Fake News - Kannada
 

2024 ರ ಸಂತ ಸಿಯಾರಾಮ್ ಬಾಬಾ ಅವರ ವೀಡಿಯೊವನ್ನು ಅವರು 2025 ರ ಮಹಾ ಕುಂಭಮೇಳಕ್ಕೆ ಭೇಟಿ ನೀಡಿದ ವೀಡಿಯೊ ಎಂದು ಹಂಚಿಕೊಳ್ಳಲಾಗುತ್ತಿದೆ

0

ವಯಸ್ಸಾದ ಸಂತನೊಬ್ಬ ದೇವರ ಚಿತ್ರವನ್ನು ಕೆಂಪು ಬಟ್ಟೆಯಿಂದ ತೆಗೆದು ಗೋಡೆಗೆ ಇಡುತ್ತಿರುವುದನ್ನು ತೋರಿಸುವ ವೀಡಿಯೊ (ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಆ ವ್ಯಕ್ತಿ 154 ವರ್ಷ ವಯಸ್ಸಿನ ಹಿಮಾಲಯದ ಸಂತನಾಗಿದ್ದು, 2025 ರ ಮಹಾ ಕುಂಭಮೇಳದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ಮಹಾ ಕುಂಭಮೇಳದಲ್ಲಿ ಭಾಗವಹಿಸಿದ  154 ವರ್ಷ ವಯಸ್ಸಿನ ಸಂತರ ವೀಡಿಯೊ.

ಫ್ಯಾಕ್ಟ್: ಈ ವೀಡಿಯೊ 2025 ರ ಕುಂಭಮೇಳದದ್ದಲ್ಲ. ಇದು ಡಿಸೆಂಬರ್ 2024 ರಲ್ಲಿ ಮಧ್ಯಪ್ರದೇಶದ ಭಟ್ಟಯನ್ ಭುಜರ್ಗ್‌ನಲ್ಲಿರುವ ತಮ್ಮ ಆಶ್ರಮದಲ್ಲಿ ನಿಧನರಾದ ಸಂತ ಸಿಯಾರಾಮ್ ಬಾಬಾ ಅವರದ್ದು. ಅವರ ಮರಣದ ಸಮಯದಲ್ಲಿ 94 ರಿಂದ 110 ವರ್ಷಗಳ ನಡುವೆ ಇರಬಹುದು ಎಂದು ನ್ಯೂಸ್ ರಿಪೋರ್ಟ್ಗಳು ಅಂದಾಜಿಸಲಾಗಿದೆ (ನಿಖರವಾದ ವಯಸ್ಸು ತಿಳಿದಿಲ್ಲ). ಆದ್ದರಿಂದ, ಈ ಕ್ಲೇಮ್ ತಪ್ಪಾಗಿದೆ.

ವೀಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ನಾವು ವಿಡಿಯೋ ಕ್ಲಿಪ್ಪಿಂಗ್ಸ್ ಕೀಫ್ರೇಮ್‌ಗಳನ್ನು ಬಳಸಿಕೊಂಡು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ, ಅದು ಡಿಸೆಂಬರ್ 11, 2024 ರ ನಂತರದ ‘X’ ಪೋಸ್ಟ್ ಗೆ ಕಾರಣವಾಯಿತು. ಇದರಲ್ಲಿಯೂ ಅದೇ ವೀಡಿಯೊವನ್ನು ಕಾಣಬಹುದು. ಪೋಸ್ಟ್‌ನಲ್ಲಿ ಆ ವ್ಯಕ್ತಿಯನ್ನು ಸಿಯಾರಾಮ್ ಬಾಬಾ ಎಂದು ಗುರುತಿಸಲಾಗಿದೆ ಮತ್ತು ಅವರು ಅದೇ ದಿನ ನಿಧನರಾಗಿದ್ದಾರೆ ಎಂದು ತಿಳಿಸಲಾಗಿದೆ. 

ಹೆಚ್ಚಿನ ತನಿಖೆಯಲ್ಲಿ ಡಿಸೆಂಬರ್ 11, 2024 ರಂದು ಸಂತ ಸಿಯಾರಾಮ್ ಬಾಬಾ ಅವರ ನಿಧನದ ಬಗ್ಗೆ ಹಲವಾರು ಸುದ್ದಿ ಸಂಸ್ಥೆಗಳು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ವರದಿ ಮಾಡಿವೆ ಎಂದು ತಿಳಿದುಬಂದಿದೆ. ಈ ವರದಿಗಳು ಅವರ ಸಾವಿನ ಬಗ್ಗೆ ಮಾಹಿತಿಯನ್ನು ನೀಡಿದೆ. 

ಹೆಚ್ಚುವರಿಯಾಗಿ, ಇನ್‌ಸ್ಟಾಗ್ರಾಮ್ ಯೂಸರ್ ವಿಕೆನ್ ಕುಶ್ವಾ ಅವರು 11 ಅಕ್ಟೋಬರ್ 2024 ರಂದು ಅಪ್‌ಲೋಡ್ ಮಾಡಿದ ವೈರಲ್ ವೀಡಿಯೊದ ಒರಿಜಿನಲ್ ವರ್ಷನ್ ಅನ್ನು ನಾವು ಕಂಡುಕೊಂಡಿದ್ದೇವೆ (ಆರ್ಕೈವ್ ಲಿಂಕ್), ಇದು 2025 ರ ಕುಂಭಮೇಳಕ್ಕೆ ಬಹಳ ಹಿಂದೆಯೇ ಅಂದರೆ 2024 ರಿಂದ ದೃಶ್ಯಗಳು ಆನ್‌ಲೈನ್‌ನಲ್ಲಿವೆ ಎಂದು ಖಚಿತಪಡಿಸುತ್ತದೆ. ಪ್ರಸ್ತುತ ನಡೆಯುತ್ತಿರುವ 2025 ರ ಮಹಾ ಕುಂಭಮೇಳದ ಸಮಯದಲ್ಲಿ ವೀಡಿಯೊವನ್ನು ಚಿತ್ರೀಕರಿಸಿಲ್ಲ ಎಂದು ತಿಳಿಸುತ್ತದೆ. 

