ಸ್ವಿಸ್ ಬ್ಯಾಂಕ್ ನಲ್ಲಿ ಹಣ ಇಟ್ಟಿರುವ 30 ಸದಸ್ಯರ ಪಟ್ಟಿಯನ್ನು ವಿಕಿಲೀಕ್ಸ್ ಬಹಿರಂಗಪಡಿಸಿದೆ ಎಂದು ಪೋಸ್ಟ್‌ವೊಂದನ್ನು ಹಲವು ಫೇಸ್ ಬುಕ್ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ. ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯ ಸತ್ಯಾಸತ್ಯತೆಯನ್ನು ವಿಶ್ಲೇಷಿಸೋಣ.
ಪ್ರತಿಪಾದನೆ: ಸ್ವಿಸ್ ಬ್ಯಾಂಕ್‌ಗಳಲ್ಲಿ ಕಪ್ಪುಹಣ ಹೊಂದಿರುವವರ 1ನೇ ಪಟ್ಟಿಯನ್ನು ವಿಕಿಲೀಕ್ಸ್ ಪ್ರಕಟಿಸಿದೆ.
ಸತ್ಯ: ಸ್ವಿಸ್ ಬ್ಯಾಂಕ್‌ಗಳಲ್ಲಿ ಹಣ ಇಟ್ಟಿರುವ ಭಾರತೀಯರ ಪಟ್ಟಿಯನ್ನು ವಿಕಿಲೀಕ್ಸ್ ಎಂದಿಗೂ ಪ್ರಕಟಿಸಿಲ್ಲ. ಆದ್ದರಿಂದ, ಪ್ರತಿಪಾದನೆ ತಪ್ಪಾಗಿದೆ.
ಸ್ವಿಸ್ ಬ್ಯಾಂಕ್‌ನಲ್ಲಿ ಕಪ್ಪುಹಣ ಹೊಂದಿರುವವರ ಪಟ್ಟಿಯನ್ನು ವಿಕಿಲೀಕ್ಸ್ ಪ್ರಕಟಿಸಿದೆ ಎಂಬ ಸುದ್ದಿಯು 2011 ರಿಂದ ಆಗಾಗ್ಗೆ ಶೇರ್ ಆಗುತ್ತಲೇ ಇದೆ. ಅದರ ಹಲವು ಆವೃತ್ತಿಗಳಿವೆ:
ಸ್ವಿಸ್ ಬ್ಯಾಂಕ್‌ಗಳಲ್ಲಿ ಕಪ್ಪುಹಣ ಹೊಂದಿರುವವರ ಪಟ್ಟಿಗೆ ಸಂಬಂಧಿಸಿದಂತೆ WikiLeaks.org ನಲ್ಲಿ ಹುಡುಕಿದಾಗ ಯಾವುದೇ ಸೂಕ್ತ ಮಾಹಿತಿ ಕಂಡುಬಂದಿಲ್ಲ. 2011 ರಲ್ಲಿ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ಅವರು ಸ್ವಿಸ್ ಬ್ಯಾಂಕ್‌ಗಳಿಗೆ ಕಪ್ಪು ಹಣವು ಮುಖ್ಯವಾಗಿ ಭಾರತದಿಂದ ಬರುತ್ತದೆ ಎಂದು ಹೇಳಿದ್ದರು. ಆದರೆ, ಸ್ವಿಸ್ ಬ್ಯಾಂಕ್ ನಲ್ಲಿ ಕಪ್ಪುಹಣ ಇಟ್ಟಿರುವ ಭಾರತೀಯರ ಯಾವುದೇ ಪಟ್ಟಿಯನ್ನು ಸಂಸ್ಥೆ ಇದುವರೆಗೂ ಪ್ರಕಟಿಸಿಲ್ಲ. ವಿಕಿಲೀಕ್ಸ್ 2011 ರಲ್ಲಿ ತಮ್ಮ ಅಧಿಕೃತ ಫೇಸ್‌ಬುಕ್ ಮತ್ತು ಟ್ವಿಟರ್ ಖಾತೆಗಳಲ್ಲಿ ಕಪ್ಪುಹಣದ ಬಗ್ಗೆ ಹರಿದಾಡುತ್ತಿರುವ ಪಟ್ಟಿಗಳು ನಕಲಿ ಎಂದು ಸ್ಪಷ್ಟಪಡಿಸಿತ್ತು. ಸಂಸ್ಥೆಯು ಅಂತಹ ಯಾವುದೇ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿತ್ತು.
WARNING: WikiLeaks and Indian black money: The following is a FAKE image and never appeared on WikiLeaks http://t.co/Dwbpc3P
— WikiLeaks (@wikileaks) August 5, 2011
ಒಟ್ಟಾರೆಯಾಗಿ ಹೇಳುವುದಾದರೆ, ಸ್ವಿಸ್ ಬ್ಯಾಂಕ್‌ನಲ್ಲಿರುವ ಭಾರತೀಯ ಕಪ್ಪುಹಣ ಹೊಂದಿರುವವರ ವಿಕಿಲೀಕ್ಸ್ ಪಟ್ಟಿ ನಕಲಿಯಾಗಿದೆ.