Fake News - Kannada
 

2018 ರಲ್ಲಿ ಸ್ಪೇನ್‌ನಲ್ಲಿ ನಡೆದಿದ್ದ ನೃತ್ಯ ಕಾರ್ಯಕ್ರಮದ ವಿಡಿಯೊವನ್ನು ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಸಂಭ್ರಮಾಚರಣೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

0

ಭಾರತೀಯ ನೃತ್ಯ ತಂಡವೊಂದು ಸ್ಪೇನ್‌ ನ ಬೀದಿಗಳಲ್ಲಿ ನೃತ್ಯ ಮಾಡುತ್ತಿರುವ ವಿಡಿಯೋವನ್ನು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುತ್ತಿರುವುದಕ್ಕಾಗಿ ಸ್ಪೇನ್‌ ನಲ್ಲಿ ಸಂಭ್ರಮಾಚರಣೆ ಮಾಡಲಾಗಿದೆ ಎಂದು ಹೇಳಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಸಂಭ್ರಮವನ್ನು ಸ್ಪೇನ್‌ನಲ್ಲಿ ಭಾರತೀಯರು ಆಚರಿಸುತ್ತಿದ್ದಾರೆ.

ನಿಜಾಂಶ: ಪೋಸ್ಟ್‌ ನಲ್ಲಿ ತೋರಿಸಿರುವ ವಿಡಿಯೊ 2018 ರಲ್ಲಿ ಸ್ಪೇನ್‌ ನಲ್ಲಿ ನಡೆಸಿದ ಅಂತಾರಾಷ್ಟ್ರೀಯ ಜಾನಪದ ಸಂಗೀತ ಉತ್ಸವಕ್ಕೆ ಸಂಬಂಧಿಸಿದೆ. ಆದ್ದರಿಂದ ಪೋಸ್ಟ್‌ ನಲ್ಲಿ ಮಾಡಲಾಗಿರುವ ಪ್ರತಿಪಾದನೆ ತಪ್ಪಾಗಿದೆ.

ಪೋಸ್ಟ್ ಮಾಡಿದ ವಿಡಿಯೊದಲ್ಲಿನ ಸ್ಕ್ರೀನ್‌ ಶಾಟ್‌ ಗಳನ್ನು ರಿವರ್ಸ್ ಇಮೇಜ್ ಮೂಲಕ ಹುಡುಕಿದಾಗ, ‘ಸ್ವರ ಗಾಂಧಾರ್ ಢೋಲ್‌ ತಾಶಾ ಪಾಠಕ್’ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಇದೇ ರೀತಿಯ ದೃಶ್ಯಗಳನ್ನು ತೋರಿಸುವ ದೃಶ್ಯಗಳು ದೊರೆತಿವೆ. ವಿಡಿಯೊಗಳನ್ನು ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು. 2018 ರಲ್ಲಿ ಸ್ಪೇನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಜಾನಪದ ಸಂಗೀತೋತ್ಸವದಲ್ಲಿ ಮುಂಬೈ ಮೂಲದ ನೃತ್ಯ ತಂಡವೊಂದು ‘ಸ್ವರ ಗಾಂಧಾರ್ ಢೋಲ್‌ ತಾಶಾ ಪಾಠಕ್’ ನೃತ್ಯ ಕಾರ್ಯಕ್ರಮವನ್ನು ಪ್ರದರ್ಶಿಸಿತು. ಪೋಸ್ಟ್‌ ನಲ್ಲಿ ತೋರಿಸಿರುವ ವಿಡಿಯೊ ಸ್ಪೇನ್‌ ನ ಸಂಗೀತೋತ್ಸವ ಕಾರ್ಯಕ್ರಮಕ್ಕೆ ಸಂಬಂಧಿಸಿದೆ. ಸ್ಪೇನ್‌ ನಲ್ಲಿ ನಡೆದ ಅಂತಾರಾಷ್ಟ್ರೀಯ ಜಾನಪದ ಸಂಗೀತೋತ್ಸವದಲ್ಲಿ ಪ್ರದರ್ಶನ ನೀಡಲು ‘ಸ್ವರ ಗಾಂಧಾರ್ ಢೋಲ್‌ ತಾಶಾ ಪಾಠಕ್’ ನೃತ್ಯ ಗುಂಪಿನ ಆಯ್ಕೆಯ ಬಗ್ಗೆ ಮಾಹಿತಿಯನ್ನು ‘ಮಿಡ್-ಡೇ.ಕಾಮ್’ ಸುದ್ದಿ ವೆಬ್‌ಸೈಟ್ ಪ್ರಕಟಿಸಿದ ಲೇಖನದಲ್ಲಿ ಉಲ್ಲೇಖಿಸಲಾಗಿದೆ.

ಮುಂಬೈನ ಪ್ರಮುಖ ಹಬ್ಬಗಳಾದ ಗುಡಿ ಪಾಡ್ವಾ ಮತ್ತು ಗಣೇಶ ಚತುರ್ಥಿ ಹಬ್ಬಗಳ ಸಂಭ್ರಮವು ಢೋಲ್‌ಗಳ ಅದ್ಭುತ ಬಡಿತಗಳಿಲ್ಲದೆ ಪೂರ್ಣವಾಗುವುದಿಲ್ಲ. 2018 ರಲ್ಲಿ ಸ್ಪೇನ್‌ನಲ್ಲಿ ನಡೆಸಿದ ಯುನೆಸ್ಕೋ ಸಹಭಾಗಿತ್ವದ ಅಂತಾರಾಷ್ಟ್ರೀಯ ಜಾನಪದ ಸಂಗೀತೋತ್ಸವದಲ್ಲಿ ಮುಂಬೈ ಮೂಲದ ಸ್ವರ ಗಾಂಧಾರ್ ಪುನೇರಿ ಢೋಲ್‌ ತಶಾ ಸಮೂಹದವರಿಗೆ ಢೋಲ್ ನೃತ್ಯ ಪ್ರದರ್ಶನ ನೀಡಲು ಅವಕಾಶ ಸಿಕ್ಕಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ, ಸ್ಪೇನ್‌ ನ 2018ರ ನೃತ್ಯ ಪ್ರದರ್ಶನವನ್ನು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಸ್ಪೇನ್‌ನಲ್ಲಿ ಸಂಭ್ರಮವನ್ನು ಆಚರಿಸಲಾಗುತ್ತದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

Share.

About Author

Comments are closed.

scroll