Fake News - Kannada
 

ಗಣೇಶನ ಚಿತ್ರವಿರುವ ಇಂಡೋನೇಷ್ಯಾದ ಕರೆನ್ಸಿ ನೋಟನ್ನು 2008 ರಲ್ಲಿ ಹಿಂತೆಗೆದುಕೊಳ್ಳಲಾಯಿತು

0

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಕರೆನ್ಸಿ ನೋಟುಗಳ ಮೇಲೆ ಮಹಾತ್ಮ ಗಾಂಧಿಯವರ ಚಿತ್ರಗಳನ್ನು ಮುದ್ರಿಸುವಂತೆ ಗಣೇಶ ಮತ್ತು ಲಕ್ಷ್ಮಿ ದೇವಿಯ ಚಿತ್ರಗಳ ಮುದ್ರಿಸಬೇಕೆಂದು ಪ್ರಧಾನಿ ಮೋದಿಯವರಿಗೆ ಮನವಿ ಮಾಡಿದರು, ಇದು ದೇಶದ ಆರ್ಥಿಕತೆಯನ್ನು ಮರಳಿ ಹಳಿಗೆ ತರಲು ಸಹಾಯ ಮಾಡುತ್ತದೆ ಎಂದು ಸಲಹೆ ನೀಡುತ್ತಾ, 2% ಕ್ಕಿಂತ ಕಡಿಮೆ ಹಿಂದೂಗಳು ಮತ್ತು 85% ಕ್ಕಿಂತ ಹೆಚ್ಚು ಮುಸ್ಲಿಮರನ್ನು ಹೊಂದಿರುವ ಇಂಡೋನೇಷಿಯ ಮುಸ್ಲಿಂ ರಾಷ್ಟ್ರವಾಗಿದ್ದರೂ, ಅದರ ಕರೆನ್ಸಿ ನೋಟುಗಳಲ್ಲಿ ಗಣೇಶನ ಚಿತ್ರಗಳಿವೆ ಎಂದು ಹೇಳಿದ್ದರು. ಈ ಸಂದರ್ಭದಲ್ಲಿ, ಹಲವಾರು ಜನರು ಗಣೇಶನ ಚಿತ್ರದೊಂದಿಗೆ ಕರೆನ್ಸಿ ನೋಟಿನ ಚಿತ್ರವನ್ನು ಹಂಚಿಕೊಂಡಿದ್ದಾರೆ, ಇದು ಇಂಡೋನೇಷಿಯನ್ ಕರೆನ್ಸಿ ನೋಟು 20,000 ಇಂಡೋನೇಷಿಯನ್ ರೂಪಾಯಿ (IDR) ಎಂದು ಹೇಳಿಕೊಂಡಿದ್ದಾರೆ. ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾನೆ: ಹಿಂದೂ ದೇವರು ಗಣೇಶನ ಚಿತ್ರವನ್ನು ಹೊಂದಿರುವ ಇಂಡೋನೇಷಿಯಾದ ಕರೆನ್ಸಿ ನೋಟಿನ ಚಿತ್ರ.

ನಿಜಾಂಶ: 20,000 ರೂಪಾಯಿ ಮೌಲ್ಯದ ಇಂಡೋನೇಷಿಯನ್ ಕರೆನ್ಸಿ ನೋಟು (IDR) 1998 ರಲ್ಲಿ ಪರಿಚಯಿಸಲಾಯಿತು ಇದು ಗಣೇಶನ ಚಿತ್ರಣವನ್ನು ಹೊಂದಿದೆ. ಆದರೆ ಕರೆನ್ಸಿ ನೋಟುಗಳ ಭದ್ರತಾ ವೈಶಿಷ್ಟ್ಯಗಳಲ್ಲಿ ನಿಯಮಿತವಾದ ನವೀಕರಣಗಳ ಭಾಗವಾಗಿ ನಂತರ 2008 ರಲ್ಲಿ ಆ ನೋಟುಗಳನ್ನು ಹಿಂತೆಗೆದುಕೊಳ್ಳಲಾಯಿತು. ಪ್ರಸ್ತುತ ಇಂಡೋನೇಷ್ಯಾದಲ್ಲಿ ಚಲಾವಣೆಯಲ್ಲಿರುವ ಕರೆನ್ಸಿ ನೋಟುಗಳಲ್ಲಿ ಗಣೇಶನ ಚಿತ್ರವಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಮೊದಲಿಗೆ, ನಾವು ಈ ಕರೆನ್ಸಿ ನೋಟಿನ ವಿವರಗಳನ್ನು ನಾಣ್ಯಶಾಸ್ತ್ರ ವೆಬ್‌ಸೈಟ್ ನ್ಯೂಮಿಸ್ತಾದಲ್ಲಿ ಹುಡುಕಿದೆವು. Numista ಪ್ರಕಾರ, 20,000 ರೂಪಾಯಿ ಮೌಲ್ಯದ ಈ ಇಂಡೋನೇಷಿಯನ್ ಕರೆನ್ಸಿ ನೋಟು (IDR) ಇಂಡೋನೇಷಿಯಾದ ಸ್ವಾತಂತ್ರ್ಯ ಕಾರ್ಯಕರ್ತ ಮತ್ತು ಮಾಜಿ ಶಿಕ್ಷಣ ಸಚಿವ ಕಿ ಹಡ್ಜರ್ ದೇವಾಂತರ ಮತ್ತು ಗಣೇಶನ ಚಿತ್ರಗಳನ್ನು ಒಂದು ಬದಿಯಲ್ಲಿ ಮತ್ತು ನೋಟಿನ ಇನ್ನೊಂದು ಬದಿಯಲ್ಲಿ ತರಗತಿಯಲ್ಲಿರುವ ಮಕ್ಕಳ ಚಿತ್ರಗಳನ್ನು ಒಳಗೊಂಡಿದೆ.

