Fake News - Kannada
 

2011ರ ಸುನಾಮಿಯಿಂದ ಜಪಾನ್‌ ಗಾದ ವಿನಾಶದ ವಿಡಿಯೋವನ್ನು ಚೀನಾದ್ದ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

0

ಇತ್ತೀಚಿನ ಪ್ರವಾಹದಿಂದ ಚೀನಾಗಾದ ವಿನಾಶ ಎಂಬ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಪಂಚದಾದ್ಯಂತ ಕೋವಿಡ್ ಹರಡುವುದ್ದಕ್ಕೆ ಕಾರಣವಾದ ಚೀನಾಗೆ ದೇವರು ಕೊಟ್ಟ ಶಿಕ್ಷೆ ಎಂದು  ಪೋಸ್ಟ್‌ ನಲ್ಲಿ ಹೇಳಲಾಗಿದೆ. ಈ ಪ್ರತಿಪಾದನೆ ನಿಜವೇ ಪರಿಶೀಲಿಸೋಣ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ಚೀನಾದ ನಗರಕ್ಕೆ ನುಗ್ಗುತ್ತಿರುವ ಪ್ರವಾಹದ ವಿಡಿಯೋ.

ನಿಜಾಂಶ: 2011 ರಲ್ಲಿ ಸಂಭವಿಸಿದಿ ಸುನಾಮಿಯಿಂದಾಗಿ ಜಪಾನ್‌ ನ ಇಶಿನೋಮಕಿ ನಗರಕ್ಕೆ ಸುನಾಮಿ ಅಲೆಗಳು ನುಗ್ಗುತ್ತಿರುವುದನ್ನು ವಿಡಿಯೋವನ್ನು ಪೋಸ್ಟ್ ನಲ್ಲಿ ಹಂಚಿಕೊಂಡಿರುವುದು. ಈ ವಿಡಿಯೋವನ್ನುಇಶಿನೋಮಕಿ ಕಾರ್ಪೋರೇಷನ್ ಲಿಮಿಟೆಡ್‌ ನ ನೌಕರರೊಬ್ಬರು ತಮ್ಮ ಸಂಸ್ಥೆಯ ಮೇಲ್ಛಾವಣಿಯಿಂದ ಸೆರೆಹಿಡಿದಿದ್ದಾರೆ. ಹಾಗಾಗಿ ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವಿಡಿಯೋದ ಸ್ಕ್ರೀನ್‌ ಶಾಟ್‌ ಅನ್ನು ರಿವರ್ಸ್ ಇಮೇಜ್ ಸರ್ಚ್ ಗೆ ಒಳಪಡಿಸಿದಾಗ ವಿಲಿಯಂ ಕ್ಯಾಸ್ಟ್ರನೋವ ಎಂಬ ಹೆಸರಿನ ಯೂಟ್ಯೂಬ್‌ ಚಾನೆಲ್ ನಲ್ಲಿ ಇದೇ ರೀತಿಯ ವಿಡಿಯೋಗಳು ಕಾಣುತ್ತವೆ. ವಿಡಿಯೋ ವಿವರಣೆಯಲ್ಲಿ ಜಪಾನ್‌ ನ ಇಶಿನೋಮಕಿನ ಗರಕ್ಕೆ ಸುನಾಮಿ ಅಲೆಗಳು ನುಗ್ಗುತ್ತಿರುವುದು ಎಂದು ಬರೆಯಲಾಗಿದೆ. ಇದೇ ಕೀವರ್ಡ್‌ ಗಳನ್ನು ಬಳಸಿ ಅಧಿಕೃತ ಮೂಲಗಳನ್ನು ಹುಡುಕಿದಾಗ ಅದೇ ವಿಡಿಯೋ ‘FNN311’ ಎಂಬ ಯೂಟ್ಯೂಬ್ ಚಾನೆಲ್‌ ನಲ್ಲಿ ದೊರಕಿದೆ. ಇದು ಜಪಾನ್‌ ನ FUJI ಚಾನೆಲ್‌ ನ ಅಧಿಕೃತ ಯೂಟ್ಯೂಬ್ ತಾಣವಾಗಿದೆ. 11 ಮಾರ್ಚ್ 2011 ’ರಂದು ಜಪಾನ್‌ ನ ಈಶಾನ್ಯ ಕರಾವಳಿಯಲ್ಲಿ ಸಂಭವಿಸಿದ ಪ್ರಬಲ ಭೂಕಂಪನದಿಂದಾಗಿ, ದೊಡ್ಡ ಸುನಾಮಿ ಅಲೆಗಳು ಜಪಾನ್‌ ನ ಮಿಯಾಗಿ ಜಿಲ್ಲೆಯ ಇಶಿನೋಮಕಿ ನಗರಕ್ಕೆ ಅಪ್ಪಳಿಸಿವೆ ಎಂದು ವಿಡಿಯೋದಲ್ಲಿ ಉಲ್ಲೇಖಿಸಲಾಗಿದೆ. ಈ ವಿಡಿಯೋವನ್ನು ‘ಇಶಿನೋಮಕಿ ಗ್ಯಾಸ್ ಕಾರ್ಪೊರೇಶನ್ ಲಿಮಿಟೆಡ್‌’ನ ಮಾಲೀಕ ಚಿತ್ರೀಕರಿಸಿದ್ದಾರೆ. ದೊಡ್ಡ ಸುನಾಮಿ ಅಲೆಗಳು ನಗರಕ್ಕೆ ಅಪ್ಪಳಿಸಿದ ಇಶಿನೋಮಕಿ ಮೀನುಗಾರಿಕೆ ಬಂದರಿನ ಬಳಿ ಇರುವ ತನ್ನ ಕಂಪನಿಯ ಮೇಲ್ಛಾವಣಿಯಿಂದ ಈ ವಿಡಿಯೋವನ್ನು ಅವರು ಚಿತ್ರೀಕರಿಸಿದ್ದಾರೆ.

