Fake News - Kannada
 

2025 ರ ಮಹಾ ಕುಂಭಮೇಳದಲ್ಲಿ ಬಿಲ್ ಗೇಟ್ಸ್ ಭಾಗವಹಿಸಿದ್ದರು ಎಂದು ವೈರಲ್ ಆಗಿರುವ ವಿಡಿಯೋ ಸುಳ್ಳು

0

2025ರ ಜನವರಿ 13 ರಂದು ಶುರುವಾದ ಪ್ರಯಾಗರಾಜ್ ಮಹಾ ಕುಂಭಮೇಳದ ಸಮಯದಲ್ಲಿ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ವಾರಣಾಸಿಯ ಕಾಶಿ ವಿಶ್ವನಾಥ ಮಂದಿರಕ್ಕೆ ಭೇಟಿ ನೀಡಿದ್ದಾರೆ ಎಂದು ಹೇಳುವ ವೀಡಿಯೊ (ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ  ಹಂಚಿಕೊಳ್ಳಲಾಗುತ್ತಿದೆ. ಹಾಗಾದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: 2025 ರ ಮಹಾ ಕುಂಭಮೇಳದ ಸಮಯದಲ್ಲಿ ವಾರಣಾಸಿಯ ಕಾಶಿ ವಿಶ್ವನಾಥ ಮಂದಿರದಲ್ಲಿ ಬಿಲ್ ಗೇಟ್ಸ್.

ಫ್ಯಾಕ್ಟ್: ವೈರಲ್ ವೀಡಿಯೊದಲ್ಲಿರುವ ವ್ಯಕ್ತಿ ಬಿಲ್ ಗೇಟ್ಸ್ ಎಂದು ಹೇಳಲು ಯಾವುದೇ ಪುರಾವೆಗಳಿಲ್ಲ. ಇನ್ನು ಹೆಚ್ಚಾಗಿ ಹೇಳುವುದಾದರೆ, 2025 ರ ಮಹಾ ಕುಂಭಮೇಳಕ್ಕೂ ಮುಂಚೆಯೇ ಅಂದರೆ ಡಿಸೆಂಬರ್ 2024 ರಿಂದ ಈ ವಿಡಿಯೋ ಆನ್‌ಲೈನ್‌ನಲ್ಲಿದೆ. ಆದ್ದರಿಂದ, ಈ ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ತಪ್ಪಾಗಿದೆ.

ಮೊದಲಿನದಾಗಿ, ಕುಂಭಮೇಳಕ್ಕಾಗಿ ಬಿಲ್ ಗೇಟ್ಸ್ ಭಾರತಕ್ಕೆ ಭೇಟಿ ನೀಡಿದ ಬಗ್ಗೆ ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ನಾವು ಇಂಟರ್ನೆಟ್‌ನಲ್ಲಿ ಹುಡುಕಿದಾಗ ಅದನ್ನು ಸ್ಪಷ್ಟಪಡಿಸಲು ತಿಳಿಸುವ ಯಾವುದೇ ವಿಶ್ವಾಸಾರ್ಹ ಮಾಧ್ಯಮ ವರದಿಗಲಿಲ್ಲ. ಇದಲ್ಲದೆ, ಬಿಲ್ ಗೇಟ್ಸ್ ಅವರ ಸೋಶಿಯಲ್ ಮೀಡಿಯಾ ಅಕೌಂಟ್ ನಲ್ಲೂ ಸಹ ಮಹಾ ಕುಂಭಮೇಳಕ್ಕೆ ಅವರ ಭೇಟಿಯ ಬಗ್ಗೆ ಯಾವುದೇ ಮಾಹಿತಿಗಳಿಲ್ಲ. ಇದರ ಜೊತೆಗೆ ಅವರು ಭಾರತಕ್ಕೆ ಕೊನೆಯ ಸಾರ್ವಜನಿಕ ಭೇಟಿ ನೀಡಿದ್ದು ಫೆಬ್ರವರಿ 2024 ರಲ್ಲಿ  ಎಂದು ತಿಳಿದಿದೆ. 

