Fake News - Kannada
 

ಮಾಜಿ ರಾಜ್ಯಸಭಾ ಸಂಸದ ಮಜೀದ್ ಮೆಮನ್ ಅಜ್ಮಲ್ ಕಸಬ್ ಅವರ ವಕೀಲರಾಗಿರಲಿಲ್ಲ

0

2024 ರ ಲೋಕಸಭಾ ಚುನಾವಣೆ  ನಡುವೆಯೂ, ಅಜ್ಮಲ್ ಕಸಬ್ ಅವರ ವಕೀಲ ಮಜೀದ್ ಮೆಮನ್ ಅವರಿಗೆ ಶರದ್ ಪವಾರ್ ಅವರ ಎನ್‌ಸಿಪಿ ರಾಜ್ಯಸಭಾ ಸಂಸದನನ್ನಾಗಿಸಿದೆ. ಇತ್ತ ಬಿಜೆಪಿ  ಕಸಬ್ ವಿರುದ್ಧ ವಿಚಾರಣೆ ನಡೆಸಿ ಮರಣದಂಡನೆ ಗುರಿಪಡಿಸಿದ ಉಜ್ವಲ್ ನಿಕಮ್‌ಗೆ ಎಂಪಿ ಟಿಕೆಟ್ ನೀಡಿದೆ ಎಂದು ಹೇಳುವ ಪೋಸ್ಟ್ ಹರಿದಾಡುತ್ತಿದ್ದು ಇದನ್ನು ನೋಡಬಹುದು. ಹಾಗಾದರೆ ಈ  ಪೋಸ್ಟ್‌ನಲ್ಲಿ ಮಾಡಲಾದ ಕ್ಲೈಮ್ ಅನ್ನು ಪರಿಶೀಲಿಸೋಣ.

ಕ್ಲೇಮ್ : ಶರದ್ ಪವಾರ್ ಅವರ ಎನ್ಸಿಪಿ  ಅಜ್ಮಲ್ ಕಸಬ್‌ನ ವಕೀಲರಾದ ಮಜೀದ್ ಮೆಮನ್ ನನ್ನ  ರಾಜ್ಯಸಭಾ ಸಂಸದರನ್ನಾಗಿಸಿದರೆ, ಬಿಜೆಪಿಯು ಕಸಬ್‌ನ ಮರಣದಂಡನೆಯನ್ನು ವಿಧಿಸಿದ  ಪ್ರಾಸಿಕ್ಯೂಟರ್ ಉಜ್ವಲ್ ನಿಕಮ್‌ಗೆ ಎಂಪಿ ಟಿಕೆಟ್ ನೀಡುತ್ತದೆ.

ಫ್ಯಾಕ್ಟ್ : ಭಾರತದ ಪ್ರಮುಖ ಕ್ರಿಮಿನಲ್ ವಕೀಲರಾದ ಮಜೀದ್ ಮೆಮನ್ ಮತ್ತು  ಅಜ್ಮಲ್ ಕಸಬ್ ವಿಚಾರಣೆಯೂ ಯಾವುದೇ ಸಂಬಂಧವಿಲ್ಲ. ಏಪ್ರಿಲ್ 2014 ರಿಂದ ಏಪ್ರಿಲ್ 2020 ರವರೆಗೆ ಅವರು NCP ಯಿಂದ ರಾಜ್ಯಸಭಾ ಸಂಸದರಾಗಿ ಸೇವೆ ಸಲ್ಲಿಸಿದರು. 2022 ರಲ್ಲಿ ಮಜೀದ್ ಮೆಮನ್ NCP ತೊರೆದು ತೃಣಮೂಲ ಕಾಂಗ್ರೆಸ್ (TMC) ಗೆ ಸೇರಿದರು. ಮುಂಬೈ 26/11 ಭಯೋತ್ಪಾದನಾ ದಾಳಿಯ ವಿಚಾರಣೆಯ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕಮ್ ಅವರಿಗೆ ಮುಂಬೈ ಉತ್ತರ ಸೆಂಟ್ರಲ್ ಸಂಸದ ಟಿಕೆಟ್ ಅನ್ನು ಬಿಜೆಪಿ ನೀಡಿದೆ.  ಹಾಗಾಗಿ ಪೋಸ್ಟ್‌ನಲ್ಲಿ ಹೇಳಿರುವುದು ತಪ್ಪಾಗಿದೆ.

