Fake News - Kannada
 

800 ಜನರ ತಂದೆಯಾದ ಮಿಲ್ಕ್ ಡೆಲಿವರಿ ಬಾಯ್ ಎಂಬುದು ನಿಜವಲ್ಲ: ವಿಡಂಬನ ವೆಬ್‌ಸೈಟ್ ಬರೆದ ಸ್ಟೊರಿ ಅಷ್ಟೇ

0

ಒಂದಲ್ಲ, ಎರಡಲ್ಲ  800 ಮಂದಿಗೆ ತಂದೆಯಾದ ಹಾಲು ಮಾರಾಟಗಾರ. ಆ ಸಮಯದಲ್ಲಿ ಡಿಎನ್‌ಎಯಂತಹ ಯಾವುದೇ ಪರೀಕ್ಷೆಗಳು ಇರಲಿಲ್ಲ. ಆತ ಅಷ್ಟೇನು  ಸುರಸುಂದರನೂ ಅಲ್ಲ ಆದರೆ ಮಹಿಳೆಯರೊಂದಿಗೆ ಅತ್ಯಂತ  ಸಲಿಗೆಯಿಂದ ಇರುತ್ತಿದ್ದ ಎಂಬ ಸುದ್ದಿಯನ್ನು ಹಲವು ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಪ್ರತಿಪಾದನೆ: ದಕ್ಷಿಣ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಪ್ರದೇಶದಲ್ಲಿ 800 ಜನರ ತಂದೆಯಾಗಿರುವ ಹಾಲು ವಿತರಣಾ ಹುಡುಗ.

ನಿಜಾಂಶ: ಇದು ಸತ್ಯ ಸುದ್ದಿಯಲ್ಲ. ಈ ಸುದ್ದಿಯನ್ನು 24 ಡಿಸೆಂಬರ್ 2021 ರಂದು ‘ಡೈಲಿ ನ್ಯೂಸ್ ರಿಪೋರ್ಟೆಡ್’ ಎಂಬ ವಿಡಂಬನಾತ್ಮಕ ಸುದ್ದಿ ವೆಬ್‌ಸೈಟ್ ಪ್ರಕಟಿಸಿದೆ. ಅಲ್ಲಿದ್ದ ಅನೇಕರು ನಿಜವೆಂದು ಭಾವಿಸಿ ಪ್ರಕಟಿಸಿದ್ದಾರೆ.  ಆದರೆ ಈ ಲೇಖನದಲ್ಲಿರುವ ಫೋಟೋ ರಾಂಡಾಲ್ ಜೆಫ್ರೀಸ್ ಅವರದ್ದಲ್ಲ. ಈ ಫೋಟೋವನ್ನು ಸ್ಟಾಕ್ ಫೋಟೋ ವೆಬ್‌ಸೈಟ್‌ನಿಂದ ತೆಗೆದುಕೊಳ್ಳಲಾಗಿದೆ. ಹಾಗಾಗಿ ಈ ಲೇಖನದಲ್ಲಿರುವ ಸುದ್ದಿ ತಪ್ಪಾಗಿದೆ.

ಫೇಸ್‌ಬುಕ್ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ಸುದ್ದಿಯ ಕುರಿತು ವಿವರಗಳಿಗಾಗಿ ಗೂಗಲ್‌ ನಲ್ಲಿ ಹುಡುಕಿದಾಗ ಮೊದಲು ಡಿಸೆಂಬರ್ 24, 2021 ರಂದು ಡೈಲಿ ನ್ಯೂಸ್ ವೆಬ್‌ಸೈಟ್‌ ಈ ಸುದ್ದಿಯನ್ನು ಪ್ರಕಟಿಸಲಾಗಿದೆ ಎಂದು ತಿಳಿದುಬಂದಿದೆ. ಆದರೆ ಪ್ರಮುಖ ಸುದ್ದಿ ಸಂಸ್ಥೆಗಳು ಅಥವಾ ವೆಬ್‌ಸೈಟ್‌ಗಳು ಇಂತಹ ಸುದ್ದಿಗಳನ್ನು ಎಲ್ಲಿಯೂ ಪ್ರಕಟಿಸಿರುವುದಿಲ್ಲ. ಇಂತಹ ಘಟನೆ ನಿಜವಾಗಿಯೂ ನಡೆದಿದ್ದರೆ ಜಗತ್ತಿನ ಎಲ್ಲಾ ಪ್ರಮುಖ ಸುದ್ದಿ ಸಂಸ್ಥೆಗಳು ಈ ಸುದ್ದಿಯನ್ನು ಪ್ರಕಟಿಸುತ್ತಿದ್ದವು, ಆದರೆ ಅದು ಸಂಭವಿಸಿಲ್ಲ. ‘Randall Jeffries’ ಅವರ ಮೂಲ ಹೆಸರಿನೊಂದಿಗೆ ಯಾವುದೇ ಸುದ್ದಿ ಲೇಖನಗಳು ಕಂಡುಬಂದಿಲ್ಲ.

