Fake News - Kannada
 

ಭಾರತೀಯ ನೌಕಾಪಡೆಯಿಂದ ದೀಪಾವಳಿ ಸಂಭ್ರಮ ಎಂದು ಹಳೆಯ ಅಂತರಾಷ್ಟ್ರೀಯ ಫ್ಲೀಟ್‌ ರಿವ್ಯೂ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ

0

ಹಡಗುಗಳಿಂದ ಬೆಳಕಿನ ಪಟಾಕಿಗಳನ್ನು ಸಿಡಿಸುವ ವಿಡಿಯೋ ಒಳಗೊಂಡ ಪೋಸ್ಟ್ ಒಂದು ಭಾರತೀಯ ನೌಕಾಪಡೆಯಿಂದ ದೀಪಾವಳಿ ಸಂಭ್ರಮ ಎಂಬ ಪ್ರತಿಪಾದನೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅದು ನಿಜವೆ ಎಂಬುದುನ್ನು ಪರಿಶೀಲಿಸೋಣ.

ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಪ್ರತಿಪಾದನೆ: ಭಾರತೀಯ ನೌಕಾಪಡೆಯಿಂದ ದೀಪಾವಳಿ ಸಂಭ್ರಮದ ವಿಡಿಯೋ

ನಿಜಾಂಶ: ವಾಸ್ತವದಲ್ಲಿ ಮೇಲಿನ ವಿಡಿಯೋವು 2016ರಲ್ಲಿ ವಿಶಾಖಪಟ್ನಂನಲ್ಲಿ ನಡೆದ ಅಂತರಾಷ್ಟ್ರೀಯ ಫ್ಲೀಟ್‌ ರಿವ್ಯೂ ಕಾರ್ಯಕ್ರಮದಲ್ಲಿ ಸಿಡಿಸಿದ ಬೆಳಕಿನ ಪಟಾಕಿಗಳಿಗೆ ಸಂಬಂಧಿಸಿದೆ. ಇದೇ ಫೋಟೊಗಳನ್ನು ಹಲವಾರು ಮಾಧ್ಯಮಗಳು ಪ್ರಕಟಿಸಿವೆ. ಹಾಗಾಗಿ ಮೇಲನ ಪ್ರತಿಪಾದನೆ ತಪ್ಪಾಗಿದೆ.

ವಿಡಿಯೋದ ಸ್ಕ್ರೀನ್‌ಶಾಟ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಸರ್ಚ್ ಮಾಡಿದಾಗ, 2016ರಲ್ಲಿಯೇ ಈ ವಿಡಿಯೋ ಯೂಟ್ಯೂಬ್‌ಗೆ ಅಪ್‌ಲೋಡ್‌ ಆಗಿರುವುದು ಕಂಡುಬಂದಿದೆ. ಆ ವಿಡಿಯೋದಲ್ಲಿಯೂ ಇದೇ ರೀತಿಯ ಚಿತ್ರಗಳು ಕಂಡುಬಂದಿದ್ದು, “ಬಂಗಾಳ ಕೊಲ್ಲಿಯಲ್ಲಿ ಭಾರತೀಯ ನೌಕಾಪಡೆಯ ಹಡಗುಗಳಿಂದ ಬೆಳಕಿನ ಚಿತ್ತಾರ” ಎಂದು ವಿಡಿಯೋ ವಿವರಣೆಯಲ್ಲಿ ಬರೆಯಲಾಗಿದೆ.

ಆ ಯೂಟ್ಯೂಬ್‌ ವಿಡಿಯೋ ವಿವರಣೆಯ ದಿನಾಂಕದ ಆಧಾರದಲ್ಲಿ ಕೀವರ್ಡ್‌ಗಳನ್ನು ಬಳಸಿ ಮತ್ತಷ್ಟು ಹುಡುಕಿದಾಗ ಈ ವಿಡಿಯೋದ ಚಿತ್ರಗಳನ್ನು ಒಳಗೊಂಡಿರುವ ಹಲವಾರು ಲೇಖನಗಳು ಕಂಡುಬಂದಿವೆ. ಲೇಖನಗಳ ಪ್ರಕಾರ ಆ ಚಿತ್ರಗಳು 2016ರಲ್ಲಿ ವಿಶಾಖಪಟ್ನಂನಲ್ಲಿ ನಡೆದ ಅಂತರಾಷ್ಟ್ರೀಯ ಫ್ಲೀಟ್‌ ರಿವ್ಯೂ ಕಾರ್ಯಕ್ರಮಕ್ಕೆ ಸಂಬಂಧಿಸಿವೆ. ಆ ಲೇಖನಗಳನ್ನು ಇಲ್ಲಿ ಮತ್ತು ಇಲ್ಲಿ ಓದಬಹುದು.

ಅಲ್ಲದೇ ಸುದ್ದಿ ಸಂಸ್ಥೆ ಎಎನ್‌ಐ ಮತ್ತು ಭಾರತೀಯ ನೌಕಾದಳವು 2016ರ ಅದೇ ದಿನ ಈ ವಿಡಿಯೋಗೆ ಸಂಬಂಧಿಸಿದ ಚಿತ್ರಗಳನ್ನು ಅಂತರಾಷ್ಟ್ರೀಯ ಫ್ಲೀಟ್‌ ರಿವ್ಯೂ ಶೀರ್ಷಿಕೆಯಡಿಯಲ್ಲಿ ಟ್ವೀಟ್ ಮಾಡಿರುವುದನ್ನು ಕಾಣಬಹುದು. ಈ ಕಾರ್ಯಕ್ರಮದ ಪೂರ್ಣ ವಿಡಿಯೋ ಪ್ರಧಾನಿ ನರೇಂದ್ರ ಮೋದಿಯವರ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿದೆ. ಅದನ್ನು ಇಲ್ಲಿ ನೋಡಬಹದು.

ಒಟ್ಟಿನಲ್ಲಿ 2016ರ ಅಂತರಾಷ್ಟ್ರೀಯ ಫ್ಲೀಟ್‌ ರಿವ್ಯೂನ ವಿಡಿಯೋವನ್ನು ಭಾರತೀಯ ನೌಕಾಪಡೆಯಿಂದ ದೀಪಾವಳಿ ಸಂಭ್ರಮ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

Share.

About Author

Comments are closed.

scroll