Fake News - Kannada
 

‘Into the Strom’ ಹಾಲಿವುಡ್ ಸಿನೆಮಾದ ದೃಶ್ಯಗಳನ್ನು ಕೆನಾಡದ ಟೊರಂಟೋ ನಗರದಲ್ಲಿ ಬೀಸಿದ ಭಯಂಕರ ಸುಂಟರಗಾಳಿ ಎಂದು ಹಂಚಿಕೊಳ್ಳುತ್ತಿದ್ದಾರೆ

0

‘ಭಯಂಕರವಾದ ಸುಂಟರಗಾಳಿ ಕೆನಡಾ  ದೇಶದ ಟೊರೊಂಟಾ ನಗರದಲ್ಲಿನ ವಿಮಾನ ನಿಲ್ದಾಣವನ್ನು ಸುತ್ತುವರೆಯುತ್ತಿರುವ ದೃಶ್ಯಗಳು’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಶೇರ್‍ ಆಗುತ್ತಿದೆ. ಈ ವಿಡಿಯೋವನ್ನು ಚೈನಾ ಜಿಯಾಗ್ರಾಫಿಕ್ ಮ್ಯಾಗಜೈನ್‌ ಒಂದು ಮಿಲಿಯನ್  ಡಾಲರ್‌ಗಳಗೆ ಖರೀದಿಸಲಾಗಿದೆ ಎಂದು ಈ ಪೋಸ್ಟ್‌ನಲ್ಲಿ ಪ್ರತಿಪಾದಿಸಲಾಗಿದೆ. ಇದು ನಿಜವೇ ಪರಿಶೀಲಿಸೋಣ.

ಪ್ರತಿಪಾದನೆ: ಕೆನಡಾದ ಟೊರಂಟೋ ನಗರದಲ್ಲಿ ಬೀಸಿದ ಭಯಂಕರವಾದ ಸುಂಟರಗಾಳಿಯ ವಿಡಿಯೋವನ್ನು ಚೈನಾದ ನ್ಯಾಷನಲ್  ಜಿಯೋಗ್ರಾಫಿಕ್ ಮ್ಯಾಗಜೈನ್‌ನಿಂದ ಒಂದು ಮಿಲಿಯನ್ ಡಾಲರ್‍ ಕೊಟ್ಟು ಖರಿದೀಸಿದೆ.

ಸತ್ಯಾಂಶ: ವಿಡಿಯೋದಲ್ಲಿ ಕಾಣಿಸುತ್ತಿರುವ ಸುಂಟರಗಾಳಿ ’Into the Strom’ ಹಾಲಿವುಡ್ ಚಿತ್ರದಲ್ಲಿನ ದೃಶ್ಯವಾಗಿದೆ. ಪೋಸ್ಟ್‌ನಲ್ಲಿ ಷೇರ್‍ ಮಾಡಿದ ಈ ವಿಡಿಯೋ ಕಂಪ್ಯೂಟರ್‍ ಗ್ರಾಫಿಕ್ಸ್ ಮೂಲಕ ರೂಪಿಸಿರುವುದಾಗಿದೆಯೇ ಹೊರತು ನಿಜಜೀವನದಲ್ಲಿ ನಡೆದದ್ದಲ್ಲ. ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್ ಈ ವಿಡಿಯೋವನ್ನು ಒಂದು ಮಿಲಿಯನ್ ಡಾಲರ್‌ಗಳಿಗೆ ಖರಿದೀಸಿರುವ ಯಾವುದೇ ಮಾಹಿತಿ ಇಲ್ಲ. ಆದ್ದರಿಂದ , ಪೋಸ್ಟ್‌ನಲ್ಲಿ ಮಾಡುತ್ತಿರುವ ಪ್ರತಿಪಾದನೆ ತಪ್ಪಾಗಿದೆ.

ಪೋಸ್ಟ್‌ನಲ್ಲಿ ಷೇರ್‍  ಮಾಡಿದ ವಿಡಿಯೋದ ಸ್ಕ್ರೀನ್ ಶಾಟ್‌ಗಳನ್ನು ರಿವರ್ಸ್‌ ಇಮೇಜ್ ಸರ್ಚ್ ಮೂಲಕ ಹುಡುಕಿದಾಗ, ಈ ವಿಡಿಯೋದಲ್ಲಿನ ಕೆಲವು ದೃಶ್ಯಗಳನ್ನು ಒಳಗೊಂಡ ವಿಡಿಯೋವೊಂದು ಪತ್ತೆಯಾಗಿದೆ. ಹಾಲಿವುಡ್ ಚಿತ್ರ ನಿರ್ಮಾಣ ಸಂಸ್ಥೆ ’warner Bros, Pictures’ ಯೂಟ್ಯೂಬ್ ಚಾನೆಲ್‌ನಲ್ಲಿ ಆ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ. ಆ ವಿಡಿಯೋದ ದೃಶ್ಯಗಳು ‘Into the strom‘ ಎನ್ನುವ ಹಾಲಿವುಡ್ ಸಿನೆಮಾದವು ಎಂದು ಈ ವಿಡಿಯೊ ವಿವರಣೆಯಲ್ಲಿ ತಿಳಿಸಿದ್ದಾರೆ. ಪೋಸ್ಟ್‌ನಲ್ಲಿ ಷೇರ್‍ ಮಾಡಿದ ವಿಡಿಯೋದಲ್ಲಿ ಕಾಣಿಸುತ್ತಿರುವ  ದೃಶ್ಯಗಳನ್ನು ’Vidimovie’ ಆನ್‌ಲೈನ್ ವೆಬ್‌ಸೈಟ್‌ನಲ್ಲಿ ದೊರಕಿದೆ. ಈ ವಿಡಿಯೋದಲ್ಲಿ ಕಾಣಿಸುತ್ತಿರುವ ದೃಶ್ಯಗಳನ್ನು ಸಹ ’Into the Strom’  ಎಂಬ ಸಿನೆಮಾದಲ್ಲಿನವು ಎಂದು ಈ ವೆಬ್‌ನಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.