ವೈರಲ್ ಕ್ಲೈಮ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ನಾವು ಸಂಬಂಧಿತ ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ ಮತ್ತು ಬಿಜೆಪಿಯು ವಕೀಲ ಉಜ್ವಲ್ ನಿಕಮ್ ಅವರಿಗೆ ಮುಂಬೈ ಉತ್ತರ  ಸೆಂಟ್ರಲ್‌ನಿಂದ ಲೋಕಸಭೆಯ ಸಂಸದ ಸ್ಥಾನವನ್ನು ನೀಡಿದೆ ಎಂದು ಕಂಡುಬಂದಿದೆ. ಉಜ್ವಲ್ ನಿಕಮ್ ಅವರು ಮುಂಬೈ 26/11 ಭಯೋತ್ಪಾದಕ ದಾಳಿಯ ವಿಚಾರಣೆಯಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ರಾಷ್ಟ್ರವ್ಯಾಪಿ ಮನ್ನಣೆ ಗಳಿಸುದರ ಜೊತೆಗೆ  ಅಜ್ಮಲ್ ಕಸಬ್‌ಗೆ ಮರಣದಂಡನೆ ಶಿಕ್ಷೆಯನ್ನುವಿಧಿಸಿದರು.  1993 ರ ಮುಂಬೈ ಸರಣಿ ಸ್ಫೋಟಗಳು, ಶಕ್ತಿ ಮಿಲ್ಸ್ ಸಾಮೂಹಿಕ ಅತ್ಯಾಚಾರ ಪ್ರಕರಣ, ಮತ್ತು ಅಹ್ಮದ್‌ನಗರ ಅತ್ಯಾಚಾರ ಮತ್ತು ಕೊಲೆ ಪ್ರಕರಣ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ನಂತಹ ಹಲವಾರು ಇತರ ಉನ್ನತ-ಪ್ರೊಫೈಲ್ ಪ್ರಕರಣಗಳಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಸೇವೆ ಸಲ್ಲಿಸಿದ್ದಾರೆ.

ನಮ್ಮಿ ಪರಿಶೋಧನಾ ಸಂದರ್ಭದಲ್ಲಿ, 26/11 ಮುಂಬೈ ಭಯೋತ್ಪಾದನಾ ದಾಳಿ ಪ್ರಕರಣದಲ್ಲಿ ಅಜ್ಮಲ್ ಕಸಬ್ ಅನ್ನು ಸಮರ್ಥಿಸಲು ಯಾವುದೇ ವಕೀಲರು ಆಸಕ್ತಿ ಹೊಂದಿರಲಿಲ್ಲ ಈ  ಕಾರಣ, ನ್ಯಾಯಯುತ ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ಕಾನೂನು ನೆರವು ನೀಡಲು ನ್ಯಾಯಾಲಯವು ಹಲವಾರು ವಕೀಲರನ್ನು (ಇಲ್ಲಿ, ಇಲ್ಲಿ & ಇಲ್ಲಿ) ನೇಮಿಸಿತು. ಪ್ರತಿ ಆರೋಪಿಗೆ ನ್ಯಾಯಯುತ ವಿಚಾರಣೆಗೆ ಒಳಗಾಗುವ ಹಕ್ಕಿದೆ ಮತ್ತು ಆರೋಪಿಯನ್ನು ರಕ್ಷಿಸದಿರುವುದು ಅಸಾಧ್ಯ. ಅಂತಹವರಲ್ಲಿ ಈ  ಪ್ರಕರಣದಲ್ಲಿ ಭಾಗಿಯಾಗಿರುವ ಪ್ರಮುಖ ವಕೀಲರು ಅಬ್ಬಾಸ್ ಕಾಜ್ಮಿ, ಆರಂಭದಲ್ಲಿ ನ್ಯಾಯಾಲಯದಿಂದ ಕಸಬ್‌ನ ರಕ್ಷಣಾ ವಕೀಲರಾಗಿ ನೇಮಕಗೊಂಡರು ಆದರೆ ನಂತರ ಅಸಹಕಾರಕ್ಕಾಗಿ ತೆಗೆದುಹಾಕಲಾಯಿತು; ಕೆ.ಪಿ. ಅಬ್ಬಾಸ್ ಕಜ್ಮಿಯ ಪದಚ್ಯುತಿ ನಂತರ ನೇಮಕಗೊಂಡವರು  ಪವಾರ್, ಇವರು  ಕಸಬ್ ವಿಚಾರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.  ಬಾಂಬೆ ಹೈಕೋರ್ಟಿನಲ್ಲಿ ಕಸಬ್ ಪರ ವಾದಿಸಿದ ಅಮೀನ್ ಸೋಲ್ಕರ್ ಮತ್ತು ಫರ್ಹಾನಾ ಶಾ; ಮತ್ತು ರಾಜು ರಾಮಚಂದ್ರನ್, ಮರಣದಂಡನೆಯ ವಿರುದ್ಧದ ಮೇಲ್ಮನವಿಯ ಸಂದರ್ಭದಲ್ಲಿ ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಕಸಬ್‌ನ ವಕೀಲರಾಗಿ ಸೇವೆ ಸಲ್ಲಿಸಿದರು. ಸುಪ್ರೀಂ ಕೋರ್ಟ್‌ನಲ್ಲಿ ಅಜ್ಮಲ್ ಕಸಬ್‌ಗೆ ಮರಣದಂಡನೆ ಶಿಕ್ಷೆಯ ಪರವಾಗಿ ವಾದಿಸಿದ ವಕೀಲರನ್ನು ಗೋಪಾಲ್ ಸುಬ್ರಮಣಿಯಂ ನೇತೃತ್ವ ವಹಿಸಿದ್ದರು.