ಮುಂದೆ, ನಾವು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ ಡಿಸೆಂಬರ್ 24, 2024 ಅದೇ ವೀಡಿಯೊವನ್ನು (ಆರ್ಕೈವ್)  ರಂದು ‘ಗುಲ್ಲಕ್’ ಎಂಬ ಯೂಟ್ಯೂಬ್ ಚಾನೆಲ್‌ಗೆ ಅಪ್‌ಲೋಡ್ ಮಾಡಿದೆ ಎಂದು ಕಂಡುಬಂದಿದೆ. ಆ ವೀಡಿಯೊ ವಾರಣಾಸಿಯಲ್ಲಿ ಬಿಲ್ ಗೇಟ್ಸ್‌ರನ್ನು ಹೋಲುವ ವಿದೇಶಿ ಪ್ರಜೆಯನ್ನು ಎಂದು ತಿಳಿಸಿದೆ. ಅದೇ ವ್ಯಕ್ತಿಯ ಮತ್ತೊಂದು ವೀಡಿಯೊವನ್ನು ಚಾನೆಲ್ ಪೋಸ್ಟ್ ಮಾಡಿ, ವಾರಣಾಸಿಯ ಮಣಿಕರ್ಣಿಕಾ ಘಾಟ್‌ಗೆ ಭೇಟಿ ನೀಡಿದ “ಡೂಪ್ಲಿಕೇಟ್ ಬಿಲ್ ಗೇಟ್ಸ್” ಎಂದು ವಿಡಂಬನಾತ್ಮಕವಾಗಿ ಉಲ್ಲೇಖಿಸಿದೆ. 

ವೀಡಿಯೊದಲ್ಲಿರುವ ವ್ಯಕ್ತಿ ಬಿಲ್ ಗೇಟ್ಸ್‌ಗೆ ನಂತೆ ಕಂಡರೂ, ಹತ್ತಿರದಿಂದ ನೋಡಿದಾಗ ಆತ ಬಿಲ್ ಗೇಟ್ಸ್ ಅಲ್ಲ ಎಂದು ತಿಳಿಯುತ್ತದೆ.

ಆಜ್ ತಕ್ ಒರಿಜಿನಲ್ ಅಪ್‌ಲೋಡರ್ ದೀಪಂಕರ್ ಯಾದವ್ ಅವರನ್ನು ಸಂಪರ್ಕಿಸಿದಾಗ, ಅವರು ನವೆಂಬರ್ 2024 ರಲ್ಲಿ ವಾರಣಾಸಿಗೆ ಭೇಟಿ ನೀಡಿದಾಗ, ಮಣಿಕರ್ಣಿಕಾ ಘಾಟ್‌ನಲ್ಲಿ ವಿದೇಶಿ ಪ್ರವಾಸಿಗರ ಗುಂಪನ್ನು ನೋಡಿದೆ. ಅವರಲ್ಲಿ ಒಬ್ಬರು ಬಿಲ್ ಗೇಟ್ಸ್ ಅವರನ್ನು ಹೋಲುತ್ತಿದ್ದರು  ಎಂದು ಹೇಳಿದ್ದಾರೆ.  ಹಾಗಾಗಿ ಅವರು ಅದರ ಬಗ್ಗೆ ವಿಡಂಬನಾತ್ಮಕ ವೀಡಿಯೊವನ್ನು ಮಾಡಿದರು. ದೀಪಂಕರ್ ಆ ವ್ಯಕ್ತಿಯ ಜೊತೆ ಯಾವುದೇ ಭದ್ರತಾ ಸಿಬ್ಬಂದಿ ಇರಲಿಲ್ಲ ಎಂದು ಉಲ್ಲೇಖಿಸಿದ್ದಾರೆ, ಆತ ಒಬ್ಬ ರಾಂಡಮ್ ವಿದೇಶಿ ಪ್ರವಾಸಿ ಎಂದು ದೃಢಪಡಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಂಬಂಧವಿಲ್ಲದ ವಿದೇಶಿ ಪ್ರವಾಸಿಗರ ಹಳೆಯ ವೀಡಿಯೊವನ್ನು 2025 ರ ಮಹಾ ಕುಂಭಮೇಳದಲ್ಲಿ ಬಿಲ್ ಗೇಟ್ಸ್ ಭಾಗವಹಿಸುತ್ತಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

Share.

Comments are closed.

scroll