ಆದರೂ, ಮೂಲತಃ ಸುದ್ದಿಯನ್ನು ಪ್ರಕಟಿಸಿದ ಡೈಲಿ ನ್ಯೂಸ್ ರಿಪೋರ್ಟೆಡ್ ವೆಬ್‌ಸೈಟ್‌ನ  ಬಗ್ಗೆ  ಶೋದನೆ ನಡೆಸಿದಾಗ ಈ ವೆಬ್‌ಸೈಟ್ ಕಾಲ್ಪನಿಕ ಮತ್ತು ಹಾಸ್ಯವನ್ನು ಪ್ರಕಟಿಸುತ್ತದೆ  ಎಂದು ತಿಳಿದುಬಂದಿದೆ. ಅಲ್ಲದೆ, ಅವರ ಲೇಖನಗಳಲ್ಲಿ ಉಲ್ಲೇಖಿಸಿರುವ ಯಾವೊಂದು  ಹೆಸರುಗಳು ನಿಜವಲ್ಲ, ಅವು ಕೇವಲ ಕಾಲ್ಪನಿಕ ಹೆಸರುಗಳು. ಈ ವಿವರಗಳನ್ನು ಆಧರಿಸಿ, ಡೈಲಿ ನ್ಯೂಸ್ ರಿಪೋರ್‍ಟೆಡ್ ವೆಬ್‌ಸೈಟ್ ಪ್ರಕಟಿಸಿದ ಈ ಲೇಖನವು ನಿಜವಾದ ಘಟನೆಯಲ್ಲ ಎಂದು ಖಚಿತವಾಗಿ ಹೇಳಬಹುದು.

ಲೇಖನದಲ್ಲಿ ಪ್ರಕಟವಾಗಿರುವ ‘ಮಿಲ್ಕ್ ಮ್ಯಾನ್’ ವ್ಯಕ್ತಿ ಫೋಟೋ ಹುಡುಕುತ್ತಿದ್ದ ವೇಳೆ ಸ್ಟಾಕ್ ಫೋಟೋ ವೆಬ್ ಸೈಟ್ ನಿಂದ ತೆಗೆದಿರುವುದು ಗೊತ್ತಾಗಿದೆ. ಇದೇ ಸುದ್ದಿಯನ್ನು ವಿಡಿಯೋ ರೂಪದಲ್ಲಿ ಕೂಡ ಪ್ರಕಟಿಸಲಾಗಿತ್ತು. ಇದು ‘ಮಿಲ್ಕ್ ಮ್ಯಾನ್’ ನ ಅನೇಕ ಫೋಟೋಗಳನ್ನು ತೋರಿಸುತ್ತದೆ. ಆದರೆ, ಇವೆಲ್ಲವೂ ಪ್ರತ್ಯೇಕ ವೆಬ್‌ಸೈಟ್‌ಗಳು ಮತ್ತು ಸ್ಟಾಕ್ ಫೋಟೋ ವೆಬ್‌ಸೈಟ್‌ಗಳಿಂದ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಇವುಗಳನ್ನು ಇಲ್ಲಿ, ಇಲ್ಲಿ, ಇಲ್ಲಿ, ಕಾಣಬಹುದು.

ಒಟ್ಟಾರೆಯಾಗಿ ಈ ವಿಡಂಬನಾತ್ಮಕ ವೆಬ್‌ಸೈಟ್ ಒಂದು  ಬರೆದ ವ್ಯಂಗ್ಯ ಲೇಖನವನ್ನು 800 ಜನರ ತಂದೆಯಾಗಿರುವ ಹಾಲು ವಿತರಣಾ ಯುವಕ ಎಂದು ತಪ್ಪಾಗಿ ಷೇರ್‍ ಮಾಡುತ್ತಿದ್ದಾರೆ.

Share.

About Author

Comments are closed.

scroll