ಭಾರತದ ಪ್ರಮುಖ ಕ್ರಿಮಿನಲ್ ವಕೀಲರಾದ ಮಜೀದ್ ಮೆಮನ್ ಅವರು ಅಜ್ಮಲ್ ಕಸಬ್ ಗೂ ಯಾವುದೇ  ಸಂಬಂಧವಿಲ್ಲ. ಕಸಬ್ ನನ್ನ (ಇಲ್ಲಿ ಮತ್ತು ಇಲ್ಲಿ) ರಕ್ಷಿಸಲು ಅವರಿಗೆ ಕಿಂಚಿತ್ತೂ ಇಷ್ಟವಿಲ್ಲ ಎಂದು ಅವರು ಈಗಾಗಲೇ ತಿಳಿಸಿದ್ದಾರೆ. ಮಜೀದ್ ಮೆಮನ್ ಅವರು 1993 ರ ಮುಂಬೈ ಸರಣಿ ಸ್ಫೋಟದಂತಹ ವಿವಿಧ ಹೈ ಪ್ರೊಫೈಲ್ ಪ್ರಕರಣಗಳನ್ನು ವ್ಯವಹರಿಸಿದ್ದಾರೆ, ಆ ಪ್ರಕರಣದ ಅನೇಕ ಆರೋಪಿಗಳನ್ನು ಪ್ರತಿನಿಧಿಸಿದ್ದಾರೆ.  ಅಪರಾಧ ಪ್ರಕರಣಗಳಲ್ಲಿ ಹಲವಾರು ಚಲನಚಿತ್ರ ತಾರೆಯರು ಮತ್ತು ಪ್ರಮುಖ ವ್ಯಕ್ತಿಗಳನ್ನು ಸಮರ್ಥಿಸಿಕೊಂಡಿದ್ದಾರೆ. ಮಜೀದ್ ಮೆಮನ್ ಅವರು ಏಪ್ರಿಲ್ 2014 ರಿಂದ ಏಪ್ರಿಲ್ 2020 ರವರೆಗೆ (ಇಲ್ಲಿ ಮತ್ತು ಇಲ್ಲಿ) NCP ಯಿಂದ ರಾಜ್ಯಸಭಾ MP ಯಾಗಿದ್ದರು. 2022 ರಲ್ಲಿ ಮಜೀದ್ ಮೆಮನ್ ಎನ್‌ಸಿಪಿ ತೊರೆದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸೇರಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಮಾಜಿ ರಾಜ್ಯಸಭಾ ಸಂಸದ ಮಜೀದ್ ಮೆಮನ್ ಅಜ್ಮಲ್ ಕಸಬ್ ಅವರ ವಕೀಲರಾಗಿರಲಿಲ್ಲ.

Share.

Comments are closed.

scroll