ಈ ವಿವರಗಳ ಆಧಾರದಲ್ಲಿ ಮತ್ತುಷ್ಟು ಮಾಹಿತಿಗಾಗಿ ಹುಡುಕಿದಾಗ, ವಿಮಾನಗಳು ಗಾಳಿಯಲ್ಲಿ ಹಾರುತ್ತಿರುವ ಅದೇ ದೃಶ್ಯಗಳು ’Into the strom’ ಹಾಲಿವುಡ್ ಸಿನೆಮಾದ ಟ್ರೈಲರ್‌ನಲ್ಲಿ ಕಂಡುಬಂದಿದೆ.  ’into the Strom ‘ ಸಿನೆಮಾದಲ್ಲಿನ ದೃಶ್ಯಗಳನ್ನು ಎಡಿಟ್ ಮಾಡಿ ಶೇರ್‍ ಮಾಡಿರುವ ವಿಡಿಯೋವನ್ನು ಇಲ್ಲಿ ನೋಡಬಹುದು.  ಇದುವರೆಗೂ, ಕೆನಾಡದಲ್ಲಿ ಹಲವು ಭಾರಿ ಸುಂಟರಗಾಳಿಗಳು ಬಂದಿರುವುದು ವಾಸ್ತವವೇ. ಅದಕ್ಕೆ ಸಂಬಂಧಿಸಿದ ವಿಡಿಯೋಗಳು, ಲೇಖನಗಳನ್ನು ಇಲ್ಲಿ, ಇಲ್ಲಿ ನೋಡಬಹುದು, ಆದರೆ, ಪೋಸ್ಟ್‌ನಲ್ಲಿನ ವಿಡಿಯೋಗಳಲ್ಲಿ ಕಾಣಿಸುತ್ತಿರುವ ದೃಶ್ಯಗಳು ಕಂಪ್ಯೂಟರ್‍ ಗ್ರಾಫಿಕ್ಸ್ ಮೂಲಕ ರೂಪಿಸಿದವಾಗಿವೆ. ನಿಜ ಜೀವನದಲ್ಲಿ ನಡೆದದ್ದಲ್ಲ.

ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್‌ನವರು ಸುಂಟರಗಾಳಿಗೆ ಸಂಬಂಧಿಸಿದಂತೆ  ಪ್ರಕಟಣೆ ಮಾಡಿದ  ವಿಡಿಯೋಗಳನ್ನು ಇಲ್ಲಿ, ಇಲ್ಲಿ ನೋಡಬಹುದು. ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್ ಈ ವಿಡಿಯೋವನ್ನು ಒಂದು ಮಿಲಿಯನ್ ಡಾಲರ್‌ಗಳಿಗೆ ಖರಿದೀಸಿರುವ ಯಾವುದೇ ಸುದ್ದಿ ಮಾಹಿತಿ ಇಲ್ಲ. ಅಲ್ಲದೆ ‘Snopes’ fನ್ಯೂಸ್ ಸಂಸ್ಥೆ ಆ ವಿಡಿಯೋ  ಬಗ್ಗೆ ಸ್ಪಷ್ಟನೆಯನ್ನು ನೀಡುತ್ತಾ ಫ್ಯಾಕ್ಟ್‌ ಚೆಕ್ ಲೇಖನ ಪ್ರಕಟಿಸಿದೆ. ಈ ವಿವರಗಳ ಆಧಾರವಾಗಿ ಪೋಸ್ಟ್‌ನಲ್ಲಿ ಷೇರ್‍ ಮಾಡಿದ ವಿಡಿಯೋ ’into the Strom ಎಂಬ ಹಾಲಿವುಡ್  ಸಿನೆಮಾದಲ್ಲಿನವು ಎಂದು ಖಚಿತವಾಗಿ ಹೇಳಬಹುದು.

ಒಟ್ಟಿನಲ್ಲಿ, Into the strom ಹಾಲಿವುಡ್ ಸಿನೆಮಾದಲ್ಲಿ ದೃಶ್ಯಗಳನ್ನು ಕೆನಡಾ ಟೊರಂಟೊ ನಗರದಲ್ಲಿ ಬೀಸಿದ ಭಯಂಕರ ಸುಂಟರಗಾಳಿಗಳೆಂದು ಷೇರ್‍ ಮಾಡುತ್ತಿದ್ದಾರೆ.

Share.

About Author

Comments are closed.

scroll