Source: Numista

ಬ್ಯಾಂಕ್ ಇಂಡೋನೇಷ್ಯಾದ ಪ್ರಕಾರ, ಈ ನೋಟುಗಳನ್ನು 1998 ರಿಂದ ಜಾರಿಗೆ ಬರುವಂತೆ ಆದೇಶಿಸಲಾಗಿತ್ತು. ಆದರೆ ಭದ್ರತಾ ವೈಶಿಷ್ಟ್ಯಗಳಲ್ಲಿ ನಿಯಮಿತವಾದ ನವೀಕರಣಗಳ ಭಾಗವಾಗಿ ಇತರ ಮೂರು ಬ್ಯಾಂಕ್ ನೋಟುಗಳೊಂದಿಗೆ 2008 ರಲ್ಲಿ ಈ ನೋಟುಗಳನ್ನು ಹಿಂತೆಗೆದುಕೊಳ್ಳಲಾಯಿತು. ಈ ವಿಷಯದ ಬಗ್ಗೆ ಬ್ಯಾಂಕ್ ಇಂಡೋನೇಷ್ಯಾ ಪತ್ರಿಕಾ ಪ್ರಕಟಣೆಯನ್ನು ಇಲ್ಲಿ ನೋಡಬಹುದು.

ಆದರೂ, ಈ ನೋಟುಗಳನ್ನು ಹೊಸ ನೋಟುಗಳೊಂದಿಗೆ ವಿನಿಮಯ ಮಾಡಿಕೊಳ್ಳಲು ಸರ್ಕಾರವು 10 ವರ್ಷಗಳ ಗಡುವನ್ನು ನಿಗದಿಪಡಿಸಿತ್ತು, ಅಂದರೆ 31 ಡಿಸೆಂಬರ್ 2018 ರವರೆಗೆ ಸಮಯವಿತ್ತು. ಬ್ಯಾಂಕ್ ಇಂಡೋನೇಷ್ಯಾ, 03 ಡಿಸೆಂಬರ್ 2018 ರಂದು ಪತ್ರಿಕಾ ಪ್ರಕಟಣೆಯಲ್ಲಿ, 31 ಡಿಸೆಂಬರ್ 2018 ರ ಒಳಗೆ  ಹಿಂಪಡೆದ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಜನರಿಗೆ ನೆನಪಿಸಿದೆ. ಪ್ರಸ್ತುತ ಇಂಡೋನೇಷ್ಯಾದಲ್ಲಿ ಚಲಾವಣೆಯಲ್ಲಿರುವ 20,000 ರೂಪಾಯಿಯ ನೋಟುಗಳ ಚಿತ್ರಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಪ್ರಸ್ತುತ ಇಂಡೋನೇಷ್ಯಾದಲ್ಲಿ ಚಲಾವಣೆಯಲ್ಲಿರುವ ಯಾವುದೇ ಕರೆನ್ಸಿ ನೋಟುಗಳಲ್ಲಿ ಗಣೇಶನ ಚಿತ್ರವಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಗಣೇಶನ ಚಿತ್ರವನ್ನು ಹೊಂದಿರುವ ಇಂಡೋನೇಷ್ಯಾ ಕರೆನ್ಸಿ ನೋಟು 2008 ರಲ್ಲಿ ಹಿಂತೆಗೆದುಕೊಳ್ಳಲಾಯಿತು.

Share.

Comments are closed.

scroll