Fake News - Kannada
 

ಇದು ಹತ್ರಾಸ್‌ನಲ್ಲಿ (ಉತ್ತರಪ್ರದೇಶ್) ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ಫೋಟೋವಲ್ಲ

0

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಸೆಪ್ಟೆಂಬರ್ 14ರಂದು ನಾಲ್ಕು ಜನರಿಂದ ಅತ್ಯಾಚಾರ ಮತ್ತು ಹಲ್ಲೆಗೊಳಗಾದ 19 ವರ್ಷದ ಬಾಲಕಿ ಸೆಪ್ಟಂಬರ್ 29 ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಈ ಸಂದರ್ಭದಲ್ಲಿ ಹಲವರು #JusticeForManishaValmiki ಹ್ಯಾಶ್‌ಟ್ಯಾಗ್ ಹೊಂದಿರುವ ಹುಡುಗಿಯ ಫೋಟೋವನ್ನು ಸಂತ್ರಸ್ತೆಯೆಂದು ಹಂಚಿಕೊಳ್ಳುತ್ತಿದ್ದಾರೆ. ಆ ಫೋಟೋ ಹತ್ರಾಸ್ ಸಂತ್ರಸ್ತೆಯದೇ ಎಂಬುದನ್ನು ಪರಿಶೀಲಿಸೋಣ.

ಮುಖ್ಯ ವಿಷಯ: ಅತ್ಯಾಚಾರ ಮೊದಲಾದ ತೀವ್ರತರವಾದ ಪ್ರಕರಣಗಳಲ್ಲಿ ಸಂತ್ರಸ್ತೆಯ  ಗುರುತನ್ನು ಬಹಿರಂಗ ಮಾಡುವ ಹೆಸರು, ಫೋಟೋ ಇತರೆ ಸುದ್ದಿಯನ್ನು ಮುದ್ರಿಸುವುದು ಅಥವಾ ಪ್ರಕಟ ಮಾಡುವುದು ಇಂಡಿಯನ್‌ ಪೀನಲ್‌ ಕೋಡ್‌ ( IPC) ಸೆಕ್ಷನ್‌ 228(A) ಪ್ರಕಾರ ಅಪರಾಧ. ಅಷ್ಟೇ ಅಲ್ಲ ಪ್ರಿಂಟ್‌, ಎಲೆಕ್ಟ್ರಾನಿಕ್‌, ಸಾಮಾಜಿಕ ಜಾಲತಾಣ ಮುಂತಾದವುಗಳಲ್ಲಿ ಯಾರಾದರೂ ಸಂತ್ರಸ್ತೆಯ ಗುರುತನ್ನು ಬಹಿರಂಗಗೊಳಿಸುವ ಹೆಸರು ಅಥಾವ ಇನ್ಯಾವುದದಾರೂ ವಿಷಯಗಳನ್ನು ಮುದ್ರಿಸುವುದು ಅಥವಾ ಪ್ರಚಾರ ಮಾಡುವುದು ಅಪರಾಧ ಎಂದು  2018ರಲ್ಲಿ ಸುಪ್ರೀಂಕೋರ್ಟ್‌  ತೀರ್ಪು ಹೇಳಿದೆ.

ಪೋಸ್ಟ್‌ ಅನ್ನು ಆರ್ಕೈವ್ ಮಾಡಿರುವ ಆವೃತ್ತಿ ಇಲ್ಲಿದೆ.

ಪ್ರತಿಪಾದನೆ: ಇತ್ತಿಚಿಗೆ ಹತ್ರಾಸ್‌ (ಉತ್ತರಪ್ರದೇಶ್‌) ನಲ್ಲಿ ಅತ್ಯಾಚಾರಕ್ಕೆ ಗುರಿಯಾದ ಸಂತ್ರಸ್ತೆಯ ಫೋಟೋ.

ನಿಜಾಂಶ: ಫೋಟೋದಲ್ಲಿ ಇರುವುದು ಹತ್ರಾಸ್‌ ಅತ್ಯಾಚಾರ ಸಂತ್ರಸ್ತೆಯಲ್ಲ. ಫೋಟೋದಲ್ಲಿ ಇರುವ ಹುಡುಗಿಯೂ ಹೆಸರು ಸಹ ಮನಿಷಾ ಆಗಿದೆ. ಆದರೆ ಆಕೆ 2018ರಲ್ಲಿಯೇ ಮರಣಹೊಂದಿದ್ದಾಳೆ. ವೈದ್ಯರ ನಿರ್ಲಕ್ಷ್ಯದಿಂದ ಸತ್ತು ಹೋಗಿದ್ದಾಳೆಂದು 2018ರಲ್ಲಿ ‘Jusice For Manisha ʼ ಎನ್ನುವ ಹ್ಯಾಷ್‌ಟ್ಯಾಗ್‌ ಬಳಸಲಾಗಿತ್ತು. ಹಾಗಾಗಿ ಕೆಲವರು ಇದೆ ಫೋಟೋವನ್ನು ಹತ್ರಾಸ್ ಸಂತ್ರಸ್ತೆಯೆಂದು ಹಂಚಿಕೊಂಡಿದ್ದಾರೆ. ಆದ್ದರಿಂದ ಪೋಸ್ಟ್‌ನಲ್ಲಿನ ಪ್ರತಿಪಾದನೆ ತಪ್ಪಾಗಿದೆ.

