಪಾಗಿದೆ.

ಪೋಸ್ಟ್‌ನಲ್ಲಿ ಹಂಚಿಕೊಳ್ಳುತ್ತಿರುವ ಪೋಟೋವನ್ನು ರಿವರ್ಸ್‌ ಇಮೇಜ್  ಸರ್ಚ್‌ ಮೂಲಕ ಹುಡುಕಿದಾಗ, ಇದೆ ಪೋಟೋದೊಂದಿಗೆ ’LA RAZO‘ ನ್ಯೂಸ್ ವೆಬ್ಸೈಟ್ 17 ಸೆಪ್ಟೆಂಬರ್‍ 2020 ರಂದು ಲೇಖನವೊಂದನ್ನು ಪ್ರಕಟಿಸಿರುವುದು ತಿಳಿದುಬಂದಿದೆ. ಈ ಪೋಟೊವನ್ನುಸ್ಪೈನ್ ದೇಶದ ರಾಜಧಾನಿ ಮಾಡ್ರೀಡ್ ನಗರದಲ್ಲಿ ತೆಗೆದಿರುವುದಾಗಿ ಈ ಲೇಖನದಲ್ಲಿ ಹೇಳಿದ್ದಾರೆ.

‘AFP Factual’ ‘ಫ್ಯಾಕ್ಟ್– ಚೆಕಿಂಗ್’ ಸಂಸ್ಥೆಯು ಈ ಪೋಟೋ ಕುರಿತ ಸ್ಪಷ್ಟತೆಗಾಗಿ ಅಲೆಜಾಂಡ್ರೊ ಒಲಿಯಾವರವರನ್ನು ಸಂಪರ್ಕಿಸಿತು. ಅಲೆಜಾಂಡ್ರೊ ಒಲಿಯಾ, ನಾನು  ಈ ಪೋಟೋವನ್ನು 14 ಜೂನ್ 2020 ರಂದು ಮಾಡ್ರಿಡ್ ನಗರದಲ್ಲಿನ ಪ್ರೀಟ್ ಕಾಪ್ಕೆಲರ್‍ ನಲ್ಲಿ  ತೆಗೆದಿದ್ದೇನೆ ಎಂದು AFP ತಿಳಿಸಿದ್ದಾರೆ. ಅಲೆಜಾಂಡ್ರೋ ಒಲಿಯ ಈ ಪೋಟೋಗೆ ಸಂಬಂಧಿಸಿ ನೀಡಿದ ಸ್ಪಷ್ಟೀಕರಣವನ್ನು ಆಧರಿಸಿ AFP factual ‘ ವೈಬ್ ಫಾಕ್ಟ್‌ ಚೆಕ್ ಲೇಖನವೊಂದನ್ನು ಪ್ರಕಟಿಸಿದೆ.

ಕ್ಯೂಬಾ ಸರ್ಕಾರ ವಿರೋಧಿ ಪ್ರತಿಭಟನೆಯ ಭಾಗವಾಗಿ ಚೆಗುವೆರಾ ಚಿತ್ರಪಟವನ್ನು ಕ್ಯೂಬಾ ಪ್ರಜೆಗಳು  ಕಸದ ರಾಶಿಗಳಲ್ಲಿ ಎಸೆದಿದ್ದಾರೆಂದು ಬಳಕೆದಾರರೊಬ್ಬರು ಈ ಪೋಟೋವನ್ನು ಟ್ವಿಟ್ಟರ್‌ನಲ್ಲಿ ಷೇರ್‍ ಮಾಡಿದ್ದಾರೆ. ಅದಕ್ಕೆ ಈ ಪೋಟೊ ಕ್ಯೂಬಾ ದೇಶದ್ದಲ್ಲ, ಸ್ಪೈನ್ ದೇಶದಲ್ಲಿ ತೆಗೆದ ಹಳೆಯ ಪೋಟೋ ಎಂದು CPI(M) ಪುದುಚೆರಿ ಅಧಿಕೃತ ಟ್ವಿಟ್ಟರ್‍ ಹ್ಯಾಂಡಲ್‌ನಲ್ಲಿ ಸ್ಪಷ್ಟೀಕರಣ ನೀಡಲಾಗಿದೆ.   

ಕ್ಯೂಬಾ  ಸರ್ಕಾರ ಕೊರೊನಾ ಸಾಂಕ್ರಾಮಿಕವನ್ನು ನಿಭಾಯಿಸುವಲ್ಲಿ ವಿಫಲವಾಗಿರುವುದು, ನಾಗರೀಕರ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಕ್ಯೂಬಾ ಆರ್ಥಿಕ ವ್ಯವಸ್ಥೆಯ ಪತನವನ್ನು ವಿರೋಧಿಸಿ ಸಾವಿರಾರು ಜನ ಪ್ರತಿಭಾಟನಾಕಾರರು ದೇಶದ ರಾಜಧಾನಿ ಹವಾನ ಮತ್ತು ಇತರೆ ನಗರಗಳಲ್ಲಿ ಇತ್ತೀಚಿಗೆ ದೊಡ್ಡ ಮಟ್ಟದ ಪ್ರತಿಭಟನೆಗಳನ್ನು ಆರಂಭಿಸಿದ್ದಾರೆ. ಈ ಪ್ರತಿಭನೆಗಳಿಗೆ ಸಂಬಂಧಿಸಿದಂತೆ ಪ್ರಕಟಗೊಂಡ ಸುದ್ದಿ ಲೇಖನಗಳನ್ನು ಇಲ್ಲಿ, ಇಲ್ಲಿ ನೋಡಬಹುದು.

ಒಟ್ಟಿನಲ್ಲಿ ಕಸದ ರಾಶಿಯಲ್ಲಿ ಬಿದ್ದಿರುವ ಚೆಗುವೆರಾ ಚಿತ್ರಪಟದ ಪೋಟೋವನ್ನು ಸ್ಪೈನ್ ದೇಶದಲ್ಲಿ ಸರೆಹಿಡಿದಿದ್ಧಾರೆಯೇ ಹೊರತು ಕ್ಯೂಬಾದಲ್ಲಿ ಅಲ್ಲ.

Share.

About Author

Comments are closed.

scroll