ಉತ್ತರಾಖಂಡ ರಾಜ್ಯದ ಋಷಿಕೇಶ ಮತ್ತು ಕೇದಾರನಾಥ ನಡುವೆ ಹೊಸದಾಗಿ ನಿರ್ಮಿಸಲಾದ ರಸ್ತೆಯ ದೃಶ್ಯಗಳನ್ನು ತೋರಿಸುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಈ ಪೋಸ್ಟ್ ನಿಜವೇ ಎಂದು ಪರಿಶೀಲಿಸೋಣ.
ಪ್ರತಿಪಾದನೆ: ಉತ್ತರಾಖಂಡ ರಾಜ್ಯದ ಋಷಿಕೇಶ ಮತ್ತು ಕೇದಾರನಾಥ ನಡುವೆ ಹೊಸದಾಗಿ ನಿರ್ಮಿಸಲಾದ ರಸ್ತೆಯ ನೋಟಗಳು.
ನಿಜಾಂಶ: ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ಖಬ್ ಸಂಗಮ್ ಸೇತುವೆಯ ಬಳಿ ಇರುವ ರಸ್ತೆಯ ದೃಶ್ಯಗಳನ್ನು ಈ ವೀಡಿಯೊ ತೋರಿಸುತ್ತದೆ. ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಕಂಡುಬರುತ್ತಿರುವುದು ಋಷಿಕೇಶ ಮತ್ತು ಕೇದಾರನಾಥ ನಡುವೆ ನಿರ್ಮಿಸುತ್ತಿರುವ ರಸ್ತೆಯ ನೋಟವಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಸುಮಾರು 0:30 ನಿಮಿಷಗಳ ನಂತರ, ವೀಡಿಯೊದಲ್ಲಿ ಮಾತನಾಡುವ ವ್ಯಕ್ತಿಯು ಖಾಜಾಗೆ ಹೋಗುವ ಮಾರ್ಗದಲ್ಲಿ ಅವರು ನೋಡಿದ ಅದ್ಭುತ ದೃಶ್ಯಗಳನ್ನು ಉಲ್ಲೇಖಿಸುವುದನ್ನು ನಾವು ನೋಡಬಹುದು. ಈ ವಿವರಗಳ ಆಧಾರದ ಮೇಲೆ ನಾವು ಪೋಸ್ಟ್‌ನಲ್ಲಿ ಹಂಚಿಕೊಂಡ ವೀಡಿಯೊವನ್ನು ಸರ್ಚ್ ಮಾಡಿದಾಗ, ಇನ್‌ಸ್ಟಾಗ್ರಾಮ್ ಪುಟವೊಂದು ಈ ದೃಶ್ಯಗಳನ್ನು ಹೋಲುವ ವೀಡಿಯೊವನ್ನು ಪ್ರಕಟಿಸಿದೆ. ಹಿಮಾಚಲ ಪ್ರದೇಶದ ಖಾಜಾ ಬಳಿಯ ಸ್ಪಿತಿ ಕಣಿವೆಗೆ ಹೋಗುವ ದಾರಿಯಲ್ಲಿ ಈ ಸುಂದರವಾದ ರಸ್ತೆಗಳು ಮತ್ತು ಪರ್ವತ ದೃಶ್ಯಗಳ ವೀಡಿಯೊವನ್ನು Instagram ಬಳಕೆದಾರರು ಹಂಚಿಕೊಂಡಿದ್ದಾರೆ.
ಈ ವೀಡಿಯೊವನ್ನು ರಿಷಕೇಶ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಾಗ, ಕೆಲವು ಫೇಸ್‌ಬುಕ್ ಬಳಕೆದಾರರು ವೀಡಿಯೊದಲ್ಲಿ ಕಾಣುತ್ತಿರುವುದು ರಿಷಿಕೇಶ-ಕೇದಾರನಾಥ ನಡುವಿನ ರಸ್ತೆಯಲ್ಲ, ಹಿಮಾಚಲ ಪ್ರದೇಶ ರಾಜ್ಯದ ಖಾಬ್ ಸಂಗಮ್ ಸೇತುವೆ ಬಳಿಯ ನಿರ್ಮಿಸಲಾದ ರಸ್ತೆಯ ದೃಶ್ಯಗಳು ಎಂದು ಪ್ರತಿಕ್ರಿಯಿಸಿದ್ದಾರೆ. ಮೇಲಿನ ವಿವರಗಳನ್ನು ಆಧರಿಸಿ ವೀಡಿಯೊದ ಕುರಿತು ಹೆಚ್ಚಿನ ಮಾಹಿತಿಗಾಗಿ ನೋಡಿದಾಗ, ಶಿಮ್ಲಾದಿಂದ ಹಿಮಾಚಲದ ಖಾಜಾಕ್ಕೆ ಹೋಗುವ ಮಾರ್ಗದಲ್ಲಿರುವ ಕೀನ್ನೂರ್ ಜಿಲ್ಲೆಯ ಖಾಬ್ ಸಂಗಮ್ ಸೇತುವೆಯ ಬಳಿಯ ಅದ್ಭುತ ರಸ್ತೆ ದೃಶ್ಯಗಳಂತಹ ದೃಶ್ಯಗಳಿರುವ ವೀಡಿಯೊಗಳನ್ನು ಅನೇಕ ಯೂಟ್ಯೂಬ್ ಚಾನೆಲ್‌ಗಳು ಪ್ರಕಟಿಸಿವೆ ಎಂದು ತಿಳಿದುಬಂದಿದೆ. ಆ ವೀಡಿಯೊಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಕಾಜಾ ಮಾರ್ಗದಲ್ಲಿ ಖಾಬ್ ಸಂಗಮ್ ಸೇತುವೆಯ ಬಳಿ ರಸ್ತೆ ನಿರ್ಮಿಸಿದ ದೃಶ್ಯಗಳನ್ನು ಗೂಗಲ್ ಮ್ಯಾಪ್‌ನಲ್ಲಿಯೂ ಕಾಣಬಹುದು. ಋಷಿಕೇಶ-ಕೇದಾರನಾಥ ನಡುವಿನ ರಸ್ತೆ ದೃಶ್ಯಗಳನ್ನು ಇಲ್ಲಿ ಕಾಣಬಹುದು. ಈ ವಿವರಗಳನ್ನು ಆಧರಿಸಿ, ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಕಂಡುಬಂದಿರುವುದು ಋಷಿಕೇಶ-ಕೇದಾರನಾಥ ನಡುವೆ ರಸ್ತೆಯ ದೃಶ್ಯಗಳಲ್ಲ ಎಂದು ಖಚಿತವಾಗಿ ಹೇಳಬಹುದು.
ಅಂತಿಮವಾಗಿ, ಹಿಮಾಚಲ ಪ್ರದೇಶದ ಖಾಬ್ ಸಂಗಮ್ ಸೇತುವೆ ಬಳಿಯ ರಸ್ತೆ ದೃಶ್ಯಗಳನ್ನು ರಿಷಿಕೇಶ-ಕೇದಾರನಾಥ ನಡುವೆ ನಿರ್ಮಿಸಲಾದ ಹೊಸ ರಸ್ತೆಯ ದೃಶ್ಯಗಳೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.