ಜಿಲ್ಲಾಧಿಕಾರಿಯೊಬ್ಬರು ತಮ್ಮ ಬಾಲ್ಯದಲ್ಲಿ ಕಲಿಸಿದ ಶಿಕ್ಷಕಿಯನ್ನುಭೇಟಿಯಾಗಿ ಬೆತ್ತದಿಂದ ಪೆಟ್ಟು ಪಡೆದ ನಂತರ ಆಕೆಯ ಪಾದಗಳಿಗೆ ನಮಸ್ಕರಿಸಿ ಸಂಸ್ಕಾರವನ್ನು ತೋರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಪೋಸ್ಟ್ನಲ್ಲಿ ಮಾಡಲಾದ ಕ್ಲೇಮ್ ಎಷ್ಟು ಸತ್ಯ ಎಂಬುದನ್ನು ನೋಡೋಣ.
ಕ್ಲೇಮ್: ಬಾಲ್ಯದ ಶಿಕ್ಷಕಿಯಿಂದ ಪೆಟ್ಟು ಪಡೆಯುತ್ತಿರುವ ಕಲೆಕ್ಟರ್.
ಫ್ಯಾಕ್ಟ್ : ಈ ವೀಡಿಯೊದಲ್ಲಿ, ತನ್ನ ಬಾಲ್ಯದ ಶಿಕ್ಷಕಿಯಿಂದ ಪೆಟ್ಟು ತಿನ್ನುತ್ತಿರುವ ವ್ಯಕ್ತಿ ಕೇರಳದ ಜೀಜು ಜಾರ್ಜ್. ಇವರು ಇಲ್ಲಿಯವರೆಗೆ ಸಿವಿಲ್ ಸರ್ವೀಸ್‌ನಲ್ಲಿ ತೇರ್ಗಡೆಯಾಗಿ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿಲ್ಲ. ಹಾಗಾಗಿ ಅವರು ಜಿಲ್ಲಾಧಿಕಾರಿ ಅಲ್ಲ, ಕೇವಲ ಸಾಮಾನ್ಯ ನಾಗರಿಕ ಎಂದು ತಿಳಿದುಬಂದಿದೆ ಮತ್ತು ಅವರು ಕಲೆಕ್ಟರ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮಾಡುತ್ತಿರುವ ಪ್ರಚಾರ ಸಂಪೂರ್ಣ ಸುಳ್ಳು. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊವನ್ನು ಸರಿಯಾಗಿ ಹುಡುಕಾಡಿದಾಗ ಅದೇ ದೃಶ್ಯಗಳನ್ನು ಹೊಂದಿರುವ ವೀಡಿಯೊವನ್ನು ಜೀಜು ಜಾರ್ಜ್ ಎಂಬ ವ್ಯಕ್ತಿ ತನ್ನ ಫೇಸ್‌ಬುಕ್ ಪುಟದಲ್ಲಿ೨೦೨೩, ಮಾರ್ಚ್ 17 ರಂದು ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ವಿಡಿಯೋವನ್ನು ಶೇರ್ ಮಾಡಿರುವ ಜೀಜು ಜಾರ್ಜ್, 10ನೇ ತರಗತಿಯಲ್ಲಿ ತನ್ನ ಶಿಕ್ಷಕಿಯಿಂದ ಪಡೆಯುತ್ತಿದ್ದ ಬೆತ್ತದ ಪೆಟ್ಟುಗಳನ್ನು ನೆನೆದು ಅದನ್ನು ಮರುಪಡೆದ ನೆನಪನ್ನು ಮೆಲುಕು ಹಾಕಿದ್ದಾರೆ.
ಜೀಜು ಜಾರ್ಜ್ ಅವರ ಫೇಸ್ ಬುಕ್ ಪೇಜ್ ನಲ್ಲಿರುವ ಚಿತ್ರಗಳನ್ನು ವೀಡಿಯೋದಲ್ಲಿ ಕಂಡುಬರುವ ದೃಶ್ಯಗಳೊಂದಿಗೆ ಹೋಲಿಕೆ ಮಾಡಿದರೆ, ಅದು ಅವರೇ ಎಂಬುವುದು ಸ್ಪಷ್ಟವಾಗಿದೆ. ಜೀಜು ಜಾರ್ಜ್ ಅವರು ತಮ್ಮ 1984 ರ ಬ್ಯಾಚ್ 10 ನೇ ವಿದ್ಯಾರ್ಥಿಗಳ ಪುನರ್ಮಿಲನ ಸಮಾರಂಭದಲ್ಲಿ ತಮ್ಮ ಹಿಂದಿ ಶಿಕ್ಷಕಿ ಮತ್ತೊಮ್ಮೆ ಅವರ ಕೈಗೆ ಹೊಡೆಯುವ ಮೂಲಕ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಹಾಗಾದರೆ ಜೀಜು ಜಾರ್ಜ್ ಎಂಬ ಹೆಸರಿನ ಐಎಎಸ್ ಅಧಿಕಾರಿ ಸೇವೆ ಸಲ್ಲಿಸುತ್ತಿದ್ದಾರೆಯೇ ಎಂದು ಹುಡುಕಿದರೆ, ಇದುವರೆಗೆ ಜೀಜು ಜಾರ್ಜ್ ಎಂಬ ಹೆಸರಿನ ಯಾವುದೇ ವ್ಯಕ್ತಿ ಐಎಎಸ್ ಅಧಿಕಾರಿಯಾಗಿ ನೇಮಕಗೊಂಡಿಲ್ಲ ಎಂಬುದು ಸರ್ಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿನ ಮಾಹಿತಿಯ ಆಧಾರದ ಮೇಲೆ ತಿಳಿದುಬಂದಿದೆ.
ಜೀಜು ಜಾರ್ಜ್ ಅವರು ತಮ್ಮನ್ನು ಕಲೆಕ್ಟರ್ ಎಂದು ಬಿಂಬಿಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿರುವ ವೀಡಿಯೊ ಕುರಿತು ಹುಡುಕಾಡಿದಾಗ ತಿಳಿದುಕೊಳ್ಳಲು ನಾವು ಅವರನ್ನು ಸಂಪರ್ಕಿಸಿದೆವು. ಆ ಸಂದರ್ಭ ಅವರು ತಾನೊಬ್ಬ ಸಾಮಾನ್ಯ ಪ್ರಜೆ ಜಿಲ್ಲಾಧಿಕಾರಿ ಅಲ್ಲವೆಂದು ತಿಳಿಸಿದ್ದಾರೆ. ಮತ್ತು ಅವರು ಕಲೆಕ್ಟರ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮಾಡುತ್ತಿರುವ ಪ್ರಚಾರ ಸಂಪೂರ್ಣ ಸುಳ್ಳು ಎಂದಿದ್ದಾರೆ. ಮೇಲಿನ ವಿವರಗಳ ಆಧಾರದ ಮೇಲೆ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಶಿಕ್ಷಕರಿಂದ ಥಳಿಸಿದವರು ಜಿಲ್ಲಾಧಿಕಾರಿ ಅಲ್ಲ ಎಂಬುದು ಖಚಿತವಾಗಿದೆ.
ಕೊನೆಯದಾಗಿ, ಈ ವೀಡಿಯೊದಲ್ಲಿ ತನ್ನ ಬಾಲ್ಯದ ಶಿಕ್ಷಕಿಯಿಂದ ಓಡ್ ಪಡೆದ ವ್ಯಕ್ತಿ ಕೇರಳದ ಜೀಜು ಜಾರ್ಜ್ ಹೊರತು ಅವರು ಕಲೆಕ್ಟರ್ ಅಲ್ಲ.