Fake News - Kannada
 

ಇದು ಟಿ20 ವಿಶ್ವಕಪ್‌ನಲ್ಲಿ ಪಾಕ್ ವಿರುದ್ದ ಜಿಂಬಾಬ್ವೆ ಗೆದ್ದಾಗ ಜಿಂಬಾಬ್ವೆಯ ಟಿವಿ ನಿರೂಪಕನ ಪ್ರತಿಕ್ರಿಯೆಯ ವಿಡಿಯೋವಲ್ಲ

0

2022 ರ ಟಿ 20 ವಿಶ್ವಕಪ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ವಿರುದ್ದ ಜಿಂಬಾಬ್ವೆ ಜಯಗಳಿಸಿದ್ದ ಸುದ್ದಿಯನ್ನು ಕೇಳಿದ ಜಿಂಬಾಬ್ವೆಯ ಟಿವಿ ನಿರೂಪಕನ ಪ್ರತಿಕ್ರಿಯೆ ಎಂದು ಹೇಳುವ ವಿಡಿಯೋವೊಂದು ಸಾಮಾಜಿಕ ಮಾಧ್ಯದಲ್ಲಿ ಪ್ರಸಾರವಾಗುತ್ತಿದೆ. ಟಿ 20 ವಿಶ್ವಕಪ್‍ನಲ್ಲಿ ಜಿಂಬಾಬ್ವೆ ತಂಡವು ಪಾಕ್ ವಿರುದ್ದ 1 ರನ್ ಅಂತರದಿಂದ ಜಯಸಾಧಿಸಿದ್ದಕ್ಕೆ ಸುದ್ದಿ ನಿರೂಪಕರೊಬ್ಬರು ಸಂತಸ ತಾಳಲಾರದೆ ನಗುತ್ತಿದ್ದಾರೆ ಎಂದು ಪ್ರತಿಪಾದಿಸಿ ವೀಡಿಯೊ ಪೋಸ್ಟ್‍ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‍ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: 2022 ರ T20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಜಿಂಬಾಬ್ವೆ ಕ್ರಿಕೆಟ್ ತಂಡ ಗೆದ್ದ ನಂತರ ಜಿಂಬಾಬ್ವೆಯ ಸುದ್ದಿ ನಿರೂಪಕ ನಗುತ್ತಿರುವ ವೀಡಿಯೊ.

ನಿಜಾಂಶ: ಈ ವೀಡಿಯೊ ಅಕ್ಟೋಬರ್ 2020 ರದ್ದು ಮತ್ತು ವೀಡಿಯೊದಲ್ಲಿರುವ ವ್ಯಕ್ತಿ ಅಕ್ರೊಬೆಟೊ, ಘಾನಾದ ಟಿವಿ ನಿರೂಪಕ. ಅವರು ಯುಟಿವಿ ಘಾನಾದಲ್ಲಿ ‘ದಿ ರಿಯಲ್ ನ್ಯೂಸ್’ ಎಂಬ ಸುದ್ದಿ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ. ಮೂಲ ವೀಡಿಯೊದಲ್ಲಿ, ಅವರು ತಮ್ಮ ಸುದ್ದಿ ಕಾರ್ಯಕ್ರಮದ ಸಮಯದಲ್ಲಿ ಫುಟ್‌ಬಾಲ್ ಕ್ಲಬ್‌ಗಳ ಹೆಸರನ್ನು ಓದುವಾಗ ನಗುತ್ತಾರೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಗೂಗಲ್‍ನಲ್ಲಿ ಕೀವರ್ಡ್ಗಳ ಸಹಾಯದಿಂದ ಸರ್ಚ್ ಮಾಡಿದಾಗ ವೈರಲ್ ವೀಡಿಯೊದ ವಿಸ್ತೃತ ಆವೃತ್ತಿ ಲಭ್ಯವಾಗಿದೆ. ‘ಅಕ್ರೊಬೆಟೊ ‘ಹತ್ಯಾಕಾಂಡ’ ಹೆಸರಿನಲ್ಲಿ ಈ ಯೂಟ್ಯೂಬ್ ವೀಡಿಯೋವನ್ನು 31 ಅಕ್ಟೋಬರ್ 2020 ರಂದು UTV ಘಾನಾ ಆನ್‌ಲೈನ್ ಅಪ್‌ಲೋಡ್ ಮಾಡಿದೆ.

ಯುನೈಟೆಡ್ ಟೆಲಿವಿಷನ್ ಘಾನಾ (UTV ಘಾನಾ) ಘಾನಾದಲ್ಲಿ ದೂರದರ್ಶನ ಪ್ರಸಾರಕವಾಗಿದೆ. ವೀಡಿಯೊದಲ್ಲಿ ಕಾಣಿಸಿಕೊಂಡಿರುವ ಸುದ್ದಿ ನಿರೂಪಕ ಅಕ್ರೊಬೆಟೊ, ಯುಟಿವಿ ಘಾನಾದಲ್ಲಿ ‘ದಿ ರಿಯಲ್ ನ್ಯೂಸ್‘ ಎಂಬ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ.

ಈ ವೀಡಿಯೊದಲ್ಲಿ, Acrobeto ಫುಟ್‌ಬಾಲ್ ಕ್ಲಬ್‌ಗಳ ಹೆಸರನ್ನು ಓದುವುದನ್ನು ಮತ್ತು ಅವುಗಳನ್ನು ತಪ್ಪಾಗಿ ಉಚ್ಚರಿಸುವುದನ್ನು ಕಾಣಬಹುದು. ವೀಡಿಯೊದ ಒಂದು ಹಂತದಲ್ಲಿ, ಅವರು ‘ಐನ್‌ಟ್ರಾಕ್ಟ್ ಫ್ರಾಂಕ್‌ಫರ್ಟ್’ ಹೆಸರನ್ನು ಓದುವಾಗ ನಗುತ್ತಾರೆ. ಇದು ವೀಡಿಯೊದಲ್ಲಿ 0:50 ಮಾರ್ಕ್‌ನಲ್ಲಿ ಕಾಣಬಹುದಾಗಿದೆ ಮತ್ತು ವೈರಲ್ ವೀಡಿಯೊದಲ್ಲಿ ಕಂಡುಬರುವುದು ಇದೇ ವಿಡಿಯೋ ಎಂಬುದು ಸ್ಪಷ್ಟವಾಗಿದೆ. ಈ ಹಳೆಯ ವಿಡಿಯೋವನ್ನು ಟಿ 20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ದ ಜಿಂಬಾಬ್ವೆ ಜಯಗಳಿಸಿದ ನಂತರ ಜಿಂಬಾಬ್ವೆಯ ಸುದ್ದಿ ನಿರೂಪಕನ ಪ್ರತಿಕ್ರಿಯೆಯಾಗಿ ಅಕ್ರೊಬೆಟೊದ ಈ ಹಳೆಯ ವೀಡಿಯೊವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2020 ರ ಹಳೆಯ ವೀಡಿಯೊದ ದೃಶ‍್ಯವನ್ನು ತಿರುಚಿ ಘಾನಾದ ಟಿವಿ ನಿರೂಪಕ, ಪಾಕಿಸ್ತಾನದ ವಿರುದ್ಧ ಜಿಂಬಾಬ್ವೆ ಕ್ರಿಕೆಟ್ ತಂಡ ಜಯಗಳಿಸಿದ ನಂತರ ಸುದ್ದಿ ನಿರೂಪಕ ನಗುತ್ತಿರುವ ವಿಡಿಯೋ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

Share.

Comments are closed.

scroll