Fake News - Kannada
 

ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತವನ್ನು ಪಡೆಯಲಿದೆ ಎಂಬ ಎಬಿಪಿ ಅಭಿಪ್ರಾಯ ಸಂಗ್ರಹ

0

ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 115-127 ಸ್ಥಾನಗಳನ್ನು ಮತ್ತು ಕಾಂಗ್ರೆಸ್ 68-80 ಸ್ಥಾನಗಳನ್ನು ಗಳಿಸಬಹುದು ಎಂದು ಎಬಿಪಿ-ಸಿವೋಟರ್ ನಡೆಸಿದ ಸಮೀಕ್ಷೆಯಲ್ಲಿ ಎಬಿಪಿ ಸುದ್ದಿ ಬುಲೆಟಿನ್‌ನ ಸ್ಕ್ರೀನ್‌ಶಾಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಾಗಾದರೆ ಈ ಪೋಸ್ಟ್‌ನಲ್ಲಿ ಮಾಡಿದ ಕ್ಲೈಮ್ ಅನ್ನು ಪರಿಶೀಲಿಸೋಣ.

ಕ್ಲೇಮ್ : ಮುಂಬರುವ ಕರ್ನಾಟಕ ಅಸೆಂಬ್ಲಿ ಚುನಾವಣೆ 2023 ರಲ್ಲಿ ಬಿಜೆಪಿಗೆ 115-117 ಸ್ಥಾನಗಳು ಮತ್ತು ಕಾಂಗ್ರೆಸ್‌ಗೆ 68-80 ಸ್ಥಾನಗಳನ್ನು ಊಹಿಸುವ ಎಬಿಪಿ ಅಭಿಪ್ರಾಯ ಸಮೀಕ್ಷೆಯ ಸ್ಕ್ರೀನ್‌ಶಾಟ್.

ಫ್ಯಾಕ್ಟ್ : ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಎಬಿಪಿ ನ್ಯೂಸ್ ಬುಲೆಟಿನ್ ಫೋಟೋ ಮಾರ್ಫಿಡ್ ಆಗಿದೆ. ABP-CVoter ಸಮೀಕ್ಷೆಯು ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 2023 ರಲ್ಲಿ ಕಾಂಗ್ರೆಸ್‌ಗೆ 115-117 ಸ್ಥಾನಗಳು ಮತ್ತು ಬಿಜೆಪಿಗೆ 68-80 ಸ್ಥಾನಗಳನ್ನು ಭವಿಷ್ಯ ನುಡಿದಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಸುಳ್ಳು.

ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಕ್ಲೈಮ್‌ನ ಸತ್ಯಾಸತ್ಯತೆಯನ್ನು ಹುಡುಕಿದಾಗ, ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆ 2023ಕ್ಕೆಸಂಬಂಧಿಸಿದ ಇತ್ತೀಚಿನ ABP- CVoter ಸಮೀಕ್ಷೆಯ ಅಭಿಪ್ರಾಯ ಸಂಗ್ರಹದ ವೀಡಿಯೊವನ್ನು ABP News ನ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಕಂಡುಬಂದಿದೆ. ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 224 ಸ್ಥಾನಗಳಲ್ಲಿ ಕಾಂಗ್ರೆಸ್ 115-117 ಸ್ಥಾನಗಳನ್ನು ಗಳಿಸಬಹುದು ಎಂದು ಎಬಿಪಿ-ಸಿವೋಟರ್ ಸಮೀಕ್ಷೆ ಅಭಿಪ್ರಾಯ ಸಂಗ್ರಹಣೆ ಭವಿಷ್ಯ ನುಡಿದಿದೆ.

ಎಬಿಪಿ ನ್ಯೂಸ್ ಚಾನೆಲ್ ಸಿ-ವೋಟರ್ ಸಮೀಕ್ಷೆಯ ಅಭಿಪ್ರಾಯ ಸಂಗ್ರಹದ ಫಲಿತಾಂಶಗಳನ್ನು ತಮ್ಮ ಫೇಸ್‌ಬುಕ್ ಪುಟದಲ್ಲಿ ಪ್ರಕಟಿಸಿದೆ.

ಮುಂಬರುವ ಚುನಾವಣೆಯಲ್ಲಿ 40% ಮತಗಳನ್ನು ಗಳಿಸುವ ಮೂಲಕ ಕಾಂಗ್ರೆಸ್ ಕರ್ನಾಟಕದಲ್ಲಿ ಸರ್ಕಾರ ರಚಿಸಬಹುದು ಎಂದು ಎಬಿಪಿ ಸಮೀಕ್ಷೆಯಲ್ಲಿ ತಿಳಿಸಿದೆ. ಎಬಿಪಿ-ಸಿವೋಟರ್ ಸಮೀಕ್ಷೆಯು ಮುಂಬರುವ ಕರ್ನಾಟಕ ಚುನಾವಣೆಯಲ್ಲಿ ಒಟ್ಟು 68-80 ಸ್ಥಾನಗಳನ್ನು ಗಳಿಸುವ ಮೂಲಕ ಬಿಜೆಪಿ ಎರಡನೇ ಅತಿದೊಡ್ಡ ಪಕ್ಷವಾಗಬಹುದು ಎಂದು ಅಂದಾಜಿಸಿದೆ. ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ಫೋಟೋವನ್ನು ಎಬಿಪಿ ನ್ಯೂಸ್ ಬುಲೆಟಿನ್ ಮೂಲಕ ಯೋಜಿಸಲಾದ ಸಿಟ್ ಗಳ ಮೂಲಕ ರಚಿಸಲಾಗಿದೆ.

ಈ ಹಿಂದೆ, ವಿವಿಧ ಚುನಾವಣೆಗಳಿಗೆ ಸಂಬಂಧಿಸಿದ ವಿವಿಧ ಸುದ್ದಿ ಚಾನೆಲ್ಗಳು ಒಂದೇ ರೀತಿಯ ಸಂಪಾದಿತ ಅಭಿಪ್ರಾಯ ಸಂಗ್ರಹ ಫಲಿತಾಂಶಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಾಗ, ಆ ಕ್ಲೇಮ್ ಗಳನ್ನು ತಳ್ಳಿಹಾಕುವ ರಿಯಾಲಿಟಿ ಚೆಕ್  ಲೇಖನಗಳನ್ನು ಪ್ರಕಟಿಸಲಾಗಿದೆ. ಅವುಗಳನ್ನು ಕೂಡ ಸಾಕಷ್ಟು ಕಡೆಗಳಲ್ಲಿ ಗಮನಿಸಬಹುದಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮುಂಬರುವ ಕರ್ನಾಟಕ ಅಸೆಂಬ್ಲಿ ಚುನಾವಣೆಯಲ್ಲಿ 2023 ರಲ್ಲಿ ಬಿಜೆಪಿಗೆ 15-117 ಸ್ಥಾನಗಳು ಮತ್ತು ಕಾಂಗ್ರೆಸ್‌ಗೆ 68-80 ಸ್ಥಾನಗಳನ್ನು ಊಹಿಸುವ ಈ ಎಬಿಪಿ ಅಭಿಪ್ರಾಯ ಸಂಗ್ರಹವು ಮಾರ್ಫಿಡ್ ಎಂದು ಸ್ಪಷ್ಟವಾಗಿದೆ.

Share.

Comments are closed.

scroll