ವಿಕೇನ್ ಕುಶ್ವಾ ಅವರ ಪ್ರೊಫೈಲ್ ಅನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಸಿಯಾರಾಮ್ ಬಾಬಾ ಅವರ ಹಲವಾರು ವೀಡಿಯೊಗಳು ಕಂಡುಬಂದವು. ಸಿಯಾರಾಮ್ ಬಾಬಾ ಅವರ ಅಫೀಷಿಯಲ್ ಫೇಸ್‌ಬುಕ್ ಪೇಜ್ನಲ್ಲಿ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಬಾಬಾ ಆಚರಣೆಗಳನ್ನು ಮಾಡುತ್ತಿರುವ ಹಲವಾರು ವೀಡಿಯೊಗಳನ್ನು ನಾವು ಕಂಡುಕೊಂಡಿದ್ದೇವೆ. ಈ ಪೇಜ್ ಸಂತ ಸಿಯಾರಾಮ್ ಬಾಬಾ ಅವರ ಮರಣವನ್ನು ದೃಢೀಕರಿಸುವ ಪೋಸ್ಟ್‌ಗಳನ್ನು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಒಳಗೊಂಡಿದೆ.

ಸುದ್ದಿ ವರದಿಗಳ ಪ್ರಕಾರ, ಸಂತ ಸಿಯಾರಾಮ್ ಬಾಬಾ ಡಿಸೆಂಬರ್ 11, 2024 ರಂದು ಮೋಕ್ಷ ಏಕಾದಶಿಯ ಸಮಯದಲ್ಲಿ ನಿಧನರಾದರು. ಹನುಮಂತನ ಭಕ್ತರಾಗಿದ್ದ ಅವರು ಮಧ್ಯಪ್ರದೇಶದ ಭಟ್ಟಯನ್ ಭುಜರ್ಗ್‌ನಲ್ಲಿರುವ ನರ್ಮದಾ ನದಿಯ ದಡದಲ್ಲಿರುವ ತಮ್ಮ ಆಶ್ರಮದಲ್ಲಿದ್ದರು.  ವೈರಲ್ ಪೋಸ್ಟ್‌ನಲ್ಲಿ ಸಿಯಾರಾಮ್ ಬಾಬಾ ಅವರಿಗೆ 154 ವರ್ಷ ವಯಸ್ಸಾಗಿತ್ತು ಎಂದು ಹೇಳಲಾಗಿದ್ದರೂ, ಯಾವುದೇ ವಿಶ್ವಾಸಾರ್ಹ ಸುದ್ದಿ ಸಂಸ್ಥೆ ಇದನ್ನು ದೃಢಪಡಿಸಿಲ್ಲ. ಬದಲಾಗಿ, ವರದಿಗಳು ಅವರ ಮರಣದ ಸಮಯದಲ್ಲಿ 94 ರಿಂದ 110 ವರ್ಷಗಳ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ).

ಇದಲ್ಲದೆ, ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಹಿಮಾಲಯದ 154 ವರ್ಷ ವಯಸ್ಸಿನ ಸಂತರೊಬ್ಬರು ಭಾಗವಹಿಸಿದ್ದಾರೆ ಎಂಬ ಬಗ್ಗೆ ನಮಗೆ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳು ಕಂಡುಬಂದಿಲ್ಲ. ಆದರೆ, 129 ವರ್ಷ ವಯಸ್ಸಿನ ಸಂತ ಸ್ವಾಮಿ ಶಿವಾನಂದರ ವರದಿಗಳನ್ನು ನಾವು ಕಂಡುಕೊಂಡಿದ್ದೇವೆ (ಇಲ್ಲಿ ಮತ್ತು ಇಲ್ಲಿ). ಅದರ ಪ್ರಕಾರ ಅವರ ಆಧಾರ್ ಕಾರ್ಡ್ ಪ್ರಕಾರ, ಅವರು 8 ಆಗಸ್ಟ್ 1896 ರಂದು ಜನಿಸಿದ್ದಾರೆ. 

ಒಟ್ಟಾರೆಯಾಗಿ ಹೇಳುವುದಾದರೆ, ಸಂತ ಸಿಯಾರಾಮ್ ಬಾಬಾ ಅವರ 2024 ರ ವೀಡಿಯೊವನ್ನು ಅವರು 2025 ರ ಮಹಾ ಕುಂಭಮೇಳಕ್ಕೆ ಭೇಟಿ ನೀಡಿದ ವೀಡಿಯೊ ಎಂದು ತಪ್ಪಾಗಿ ಶೇರ್ ಮಾಡಲಾಗಿದೆ. 

Share.

Comments are closed.

scroll