ಈ ಕುರಿತು ಹೆಚ್ಚಿನ ಹುಡುಕಾಟ ನಡೆಸಿದಾಗ ಇದೇ ರೀತಿಯ ಹಲವು ವಿಡಿಯೋಗಳು ಸಿಕ್ಕಿವೆ. ಉಕ್ರೇನ್‌ ಮೂಲದ 1+1 TV ಚಾನೆಲ್‌ನ ಯೂಟ್ಯೂಬ್ ನಲ್ಲಿ ಇದು ಪೋಸ್ಟ್ ಆಗಿದೆ. ಅದು ಜಪಾನ್‌ ನ ಸುನಾಮಿಗೆ ಸಂಬಂಧಿಸಿದ ವಿಡಿಯೋ ಎಂದು ವಿವರಣೆ ನೀಡಲಾಗಿದೆ. ಅದೇ ರೀತಿ ಸುನಾಮಿಯಿಂದ ಹಾನಿಗೊಳಗಾದ ವಿಡಿಯೊಗಳನ್ನು ಇಲ್ಲಿ ನೋಡಬಹುದು.

ಇದೇ ವಿಡಿಯೋ ಈ ಮುಂಚೆ ಕೇರಳದಲ್ಲಿ ಪ್ರವಾಹ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿತ್ತು.  ಇತ್ತೀಚಿಗೆ ಲಾವೋಸ್‌ ನ ಹೈಡ್ರೋ ಪವರ್ ಡ್ಯಾಂ ಕುಸಿತದಿಂದಾಗಿ ಉಂಟಾದ ವಿನಾಶ ಎಂದು ಕೂಡ ಹಂಚಿಕೊಳ್ಳಲಾಗಿತ್ತು. 11 ಮಾರ್ಚ್ 2011ರಂದು ಜಪಾನ್‌ ನ ಈಶಾನ್ಯ ಭಾಗದಲ್ಲಿ ಸಂಭವಿಸಿದ ಪ್ರಬಲ ಭೂಕಂಪನದಿಂದಾಗಿ ಸಾವಿರಾರು ಜನ ಸಾವಿಗೀಡಾಗಿದ್ದರು. ಈ ವಿನಾಶದ ಕುರಿತು ಹೆಚ್ಚಿನ ವಿವರವನ್ನು ಇಲ್ಲಿ ಓದಬಹುದು.

ಒಟ್ಟಿನಲ್ಲಿ 2011ರಲ್ಲಿ ಸುನಾಮಿಯಿಂದ ಜಪಾನ್‌ ಗಾದ ವಿನಾಶದ ವಿಡಿಯೋವನ್ನು ಚೀನಾದ್ದ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

Share.

About Author

Comments are closed.

scroll