Fake News - Kannada
 

3-D ಅನಿಮೇಟೆಡ್ ವೀಡಿಯೊದಲ್ಲಿ ಮುಳುಗಿರುವ ದ್ವಾರಕಾ ನಗರದ ಅಪರೂಪದ ದೃಶ್ಯ

0

ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಅರೇಬಿಯನ್ ಸಮುದ್ರದೊಳಗೆ ಮುಳುಗಿರುವ ದ್ವಾರಕಾ ನಗರದ ಅಪರೂಪದ ದೃಶ್ಯ ಎಂದು ಹೇಳುವ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ನೀರಿನ ಒಳಗೆ ರಾಧೆ-ಕೃಷ್ಣ ದೇವಾಲಯವಿರುವಂತ ವಿಡಿಯೋವನ್ನು ಇಲ್ಲಿ ತೋರಿಸಲಾಗಿದೆ. ಹಾಗಾದರೆ ಈ ಪೋಸ್ಟ್‌ನಲ್ಲಿ ಮಾಡಿದ ಕ್ಲೈಮ್ ಅನ್ನು ಪರಿಶೀಲಿಸೋಣ.

ಕ್ಲೇಮ್ : ಮುಳುಗಿರುವ ದ್ವಾರಕಾ ನಗರದಲ್ಲಿ ರಾಧೆ-ಕೃಷ್ಣ ದೇವಾಲಯವನ್ನು ತೋರಿಸುವ ವೀಡಿಯೊ.

ಫ್ಯಾಕ್ಟ್ : ಶ್ರೀ ರಾಮ್ ಎಂಬ ಕಲಾವಿದ 3D ತಂತ್ರಜ್ಞಾನವನ್ನು ಬಳಸಿಕೊಂಡು ವೀಡಿಯೊವನ್ನು ರಚಿಸಿದ್ದಾರೆ. ಮುಳುಗಿರುವ ದ್ವಾರಕಾ ನಗರದೊಳಗಿನ ದೇವಾಲಯದ ನೈಜ ದೃಶ್ಯಗಳನ್ನು ವೀಡಿಯೊದಲ್ಲಿ ತೋರಿಸಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್  ತಪ್ಪಾಗಿದೆ.

ವಿಡಿಯೋದಲ್ಲಿರುವ  ಸ್ಕ್ರೀನ್ಶಾಟ್ಗಳು ಟಿಕ್ ಟಾಕ್ ನಲ್ಲಿ ಕಂಡುಬಂದಿದೆ ಮತ್ತು ಟಿಕ್ ಟಾಕ್‌ನಲ್ಲಿ  ಪೋಸ್ಟ್ ಮಾಡಿದ ವಿಡಿಯೋ ಮತ್ತು ಈ ವಿಡಿಯೋ  ಒಂದೇ ರೀತಿಯ ದೃಶ್ಯಗಳನ್ನು ಒಳಗೊಂಡಿದೆ. ಇದರಿಂದ ಸ್ಪೂರ್ತಿಗೊಂಡ  Tik Tok ಬಳಕೆದಾರರು ಇದನ್ನು ದ್ವಾರಕಾ ನಗರದ 3D ಅನಿಮೇಟೆಡ್ ವೀಡಿಯೊ ಎಂದು ವಿವರಿಸಿದ್ದಾರೆ. ಅನೇಕ ಸಾಮಾಜಿಕ ಮಾಧ್ಯಮ ಪುಟಗಳು ಈ ವೀಡಿಯೊವನ್ನು ಅದೇ ವಿವರಣೆಯೊಂದಿಗೆ ಪ್ರಕಟಿಸಿವೆ ಮತ್ತು ವೀಡಿಯೊವನ್ನು Instagram ಹ್ಯಾಂಡಲ್‌ “@artz_by_ram”. ಗೆ ಕ್ರೆಡಿಟ್ ನೀಡಿದ್ದಾರೆ. 

ಈ ಕುರಿತು ಮತ್ತಷ್ಟು ಪರಿಶೀಲಿಸಿದಾಗ, ಇದು ಇನ್ಸ್ಟಾಗ್ರಾಮ್ ಹ್ಯಾಂಡಲ್ ಶ್ರೀ ರಾಮ್‌ನಲ್ಲಿ ವೀಡಿಯೊವೆಂದು ತೋರಿಸಿದೆ.  (user_id: @artz_by_ram). ಕಲಾವಿದ ಮತ್ತು ಡಿಜಿಟಲ್ ಕಂಟೆಂಟ್ ಸೃಷ್ಟಿಕರ್ತರಾದ ಶ್ರೀ ರಾಮ್ ಅವರು 20 ಮಾರ್ಚ್ 2023 ರಂದು ವೀಡಿಯೊವನ್ನು ಪ್ರಕಟಿಸಿದ್ದರು “The lost temple… Made in 3d with the inspiration for real city in dwaraka“. ಎಂಬ ಕ್ಯಾಪ್ಶನ್ ನೀಡಿದ್ದಾರೆ. ಈ ಎಲ್ಲಾ ಪುರಾವೆಗಳಿಂದ, ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಮುಳುಗಿದ ದ್ವಾರಕಾ ನಗರದ ನೈಜ ದೃಶ್ಯಗಳಲ್ಲ ಎಂದು ತೀರ್ಮಾನಿಸಬಹುದು.

ಈ ಹಿಂದೆ, ದ್ವಾರಕಾಗೆ ಕಾರಣವಾದ ಇದೇ ರೀತಿಯ ನಕಲಿ ವೀಡಿಯೊಗಳು ಮತ್ತು ಫೋಟೋಗಳನ್ನು ಡಿಬಂಕ್ ಮಾಡುವ ಅನೇಕ ನಕಲಿ ಚಿತ್ರಗಳನ್ನು  ಫ್ಯಾಕ್ಟ್ಲಿ ಪ್ರಕಟಿಸಿದೆ. ಅವುಗಳನ್ನು ಸಹ ನೀವು  ಕಾಣಬಹುದಾಗಿದೆ.

 ಸಂಕ್ಷಿಪ್ತವಾಗಿ ಹೇಳುವುದಾದರೆ, ಮುಳುಗಿರುವ ದ್ವಾರಕಾ ನಗರದಲ್ಲಿನ ಕೃಷ್ಣ ದೇವಾಲಯದ ದೃಶ್ಯಗಳಂತೆ 3-ಡಿ ಅನಿಮೇಟೆಡ್ ವೀಡಿಯೊವನ್ನು ಮಾಡಿ ಹಂಚಿಕೊಳ್ಳಲಾಗಿದೆ.

Share.

Comments are closed.

scroll