ಪೋಸ್ಟ್‌ನಲ್ಲಿ ಹಾಕಿರುವ ಹ್ಯಾಷ್‌ಟ್ಯಾಗ್‌ ಜೊತೆ ಟೈಂ ಫಿಲ್ಟರ್‌ ಹಾಕಿ ಹುಡುಕಿದಾಗ , ಇದೇ ಫೋಟೋವನ್ನು ಕೆಲವರು 2018 ರಲ್ಲಿಯೇ ಫೇಸ್‌ಬುಕ್‌ ನಲ್ಲಿ ಪೋಸ್ಟ್‌ ಮಾಡಿರುವುದಾಗಿ ತಿಳಿಯುತ್ತದೆ. ಫೋಟೋದಲ್ಲಿ ಇರುವುದು ಮನಿಷಾ ಹೆಸರಿನ ಹುಡುಗಿಯಾಗಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಆಕೆ 2018ರಲ್ಲಿಯೇ ಸಾವಿಗೀಡಾದಳೆಂದು ಹೇಳುತ್ತಾ ಕೆಲವರು 2018ರಲ್ಲಿಯೇ ಹಂಚಿರುವ ಪೋಸ್ಟ್‌ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.. ಆಗ ಪೋಸ್ಟ್‌ ಮಾಡಿದ ಕೆಲವರು ಈಗ ಮತ್ತೆ ಆ ಫೋಟೋದಲ್ಲಿ ಇರುವುದು ಹತ್ರಾಸ್‌ ಅತ್ಯಾಚಾರ ಸಂತ್ರಸ್ತೆ ಅಲ್ಲ ಎಂದು ಪೋಸ್ಟ್‌  ಮಾಡಿರುವುದನ್ನು ಇಲ್ಲಿ ಮತ್ತು ಇಲ್ಲಿ ನೋಡಬಹದು.

ಫೋಟೋದಲ್ಲಿ ಇರುವುದು ತನ್ನ ತಂಗಿ ಎಂದು, ಆಕೆ  2018ರಲ್ಲಿಯೇ ಚಂಡಿಗಡ್‌ನಲ್ಲಿ ತೀರಿಹೋದಳೆಂದು ಹೇಳುತ್ತಾ ಅಜಯ್‌ ಹಾಕಿದ ಪೋಸ್ಟ್‌ ಅನ್ನು ಇಲ್ಲಿ ನೋಡಬಹುದು. 2018ರಲ್ಲಿ ಅಜಯ್‌ ಹಾಕಿದ ಪೋಸ್ಟ್‌ ಇಲ್ಲಿ ನೋಡಬಹದು. 2018ರಲ್ಲಿ ಆ ಘಟನೆಯ ಕುರಿತು ʼಟೈಮ್ಸ್‌ ಆಪ್‌ ಇಂಡಿಯಾʼ ಮತ್ತು ʼದೈನಿಕ್‌ ಭಾಸ್ಕರ್‌ʼ  ನವರು ಪ್ರಕಟಿಸಿದ ಸುದ್ದಿಗಳನ್ನು ಇಲ್ಲಿ  ಮತ್ತು ಇಲ್ಲಿ ಓದಬಹುದು. 

ಅಷ್ಟೇ ಅಲ್ಲ, ಹತ್ರಾಸ್‌ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ  ಸಹೋದರನ ಜೊತೆ ʼಇಂಡಿಯಾ ಟುಡೆ’ ಯವರು ಮಾತನಾಡಿಸಿದಾಗ, ಪೋಸ್ಟ್‌ನಲ್ಲಿ ಇರುವುದು ತನ್ನ ತಂಗಿಯಲ್ಲ ಎಂದು ಹೇಳಿದ್ದಾನೆ. ಹತ್ರಾಸ್‌ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸಿರುವುದಾಗಿ ಹತ್ರಾಸ್‌ ಪೋಲೀಸರು ಟ್ವೀಟ್‌ ಮಾಡಿದ್ದಾರೆ.

ಒಟ್ಟಿನಲ್ಲಿ ಫೋಟೋದಲ್ಲಿ ಇರುವುದು ಹತ್ರಾಸ್‌ ಅತ್ಯಾಚಾರ ಸಂತ್ರಸ್ತೆಯಲ್ಲ. ಫೋಟೋದಲ್ಲಿ ಇರುವ ಹುಡುಗಿಯ ಹೆಸರು ಸಹ, ಮನಿಷಾ ಆಗಿದ್ದು, ಆಕೆ 2018ರಲ್ಲಿಯೇ ವೈದ್ಯರ ನಿರ್ಲಕ್ಷ್ಯದಿಂದ ಮರಣಹೊಂದಿದ್ಧಾಳೆ. 

Share.

About Author

Comments are closed.

scroll